Don't Miss!
- Sports
IND vs NZ 3rd T20: ಸರಣಿ ನಿರ್ಣಾಯಕ 3ನೇ ಪಂದ್ಯದ ಟಾಸ್ ವರದಿ, ಆಡುವ 11ರ ಬಳಗ & ಲೈವ್ ಸ್ಕೋರ್
- Automobiles
ಸಪ್ತ ಸಾಗರದಾಚೆಯೂ ಮಹೀಂದ್ರಾ ಕಾರಿಗೆ ಬೇಡಿಕೆ... ನೇಪಾಳದಲ್ಲಿ ಎಕ್ಸ್ಯುವಿ700 ಬಿಡುಗಡೆ
- News
ಚಿರತೆ ಹಾವಳಿ ತಡೆಗೆ ಟಾಸ್ಕ್ ಪೋರ್ಸ್ ರಚಿಸಿ ಆದೇಶ ಹೊರಡಿಸಿದ ಸರ್ಕಾರ, ತಂಡಗಳ ವಿವರ ಇಲ್ಲಿದೆ
- Technology
ಚೀನಾದಲ್ಲಿ ಸೌಂಡ್ ಮಾಡಿದ್ದ ಈ ಡಿವೈಸ್ ಇದೀಗ ಜಾಗತಿಕ ಮಾರುಕಟ್ಟೆಗೆ ಎಂಟ್ರಿ!
- Finance
Union Budget 2023: ಹೊಸ ತೆರಿಗೆ ಪದ್ಧತಿಯಡಿಯಲ್ಲಿ ತೆರಿಗೆ ಲೆಕ್ಕಾಚಾರ ಹೇಗೆ?
- Lifestyle
ಬಜೆಟ್ 2023: ಆರೋಗ್ಯ ಕ್ಷೇತ್ರಕ್ಕೆ ಬಂಪರ್ ಕೊಡುಗೆ
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ರಶ್ಮಿಕಾ, ಶ್ರೀಲೀಲಾ ಹಾದಿ ಹಿಡಿದ ನೀಲ್ ಭಾಯ್: KGF ಸಕ್ಸಸ್‌ಗೆ ಬೆಲೆನೇ ಇಲ್ವಾ?
KGF ಸಿನಿಮಾದಿಂದ ಪ್ರಶಾಂತ್ ನೀಲ್ ಸೆನ್ಸೇಷನ್ ಕ್ರಿಯೇಟ್ ಮಾಡಿದ್ದು ಗೊತ್ತೇಯಿದೆ. ಚಾಪ್ಟರ್- 2 ರಿಲೀಸ್‌ಗೂ ಮೊದ್ಲೆ ಪ್ರಭಾಸ್ ಕಾಂಬಿನೇಷನ್‌ನಲ್ಲಿ 'ಸಲಾರ್' ಸಿನಿಮಾ ಘೋಷಣೆ ಆಗಿತ್ತು. ಅದರ ಬೆನ್ನಲ್ಲೇ ಜ್ಯೂ. ಎನ್‌ಟಿಆರ್ ಜೊತೆ ಮತ್ತೊಂದು ಸಿನಿಮಾ ಕನ್ಫರ್ಮ್ ಆಯಿತು. ಎರಡು ಸಿನಿಮಾಗಳ ನಂತರ KGF ಸಾರಥಿ ಸ್ಯಾಂಡಲ್‌ವುಡ್‌ಗೆ ವಾಪಸ್ ಬರ್ತಾರೆ ಎಂದುಕೊಂಡವರಿಗೆ ಮತ್ತೆ ನಿರಾಸೆ ಎದುರಾಗಿದೆ.
ತೆಲುಗು ನಿರ್ಮಾಪಕ ನಿರ್ಮಾಪಕ ದಿಲ್ ರಾಜು ಸಂದರ್ಶನವೊಂದರಲ್ಲಿ ತಮ್ಮ ಮುಂದಿನ ಸಿನಿಮಾಗಳ ಬಗ್ಗೆ ಮಾತನಾಡಿದ್ದಾರೆ. ಪ್ರಶಾಂತ್ ನೀಲ್ ನಿರ್ದೇಶನದಲ್ಲಿ ಪ್ರಭಾಸ್ ನಟನೆಯ ಮತ್ತೊಂದು ಅದ್ಧೂರಿ ಸಿನಿಮಾ ಪ್ಲ್ಯಾನ್ ಮಾಡಿರುವುದಾಗಿ ಹೇಳಿದ್ದಾರೆ. ಈ ಸುದ್ದಿ ಕನ್ನಡ ಸಿನಿರಸಿಕರನ್ನು ಮತ್ತೆ ಕೆರಳಿಸಿದೆ. ಪ್ರಶಾಂತ್ ನೀಲ್ ಕನ್ನಡಕ್ಕೆ ವಾಪಸ್ ಬರೋದೇ ಇಲ್ವಾ? ಟಾಲಿವುಡ್‌ನಲ್ಲೇ ಸೆಟ್ಲ್ ಆಗಿಬಿಡ್ತಾರಾ? ನಮ್ಮಲ್ಲಿ ಒಳ್ಳೆ ನಟರು ಇಲ್ವಾ? ಇಲ್ಲಿ ಸಿನಿಮಾ ಮಾಡೋಕೆ ನಿಮಗೇನು ದಾಡಿ? ಅಂತೆಲ್ಲಾ ಕೆಲವರು ಕೇಳೋಕೆ ಶುರು ಮಾಡಿದ್ದಾರೆ.
ಪ್ರಶಾಂತ್
ನೀಲ್
ಮಗದೊಂದು
ಸಿನಿಮಾ
ಕನ್ಫರ್ಮ್:
ಹೀರೊ,
ಪ್ರೊಡ್ಯುಸರ್,
ಟೈಟಲ್
ಫಿಕ್ಸ್
'ಸಲಾರ್' ಸಿನಿಮಾ ಘೋಷಣೆ ಆದಾಗಲೇ ಇಂತಾದೊಂದು ಚರ್ಚೆ ನಡೆದಿತ್ತು. ಹೊಂಬಾಳೆಯಂತಹ ಸಂಸ್ಥೆ, ಪ್ರಶಾಂತ್ ನೀಲ್‌ರಂತಹ ನಿರ್ದೇಶಕರು ಕನ್ನಡದಲ್ಲೇ ದೊಡ್ಡ ದೊಡ್ಡ ಸಿನಿಮಾಗಳನ್ನು ಮಾಡಬಹುದಿತ್ತು. ನಮ್ಮಲ್ಲಿ ಕಲಾವಿದರು ಇರಲಿಲ್ಲವೇ? ಪ್ಯಾನ್ ಇಂಡಿಯಾ ಕಾನ್ಸೆಪ್ಟ್ ಇರುವಾಗ ನಮ್ಮ ಸಿನಿಮಾಗಳು ಕೂಡ ಸಾವಿರಾರು ಕೋಟಿ ಕಲೆಕ್ಷನ್ ಮಾಡುತ್ತವೆ. ಪರಭಾಷಾ ಸ್ಟಾರ್ ನಟರೇ ಯಾಕೆ ಬೇಕು? ನಿಮಗೆ ಎಂದು ಕೇಳಿದ್ದರು.

ಪ್ರಭಾಸ್ ಜೊತೆ ನೀಲ್ 'ರವಣಂ'
ದಿಲ್ ರಾಜು ನಿರ್ಮಾಣದಲ್ಲಿ ಪ್ರಭಾಸ್- ಪ್ರಶಾಂತ್ ನೀಲ್ ಸಿನಿಮಾ ಮಾಡ್ತಾರೆ ಎನ್ನುವ ಪ್ರಶ್ನೆ ಕೆಲವರಿಗೆ ಅಚ್ಚರಿ ಮೂಡಿಸಿದೆ. ಯಾಕಂದ್ರೆ ಸದ್ಯ ಇದೇ ಕಾಂಬಿನೇಷನ್‌ನಲ್ಲಿ 'ಸಲಾರ್' ಸಿನಿಮಾ ಸಿದ್ಧವಾಗುತ್ತಿದೆ. ಇದರ ಬೆನ್ನಲ್ಲೇ ಮತ್ತೊಂದು ಸಿನಿಮಾನಾ? ಎಂದು ಕೇಳುತ್ತಿದ್ದಾರೆ. ಇನ್ನು ದಿಲ್ ರಾಜು ಹೇಳಿರುವ ಪ್ರಕಾರ ಇದೊಂದು ಪೌರಾಣಿಕ ಕಥಾಹಂದರದ ಸಿನಿಮಾ ಆಗಿದ್ದು, 'ರವಣಂ' ಎನ್ನುವ ಟೈಟಲ್ ಫಿಕ್ಸ್ ಆಗಿದೆ. ಬಹುಕೋಟಿ ವೆಚ್ಚದಲ್ಲಿ ಬಹಳ ದೊಡ್ಡ ಮಟ್ಟದಲ್ಲಿ ಸಿನಿಮಾ ನಿರ್ಮಾಣ ಆಗಲಿದೆ.

'KGF - 3' ಕಥೆ ಏನಾಯ್ತು?
'ಸಲಾರ್' ಹಾಗೂ 'NTR31' ಸಿನಿಮಾಗಳ ನಂತರ ಪ್ರಶಾಂತ್ ನೀಲ್ ಮತ್ತೆ ಕನ್ನಡಕ್ಕೆ ವಾಪಸ್ ಬರ್ತಾರೆ, 'KGF - 3' ಸಿನಿಮಾ ಮಾಡ್ತಾರೆ ಎನ್ನುವ ಲೆಕ್ಕಾಚಾರದಲ್ಲಿ ಕೆಲವರು ಇದ್ದರು. ಆದರೆ ಪ್ರಶಾಂತ್ ನೀಲ್ ಹೀಗೆ ಪದೇ ಪದೇ ತೆಲುಗು ಸಿನಿಮಾಗಳಿಗೆ ಕಮಿಟ್ ಆಗುತ್ತಿರುವುದು ಬೇಸರ ಮೂಡಿಸಿದೆ. ಅಸಲಿಗೆ 'KGF' ಸರಣಿಯ ಮತ್ತೊಂದು ಸಿನಿಮಾ ಬರುತ್ತಾ? ಎನ್ನುವ ಅನುಮಾನ ಕೆಲವರನ್ನು ಕಾಡುತ್ತಿದೆ. ಯಾಕಂದ್ರೆ ರಾಕಿ ಭಾಯ್ ಕಥೆಯನ್ನು ನೀಲ್ ಭಾಯ್ ಮುಂದುವರೆಸಬೇಕಿದೆ. 'KGF' ಸರಣಿ ಮುಂದುವರೆಯುತ್ತದೆ ಎಂದು ಈಗಾಗಲೇ ವಿಜಯ್ ಕಿರಗಂದೂರ್ ಹೇಳಿದ್ದಾರೆ. ಆದರೆ ಯಾವಾಗ? ಎನ್ನುವ ಪ್ರಶ್ನೆ ಈಗ ಶುರುವಾಗಿದೆ.

ರಶ್ಮಿಕಾ, ಶ್ರೀಲೀಲಾ ಹಾದಿಯಲ್ಲಿ ನೀಲ್?
ಪ್ರಶಾಂತ್ ನೀಲ್ ಮತ್ತೆ ಪ್ರಭಾಸ್ ಜೊತೆ ಸಿನಿಮಾ ಮಾಡ್ತಾರೆ ಎನ್ನುವ ಸುದ್ದಿ ಕೆಲವರನ್ನು ಕೆರಳಿಸಿದೆ. "ರಶ್ಮಿಕಾ ಹಾಗೂ ಶ್ರೀಲೀಲಾ ಸಾಲಿಗೆ ಪ್ರಶಾಂತ್ ನೀಲ್ ಸೇರುತ್ತಾರೆ. ಕನ್ನಡ ಸಿನಿಮಾ ಮಾಡಿ ನೇಮು, ಫೇಮು ಸಿಕ್ಕಿದ ಮೇಲೆ ನಡೆದುಬಂದ ಹಾದಿಯನ್ನೇ ಮರೆತು ಬಿಡುತ್ತಾರೆ" ಎಂದು ಕಾಮೆಂಟ್ ಮಾಡುತ್ತಿದ್ದಾರೆ. "ರಾಜಮೌಳಿ ಅವರನ್ನು ನೋಡಿ ಕಲಿಯಿರಿ. ಮೌಳಿ ಮನಸ್ಸು ಮಾಡಿದ್ದರೆ ಬಾಲಿವುಡ್‌ಗೆ ಹೋಗಬಹುದಿತ್ತು. ಆದರೆ ಅವ್ರು ಆ ರೀತಿ ಮಾಡಲಿಲ್ಲ. ತೆಲುಗು ಸಿನಿಮಾಗಳನ್ನೇ ಗೋಲ್ಡನ್ ಗ್ಲೋಬ್ ವೇದಿಕೆವರೆಗೂ ಕೊಂಡೊಯ್ದಿದ್ದಾರೆ. 'RRR' ಬಾಲಿವುಡ್ ಸಿನಿಮಾ ಅಲ್ಲ, ಸೌತ್ ಸಿನಿಮಾ, ತೆಲುಗು ಎಂದು ಸಾರಿ ಹೇಳಿದ್ದಾರೆ" ಎನ್ನುತ್ತಿದ್ದಾರೆ.

ಮುರಳಿ ಜೊತೆ ಸಿನಿಮಾ ಮಾಡ್ತೀನಿ
ಕೆಲವರು ಪ್ರಶಾಂತ್ ನೀಲ್ ಬೆಂಬಲಕ್ಕೆ ನಿಂತಿದ್ದಾರೆ. ಕಲಾವಿದರಿಗೆ ತಂತ್ರಜ್ಞರಿಗೆ ಭಾಷೆಯ ಗಡಿ ಇಲ್ಲ. ಪರಭಾಷಾ ಫಿಲ್ಮ್ ಮೇಕರ್ಸ್ ಕೂಡ ಕನ್ನಡಕ್ಕೆ ಬಂದು ಸಿನಿಮಾ ಮಾಡಿದ್ದಾರೆ. ನೀಲ್ ಹೋಗುವುದರಲ್ಲಿ ತಪ್ಪೇನಿಲ್ಲ ಎನ್ನುತ್ತಿದ್ದಾರೆ. ಈ ಹಿಂದೆ ಸಂದರ್ಶನವೊಂದರಲ್ಲಿ ಇದೇ ಪ್ರಶ್ನೆಗೆ ನೀಲ್ ಉತ್ತರಿಸಿದ್ದರು. "ನಾನು ಕನ್ನಡಿಗ. ಎಲ್ಲೇ ಹೋದರು ನಾನು ಕನ್ನಡಿಗ. ನಾನು ಮತ್ತೆ ಬಂದು ಕನ್ನಡ ಸಿನಿಮಾಗಳನ್ನು ಮಾಡ್ತೀನಿ. ನಾನು ನನ್ನ ಜೀವನ ಕಟ್ಟಿಕೊಳ್ಳಬೇಕು, ಇದು ಮುಂದುವರೆಯಬೇಕು. ಮುಂದಿನ ದಿನಗಳಲ್ಲಿ ಇದನ್ನು ವಿಸ್ತರಿಸಲು ಸಾಧ್ಯ ಆದರೆ ಕನ್ನಡಕ್ಕೆ ಬರ್ತೀನಿ. ಶ್ರೀಮುರಳಿ ಜೊತೆ ಸಿನಿಮಾ ಮಾಡಬೇಕು" ಎಂದು ಹೇಳಿದ್ದರು.