"ಜಾಸ್ತಿ ಕಿಸ್ ಕೊಡ್ಬೇಡಾ.. ಸೋಶಿಯಲ್ ಮೀಡಿಯಾ ಕಡಿಮೆ ಮಾಡು" ಒಳ್ಳೆ ಹುಡುಗನಿಗೆ ಯಶ್ ಬುದ್ಧಿಮಾತು!
ಒಳ್ಳೆ ಹುಡುಗ ಪ್ರಥಮ್ ಈಗ ಸಿನಿಮಾ ರಿಲೀಸ್ ಮಾಡುವ ಖುಷಿಯಲ್ಲಿದ್ದಾರೆ. ಪ್ರಥಮ್ ಅವರೇ ನಿರ್ದೇಶಿಸಿ, ನಟಿಸಿರುವ 'ನಟ ಭಯಂಕರ' ಬಿಡುಗಡೆಗೆ ಮುನ್ನ ಪ್ರಚಾರ ಮಾಡುವುದರಲ್ಲಿ ನಿರತರಾಗಿದ್ದಾರೆ. ಈಗಾಗಲೇ ಇದೇ ಸಿನಿಮಾದ ಹಾಡೊಂದನ್ನೂ ರಿಲೀಸ್ ಮಾಡಿದ್ದಾರೆ.
ಇತ್ತೀಚೆಗೆ ಪ್ರಥಮ್ ಪ್ಯಾನ್ ಇಂಡಿಯಾ ಸೂಪರ್‌ಸ್ಟಾರ್ ಯಶ್ ಭೇಟಿ ಮಾಡಿದ್ದಾರೆ. 'ನಟ ಭಯಂಕರ' ಸಿನಿಮಾ ಸಂಬಂಧ ಭೇಟಿ ಮಾಡಿದ್ದು, ಒಳ್ಳೆ ಹುಡುಗನಿಗಾಗಿ ಯಶ್ ಕೂಡ ಒಳ್ಳೆ ಮಾತುಗಳನ್ನಾಡಿದ್ದಾರೆ.
ಪ್ರಥಮ್ ಪಕ್ಕದಲ್ಲೇ ಕೂತು 'ನಟ ಭಯಂಕರ' ಸಿನಿಮಾದ ಹಾಡಿಗೆ ಮೆಚ್ಚುಗೆ ಸೂಚಿಸಿದ್ದಾರೆ. ಅಲ್ಲದೆ ಪ್ರಥಮ್‌ಗೆ ಕೆಲವು ಸಲಹೆಗಳನ್ನೂ ನೀಡಿದ್ದಾರೆ. ಅಷ್ಟಕ್ಕೂ ಯಶ್ ಒಳ್ಳೆ ಹುಡುಗನಿಗೆ ನೀಡಿದ ಸಲಹೆ ಏನು? ಇಬ್ಬರ ನಡುವೆ ನಡೆದ ಸಂಭಾಷಣೆ ಏನು? ಅನ್ನೋದನ್ನು ತಿಳಿಯಲು ಮುಂದೆ ಓದಿ.

'ಯಾಕೆ ಜಾಸ್ತಿ ಕಿಸ್ ಕೊಡುತ್ತೀಯಾ?'
'ನಟ ಭಯಂಕರ' ಹಾಡಿನಲ್ಲಿ ಪ್ರಥಮ್ ಸಿಕ್ಕಾಪಟ್ಟೆ ಸ್ಟೈಲಿಶ್ ಆಗಿ ಕಾಣಿಸಿಕೊಂಡಿದ್ದಾರೆ. ಅದಕ್ಕೆ ಯಶ್, ನಟ-ನಿರ್ದೇಶಕ ಪ್ರಥಮ್ ಕಾಲೆಳೆದಿದ್ದಾರೆ.
"ಒಳ್ಳೆ ಹುಡುಗ ಒಳ್ಳೆಯದಾಗಲಿ ಇವನಿಗೆ. ಸಿನಿಮಾದ ಹಾಡು ನೋಡಿದೆ. ಸೂಟ್ ಎಲ್ಲಾ ಹಾಕೊಂಡು ಬೇಜಾನ್ ಮಿಂಚಿಂಗು. ಜಾಸ್ತಿ ಕಿಸ್‌ಗಳನ್ನು ಕೊಡುತ್ತಿದ್ದೀಯಾ ಯಾಕೆ? ಒಂದು ಸಾರಿ ಕೊಡಬೇಕು. ನೀನು ಪ್ರತಿ ಚರಣದಲ್ಲಿ, ಪ್ರತಿ ಪಲ್ಲವಿಯಲ್ಲಿ ಎಲ್ಲಾ ಕಡೆ ಕೊಡುತ್ತಿದ್ದೀಯಾ. ಒಳ್ಳೆಯದಾಗಲಿ.." ಎಂದು ಯಶ್ ಪ್ರಥಮ್‌ಗೆ ಹೇಳಿದ್ದಾರೆ.

'ನೀನು ಸೂಟ್‌ನಲ್ಲಿ ಬಹಳ ಇಷ್ಟ ಆದೆ'
ಪ್ರಥಮ್ 'ನಟ ಭಯಂಕರ' ಸಿನಿಮಾ ಹಾಡಿನ ಬಗ್ಗೆ ಕೇಳಿದಾಗಲೂ ತಮಾಷೆಯಾಗಿಯೇ ಪ್ರತಿಕ್ರಿಯಿಸಿದ್ದಾರೆ. "ಹಾಡು ಚೆನ್ನಾಗಿದೆ. ತುಂಬಾನೇ ಚೆನ್ನಾಗಿದೆ. ನೀನು ಸೂಟ್‌ನಲ್ಲಿ ಬಹಳ ಇಷ್ಟ ಆದೆ. ಗ್ಲಾಸ್ ಹಾಕೊಂಡು ಸ್ಟೈಲ್ ಆಗಿ ವಾಕ್ ಮಾಡಿಕೊಂಡಿದ್ದೀಯಾ. ಎಲ್ಲದ್ದಕ್ಕಿಂತ ನೀನು ರೊಮ್ಯಾಂಟಿಕ್ ಆಗಿ ಕಿಕ್ ಮಾಡಿದ್ದೇ ಇಷ್ಟ ಆಗಿದ್ದು, ಒಳ್ಳೆಯದಾಗಲಿ ಗುಡ್ ಲಕ್.. ತುಂಬಾ ಒಳ್ಳೆಯದಾಗಲಿ.. ನಮ್ಮ ಹುಡುಗ.. ಮೈಸೂರು ಹುಡುಗ.. " ಎಂದು ಒಳ್ಳೆ ಹುಡುಗ ಪ್ರಥಮ್‌ಗೆ ರಾಕಿ ಭಾಯ್ ಯಶ್ ಹೇಳಿದ್ದಾರೆ.

'ಜಗತ್ತಿನಲ್ಲಿ ತಲೆ ಕೆಡಿಸಿಕೊಳ್ಳಬಾರದು'
"ಸೋಶಿಯಲ್ ಮೀಡಿಯಾ ಸ್ವಲ್ಪ ಕಡಿಮೆ ಮಾಡಿಕೋ.. ಎಲ್ಲರೂ ಹೇಳಿದ್ದಕ್ಕೆ ಜಗತ್ತಿನಲ್ಲಿ ತಲೆ ಕೆಡಿಸಿಕೊಳ್ಳಬಾರದು. ಎಲ್ಲರಿಗೂ ಉತ್ತರ ಕೊಡುವ ಅವಶ್ಯಕತೆ ಇಲ್ಲ. ನೀನಗೆ ಏನು ಅನಿಸುತ್ತೋ ಅದನ್ನು ಮಾಡಿಕೊಂಡು ಆರಾಮಾಗಿದ್ದರೆ, ಜೀವನ ಖುಷಿಯಾಗಿರುತ್ತೆ." ಎಂದು ಪ್ರಥಮ್‌ಗೆ ಯಶ್ ಹೇಳಿದ್ದಾರೆ.

'ನಟ ಭಯಂಕರ' ರಿಲೀಸ್ ಯಾವಾಗ?
ಪ್ರಥಮ್ ನಟಿಸಿ, ನಿರ್ದೇಶಿಸಿರುವ 'ನಟ ಭಯಂಕರ' ಸಿನಿಮಾ ನಾಳೆ (ಫೆಬ್ರವರಿ 3) ಬಿಡುಗಡೆಯಾಗುತ್ತಿದೆ. ಹೀಗಾಗಿ ಕಳೆದ ಕೆಲವು ದಿನಗಳಿಂದ ಪ್ರಥಮ್ ಪ್ರಚಾರದಲ್ಲಿ ಬ್ಯುಸಿಯಾಗಿ ಇದ್ದರು.ಈ ವೇಳೆ ಯಶ್ ಭೇಟಿ ಮಾಡಿ,ಅವರಿಂದಲೂ ಶುಭ ಹಾರೈಕೆಗಳನ್ನು ಪಡೆದುಕೊಂಡಿದ್ದಾರೆ.


Click it and Unblock the Notifications











