ಕನ್ನಡದ ಈ ನಟ ಅಂದ್ರೆ ಪ್ರತಾಪ್ ಸಿಂಹ ಪುತ್ರಿಗೆ ಫೇವರಿಟ್
Recommended Video

ಅರೇ ಯಶ್ ಮಡಿಲಲ್ಲಿ ಇದ್ಯಾರ್ ಮಗುನಪ್ಪಾ..? | Filmibeat Kannada
ಚಿಕ್ಕ ಮಕ್ಕಳಿಗೆ ಸಿನಿಮಾ ನಟರು ಅಂದರೆ ತುಂಬ ಇಷ್ಟ ಇರುತ್ತದೆ. ಸಣ್ಣ ಮಕ್ಕಳಿಗೆ ಸಿನಿಮಾ ಎನ್ನುವುದು ದೊಡ್ಡ ಆಕರ್ಷಣೆ ಆಗಿರುತ್ತದೆ. ನೆನಪಿಸಿಕೊಳ್ಳಿ...ನಮಗೂ, ನಿಮಗೂ ಕೂಡ ಚಿಕ್ಕ ವಯಸ್ಸಿನಲ್ಲಿ ಒಬ್ಬ ಫೇವರಿಟ್ ಹೀರೋ ಅಂತ ಇದ್ರು ಅಲ್ವಾ.
ಅದೇ ರೀತಿ ಸಂಸದ ಪ್ರತಾಪ್ ಸಿಂಹ ಅವರ ಅವರ ಮಗಳು ವಿಪಂಚಿಗೆ ಸಹ ಕನ್ನಡದ ಒಬ್ಬ ನಟನನ್ನು ಕಂಡರೆ ತುಂಬ ಇಷ್ಟ ಇಷ್ಟ. ಅದು ಬೇರೆ ಯಾರು ಅಲ್ಲ ರಾಕಿಂಗ್ ಸ್ಟಾರ್ ಯಶ್.

ವಿಪಂಚಿ ನಟ ಯಶ್ ಸಿನಿಮಾಗಳನ್ನು ಹೆಚ್ಚು ನೋಡುತ್ತಾಳೆ. ಯಶ್ ಆಕೆಯ ಫೇವರಿಟ್ ಹೀರೋ. ಇತ್ತೀಚಿಗಷ್ಟೆ ವಿಪಂಚಿ ತಮ್ಮ ಮೆಚ್ಚಿನ ನಟನನ್ನು ಭೇಟಿ ಮಾಡಿದ್ದಾರೆ. ಯಶ್ ಕೂಡ ಮಗುವಿನ ಜೊತೆಗೆ ಮಾತನಾಡಿ ಕೆಲ ಕಾಲ ಕಳೆದಿದ್ದಾರೆ.
ಯಶ್ ತೊಡೆ ಮೇಲೆ ಕುಳಿತುಕೊಂಡು ಮುದ್ದು ಕಂದ ಫೋಟೋ ತೆಗೆಸಿಕೊಂಡಿದೆ. ಈ ಫೋಟೋವನ್ನು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಪ್ರತಾಪ್ ಸಿಂಹ ಹಂಚಿಕೊಂಡಿದ್ದಾರೆ.
ಮಾಸ್ ಹಾಗೂ ಕ್ಲಾಸ್ ಎರಡು ವಿಭಾಗದ ಪ್ರೇಕ್ಷಕರಿಗೆ ಇಷ್ಟ ಆಗುವ ರೀತಿಯ ಸಿನಿಮಾ ಮಾಡುವ ರಾಕಿಂಗ್ ಸ್ಟಾರ್ ಮಕ್ಕಳ ಮನಸ್ಸನ್ನು ಕೂಡ ಗೆದ್ದಿದ್ದಾರೆ.
More from Filmibeat
English summary
Member Of Parliament, BJP leader Pratap Simha daughter Vipanchi met her favourite Hero Yash.


Click it and Unblock the Notifications











