'ಬಿಗ್ ಬಾಸ್' ನಿವೇದಿತಾ ಮತ್ತು ಪ್ರಥಮ್ ಮೊದಲಿಂದಲೂ ಸ್ನೇಹಿತರು, ಅದು ಹೇಗೆ?
ಕಳೆದ ಬಾರಿ ಬಿಗ್ ಬಾಸ್ ನಲ್ಲಿ ಅತೀ ಹೆಚ್ಚು ಪ್ರಖ್ಯಾತಿ ಪಡೆದವರು ನಟ ಹಾಗೂ ನಿರ್ದೇಶಕ ಪ್ರಥಮ್. ಅದೇ ರೀತಿಯಲ್ಲಿ ಈ ಬಾರಿ ಕಾಮನ್ ಮ್ಯಾನ್ ಎಂಟ್ರಿಯಲ್ಲಿ ಹೋಗಿ ಹೆಚ್ಚು ಫೇಮಸ್ ಆದವರು ನಿವೇದಿತಾ ಗೌಡ
ನಿವೇದಿತಾ ಗೌಡ ಹಾಗೂ ಪ್ರಥಮ್ ಅವರಿಗೆ ಏನೋ ಸಂಬಂಧವಿದೆ. ಇಂಥದೊಂದು ಸುಳಿವು ಬಿಗ್ ಬಾಸ್ ಮನೆಯಲ್ಲಿ ಯಾರಿಗೂ ಸಿಗಲೇ ಇಲ್ಲ. ನಿಜಕ್ಕೂ ಇವರಿಬ್ಬರಿಗೂ ಪರಿಚಯವಿದ್ಯಾ? ಅನ್ನೋ ಅನುಮಾನವೂ ಬರಲಿಲ್ಲ.
ಆದರೆ ನಿಜಕ್ಕೂ ನಿವೇದಿತಾ ಮತ್ತು ಪ್ರಥಮ್ ಬಹುದಿನದ ಗೆಳೆಯರು. ಹಾಗಂತ ನಾವ್ ಹೇಳ್ತಿಲ್ಲ, ಖುದ್ದು ನಿವೇದಿತಾ ಅವರೇ ಹೇಳಿಕೊಂಡಿದ್ದಾರೆ. ಹಾಗಾದ್ರೆ ನಿವೇದಿತಾ ಅವರಿಗೆ ಪ್ರಥಮ್ ಪರಿಚಯ ಹೇಗಾಯ್ತು? ಪ್ರಥಮ್ ಬಗ್ಗೆ ನಿವೇದಿತಾ ಏನ್ ಹೇಳ್ತಾರೆ? ಸಂಪೂರ್ಣ ಮಾಹಿತಿ ಇಲ್ಲಿದೆ. ಮುಂದೆ ಓದಿ

ಬಹುದಿನದ ಗೆಳತನದ ಬಗ್ಗೆ ನಿವೇದಿತಾ ಮಾತು
ನಟ ಹಾಗೂ ನಿರ್ದೇಶಕ ಪ್ರಥಮ್ ಮತ್ತು ಬಿಗ್ ಬಾಸ್ ಸ್ಪರ್ಧಿ ನಿವೇದಿತಾ ಅವರ ಮಧ್ಯೆ ಬಹಳ ಹಿಂದಿನಿಂದಲೂ ಗೆಳತನವಿದೆ ಅಂತೆ. ಹೀಗಂತ ನಿವೇದಿತಾ ಅವರೇ ಹೇಳಿಕೊಂಡಿದ್ದಾರೆ. ಬಿಗ್ ಬಾಸ್ ಹೋಗುವ ಮುಂಚಿನಿಂದಲೂ ಇವರಿಬ್ಬರು ಸ್ನೇಹಿತರು.

ಬಿಗ್ ಬಾಸ್ ನಿಂದ ಪರಿಚಯ
ಪ್ರಥಮ್ ಬಿಗ್ ಬಾಸ್ ನಲ್ಲಿ ಸ್ಪರ್ಧಿ ಆಗಿದ್ದಾಗ ನಿವೇದಿತಾ ಅವರ ಎಲ್ಲಾ ಎಪಿಸೋಡ್ ಗಳನ್ನ ನೋಡುತ್ತಿದ್ದರಂತೆ. ಅದೇ ಸಮಯದಲ್ಲಿ ಪ್ರಥಮ್ ಅವರನ್ನ ಪರಿಚಯ ಮಾಡಿಕೊಂಡಿದ್ದಾರೆ. ನಿವೇದಿತಾ ಅವರ ಕುಟುಂಬಸ್ಥರಿಗೂ ಪ್ರಥಮ್ ಪರಿಚಯವಿದೆ.

ಚಿತ್ರಕ್ಕೆ ಶುಭಕೋರಿದ ನಿವ್ವಿ
ಪ್ರಥಮ್ ಅಭಿನಯದ ದೇವ್ರಂಥ ಮನುಷ್ಯ ಚಿತ್ರಕ್ಕೆ ನಿವೇದಿತಾ ಶುಭಾಶಯ ಕೋರಿದ್ದಾರೆ. ಅದೇ ಸಮಯದಲ್ಲಿ ಪ್ರಥಮ್ ಹಾಗೂ ತಮ್ಮ ಸ್ನೇಹದ ವಿಚಾರವನ್ನ ಬಿಟ್ಟುಕೊಟ್ಟಿದ್ದಾರೆ.

ದೇವ್ರಂತ ಮನುಷ್ಯನಾದ ಪ್ರಥಮ್
ಕಿರಣ್ ಶೆಟ್ಟಿ ನಿರ್ದೇಶನದ ದೇವ್ರಂತ ಮನುಷ್ಯ ಸಿನಿಮಾ ನಾಳೆ(ಫೆ.2) ರಾಜ್ಯಾದ್ಯಂತ ರಿಲೀಸ್ ಆಗ್ತಿದೆ. ಚಿತ್ರದಲ್ಲಿ ಪ್ರಥಮ್ ನಾಯಕನಾಗಿ ಅಭಿನಯಿಸಿದ್ದು ವೈಷ್ಣವಿ ಮತ್ತು ಶೃತಿ ನಾಯಕಿಯರಾಗಿ ನಟಿಸಿದ್ದಾರೆ.


Click it and Unblock the Notifications











