'ಸಲಾರ್‌'ನಲ್ಲಿ 'ಕೆಜಿಎಫ್' ತಾತ ಕೃಷ್ಣಾಜಿ ರಾವ್: ಪಾತ್ರ ಹೇಗಿರುತ್ತೆ ಗೊತ್ತಾ?

'ಕೆಜಿಎಫ್' ಸಿನಿಮಾ ಕೇವಲ ರಾಕಿ ಭಾಯ್ ಪಾತ್ರದಿಂದ ಮಾತ್ರ ಯಶಸ್ಸು ಕಂಡಿಲ್ಲ. ಚಿತ್ರದಲ್ಲಿನ ಎಲ್ಲಾ ಪಾತ್ರಗಳಿಗೂ ಕೂಡ ಅಷ್ಟೇ ಪ್ರಾಮುಖ್ಯತೆ ಇದೆ. ಪಾತ್ರವೂ ಕೂಡ ಒಂದಲ್ಲಾ ಒಂದು ರೀತಿಯಲ್ಲಿ ಚಿತ್ರದ ಕಥೆಗೆ ಕೊಡುಗೆ ಕೊಟ್ಟಿವೆ.

ಅಂತಹ ಪಾತ್ರಗಳಲ್ಲಿ ಕೃಷ್ಣಾಜಿ ರಾವ್ ಪಾತ್ರ ಕೂಡ ಒಂದು. ಕೃಷ್ಣಾಜಿ ರಾವ್ ಅಂದರೆ ನಿಮಗೆ ಅಷ್ಟು ಬೇಗ ಗೊತ್ತಾಗುವುದಿಲ್ಲ. ಆದರೆ 'ಕೆಜಿಎಫ್' ತಾತ ಅಂದರೆ ರಪ್ ಅಂತ ಅವರ ಮುಖ ಕಣ್ಣ ಮುಂದೆ ಬಂದು ಬಿಡುತ್ತೆ ಅಲ್ವಾ.

ಹೌದು, 'ಕೆಜಿಎಫ್' ತಾತ ತಮ್ಮ ಈ ಇಳಿವಯಸ್ಸಿನಲ್ಲಿ ಸೂಪರ್ ಸ್ಟಾರ್ ರೀತಿ ಮಿಂಚುತ್ತಾ ಇದ್ದಾರೆ. 'ಕೆಜಿಎಫ್' ಚಿತ್ರದಲ್ಲಿ ಅವರ ಪಾತ್ರ ಚಿಕ್ಕದಾದರೂ ಕೂಡ ಅವರ ಪ್ರಭಾವ ಬಹಳ ದೊಡ್ಡದು. ಕೃಷ್ಣಾಜಿ ರಾವ್ 'ಕೆಜಿಎಫ್ ಚಾಪ್ಟರ್ 1' ಮತ್ತು 2ರಲ್ಲಿ ಅಭಿನಯಿಸಿದ್ದಾರೆ.

'ಕೆಜಿಎಫ್' ತಾತನಿಗೆ ಪ್ರಶಾಂತ್ ನೀಲ್ ಕೊಟ್ಟ ಮಾತೇನು?

'ಕೆಜಿಎಫ್' ತಾತನಿಗೆ ಪ್ರಶಾಂತ್ ನೀಲ್ ಕೊಟ್ಟ ಮಾತೇನು?

'ಕೆಜಿಎಫ್' ಸರಣಿ ಸಿನಿಮಾಗಳ ನಂತರ ನಿರ್ದೇಶಕ ಪ್ರಶಾಂತ್ ನೀಲ್ ತೆಲುಗು ಸಿನಿಮಾರಂಗದಲ್ಲಿ ಬ್ಯುಸಿಯಾಗಿದ್ದಾರೆ. ಸದ್ಯ 'ಸಲಾರ್' ಚಿತ್ರದಲ್ಲಿ ಬ್ಯುಸಿಯಾಗಿದ್ದಾರೆ. ಪ್ರಭಾಸ್‌ಗೆ ನಿರ್ದೇಶನ ಮಾಡುತ್ತಿದ್ದಾರೆ. ಹಾಗಂತ ಅವರು ಕನ್ನಡವನ್ನು ಮರೆಯುವುದಿಲ್ಲ ಎನ್ನುವುದಕ್ಕೆ ತಾಜಾ ಉದಾಹರಣೆ ಸಿಕ್ಕಿದೆ. 'ಕೆಜಿಎಫ್' ಚಿತ್ರದಲ್ಲಿ ಅಭಿನಯಿಸಿದ್ದ ಹಿರಿಯ ನಟ ಕೃಷ್ಣಜಿ ರಾವ್‌ಗೆ 'ಸಲಾರ್' ಸಿನಿಮಾದಲ್ಲಿ ಅವಕಾಶ ಕೊಡುವುದಾಗಿ ಮಾತು ಕೊಟ್ಟಿದ್ದಾರಂತೆ.

'ಸಲಾರ್‌'ನಲ್ಲಿ 'ಕೆಜಿಎಫ್' ತಾತ!

'ಸಲಾರ್‌'ನಲ್ಲಿ 'ಕೆಜಿಎಫ್' ತಾತ!

'ಕೆಜಿಎಫ್' ಚಿತ್ರ ಆಗಾಗಲೆ ಹಲವು ವಿಚಾರಗಳಿಗೆ ಸಿಕ್ಕಾಪಟ್ಟೆ ಸದ್ದು ಮಾಡುತ್ತಾ ಇದೆ. ಈ ಚಿತ್ರದಲ್ಲಿ ಕನ್ನಡದ ಕೃಷ್ಣಾಜಿ ರಾವ್ ಕೂಡ ಅಭಿನಯಿಸಲಿದ್ದಾರೆ. ಫಿಲ್ಮಿ ಬೀಟ್ ಸಂದರ್ಶನದಲ್ಲಿ ಮಾತನಾಡಿದ ಕೃಷ್ಣಾಜಿ ರಾವ್ 'ಸಲಾರ್' ಸಿನಿಮಾದಲ್ಲಿ ನಟಿಸುವುದನ್ನು ಖಚಿತ ಪಡಿಸಿದ್ದಾರೆ. 'ಸಲಾರ್' ಚಿತ್ರದಲ್ಲಿ ಒಂದು ಪಾತ್ರ ಕೊಡುವಂತೆ ನಿರ್ದೇಶಕ ಪ್ರಶಾಂತ್ ನೀಲ್ ಹೇಳಿದ್ದಾರಂತೆ. ಆದರೆ ಇನ್ನೂ ಯಾವ ಪಾತ್ರ ಎನ್ನುವುದನ್ನು ಮಾತ್ರ ರಿವೀಲ್ ಮಾಡಿಲ್ಲ.

'ಕೆಜಿಎಫ್‌'ನಲ್ಲಿ ಕೃಷ್ಣಾಜಿ ಪಾತ್ರಕ್ಕೆ ಪ್ರಾಮುಖ್ಯತೆ!

'ಕೆಜಿಎಫ್‌'ನಲ್ಲಿ ಕೃಷ್ಣಾಜಿ ಪಾತ್ರಕ್ಕೆ ಪ್ರಾಮುಖ್ಯತೆ!

'ಕೆಜಿಎಫ್' ಚಿತ್ರದಲ್ಲಿ ಕಣ್ಣು ಕಾಣದ ಕುರುಡನ ಪಾತ್ರದಲ್ಲಿ ಕೃಷ್ಣಜಿ ರಾವ್ ಕಾಣಿಸಿಕೊಂಡಿದ್ದಾರೆ. ಇವರ ಅಭಿನಯಕ್ಕೆ ಹಲವು ಅಭಿಮಾನಿಗಳು ಹುಟ್ಟುಕೊಂಡಿದ್ದಾರೆ. 'ಕೆಜಿಎಫ್ 2' ಚಿತ್ರದ ತೂಫಾನ್ ಹಾಡಿನಲ್ಲಿ ಕೃಷ್ಣಾಜಿ ರಾವ್ ಘರ್ಜಿಸಿದ್ದಾರೆ. ಇವರ ಪಾತ್ರಕ್ಕೆ ಹೆಚ್ಚಿನ ಪ್ರಾಮುಖ್ಯತೆ ಕೊಡಲಾಗಿದೆ. ಇದರಿಂದ 'ಕೆಜಿಎಫ್' ತಾತನ ಜೀವನ ಬದಲಾಗಿದೆ. ಸಾಲು, ಸಾಲು ಸಿನಿಮಾಗಳಲ್ಲಿ ಬ್ಯುಸಿ ಆಗಿದ್ದಾರೆ.

ಲವ್ ಸ್ಟೋರಿಯಲ್ಲೂ ತಾತ ಬ್ಯುಸಿ!

ಲವ್ ಸ್ಟೋರಿಯಲ್ಲೂ ತಾತ ಬ್ಯುಸಿ!

'ಕೆಜಿಎಫ್' ತಾತ ಕೃಷ್ಣಾಜಿ ರಾವ್ ಸದ್ಯ ಸಾಲು, ಸಾಲು ಸಿನಿಮಾಗಳಲ್ಲಿ ಬ್ಯುಸಿ ಇದ್ದಾರೆ. ಮೂರು, ನಾಲ್ಕು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಹೀರೋ ಆಗಿ ಕೂಡ ಕೃಷ್ಣಜಿರಾವ್ ಅಭಿನಯಿಸುತ್ತಿದ್ದಾರೆ. 'ತಾತನ ಲವ್ ಸ್ಟೋರಿ' ಎನ್ನುವ ಸಿನಿಮಾದಲ್ಲಿ ಕೃಷ್ಣಾಜಿ ರಾವ್ ನಾಯಕ ನಟನಾಗಿ ಅಭಿನಯಿಸುತ್ತಾ ಇದ್ದಾರೆ. ಹಲವು ವರ್ಷಗಳ ಹಿಂದೆ, ಶಂಕರ್‌ನಾಗ್ ಜೊತೆಗೆ ಸಹಾಯಕ ನಿರ್ದೇಶಕನಾಗಿ ಕೆಲಸ ಮಾಡಿದ್ದಾರೆ.

More from Filmibeat

English summary
Prashanth Neel Promise A Role For Senior Actor KGF Krishnaji Rao In Salaar
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X