ಇಂಡಿಯನ್ ಸಿನಿಮಾ ಎಂದು ಅರೇಬಿಯಾದ ಹೆಸರು ಯಾಕೆ ಇಟ್ಟಿದ್ದೀರಾ? ಹೊಂಬಾಳೆ ಫಿಲ್ಮ್ಸ್ ಗೆ ಸಂಬರ್ಗಿ ಪ್ರಶ್ನೆ

By ಫಿಲ್ಮ್ ಡೆಸ್ಕ್

'ಕೆಜಿಎಫ್' ಸಿನಿಮಾ ಬಳಿಕ ಹೊಂಬಾಳೆ ಫಿಲ್ಮ್ಸ್ ಘೋಷಣೆ ಮಾಡಿದ ಇಂಡಿಯನ್ ಸಿನಿಮಾ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ. ಹೊಸ ಸಿನಿಮಾಗೆ ಶುಭಕೋರುವವರಿಗಿಂತ ತೆಗಳುವವರ ಸಂಖ್ಯೆಯೇ ಹೆಚ್ಚಾಗಿದೆ. ಕನ್ನಡ ನಟರ ಜೊತೆ ಸಿನಿಮಾ ಮಾಡಿಲ್ಲ ಎನ್ನುವ ಆಕ್ರೋಶ ಒಂದೆಡೆ ಆದರೆ ಸಿನಿಮಾದ ಟೈಟಲ್ ವಿರುದ್ಧವೂ ಕೆಲವರು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.

Recommended Video

ಸಲಾರ್, ಪ್ರಶಾಂತ್ ನೀಲ್ ಮುಂದಿನ ಚಿತ್ರ ಪ್ರಭಾಸ್ ಜೊತೆಗೆ | Filmibeat kannada

ಹೊಂಬಾಳೆ ಫಿಲ್ಮ್ಸ್ ನಿರ್ಮಾಣದ ಪ್ರಶಾಂತ್ ನೀಲ್ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಹೊಸ ಸಿನಿಮಾಗೆ 'ಸಲಾರ್' ಎಂದು ಟೈಟಲ್ ಇಡಲಾಗಿದೆ. ಸಲಾರ್ ನಲ್ಲಿ ನಾಯಕನಾಗಿ ತೆಲುಗು ನಟ ಪ್ರಭಾಸ್ ಕಾಣಿಸಿಕೊಳ್ಳುತ್ತಿದ್ದಾರೆ.

ಕನ್ನಡ ಬಿಟ್ಟು ತೆಲುಗಿಗೆ ಹೋದ ಪ್ರಶಾಂತ್ ನೀಲ್ ವಿರುದ್ಧ ಕನ್ನಡ ಚಿತ್ರಪ್ರೇಕ್ಷಕರು ಅಸಮಾಧಾನ ವ್ಯಕ್ತಪಡಿಸುವ ಜೊತೆ ಸಲಾರ್ ಎನ್ನುವ ಟೈಟಲ್ ಸಹ ವಿವಾದ ಸೃಷ್ಟಿ ಮಾಡಿದೆ. ಸಲಾರ್ ಎನ್ನುವುದು ಅರೇಬಿಯಾದ ಹೆಸರು. ಈ ಹೆಸರನ್ನು ಇಟ್ಟುಕೊಂಡು ಸಿನಿಮಾ ಮಾಡಬೇಕಾ ಎಂದು ಪ್ರಶ್ನೆ ಮಾಡುತ್ತಿದ್ದಾರೆ.

Prashanth Sambargi questions Hombale films new movie title Salaar

ಈ ಬಗ್ಗೆ ಸಾಮಾಜಿಕ ಹೋರಾಟಗಾರ ಪ್ರಶಾಂತ್ ಸಂಬರ್ಗಿ ಸಹ ಅಸಮಾಧಾನ ಹೊರಹಾಕಿದ್ದಾರೆ. 'ಇಂಡಿಯನ್ ಸಿನಿಮಾ ಅಂತ ಹೇಳಿ ಅರೇಬಿಯಾದ ಹೆಸರು ಯಾಕೆ ಇಟ್ಟಿದ್ದೀರಾ ಪ್ರಶಾಂತ್ ನೀಲ್ ಮತ್ತು ವಿಜಯ್ ಕಿರಗಂದೂರ್? ಕನ್ನಡ ಮತ್ತು ಸಂಸ್ಕೃತ ಸೇರಿ ಆರು ಶಾಸ್ತ್ರೀಯ ಭಾಷೆಗಳಲ್ಲಿ ಒಂದೂ ಪದ ಸಿಗಲಿಲ್ಲವಾ ನಿಮಗೆ?' ಎಂದು ಪ್ರಶ್ನೆ ಮಾಡಿದ್ದಾರೆ.

ಅಷ್ಟಕ್ಕೂ 'ಸಲಾರ್' ಎಂದರೆ ಲೀಡರ್ ಎನ್ನುವ ಅರ್ಥ. ಮುಸ್ಲಿಂ ಯುವಕನ ಹೆಸರು. ಈ ಹೆಸರನ್ನು ಇಟ್ಟಿರುವುದು ಅನೇಕರ ಬೇಸರ. ಇಂದು ರಿಲೀಸ್ ಆಗಿರುವಸಲಾರ್ ಪೋಸ್ಟರ್ ನಲ್ಲಿ ಪ್ರಭಾಸ್ ರಗಡ್ ಲುಕ್ ನಲ್ಲಿ ಕಾಣಿಸಿಕೊಂಡಿದ್ದಾರೆ. ಉದ್ದ ಮೀಸೆ ಬಿಟ್ಟು, ಕೈಯಲ್ಲಿ ಗನ್ ಹಿಡಿದು, ಗಂಭೀರ ನೋಟ ಬೀರುತ್ತಿದ್ದಾರೆ. ಸಲಾರ್ ಟೈಟಲ್ ಜೊತೆಗೆ ''THE MOST VIOLENT MEN.. CALLED ONE MAN.. THE MOST VIOLENT'' ಎಂದು ಅಡಿ ಬರಹ ನೀಡಲಾಗಿದೆ.

ಸಲಾರ್ ಸಿನಿಮಾ ಕನ್ನಡದಲ್ಲೂ ರಿಲೀಸ್ ಆಗುತ್ತಿದೆ. ಜನವರಿಯಿಂದ ಚಿತ್ರೀಕರಣ ಪ್ರಾರಂಭವಾಗಲಿದೆ ಎನ್ನುವ ಮಾತುಗಳು ಕೇಳಿಬರುತ್ತಿದೆ. ಪ್ರಶಾಂತ್ ನೀಲ್ ಸದ್ಯ ಕೆಜಿಎಫ್ -2 ಸಿನಿಮಾದ ಕೊನೆಯ ಹಂತದ ಚಿತ್ರೀಕರಣದಲ್ಲಿ ನಿರತಾಗಿದ್ದಾರೆ. ಈ ಸಿನಿಮಾ ಮುಗಿಯುತ್ತಿದ್ದಂತೆ ತೆಲುಗು ಕಡೆ ಮುಖ ಮಾಡಲಿದ್ದಾರೆ.

More from Filmibeat

English summary
Prashanth Sambargi questions about Hombale films and Prashanth Neel's new movie title Salaar.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X