ಅಗಸ್ತ್ಯ ಶ್ರೀಮುರಳಿ ಜೊತೆಗೆ 'ಉಗ್ರಂ' ಡೈರೆಕ್ಟರ್
ನಟ ಶ್ರೀಮುರಳಿ ಬದುಕು ಬದಲಿಸಿದ ಸಿನಿಮಾ 'ಉಗ್ರಂ'. ಈ ಸಿನಿಮಾದ ನಿರ್ದೇಶಕ ಪ್ರಶಾಂತ್ ನೀಲ್. ಇದೀಗ 'ಉಗ್ರಂ' ಡೈರೆಕ್ಟರ್ ಪ್ರಶಾಂತ್ ನೀಲ್ ಶ್ರೀ ಮುರಳಿ ಭೇಟಿ ಮಾಡಿ ಶುಭಾಶಯ ತಿಳಿಸಿದ್ದಾರೆ.
ಹೈದರಾಬಾದ್ ನಲ್ಲಿ 'ಕೆಜಿಎಫ್ 2' ಸಿನಿಮಾದ ಚಿತ್ರೀಕರಣ ಮುಗಿಸಿರುವ ಪ್ರಶಾಂತ್ ನೀಲ್ ಬೆಂಗಳೂರಿಗೆ ಇತ್ತೀಚಿಗಷ್ಟೆ ಬಂದಿದ್ದಾರೆ. ಇದೀಗ ನಟ ಶ್ರೀ ಮುರಳಿ ಭೇಟಿ ಮಾಡಿ, 'ಭರಾಟೆ' ಸಿನಿಮಾ ಗೆಲ್ಲಲಿ ಎಂದು ವಿಶ್ ಮಾಡಿದ್ದಾರೆ.
Recommended Video
ಶ್ರೀಮುರಳಿ ನಟನೆಯ 'ಭರಾಟೆ' ಸಿನಿಮಾ ಇದೇ ಶುಕ್ರವಾರ ಬಿಡುಗಡೆಯಾಗುತ್ತಿದೆ. ಚೇತನ್ ಕುಮಾರ್ ಹ್ಯಾಟ್ರಿಕ್ ಸಿನಿಮಾ ಇದಾಗಿದೆ. 'ಮಫ್ತಿ' ನಂತರ ಶ್ರೀಮುರಳಿ ತೆರೆ ಮೇಲೆ ಕಾಣಿಸಿಕೊಳ್ಳುತ್ತಿದ್ದಾರೆ. 'ಕಿಸ್' ಬೆಡಗಿ ಶ್ರೀಲೀಲಾ ಸಿನಿಮಾದ ನಾಯಕಿಯಾಗಿದ್ದಾರೆ. ಮೊದಲ ಬಾರಿಗೆ ಸಹೋದರರಾದ ಸಾಯಿ ಕುಮಾರ್, ರವಿಶಂಕರ್ ಹಾಗೂ ಅಯ್ಯಪ್ಪ ಒಟ್ಟಿಗೆ ನಟಿಸಿದ್ದಾರೆ.

ನರ್ತಕಿ ಚಿತ್ರಮಂದಿರ ಸೇರಿದಂತೆ ರಾಜ್ಯಾದಂತ್ಯ ಸಿನಿಮಾ ಬಿಡುಗಡೆ ಆಗುತ್ತಿದೆ. ಈಗಾಗಲೇ ಮುಂಗಡ ಟಿಕೆಟ್ ಬುಕ್ಕಿಂಗ್ ಶುರುವಾಗಿದೆ. ಚೇತನ್ ಕುಮಾರ್ ಎಂದಿನಂತೆ ಆಕ್ಷನ್, ಲವ್ ಹಾಗೂ ಫ್ಯಾಮಿಲಿ ಸೆಂಟಿಮೆಂಟ್ ಮೇಲೆ ಸಿನಿಮಾ ಮಾಡಿದ್ದಾರೆ. ಟ್ರೇಲರ್ ಪಕ್ಕಾ ಕಮರ್ಷಿಯಲ್ ಆಗಿದೆ. ಸುಪ್ರೀತ್ ಸಿನಿಮಾದ ನಿರ್ಮಾಣ ಮಾಡಿದ್ದಾರೆ.
'ಕೆಜಿಎಫ್ 2' ಸಿನಿಮಾದ ನಂತರ ಶ್ರೀಮುರಳಿ ಜೊತೆಗೆ ಪ್ರಶಾಂತ್ ನೀಲ್ 'ಉಗ್ರಂ ವಿರಂ' ಸಿನಿಮಾ ಮಾಡುವ ಸಾಧ್ಯತೆ ಇದೆ.


Click it and Unblock the Notifications











