Don't Miss!
- News
ಗೋರಖನಾಥ ದೇಗುಲ ದಾಳಿ: ಆರೋಪಿ ಮುರ್ತಾಜಾ ಅಬ್ಬಾಸಿಗೆ ಮರಣದಂಡನೆ!
- Technology
ನಿಮ್ಮ ಉಂಗುರದ ಗಾತ್ರವನ್ನು ಫೋನ್ ಮೂಲಕವೇ ಅಳತೆ ಮಾಡಿ: ಹೇಗೆ ಗೊತ್ತಾ?
- Automobiles
ಭಾರತದಲ್ಲಿ ಅಬ್ಬರಿಸಲು ಬಿಡುಗಡೆಯಾಯ್ತು ಹೀರೋ Xoom 110 ಸ್ಕೂಟರ್: ಬೆಲೆ ರೂ.68,599...!
- Finance
ಅದಾನಿ ಗ್ರೂಪ್ನ ಷೇರು ಕುಸಿತವು ಜಲಿಯನ್ ವಾಲಾಬಾಗ್ ಹತ್ಯಾಕಾಂಡಕ್ಕೆ ಹೋಲಿಸಿದ ಅದಾನಿ ಗ್ರೂಪ್ ಸಿಎಫ್ಒ- ಕಾರಣ
- Sports
ಟಿ20 ವಿಶ್ವಕಪ್ ಗೆದ್ದ ಭಾರತ ಮಹಿಳಾ ತಂಡಕ್ಕೆ ವಿಶೇಷ ಅಭಿನಂದನೆ ತಿಳಿಸಿದ ಹಿರಿಯರ ಕ್ರಿಕೆಟ್ ತಂಡ
- Lifestyle
ಸಮಂತಾ ಮಯೋಸೈಟಿಸ್ನಿಂದ ಚೇತರಿಸಿಕೊಳ್ಳಲು ಪಾಲಿಸುತ್ತಿರುವ ಡಯಟ್
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಕುತೂಹಲ ಮೂಡಿಸಿದ ಅಲ್ಲು ಅರ್ಜುನ್ ಮತ್ತು ಪ್ರಶಾಂತ್ ನೀಲ್ ಭೇಟಿ
ಸ್ಯಾಂಡಲ್ ವುಡ್ ನ ಖ್ಯಾತ ನಿರ್ದೇಶಕ, ಕೆಜಿಎಫ್ ಸರದಾರ ಪ್ರಶಾಂತ್ ನೀಲ್ ತೆಲುಗಿನ ಸ್ಟೈಲಿಶ್ ಸ್ಟಾರ್ ಅಲ್ಲು ಅರ್ಜುನ್ ಭೇಟಿಯಾಗಿರುವುದು ಕುತೂಹಲ ಮೂಡಿಸಿದೆ. ಇಂದು ಪ್ರಶಾಂತ್ ನೀಲ್, ಅಲ್ಲು ಅವರನ್ನು ಹೈದರಾಬಾದ್ ನಲ್ಲಿ ದಿಢೀರ್ ಭೇಟಿಯಾಗಿದ್ದಾರೆ.
Recommended Video
ಅಲ್ಲು ಅವರವಿಂದ್ ಅವರ ಗೀತಾ ಆರ್ಟ್ಸ್ ಪ್ರೊಡಕ್ಷನ್ ಕಚೇರಿಗೆ ಪ್ರಶಾಂತ್ ನೀಲ್ ಭೇಟಿ ನೀಡಿದ್ದರು. ಪ್ರಶಾಂತ್ ನೀಲ್ ಸದ್ಯ ಪ್ರಭಾಸ್ ನಟನೆಯ ಸಲಾರ್ ಸಿನಿಮಾದ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದು, ಚಿತ್ರೀಕರಣ ಹೈದರಾಬಾದ್ ನಲ್ಲಿ ನಡೆಯುತ್ತಿದೆ. ಚಿತ್ರೀಕರಣದಿಂದ ಬಿಡುವು ಮಾಡಿಕೊಂಡು ಪ್ರಶಾಂತ್ ನೀಲ್, ಅಲ್ಲು ಅರ್ಜುನ್ ಅವರನ್ನು ಭೇಟಿಯಾಗಿದ್ದಾರೆ. ಮುಂದೆ ಓದಿ..
ಅಲ್ಲು
ಅರ್ಜುನ್
ದಂಪತಿಯ
ವಿವಾಹ
ವಾರ್ಷಿಕೋತ್ಸವ:
ಪತ್ನಿಗೆ
ಸ್ಟೈಲಿಶ್
ಸ್ಟಾರ್
ಕಡೆಯಿಂದ
ಸಿಹಿಯಾದ
ಸಂದೇಶ

ಅಲ್ಲು ಅರ್ಜುನ್ ಭೇಟಿಯಾದ ಪ್ರಶಾಂತ್ ನೀಲ್
ನಿರ್ದೇಶಕ ಪ್ರಶಾಂತ್ ನೀಲ್ ಹೈದರಾಬಾದ್ ನಲ್ಲಿರುವ ಅಲ್ಲು ಅರವಿಂದ್ ಆಫೀಸ್ ಗೆ ಭೇಟಿ ನೀಡಿದ್ದಾರೆ. ಪ್ರಶಾಂತ್ ನೀಲ್ ಭೇಟಿಯಾಗಲು ನಟ ಅಲ್ಲು ಅರ್ಜುನ್ ಸಹ ಆಫೀಸ್ ಗೆ ಬಂದಿದ್ದಾರೆ. ನಿರ್ದೇಶಕ ಪ್ರಶಾಂತ್ ನೀಲ್ ಜೊತೆ ಅಲ್ಲು ಅರ್ಜುನ್ ಕೆಲವು ಸಮಯ ಮಾತುಕತೆ ನಡೆಸಿದ್ದಾರೆ. ಅಲ್ಲು ಅರ್ಜುನ್ ಕ್ಯಾಮರಾಗೆ ಪೋಸ್ ನೀಡಿ ಕಚೇರಿ ಒಳಗೆ ಹೋಗಿದ್ದಾರೆ. ಈ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

ಅಲ್ಲು ಜೊತೆ ಕೆಜಿಎಫ್ ನಿರ್ದೇಶಕರ ಸಿನಿಮಾ?
ಪ್ರಶಾಂತ್ ನೀಲ್ ಗೀತಾ ಅರ್ಟ್ಸ್ ಗೆ ಭೇಟಿ ನೀಡಿ ಅಲ್ಲು ಅರ್ಜುನ್ ಅವರ ಜೊತೆ ಸ್ಕ್ರಿಪ್ಟ್ ಬಗ್ಗೆ ಮಾತುಕತೆ ನಡೆಸಿದ್ದಾರೆ ಎನ್ನುವ ಮಾಹಿತಿ ಕೇಳಿಬರುತ್ತಿದೆ. ಪ್ರಶಾಂತ್ ನೀಲ್ ಸಲಾರ್ ಬಳಿಕ ಅಲ್ಲು ಅರ್ಜುನ್ ಜೊತೆ ಸಿನಿಮಾ ಮಾಡುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಒಂದು ವೇಳೆ ಅಲ್ಲು ಜೊತೆ ಸಿನಿಮಾ ಮಾಡುವುದು ಖಚಿತವಾದರೆ ಜೂ ಎನ್ ಟಿ ಆರ್ ಸಿನಿಮಾ ಕತೆ ಏನು ಎಂದು ಅಭಿಮಾನಿಗಳು ಪ್ರಶ್ನೆ ಮಾಡುತ್ತಿದ್ದಾರೆ.
ಪ್ಯಾನ್
ಇಂಡಿಯಾ
ಸಿನಿಮಾ
'ಸಲಾರ್'
ರಿಲೀಸ್
ದಿನಾಂಕ
ಘೋಷಣೆ

ಪುಷ್ಪ ಸಿನಿಮಾದಲ್ಲಿ ಅಲ್ಲು ಅರ್ಜುನ್ ಬ್ಯುಸಿ
ಅಲ್ಲು ಅರ್ಜುನ್ ಸದ್ಯ ಪುಷ್ಪ ಸಿನಿಮಾದ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. ಸುಕುಮಾರ್ ಆಕ್ಷನ್ ಕಟ್ ಹೇಳುತ್ತಿರುವ ಪುಷ್ಪ ಸಿನಿಮಾದ ಮೊದಲ ಹಂತದ ಚಿತ್ರೀಕರಣ ಯಶಸ್ವಿಯಾಗಿ ಮುಕ್ತಾಯವಾಗಿದೆ. ಚಿತ್ರದಲ್ಲಿ ಅಲ್ಲು ಅರ್ಜುನ್ ಗೆ ನಾಯಕಿಯಾಗಿ ರಶ್ಮಿಕಾ ಮಂದಣ್ಣ ಕಾಣಿಸಿಕೊಳ್ಳುತ್ತಿದ್ದಾರೆ.

ಜುಲೈ 16ಕ್ಕೆ ಕೆಜಿಎಫ್-2 ರಿಲೀಸ್
ರಾಕಿಂಗ್ ಸ್ಟಾರ್ ಯಶ್ ನಟನೆಯ ಬಹುನಿರೀಕ್ಷೆಯ ಕೆಜಿಎಫ್-2 ಸಿನಿಮಾ ಜುಲೈ 16ರಂದು ತೆರೆಗೆ ಬರುತ್ತಿದೆ. ಈಗಾಗಲೇ ಟೀಸರ್ ಮೂಲಕ ಕುತೂಹಲ ಜಗತ್ತಿನ ಗಮನ ಸೆಳೆದಿರುವ ಕೆಜಿಎಫ್-2 ಸಿನಿಮಾ ನೋಡಲು ಪ್ರೇಕ್ಷಕರು ಜಾತಕ ಪಕ್ಷಿಯಂತೆ ಕಾಯುತ್ತಿದ್ದಾರೆ.