Prashnath Neel: 8 ವರ್ಷದ ಬಳಿಕವೇ ಪ್ರಶಾಂತ್ ನೀಲ್ ಕನ್ನಡ ಚಿತ್ರ ಮಾಡೋದು, ಕಾರಣ ಇಲ್ಲಿದೆ!
ನಿರ್ದೇಶಕ ಪ್ರಶಾಂತ್ ನೀಲ್ ಸದ್ಯ 'ಕೆಜಿಎಫ್' ಕೋಟಿಯಲ್ಲಿ ಸಿಕ್ಕಾಪಟ್ಟೆ ಬ್ಯುಸಿ. ಚಿತ್ರದ ರಿಲೀಸ್ ಹತ್ತಿರ ಆಗುತ್ತಿದ್ದ ಹಾಗೆ ಚಿತ್ರದ ಕೆಲಸಗಳು ಭರದಿಂದ ಸಾಗಿದೆ. 'ಕೆಜಿಎಫ್' ಚಿತ್ರಕ್ಕೆ ಮುಖ್ಯ ನಾವಿಕ ಅಂದರೆ ಅದು ನಿರ್ದೇಶಕ ಪ್ರಶಾಂತ್ ನೀಲ್. ತಮ್ಮ ಪರಿಕಲ್ಪನೆಯಲ್ಲಿ ಸಿನಿಮಾವನ್ನು ಅದ್ಭುತವಾಗಿ ಕಟ್ಟಿ ಕೊಟ್ಟಿದ್ದಾರೆ. ಈಗ ಈ ಸಾಲಿಗೆ ಸೇರಲು 'ಕೆಜಿಎಫ್ 2' ರೆಡಿಯಾಗಿದೆ.
'ಕೆಜಿಎಫ್' ಚಿತ್ರದ ಬಳಿಕ ನಿರ್ದೇಶಕ ಪ್ರಶಾಂತ್ ನೀಲ್ ಯಾವ ಚಿತ್ರ ಮಾಡುತ್ತಾರೆ ಎನ್ನುವ ಪ್ರಶ್ನೆಗೆ ಉತ್ತರ ಇದೆ. ಆದರೆ ಕನ್ನಡದಲ್ಲಿ ಯಾವ ಚಿತ್ರ ಮಾಡುತ್ತಾರೆ ಎಂದರೆ ಅದಕ್ಕೆ ಉತ್ತರ ಇಲ್ಲ. ಯಾಕೆಂದರೆ ಸದ್ಯ ಕನ್ನಡದಲ್ಲಿ ಪ್ರಶಾಂತ್ ನೀಲ್ ಯಾವ ಚಿತ್ರವನ್ನೂ ಒಪ್ಪಿಕೊಂಡಿಲ್ಲ. ಬದಲಿಗೆ ಅವರು ಪರಭಾಷಾ ಚಿತ್ರಗಳನ್ನು ಸಾಲು, ಸಾಲಾಗಿ ಒಪ್ಪಿಕೊಳ್ಳುತ್ತಾ ಇದ್ದಾರೆ.
ಹಾಗಾಗಿ ಕೆಜಿಎಫ್ 2 ಚಿತ್ರದ ಬಳಿಕ ಪ್ರಶಾಂತ್ ನೀಲ್ ಕನ್ನಡಿಗರಿಗೆ ಸಿಗುವುದಿಲ್ಲ. ಹಾಗೊಂದು ವೇಳೆ ಸಿಕ್ಕರೂ, ಅದು ಪರಭಾಷೆಯ ಪ್ಯಾನ್ ಇಂಡಿಯಾ ಚಿತ್ರದ ಮೂಲಕ ಆಗಿರುತ್ತದೆ. ಹಾಗಿದ್ದರೆ ನೀಲ್ ಮುಂದಿನ ಚಿತ್ರಗಳು ಯಾವುವು. ಎಷ್ಟು ವರ್ಷ ಅವರು ಕನ್ನಡ ಚಿತ್ರಗಳ ಮಾಡಲು ಸಾಧ್ಯ ಆಗುವುದಿಲ್ಲ ಎನ್ನುವುದನ್ನು ಮುಂದೆ ಓದಿ...

ತೆಲುಗಿನಲ್ಲಿ ಪ್ರಶಾಂತ್ ನೀಲ್‌ಗೆ ಎಲ್ಲಿಲ್ಲದ ಬೇಡಿಕೆ!
ನಿರ್ದೇಶಕ ಪ್ರಶಾಂತ್ ನೀಲ್ ಸದ್ಯ ಸಾಲು, ಸಾಲಾಗಿ ತೆಲುಗು ಚಿತ್ರಗಳನ್ನು ಒಪ್ಪಿಕೊಂಡಿದ್ದಾರೆ. 'ಕೆಜಿಎಫ್' ಬಳಿಕ ಪ್ರಶಾಂತ್ ಹಿಂದೆ ಬಿದ್ದಿದ್ದಾರೆ ಟಾಲಿವುಡ್ ಸ್ಟಾರ್ ನಟರು. ತೆಲುಗಿನ ಸ್ಟಾರ್ ನಟರ ಚಿತ್ರಗಳನ್ನು ಒಪ್ಪಿಕೊಳ್ಳುತ್ತಾ ಇದ್ದಾರೆ ಪ್ರಶಾಂತ್ ನೀಲ್. ಕನ್ನಡದಲ್ಲಿ ಮಾಡಿರುವುದು 3 ಚಿತ್ರಗಳ ಮಾತ್ರ 'ಉಗ್ರಂ' ನಂತರ ಕೆಜಿಎಫ್, ಈಗ ಕೆಜಿಎಫ್ 2. ಆದರೆ ಅದಾಗಲೇ ದೊಡ್ಡ, ದೊಡ್ಡ ಚಿತ್ರಗಳ ನಿರ್ದೇಶಕ ಎನಿಸಿಕೊಳ್ಳುತ್ತಾ ಇದ್ದಾರೆ ಪ್ರಶಾಂತ್. ಇನ್ನು ತೆಲುಗಿನಲ್ಲಿ ಬ್ಯುಸಿ ಆಗಲಿದ್ದಾರೆ.

ಪ್ರಭಾಸ್ ಜೊತೆಗೆ ಪ್ರಶಾಂತ್ ನೀಲ್ 2 ಚಿತ್ರ!
ನಿರ್ದೇಶಕ ಪ್ರಶಾಂತ್ ನೀಲ್ ಕನ್ನಡ ಚಿತ್ರ ಬಿಟ್ಟರೆ. ಮೊದಲು ಒಪ್ಪಿದ ತೆಲುಗು ಚಿತ್ರ ಅಂದರೆ ಅದು ಪ್ರಭಾಸ್ ಅಭಿನಯದ 'ಸಲಾರ್'. ಪ್ರಭಾಸ್‌ಗಾಗಿ ಸದ್ಯ ಸಲಾರ್ ಚಿತ್ರವನ್ನು ಮಾಡುತ್ತಿದ್ದಾರೆ. ಆದರೆ ಸದ್ಯಕ್ಕೆ ಚಿತ್ರದ ಶೂಟಿಂಗ್‌ಗೆ ಬ್ರೇಕ್ ಹಾಕಲಾಗಿದೆ. ಕೆಜಿಎಫ್ 2 ಚಿತ್ರ ರಿಲೀಸ್ ಬಳಿಕ ಈ ಚಿತ್ರವನ್ನು ಶುರು ಮಾಡಲಿದ್ದಾರೆ. ಈ ಚಿತ್ರದ ಬಳಿಕ ಪ್ರಭಾಸ್ ಜೊತೆಗೆ ಮತ್ತೊಂದು ಸಿನಿಮಾ ಮಾಡಲಿದ್ದು, ಅದು ಸಲಾರ್ 2 ಎನ್ನಲಾಗಿದೆ.

ಜೂ.ಎನ್‌ಟಿಆರ್, ರಾಮ್‌ಚರಣ್‌ಗೂ ನೀಲ್ ನಿರ್ದೇಶನ!
ಇನ್ನು ಜೂನಿಯರ್ ಎನ್‌ಟಿಆರ್ ಮತ್ತು ರಾಮ್ ತೇಜ ಜೊತೆಗೂ ಪ್ರಶಾಂತ್ ನೀಲ್ ಸಿನಿಮಾ ಮಾಡುತ್ತಾ ಇದ್ದಾರೆ. ಈಗಾಗಲೇ ಜೂ.ಎನ್‌ಟಿಆರ್ ಚಿತ್ರದ ಬಗ್ಗೆ ಸುದ್ದಿ ಹೊರ ಬಂದಿದೆ. ಸಲಾರ್ ಸರಣಿ ನಂತರ ಜೂ.ಎನ್‌ಟಿಅರ್ ಚಿತ್ರವನ್ನು ಪ್ರಶಾಂತ್ ನೀಲ್ ಕೈಗೆತ್ತಿ ಕೊಳ್ಳಲಿದ್ದಾರೆ. ಬಳಿಕ ನಟ ರಾಮ್ ಚರಣ್ ತೇಜ್ ಜೊತೆ ಸಿನಿಮಾವನ್ನು ಶುರುಮಾಡಲಿದ್ದಾರೆ. ಇನ್ನು ಮತ್ಯಾವ ತೆಲುಗು ಸ್ಟಾರ್ ನಟನ ಚಿತ್ರ ಒಪ್ಪಿಕೊಳ್ಳತ್ತಾರೆ ಅಂತ ನೋಡ್ಬೇಕು.

8 ವರ್ಷ ಕನ್ನಡ ಚಿತ್ರಗಳನ್ನು ಮಾಡಲ್ಲ ಪ್ರಶಾಂತ್ ನೀಲ್!
ಈ ಎಲ್ಲಾ ಚಿತ್ರಗಳನ್ನು ಮುಗಿಸಿ ಪ್ರಶಾಂತ್ ನೀಲ್ ಕನ್ನಡ ಚಿತ್ರವನ್ನು ಮಾಡುವುದು ಕೊಂಚ ತಡವೇ ಆಗಲಿದೆ. ಇದಕ್ಕೆ ಉತ್ತರ ಎಂಬಂತೆ ಪ್ರಶಾಂತ್ ನೀಲ್ ಕೂಡ 'ಕೆಜಿಎಫ್ 2' ಚಿತ್ರದ ಸುದ್ದಿಗೋಷ್ಟಿಯಲ್ಲಿ ಒಂದು ಹೇಳಿಕೆ ನೀಡಿದ್ದಾರೆ. ಕೆಜಿಎಫ್ 3 ಚಿತ್ರವನ್ನು ಮಾಡುತ್ತೀರ ಎಂಬ ಪ್ರಶ್ನೆಗೆ ಉತ್ತರಿಸಿದ ಪ್ರಶಾಂತ್ ನೀಲ್ ಇನ್ನು 8 ವರ್ಷ ಆಗುತ್ತದೆ ಎಂದು ಉತ್ತರಿಸಿದ್ದರು.


Click it and Unblock the Notifications











