ನಟಿ ಖಾತೆಗೆ 75 ಲಕ್ಷ ಹಣ: 'ಇದು ಡಿಂಗ್ ಡಾಂಗ್ ಕೇಸ್' ಎಂದ ಸಂಬರ್ಗಿ
ಆರ್‌ಎಸ್‌ಎಸ್ ಮುಖಂಡ ಅಂತ ಹೇಳ್ಕೊಂಡು ಪ್ರಭಾವಿ ವ್ಯಕ್ತಿಗಳು ಹಾಗೂ ರಾಜಕಾರಣಿಗಳ ಬಳಿ ಹಣ ವಸೂಲಿ ಮಾಡ್ತಿದ್ದ ಯುವರಾಜ್ ಎಂಬ ವ್ಯಕ್ತಿಯನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಈ ವ್ಯಕ್ತಿಯಿಂದ ನಟಿ ರಾಧಿಕಾ ಕುಮಾರಸ್ವಾಮಿ ಖಾತೆಗೆ ಭಾರಿ ಮೊತ್ತ ವರ್ಗಾವಣೆ ಆಗಿದೆ ಎಂಬ ಆರೋಪ ಕೇಳಿ ಬಂದಿತ್ತು.
Recommended Video
ಈ ಕುರಿತು ರಾಧಿಕಾ ಕುಮಾರಸ್ವಾಮಿ ಸುದ್ದಿಗೋಷ್ಠಿ ನಡೆಸಿ ಸ್ಪಷ್ಟನೆ ನೀಡಿದ್ದಾರೆ. ''ಯುವರಾಜ್ ಎಂಬ ವ್ಯಕ್ತಿ ನಮ್ಮ ಕುಟುಂಬಕ್ಕೆ ಬಹಳ ವರ್ಷದಿಂದ ಪರಿಚಿತರು, ಸಿನಿಮಾ ಮಾಡುವ ಉದ್ದೇಶದಿಂದ ನನ್ನ ಖಾತೆಗೆ 75 ಲಕ್ಷ ಹಣ ಹಾಕಿದ್ದರು'' ಎಂದು ವಿವರಿಸಿದ್ದರು. ಈ ಕಡೆ ಪ್ರಶಾಂತ್ ಸಂಬರ್ಗಿ ತಮ್ಮ ಫೇಸ್‌ಬುಕ್‌ನಲ್ಲಿ ಈ ಘಟನೆಗೆ ಪ್ರತಿಕ್ರಿಯಿಸಿದ್ದು, ''ಇದು ಡಿಂಗ್ ಡಾಂಗ್ ಕೇಸ್'' ಎಂದಿದ್ದಾರೆ. ಮುಂದೆ ಓದಿ...

ಡಿಂಗ್ ಡಾಂಗ್ ಕೇಸ್ ಎಂದ ಸಂಬರ್ಗಿ
ಬಂಧಿತ ಸ್ವಾಮಿ ಯುವರಾಜ್ ಘಟನೆಗೆ ಸಂಬಂಧಿಸಿದಂತೆ ಪೋಸ್ಟ್ ಹಾಕಿರುವ ಪ್ರಶಾಂತ್ ಸಂಬರ್ಗಿ ''ಪೊಲೀಸರಿಂದ ಸಿಕ್ಕಿರುವ ಮಾಹಿತಿ ಪ್ರಕಾರ ವಂಚನೆ ಮಾಡಿರುವ ಯುವರಾಜ್‌ನಿಂದ 75 ಲಕ್ಷ ಹಣ ಮಹಿಳೆಗೆ ವರ್ಗಾವಣೆಯಾಗಿದೆ. ಇದು ಶುದ್ಧ ಡಿಂಗ್ ಡಾಂಗ್ ಕೇಸ್'' ಎಂದು ಟೀಕಿಸಿದ್ದಾರೆ.

ಗೊಂದಲ ಸೃಷ್ಟಿಸಿದ ಪ್ರಶಾಂತ್ ಪೋಸ್ಟ್
ಯುವರಾಜ್ ಖಾತೆಯಿಂದ ನಟಿಗೆ ವರ್ಗಾವಣೆ ಆಗಿದೆ ಎಂಬ ಹಣಕ್ಕೆ ಸಂಬಂಧಿಸಿದಂತೆ ರಾಧಿಕಾ ಕುಮಾರಸ್ವಾಮಿ ಸ್ಪಷ್ಟನೆ ನೀಡಿದ್ದಾರೆ. ಇದು ಸಿನಿಮಾ ಉದ್ದೇಶದಿಂದ ವರ್ಗಾವಣೆ ಮಾಡಲಾಗಿದೆ ಎಂದು ತಿಳಿಸಿದ್ದಾರೆ. ಆದ್ರೆ, ಪ್ರಶಾಂತ್ ಸಂಬರ್ಗಿ ಹಾಕಿರುವ ಪೋಸ್ಟ್ ಗೊಂದಲ ಸೃಷ್ಟಿಸಿದೆ. ''ding dong case of remuneration'' ಅಂದ್ರೆ ಏನು ಎಂದು ಪ್ರಶ್ನೆ ಉಂಟಾಗಿದೆ.

ಒಂದೂವರೆ ಕೋಟಿಯಲ್ಲ, 75 ಲಕ್ಷ ಅಷ್ಟೇ
ಯುವರಾಜ್ ಖಾತೆಯಿಂದ ರಾಧಿಕಾ ಕುಮಾರಸ್ವಾಮಿಗೆ ವರ್ಗಾವಣೆ ಆಗಿರುವ ಹಣ ಒಂದೂವರೆ ಕೋಟಿಯಲ್ಲ. ಯುವರಾಜ್ ಖಾತೆಯಿಂದ 15 ಲಕ್ಷ ಹಾಗೂ ಬೇರೊಬ್ಬ ನಿರ್ಮಾಪಕನಿಂದ 60 ಲಕ್ಷ. ಒಟ್ಟು 75 ಲಕ್ಷ ಹಣ ಖಾತೆಗೆ ಬಂದಿದೆ. ಇದನ್ನು ಸ್ವತಃ ರಾಧಿಕಾ ಕುಮಾರಸ್ವಾಮಿ ಒಪ್ಪಿಕೊಂಡಿದ್ದಾರೆ.

ಡ್ರಗ್ಸ್ ಪ್ರಕರಣದಲ್ಲಿ ಹೆಚ್ಚು ಸುದ್ದಿಯಲ್ಲಿದ್ದ ಪ್ರಶಾಂತ್
ಡ್ರಗ್ಸ್ ಪ್ರಕರಣದಲ್ಲಿ ಸಂಜನಾ ಮತ್ತು ರಾಗಿಣಿ ದ್ವಿವೇದಿ ವಿರುದ್ಧವಾಗಿ ಗಂಭೀರ ಟೀಕೆಗಳನ್ನ ಮಾಡಿದ್ದ ಪ್ರಶಾಂತ್ ಸಂಬರ್ಗಿ, ಈಗ ಯುವರಾಜ್ ಮತ್ತು ರಾಧಿಕಾ ಕುಮಾರಸ್ವಾಮಿ ಘಟನೆ ಬಗ್ಗೆಯೂ ಮಧ್ಯಪ್ರವೇಶಿಸಿದ್ದಾರೆ. ಡ್ರಗ್ಸ್ ಕೇಸ್‌ನಲ್ಲಿ ಹಲವು ರಾಜಕಾರಣಿಗಳು, ಸಿನಿಮಾ ನಟ-ನಟಿಯರನ್ನು ಪರೋಕ್ಷವಾಗಿ ಟೀಕಿಸಿದ್ದರು.


Click it and Unblock the Notifications











