'ಕೆಜಿಎಫ್ 2' ಸಿನಿಮಾ ಬಿಡುಗಡೆ ಬಗ್ಗೆ ಪ್ರಶಾಂತ್ ನೀಲ್ ಮಾತು

'ಕೆಜಿಎಫ್ 2' ಸಿನಿಮಾಕ್ಕಾಗಿ ಕೋಟ್ಯಂತರ ಅಭಿಮಾನಿಗಳು ಕಾಯುತ್ತಿದ್ದಾರೆ. ಕೆಜಿಎಫ್ 2 ಸಿನಿಮಾದ ಬಿಡುಗಡೆ ದಿನಾಂಕ ಈಗಾಗಲೇ ಘೋಷಣೆ ಆಗಿದೆಯಾದರೂ ಕೋವಿಡ್‌ ಪರಿಸ್ಥಿತಿಯಿಂದಾಗಿ ಬಿಡುಗಡೆ ಮುಂದೂಡಲ್ಪಡಬಹುದು ಎಂಬ ಸುದ್ದಿಗಳು ಹರಿದಾಡುತ್ತಿವೆ.

'ಕೆಜಿಎಫ್ 2' ಸಿನಿಮಾವನ್ನು ಜುಲೈ 16ಕ್ಕೆ ಬಿಡುಗಡೆ ಮಾಡಲಾಗುತ್ತದೆ ಎಂದು ಈಗಾಗಲೇ ಅಧಿಕೃತವಾಗಿ ಘೋಷಣೆ ಮಾಡಲಾಗಿದೆ. ಆದರೆ ಸಿನಿಮಾ ಬಿಡುಗಡೆ ಮುಂದೂಡುವ ಸಾಧ್ಯತೆ ಬಗ್ಗೆಯೂ ಸುದ್ದಿಗಳು ಹರಿದಾಡುತ್ತಿವೆ. ಇದೇ ಸಮಯದಲ್ಲಿ 'ಕೆಜಿಎಫ್ 2' ನಿರ್ದೇಶಕ ಪ್ರಶಾಂತ್ ನೀಲ್ ಇತ್ತೀಚೆಗೆ 'ಸಿನಿಮಾ ಎಕ್ಸ್‌ಪ್ರೆಸ್' ಜೊತೆಗೆ ಮಾತನಾಡಿದ್ದಾರೆ.

ಇಂಥಹಾ ಸಮಯ ಬರುತ್ತದೆಂದು ನಿರೀಕ್ಷಿಸಿರಲಿಲ್ಲ: ಪ್ರಶಾಂತ್

ಇಂಥಹಾ ಸಮಯ ಬರುತ್ತದೆಂದು ನಿರೀಕ್ಷಿಸಿರಲಿಲ್ಲ: ಪ್ರಶಾಂತ್

'ಇಂಥಹಾ ಸಮಯ ಬರುತ್ತದೆಂದು (ಲಾಕ್‌ಡೌನ್) ನಾವು ನಿರೀಕ್ಷಿಸಿರಲಿಲ್ಲ. ಆದರೆ ಏನೂ ಮಾಡಲಾಗದು ನಾವು ಇದನ್ನು ಅನುಭವಿಸಲೇ ಬೇಕು. ನಾನು ಈಗ (ಕೆಜಿಎಫ್) ಕತೆಯನ್ನು ಬದಲಾಯಿಸಲು ಸಾಧ್ಯವಿಲ್ಲ. ಆದರೆ ಪೋಸ್ಟ್ ಪ್ರೊಡಕ್ಷನ್ ಅನ್ನು ಇನ್ನಷ್ಟು ಪರಿಣಾಮಕಾರಿಯಾಗಿ ಮಾಡಲು ಸಮಯದೊರಕಿತು' ಎಂದಿದ್ದಾರೆ ಪ್ರಶಾಂತ್.

ನಮ್ಮ ಸಿನಿಮಾದ ಮೇಲೆ ಪರಿಣಾಮ ಬೀರದು: ಪ್ರಶಾಂತ್

ನಮ್ಮ ಸಿನಿಮಾದ ಮೇಲೆ ಪರಿಣಾಮ ಬೀರದು: ಪ್ರಶಾಂತ್

ಸಿನಿಮಾ ಬಿಡುಗಡೆ ಬಗ್ಗೆ ಮಾತನಾಡಿರುವ ಪ್ರಶಾಂತ್ ನೀಲ್, 'ನಮ್ಮದು ಒಂದು ನಿರ್ದಿಷ್ಟ ಕಾಲಘಟ್ಟದಲ್ಲಿ ನಡೆವ ಕತೆಯುಳ್ಳ ಸಿನಿಮಾ. ಮೇಕಿಂಗ್ ಸಹ ಬಹಳ ಭಿನ್ನವಾಗಿ ಮಾಡಿದ್ದೇವೆ. ಹಾಗಾಗಿ ಆ ಸಿನಿಮಾವನ್ನು ಯಾವುದೇ ಸಮಯದಲ್ಲಿ ಬಿಡುಗಡೆ ಮಾಡಿದರೂ ಸಿನಿಮಾದ ಮೇಲೆ ಯಾವ ಇತರೆ ಅಂಶಗಳು ಪರಿಣಾಮ ಬೀರುವುದಿಲ್ಲ' ಎಂದಿದ್ದಾರೆ ಪ್ರಶಾಂತ್. ಆ ಮೂಲಕ ಸಿನಿಮಾ ಬಿಡುಗಡೆ ತಡವಾಗಬಹುದು ಎಂಬ ಪರೋಕ್ಷ ಸುಳಿವು ನೀಡಿದ್ದಾರೆ.

ಜುಲೈ 16 ಕ್ಕೆ ಬಿಡುಗಡೆ ಆಗಲಿದೆ ಸಿನಿಮಾ

ಜುಲೈ 16 ಕ್ಕೆ ಬಿಡುಗಡೆ ಆಗಲಿದೆ ಸಿನಿಮಾ

'ಕೆಜಿಎಫ್ 2' ಸಿನಿಮಾವನ್ನು ಜುಲೈ 16ಕ್ಕೆ ಬಿಡುಗಡೆ ಮಾಡುವುದಾಗಿ ಈಗಾಗಲೇ ಘೋಷಿಸಲಾಗಿದೆ. ಸಿನಿಮಾದ ಡಬ್ಬಿಂಗ್ ಸಹ ಮುಗಿದಿದ್ದು ಸಣ್ಣ-ಪುಟ್ಟ ಪೋಸ್ಟ್ ಪ್ರೊಡಕ್ಷನ್ ಕಾರ್ಯಗಳು ಮಾತ್ರ ಬಾಕಿ ಉಳಿದಿವೆ. ಸಿನಿಮಾದಲ್ಲಿ ಯಶ್ ಜೊತೆಗೆ ಸಂಜಯ್ ದತ್, ರವೀನಾ ಟಂಡನ್, ಪ್ರಕಾಶ್ ರೈ ಇನ್ನೂ ಹಲವಾರು ಖ್ಯಾತನಾಮ ನಟರು ನಟಿಸಿದ್ದಾರೆ.

Recommended Video

ಸಿಎಂ ಸಾಹೇಬ್ರು ರಾಜೀನಾಮೆ ಕೊಡಬೇಕಂತೆ-ಮಠ ಡೈರೆಕ್ಟರ್ ರಿಂದ ಬಿಎಸ್ ವೈಗೆ ಫುಲ್ ಕ್ಲಾಸ್ | Guru prasad | Filmibeat Kannada
'ಸಲಾರ್' ಸಿನಿಮಾಕ್ಕಾಗಿ ಆಕ್ಷನ್ ದೃಶ್ಯ ಚಿತ್ರೀಕರಣ

'ಸಲಾರ್' ಸಿನಿಮಾಕ್ಕಾಗಿ ಆಕ್ಷನ್ ದೃಶ್ಯ ಚಿತ್ರೀಕರಣ

ತಮ್ಮದೇ ನಿರ್ದೇಶನದ 'ಸಲಾರ್' ಸಿನಿಮಾದ ಬಗ್ಗೆಯೂ ಮಾತನಾಡಿರುವ ಪ್ರಶಾಂತ್ ನೀಲ್, ಶ್ರುತಿ ಹಾಸನ್ ಹಾಗೂ ಪ್ರಭಾಸ್‌ ಇರುವ ದೊಡ್ಡ ಆಕ್ಷನ್ ದೃಶ್ಯವೊಂದರ ಚಿತ್ರೀಕರಣ ಶೀಘ್ರದಲ್ಲಿಯೇ ಪ್ರಾರಂಭವಾಗಲಿದೆ ಎಂದಿದ್ದಾರೆ. ಈ ಲಾಕ್‌ಡೌನ್ ಅವಧಿಯಲ್ಲಿ ಇನ್ನಷ್ಟು ಸ್ಕ್ರಿಪ್ಟ್‌ಗಳನ್ನು ಬರೆಯಲು ಸಾಧ್ಯವಾಯಿತು ಎಂದಿದ್ದಾರೆ ಪ್ರಶಾಂತ್ ನೀಲ್. 'ಸಲಾರ್' ನಂತರ ಜೂ.ಎನ್‌ಟಿಆರ್‌ಗಾಗಿ ಸಿನಿಮಾ ನಿರ್ದೇಶನ ಮಾಡಲಿದ್ದಾರೆ ಪ್ರಶಾಂತ್.

More from Filmibeat

English summary
Director Prashanth Neel talked about KGF 2 movie release. He said our movie will be fresh at any point of release.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X