For Quick Alerts
  ALLOW NOTIFICATIONS  
  For Daily Alerts

  ಕೆಜಿಎಫ್ ಟೀಸರ್‌ಗೂ ಮೊದಲೇ ಕುತೂಹಲ ಹೆಚ್ಚಿಸಿದ ಪ್ರಶಾಂತ್ ನೀಲ್

  |

  ರಾಕಿಂಗ್ ಸ್ಟಾರ್ ಯಶ್ ಅವರ ಹುಟ್ಟುಹಬ್ಬದ ಪ್ರಯುಕ್ತ ಕೆಜಿಎಫ್ ಚಾಪ್ಟರ್ 2 ಮೊದಲ ಟೀಸರ್ ಬಿಡುಗಡೆ ಮಾಡುವುದಾಗಿ ಚಿತ್ರತಂಡ ಘೋಷಿಸಿದೆ. ಜನವರಿ 8 ರಂದು ರಾಕಿ ಭಾಯ್ ಬರ್ತಡೇ ಸೆಲೆಬ್ರೆಟ್ ಮಾಡಿಕೊಳ್ಳುತ್ತಿದ್ದಾರೆ. ಕೆಜಿಎಫ್ ಟೀಸರ್ ಬರುವುದಕ್ಕೂ, ಯಶ್ ಹುಟ್ಟುಹಬ್ಬಕ್ಕೂ ನಾಲ್ಕು ದಿನಗಳು ಮಾತ್ರ ಬಾಕಿ ಇದೆ.

  KGF 2 ಚಿತ್ರದ ಬಗ್ಗೆ ದೊಡ್ಡ ಸುಳಿವು ಕೊಟ್ಟ ಪ್ರಶಾಂತ್ ನೀಲ್ | Filmibeat Kannada

  ಈ ಮಧ್ಯೆ ಚಾಪ್ಟರ್ 2 ಟೀಸರ್ ಬಗೆಗಿನ ಕುತೂಹಲವನ್ನು ಹೆಚ್ಚಿಸಿದ್ದಾರೆ ನಿರ್ದೇಶಕ ಪ್ರಶಾಂತ್ ನೀಲ್ ಅಂಡ್ ಟೀಂ. ಕೆಜಿಎಫ್ ಚಿತ್ರದ ಹೊಸ ಫೋಟೋ ಹಂಚಿಕೊಂಡಿರುವ ನಿರ್ದೇಶಕ ''ಸಾಮ್ರಾಜ್ಯದ ಬಾಗಿಲು ತೆರೆಯಲು ಕ್ಷಣಗಣನೆ ಪ್ರಾರಂಭವಾಗಿದೆ'' ಎಂದು ಕ್ಯಾಪ್ಷನ್ ಹಾಕಿದ್ದಾರೆ.

  'ಕೆಜಿಎಫ್ 3' ಸಿನಿಮಾ ಕುರಿತು ಪ್ರಶಾಂತ್ ನೀಲ್ ಕೊಟ್ಟರು ಸ್ಪಷ್ಟನೆ'ಕೆಜಿಎಫ್ 3' ಸಿನಿಮಾ ಕುರಿತು ಪ್ರಶಾಂತ್ ನೀಲ್ ಕೊಟ್ಟರು ಸ್ಪಷ್ಟನೆ

  ಕೆಜಿಎಫ್ ಚಾಪ್ಟರ್ 2 ಸಿನಿಮಾದ ಚಿತ್ರೀಕರಣ ಬಹುತೇಕ ಅಂತ್ಯವಾಗಿದೆ. ಬಾಕಿ ಉಳಿದಿರುವ ಕೆಲವು ದೃಶ್ಯಗಳನ್ನು ಮಾತ್ರ ಸೆರೆಹಿಡಿಯಲಾಗುತ್ತಿದೆ. ಯಶ್, ಸಂಜಯ್ ದತ್ ಅವರ ಭಾಗದ ಶೂಟಿಂಗ್ ಸಂಪೂರ್ಣವಾಗಿ ಮುಗಿದಿದೆ.

  ಜನವರಿ ಎರಡನೇ ವಾರದೊಳಗೆ ಕೆಜಿಎಫ್ ಚಿತ್ರತಂಡ ಕುಂಬಳಕಾಯಿ ಹೊಡೆಯಲಿದೆ ಎಂದು ಹೇಳಲಾಗುತ್ತಿದೆ. ಶೂಟಿಂಗ್ ಮುಗಿಯುತ್ತಿದ್ದಂತೆ ಬಿಡುಗಡೆಗೆ ಪ್ಲಾನ್ ಮಾಡಿ ಪ್ರಚಾರ ಆರಂಭಿಸಲಿದ್ದಾರೆ.

  ಪ್ರಶಾಂತ್ ನೀಲ್ ನಿರ್ದೇಶನದಲ್ಲಿ ತಯಾರಾಗಿರುವ ಈ ಚಿತ್ರ ಕನ್ನಡ, ತೆಲುಗು, ತಮಿಳು, ಹಿಂದಿ ಹಾಗೂ ಮಲಯಾಳಂ ಭಾಷೆಗಳಲ್ಲಿ ತೆರೆಕಾಣಲಿದೆ. ಹೊಂಬಾಳೆ ಫಿಲಂಸ್ ಈ ಚಿತ್ರಕ್ಕೆ ಬಂಡವಾಳ ಹಾಕಿದ್ದಾರೆ.

  ಕೆಜಿಎಫ್ 2 ಚಿತ್ರೀಕರಣ ಮುಗಿದರೂ ಮನೆಗೆ ಹೋಗದೆ ಹೋಟೆಲ್‌ನಲ್ಲಿ ಉಳಿದ ಯಶ್!?ಕೆಜಿಎಫ್ 2 ಚಿತ್ರೀಕರಣ ಮುಗಿದರೂ ಮನೆಗೆ ಹೋಗದೆ ಹೋಟೆಲ್‌ನಲ್ಲಿ ಉಳಿದ ಯಶ್!?

  ಇನ್ನುಳಿದಂತೆ ಯಶ್, ಸಂಜಯ್ ದತ್, ರವೀನಾ ಅಂಡನ್, ಪ್ರಖಾಶ್ ರಾಜ್, ಶ್ರೀನಿಧಿ ಶೆಟ್ಟಿ ಸೇರಿದಂತೆ ಹಲವು ಕಲಾವಿದರು ಈ ಚಿತ್ರದಲ್ಲೂ ಮುಂದುವರಿಯಲಿದ್ದಾರೆ.

  English summary
  Director Prashanth Neel shared Exclusive making Photos of Kgf Chapter 2. teaser will release on yash birthday.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X