For Quick Alerts
  ALLOW NOTIFICATIONS  
  For Daily Alerts

  ಕೆಜಿಎಫ್ ಚಿತ್ರದಲ್ಲಿ ಪ್ರಕಾಶ್ ರಾಜ್ ಪಾತ್ರದ ರಹಸ್ಯ ಕೊನೆಗೂ ಬಹಿರಂಗ

  |

  ಕೆಜಿಎಫ್ ಚಾಪ್ಟರ್ 2 ಚಿತ್ರದಿಂದ ಹಿರಿಯ ನಟ ಅನಂತ್ ನಾಗ್ ಹಿಂದೆ ಸರಿದಿರುವುದು ತಿಳಿದಿರುವ ವಿಚಾರ. ಚಾಪ್ಟರ್ 2ರಲ್ಲಿ ಅನಂತ್ ನಾಗ್ ಪಾತ್ರವನ್ನು ಮುಂದುವರಿಸಲು ಅವರ ಜಾಗಕ್ಕೆ ಬಹುಭಾಷ ನಟ ಪ್ರಕಾಶ್ ರಾಜ್ ಅವರನ್ನು ಕರೆತರಲಾಗಿದೆ ಎಂದು ಹೇಳಲಾಯಿತು. ಪ್ರಕಾಶ್ ರಾಜ್ ಅವರು ಕೆಜಿಎಫ್ ಚಿತ್ರೀಕರಣದಲ್ಲಿ ಪಾಲ್ಗೊಂಡಿರುವ ಫೋಟೋಗಳು ಸಹ ಬಹಿರಂಗವಾಗಿದ್ದವು.

  ಚಾಪ್ಟರ್ 1ರಲ್ಲಿ ಗಮನ ಸೆಳೆದಿದ್ದ ಅನಂತ್ ನಾಗ್ ಭಾಗ ಎರಡರಲ್ಲಿ ಇಲ್ಲ ಎಂಬ ಸುದ್ದಿಯಿಂದ ಅಭಿಮಾನಿಗಳು ಬೇಸರಗೊಂಡರು. ಪ್ರಕಾಶ್ ರಾಜ್ ಆ ಪಾತ್ರ ಮುಂದುವರಿಸುತ್ತಾರೆ ಎನ್ನುವುದಕ್ಕೆ ವಿರೋಧ ವ್ಯಕ್ತಪಡಿಸಿದರು. ನಂತರ ಪ್ರಕಾಶ್ ರಾಜ್ ಪಾತ್ರವೇ ಬೇರೆ ಅನಂತ್ ನಾಗ್ ಪಾತ್ರವೇ ಬೇರೆ ಎಂದು ಪ್ರಶಾಂತ್ ನೀಲ್ ಸ್ಪಷ್ಟನೆ ನೀಡಿದರು. ಇಷ್ಟೆಲ್ಲ ಚರ್ಚೆಗೆ ಕಾರಣವಾಗಿರುವ ಪ್ರಕಾಶ್ ರಾಜ್ ಪಾತ್ರ ಯಾವುದು ಎಂದು ಕೊನೆಗೂ ಬಹಿರಂಗವಾಗಿದೆ. ಮುಂದೆ ಓದಿ....

  ಕೆಜಿಎಫ್‌ 2: ಅನಂತ್‌ನಾಗ್ ಪಾತ್ರಕ್ಕೆ ಪ್ರಕಾಶ್ ರೈ! ನಿರ್ದೇಶಕ ಪ್ರಶಾಂತ್ ನೀಲ್ ಹೇಳಿದ್ದೇನು?ಕೆಜಿಎಫ್‌ 2: ಅನಂತ್‌ನಾಗ್ ಪಾತ್ರಕ್ಕೆ ಪ್ರಕಾಶ್ ರೈ! ನಿರ್ದೇಶಕ ಪ್ರಶಾಂತ್ ನೀಲ್ ಹೇಳಿದ್ದೇನು?

  ವಿಜಯೇಂದ್ರ ಇಂಗಳಗಿ ಪಾತ್ರದಲ್ಲಿ ರಾಜ್?

  ವಿಜಯೇಂದ್ರ ಇಂಗಳಗಿ ಪಾತ್ರದಲ್ಲಿ ರಾಜ್?

  ಕೆಜಿಎಫ್ ಚಾಪ್ಟರ್ 2 ಚಿತ್ರದಲ್ಲಿ ಪ್ರಕಾಶ್ ರಾಜ್ ಅವರು ವಿಜಯೇಂದ್ರ ಇಂಗಳಗಿ ಎಂಬ ಪಾತ್ರದಲ್ಲಿ ನಟಿಸಿದ್ದಾರೆ. ಹುಟ್ಟುಹಬ್ಬದ ವಿಶೇಷವಾಗಿ ಹೊಂಬಾಳೆ ಫಿಲಂಸ್ ಬಿಡುಗಡೆ ಮಾಡಿರುವ ಪೋಸ್ಟರ್‌ನಲ್ಲಿ ಪ್ರಕಾಶ್ ರಾಜ್ ಪಾತ್ರದ ಹೆಸರು ಬಹಿರಂಗವಾಗಿದೆ. ಅಲ್ಲಿಗೆ ಅನಂತ್ ನಾಗ್ ಅಭಿನಯಿಸಿದ್ದ ಪಾತ್ರ ಬೇರೆ ಹಾಗೂ ಪ್ರಕಾಶ್ ರಾಜ್ ನಿಭಾಯಿಸಿರುವ ಪಾತ್ರ ಬೇರೆ ಎನ್ನುವುದು ಖಚಿತವಾಗಿದೆ.

  ಆನಂದ್ ಇಂಗಳಗಿ ಪಾತ್ರದಲ್ಲಿ ಅನಂತ್

  ಆನಂದ್ ಇಂಗಳಗಿ ಪಾತ್ರದಲ್ಲಿ ಅನಂತ್

  ಕೆಜಿಎಫ್ ಚಾಪ್ಟರ್ 1ರಲ್ಲಿ ನಟ ಅನಂತ್ ನಾಗ್ ಆನಂದ್ ಇಂಗಳಗಿ ಪಾತ್ರದಲ್ಲಿ ನಟಿಸಿದ್ದರು. ಅನಂತ್ ನಾಗ್ ಅವರ ಯುವಕನ ಪಾತ್ರದಲ್ಲಿ ಅಶೋಕ್ ಅಭಿನಯಿಸಿದ್ದರು. ರಾಕಿ ಭಾಯ್ ಯಾರು, ಅವನ ಕಥೆ ಏನು ಎಂದು ಅನಂತ್ ನಾಗ್ ಪಾತ್ರದ ಮೂಲಕ ಪ್ರೇಕ್ಷಕರಿಗೆ ವಿವರಿಸಲಾಗಿತ್ತು.

  ಅನಂತ್ ನಾಗ್ ಏಕಿಲ್ಲ?

  ಅನಂತ್ ನಾಗ್ ಏಕಿಲ್ಲ?

  ಪ್ರಕಾಶ್ ರಾಜ್ ಪಾತ್ರ ಚಾಪ್ಟರ್ 2ರಲ್ಲಿ ಇಲ್ಲ. ಏಕೆ ಎಂದು ಚಿತ್ರತಂಡ ಸ್ಪಷ್ಟವಾಗಿ ಹೇಳಿಲ್ಲ. ಆದರೆ, ಚಿತ್ರತಂಡದ ಜೊತೆಗಿನ ಸಂಬಂಧದಲ್ಲಿ ಭಿನ್ನಾಭಿಪ್ರಾಯ ಮೂಡಿದ ಹಿನ್ನೆಲೆ ಅನಂತ್ ನಾಗ್ ಈ ಚಿತ್ರದಿಂದ ಹೊರಗುಳಿದರು ಎಂದು ಹೇಳಲಾಗಿದೆ. ಹಾಗಾಗಿ, ಕೆಜಿಎಫ್ ಚಿತ್ರಕಥೆಯಲ್ಲಿ ಪರಿಣಾಮಕಾರಿಯಾಗಿದ್ದ ಆನಂದ್ ಇಂಗಳಗಿ ಪಾತ್ರವನ್ನು ಮುಂದುವರಿಸುವ ಉದ್ದೇಶದಿಂದ ಅದಕ್ಕೆ ಪರ್ಯಾಯವಾಗಿ ವಿಜಯೇಂದ್ರ ಇಂಗಳಗಿ ಪಾತ್ರ ಸೃಷ್ಟಿಸಲಾಗಿದೆ ಎಂಬ ಅಭಿಪ್ರಾಯವಿದೆ.

  ಎರಡೇ ವರ್ಷಕ್ಕೆ ನಿಧಿ ಸುಬ್ಬಯ್ಯ ಅವರ ದಾಂಪತ್ಯ ಮುರಿದು ಬೀಳಲು ಕಾರಣ? | Filmibeat Kannada Filmibeat Kannada
  ತಂದೆ-ಮಗನ ಇರಬಹುದಾ?

  ತಂದೆ-ಮಗನ ಇರಬಹುದಾ?

  ಅನಂತ್ ನಾಗ್ ಮುಂದುವರಿಸುವ ಅಗತ್ಯವಿರುವುದರಿಂದ ಚಿತ್ರಕಥೆಯಲ್ಲಿ ಸ್ವಲ್ಪ ಬದಲಾವಣೆ ಮಾಡಿ ವಿಜಯೇಂದ್ರ ಇಂಗಳಗಿ ಪಾತ್ರವನ್ನು ಕರೆತರಲಾಗಿದೆ. ಸದ್ಯಕ್ಕೆ ಪ್ರಕಾಶ್ ರಾಜ್ ಪಾತ್ರದ ಹೆಸರು ಕೇಳಿದ ಪ್ರೇಕ್ಷಕರು, ಬಹುಶಃ ಅನಂತ್ ನಾಗ್ ಅವರ ಮಗನ ಪಾತ್ರದಲ್ಲಿ ಪ್ರಕಾಶ್ ರಾಜ್ ನಟಿಸಿರಬಹುದು ಎಂದು ಊಹಿಸುತ್ತಿದ್ದಾರೆ. ಆನಂದ್ ಇಂಗಳಗಿ ಮಗನೇ ವಿಜಯೇಂದ್ರ ಇಂಗಳಗಿ ಎಂದು ಹೇಳಲಾಗುತ್ತಿದೆ. ಅದಕ್ಕೆ ಉತ್ತರ ಚಾಪ್ಟರ್ 2ರಲ್ಲಿ ನೋಡಬೇಕಿದೆ.

  English summary
  Director Prashanth Neel wishes Prakash Raj happy birthday with his KGF 2 Movie character revealing pic.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X