For Quick Alerts
  ALLOW NOTIFICATIONS  
  For Daily Alerts

  'ಕೆಜಿಎಫ್-2' ಚಿತ್ರೀಕರಣ ನಡುವೆಯೂ ಕ್ರಿಕೆಟ್ ಆಡಿ ಸಂಭ್ರಮಿಸಿದ ಚಿತ್ರತಂಡ

  |

  ಕೆಜಿಎಪ್-2 ಚಿತ್ರದ ಚಿತ್ರೀಕರಣ ಭರ್ಜರಿಯಾಗಿ ನಡೆಯುತ್ತಿದೆ. ಈಗಾಗಲೇ ಚಿತ್ರೀಕರಣಕ್ಕೆ ರಾಕಿ ಭಾಯ್ ಮತ್ತು ರೀನಾ ದೇಸಾಯಿ ಎಂಟ್ರಿ ಕೊಟ್ಟಿದ್ದಾರೆ. 7 ತಿಂಗಳ ಬಳಿಕ ಮತ್ತೆ ಚಿತ್ರೀಕರಣದಲ್ಲಿ ಭಾಗಿಯಾಗಿದ್ದು, ಚಿತ್ರತಂಡ ಬಹುಬೇಗ ಚಿತ್ರೀಕರಣ ಮುಗಿಸುವ ಪ್ಲಾನ್ ಮಾಡಿದೆ.

  ಅಂದ್ಹಾಗೆ ಉಡುಪಿ ಜಿಲ್ಲೆ ಮಲ್ಪೆಯ ಸುಂದರ ಕಡಲ ತೀರದಲ್ಲಿ ಕನ್ನಡದ ಬಹುನಿರೀಕ್ಷೆಯ ಕೆಜಿಎಫ್-2 ಚಿತ್ರೀಕರಣ ನಡೆಯುತ್ತಿದೆ. ಉಡುಪಿಯ ಮಲ್ಪೆ, ಪಡುಕೆರೆ ಭಾಗದಲ್ಲಿ ಚಿತ್ರೀಕರಣ ಆರಂಭಗೊಂಡಿದ್ದು, ಇನ್ನೂ ಎರಡು ದಿನಗಳ ಕಾಲ ಉಡುಪಿಯಲ್ಲಿ ಚಿತ್ರೀಕರಣ ನಡೆಯಲಿದೆ.

  ಮಾಧ್ಯಮ ವರದಿಗಾರರೊಂದಿಗೆ ಕೆಜಿಎಫ್ 2 ಚಿತ್ರತಂಡದ ಕಿರಿಕ್ಮಾಧ್ಯಮ ವರದಿಗಾರರೊಂದಿಗೆ ಕೆಜಿಎಫ್ 2 ಚಿತ್ರತಂಡದ ಕಿರಿಕ್

  ಶೂಟಿಂಗ್ ಟೆನ್ಷನ್ ನಡುವೆಯೂ ಚಿತ್ರತಂಡ ಮಲ್ಪೆ ಬೀಚ್ ನಲ್ಲಿ ಕ್ರಿಕೆಟ್ ಆಡಿ ಸಂಭ್ರಮಿಸಿದ್ದಾರೆ. ನಿರ್ದೇಶಕ ಪ್ರಶಾಂತ್ ನೀಲ್ ಬ್ಯಾಟ್ ಹಿಡಿದು ತಂಡದ ಜೊತೆ ಸಮುದ್ರ ತೀರದಲ್ಲಿ ಆಟವಾಗಿದ್ದಾರೆ. ಈ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ಸಿಕ್ಕಾಪಟ್ಟೆ ವೈರಲ್ ಆಗಿದೆ.

  ಅಂದ್ಹಾಗೆ ಚಿತ್ರೀಕರಣದಲ್ಲಿ ಭಾಗಿಯಾದ ನಟ ಯಶ್ ಮತ್ತು ನಟಿ ಶ್ರೀನಿಧಿ ಶೆಟ್ಟಿ ಸಹ ಫೋಟೋವನ್ನು ಹಂಚಿಕೊಂಡಿದ್ದಾರೆ. ನಟ ಯಶ್ ಮಲ್ಪೆ ಬೀಚ್ ನಲ್ಲಿ ನಿಂತಿರುವ ಫೋಟೋವನ್ನು ಶೇರ್ ಮಾಡಿ ಅಭಿಮಾನಿಗಳ ನಿದ್ದೆ ಗೆಡೆಸಿದ್ದಾರೆ. ಇಡೀ ದೇಶವೆ ಕಾತರದಿಂದ ಕಾಯುತ್ತಿರುವ ಸಿನಿಮಾ ಚಿತ್ರೀಕರಣ ನಡೆಯುತ್ತಿದೆ ಅಂದ್ಮೇಲೆ ಫೇವರಿಟ್ ನಟನನ್ನು ನೋಡಲು ಅಭಿಮಾನಿಗಳು ಸೇರುವುದು ಸಹಜ. ಕೆಜಿಎಫ್-2 ಶೂಟಿಂಗ್ ನೋಡಲು ಅಪಾರ ಸಂಖ್ಯೆಯ ಅಭಿಮಾನಿಗಳು ಸೇರಿದ್ದರು.

  ಎಷ್ಟೇ ಪ್ರಯತ್ನ ಪಟ್ರು KGF ತಂಡದಿಂದ ಇದನ್ನು ತಡೆಯೋಕೇ ಆಗ್ತಿಲ್ಲಾ | Filmibeat Kannada

  ಆದರೆ ಅಭಿಮಾನಿಗಳು ಮತ್ತು ಮಾಧ್ಯಮದವರಿಗಾಗಲೀ ಚಿತ್ರೀಕರಣ ಮತ್ತು ಫೋಟೋ ತೆಗೆಯಲು ಚಿತ್ರತಂಡ ಅವಕಾಶ ನೀಡಲಿಲ್ಲ. ಸ್ಥಳದಲ್ಲಿ ಸೇರಿರುವ ಅಭಿಮಾನಿಗಳಿಗೂ, ಬೌನ್ಸರ್ ಗಳು ಫೋಟೋ, ವಿಡಿಯೋ ತೆಗೆಯಲು ಅವಕಾಶ ನೀಡುತ್ತಿರಲಿಲ್ಲ. ಮಲ್ಪೆಯ ಸಮುದ್ರತೀರ, ಕಡಲದಂಡೆಯ ಕಲ್ಲು ಬಂಡೆಗಳ ಬಳಿ ಚಿತ್ರೀಕರಣ ನಡೆಯುತ್ತಿದೆ.

  English summary
  Director Prashanth Neel playing cricket in KGF-2 shooting set at Malpe beach.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X