ಬೆಳಗಾಗೋದ್ರಲ್ಲಿ 3 ಆಸ್ಪತ್ರೆ ಬದಲಿಸಿದ 'ಬಿಗ್ ಬಾಸ್' ಪ್ರಥಮ್!
ಒಳ್ಳೆ ಹುಡುಗ ಪ್ರಥಮ್ ನಿನ್ನೆ (ಏಪ್ರಿಲ್ 5) ಆತ್ಮಹತ್ಯೆಗೆ ಯತ್ನಿಸಿ, ನಾಗರಭಾವಿಯ ಫೋರ್ಟಿಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.[ಒಳ್ಳೆ ಹುಡುಗ ಪ್ರಥಮ್ ಆತ್ಮಹತ್ಯೆಗೆ ಯತ್ನ!]
ಆದ್ರೆ, ಬೆಳಗಾಗೋದ್ರಲ್ಲಿ 3 ಆಸ್ಪತ್ರೆಯನ್ನ ಪ್ರಥಮ್ ಬದಲಾಯಿಸಿದ್ದಾರೆ. ಫೋರ್ಟಿಸ್ ಆಸ್ಪತ್ರೆ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ, ಪ್ರಥಮ್ ರಾತ್ರೋರಾತ್ರಿ ನಿಮ್ಹಾನ್ಸ್ ಗೆ ಶಿಫ್ಟ್ ಆಗಿದ್ದಾರೆ. ಅಲ್ಲಿಂದ ಈಗ 'ಕಿಮ್ಸ್ ಆಸ್ಪತ್ರೆ'ಗೆ ದಾಖಲಾಗಿದ್ದಾರೆ. ಮುಂದೆ ಓದಿ.....

ಫೋರ್ಟಿಸ್ ಆಸ್ಪತ್ರೆಯಲ್ಲಿ ಗಲಾಟೆ
ಆತ್ಮಹತ್ಯೆಗೆ ಯತ್ನಿಸಿ ಫೋರ್ಟಿಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಪ್ರಥಮ್, ನಿನ್ನೆ ರಾತ್ರಿ ಆಸ್ಪತ್ರೆ ಸಿಬ್ಬಂದಿ, ವೈದ್ಯರ ಜೊತೆ ಗಲಾಟೆ ಮಾಡಿದ್ದಾರಂತೆ. ಐಸಿಯು ನಲ್ಲಿದ್ದ ಕೆಲ ಉಪಕರಣಗಳನ್ನ ಒಡೆದು ಹಾಕಿದ್ದಾರೆ ಎನ್ನಲಾಗಿದೆ.[ನಿದ್ರೆ ಮಾತ್ರೆ ಸೇವಿಸಿದ್ಯಾಕೆ.? 'ಕೊನೆಯ' ಲೈವ್ ನಲ್ಲಿ ಪ್ರಥಮ್ ಬಾಯ್ಬಿಟ್ಟ ಸತ್ಯವೇನು.?]

'ಫೋರ್ಟಿಸ್'ನಿಂದ 'ನಿಮ್ಹಾನ್ಸ್'ಗೆ ಶಿಫ್ಟ್!
ಪ್ರಥಮ್ ಅವರ ರಂಪಾಟದಿಂದ ಬೇರೆ ರೋಗಿಗಳಿಗೆ ತೊಂದರೆಯಾಗುವುದು ಬೇಡ ಎಂಬ ಕಾರಣದಿಂದ, ವೈದ್ಯರು ನಿಮ್ಹಾನ್ಸ್ ಗೆ ಸೇರಿಸುವಂತೆ ಸಲಹೆ ನೀಡಿದ ಹಿನ್ನಲೆ, ರಾತ್ರೋರಾತ್ರಿ 'ನಿಮ್ಹಾನ್ಸ್' ಆಸ್ಪತ್ರೆಗೆ ಪ್ರಥಮ್ ಅವರನ್ನ ಸೇರಿಸಲಾಗಿತ್ತು.[ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಪ್ರಥಮ್ ನಾಲ್ಕು ಗಂಟೆ ಬಳಿಕ ಆಸ್ಪತ್ರೆಗೆ ದಾಖಲು]

'ನಿಮ್ಹಾನ್ಸ್'ನಲ್ಲೂ ಪ್ರಥಮ್ ಗಲಾಟೆ!
'ನಿಮ್ಹಾನ್ಸ್'ನಲ್ಲಿ ಪ್ರಥಮ್ ಅವರಿಗೆ ಮೆದುಳು ಸ್ಕ್ಯಾನಿಂಗ್ ಮಾಡಲಾಗಿತ್ತು. ನಂತರ ಅಲ್ಲಿಯೂ ಪ್ರಥಮ್ ಅವರು ಗಲಾಟೆ ಮಾಡಿದ್ದಾರೆ. ನಾನು ಇಲ್ಲಿ ಇರಲ್ಲ ಎಂದು ಕೂಗಾಟ ನಡೆಸಿದ್ದಾರಂತೆ.['ಪ್ರಥಮ್'ಗೆ ಚಿತ್ರಹಿಂಸೆ ನೀಡುತ್ತಿದ್ದ ಎನ್ನಲಾಗುತ್ತಿರುವ ಲೋಕೇಶ್ ಯಾರು?]

'ನಿಮ್ಹಾನ್ಸ್'ನಿಂದ 'ಕಿಮ್ಸ್'ಗೆ ಪ್ರಥಮ್!
'ನಿಮ್ಹಾನ್ಸ್'ನಲ್ಲಿ ಪ್ರಥಮ್ ಗಲಾಟೆ ಹೆಚ್ಚಾದಾಗ ಪ್ರಥಮ್ ಅವರನ್ನ ಕಿಮ್ಸ್ ಆಸ್ಪತ್ರೆಗೆ ಕರೆದುಕೊಂಡು ಬರಲಾಗಿದೆ. 'ಕಿಮ್ಸ್'ನ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.[ಪ್ರಥಮ್ ಆತ್ಮಹತ್ಯೆ ಯತ್ನ ಬಳಿಕ ಲೋಕೇಶ್ ಬಿಚ್ಚಿಟ್ಟ ಸ್ಪೋಟಕ ಸುದ್ದಿ!]

'ಕಿಮ್ಸ್' ಆಸ್ಪತ್ರೆಯ 'ಐಸಿಯು'ನಲ್ಲಿ ಚಿಕಿತ್ಸೆ!
ಸದ್ಯ, ಪ್ರಥಮ್ ಅವರ ಆರೋಗ್ಯದಲ್ಲಿ ಯಾವುದೇ ತೊಂದರೆಯಾಗಿಲ್ಲ ಎಂದು ಪ್ರಥಮ್ ಆಪ್ತ ಮೂಲಗಳು ತಿಳಿಸಿವೆ. 'ಕಿಮ್ಸ್' ಆಸ್ಪತ್ರೆಯ 'ಐಸಿಯು'ನಲ್ಲಿ ಒಳ್ಳೆ ಹುಡುಗನಿಗೆ ಚಿಕಿತ್ಸೆ ನೀಡಲಾಗುತ್ತಿದೆ ಎಂದು ತಿಳಿದುಬಂದಿದೆ.[ಲೋಕಲ್ ಲೋಕಿ ಮತ್ತು ಪ್ರಥಮ್ ಕಿತ್ತಾಟಕ್ಕೆ ಅಸಲಿ ಕಾರಣ ಇದೇ!]


Click it and Unblock the Notifications











