ಕುಡಿದು ಬಿಟ್ಟಾವ್ನೆ, ಕ್ವಾಟರ್ ಹಾಕಾವ್ನೆ, ಮರೆತು ಬಿಡಿ, ಜೈ ಡಿ ಬಾಸ್ ಎಂದವರಿಗೆ ಪ್ರಥಮ್ ಖಡಕ್ ಉತ್ತರ..!

ಬಿಗ್ ಬಾಸ್ ಕಾರ್ಯಕ್ರಮದ ನಾಲ್ಕನೇ ಸೀಸನ್‌ನ ವಿನ್ನರ್ ಆಗಿದ್ದವರು ಪ್ರಥಮ್. ಆ ಸೀಸನ್‌ನಲ್ಲಿ ಪ್ರಥಮ್ ಉಣಬಡಿಸಿದ್ದ ಮನರಂಜನೆಯ ರಸದೌತಣವನ್ನು ಪ್ರೇಕ್ಷಕರು ಇನ್ನೂ ಮರೆತಿರಲಿಕ್ಕಿಲ್ಲ. ಒಂದಿಷ್ಟು ಕಿರಿಕ್ಕು- ಇನ್ನೊಂದಿಷ್ಟು ವಾದ ವಿವಾದಗಳಿಂದ ಸದ್ದು ಮಾಡಿದ್ದ ಪ್ರಥಮ್ ಆ ನಂತರ ಚಿತ್ರಗಳಲ್ಲಿ ಬ್ಯುಸಿಯಾದರು. ದೇವ್ರಂಥಾ ಮನುಷ್ಯ ಸೇರಿ ಮೂರ್ನಾಲ್ಕು ಚಿತ್ರಗಳನ್ನು ಮಾಡಿದರು. ಸದ್ಯ ಪ್ರಥಮ್ ಅಭಿನಯದ ಫಸ್ಟ್ ನೈಟ್ ವಿತ್ ದೆವ್ವ ಮತ್ತು ನಿರ್ದೇಶಿಸಿ ಅಭಿನಯಿಸಿರುವ ಕರ್ನಾಟಕದ ಅಳಿಯ ಚಿತ್ರಗಳು ಬಿಡುಗಡೆಯಾಗಬೇಕಿವೆ.

ಇಂಥಾ ಪ್ರಥಮ್ ಕಂಡರೆ ಅದ್ಯಾಕೋ ಏನೋ ದರ್ಶನ್ ಅಭಿಮಾನಿಗಳಿಗೆ ವಿಪರೀತ ಪ್ರೀತಿ. ಪ್ರಥಮ್‌ಗೂ ಕೂಡ ಅಷ್ಟೇ. ಹೀಗಾಗಿಯೇ ಪ್ರಥಮ್ ಹೋದಲ್ಲಿ ಬಂದಲ್ಲಿ ದರ್ಶನ್ ಅಭಿಮಾನಿಗಳು ಡಿ ಬಾಸ್ ಎಂದು ಕೂಗಿದರೆ ಪ್ರಥಮ್ ಅಷ್ಟೇ ಸಮಾಧಾನದಿಂದ ಉತ್ತರ ಕೊಡುತ್ತಾರೆ. ಕೆಲವೊಮ್ಮೆ ಗುಡುಗುತ್ತಾರೆ. ಇನ್ನೂ ಕೆಲವೊಮ್ಮೆ ಸಾಮಾಜಿಕ ಜಾಲತಾಣದಲ್ಲಿ ತಮ್ಮ ವಿರುದ್ಧ ವಿಷ ಕಾರುವ ವ್ಯಕ್ತಿಗಳಿಗೆ ಪೊಲೀಸ್ ಠಾಣೆಗೆ ಕರೆಸಿ ಬುದ್ದಿವಾದವನ್ನೂ ಹೇಳುವ ಕಾರ್ಯಕ್ರಮವನ್ನು ಕೂಡ ಪ್ರಥಮ್ ಆಗಾಗ ಹಮ್ಮಿಕೊಳ್ಳುತ್ತಾ ಇರುತ್ತಾರೆ. ಸಮಯ ಸಿಕ್ಕಾಗ ಅಲ್ಲಲ್ಲಿಯೇ ತಿರುಗೇಟನ್ನು ಕೂಡ ನೀಡುತ್ತಾರೆ. ಇದಕ್ಕೆ ಇನ್ನೊಂದು ಉದಾಹರಣೆ ಡಾಲಿ ಧನಂಜಯ್ ಅವರ ಆರತಕ್ಷತೆ ಕಾರ್ಯಕ್ರಮ.

Pratham counters Darshan fans chanting D Boss at Dhananjay s wedding

ಹೌದು, ಡಾಲಿ ಧನಂಜಯ್ ಮತ್ತು ಡಾಕ್ಟರ್ ಧನ್ಯತಾ ಅವರಿಗೆ ಶುಭಾಶಯವನ್ನು ಕೋರಲು ಪ್ರಥಮ್ ಮೈಸೂರಿಗೆ ತೆರಳಿದ್ದರು. ಇದೇ ಸಮಯದಲ್ಲಿ ಮಾಧ್ಯಮಗಳ ಜೊತೆ ಪ್ರಥಮ್ ಮಾತನಾಡಲು ಮುಂದಾದಾಗ ಅಲ್ಲಿದ್ದ ದರ್ಶನ್ ಅಭಿಮಾನಿಗಳು ಜೈ ಡಿ ಬಾಸ್ ಎಂದು ಕೂಗಿದ್ದಾರೆ. ಈ ಕೂಗು ಕಿವಿಗೆ ಬೀಳುತ್ತಿದ್ದಂತೆಯೇ ಪ್ರಥಮ್ ಅಲ್ಲಿಯೇ ತಿರುಗೇಟನ್ನು ನೀಡಿದ್ದಾರೆ.

ಅಣ್ಣ, ಒಂದು ನಿಮಿಷ ಇಲ್ಲಿ ಕೇಳಿಸಿಕೋ. ನನಗೆ ನೀನು ಬಾಸ್ ಎಂದು ಮಾತು ಶುರು ಮಾಡಿದ ಪ್ರಥಮ್, ನೋಡಿ ಮುಖ ಕೊಟ್ಟು ಕೂಡ ಮಾತನಾಡುವ ಯೋಗ್ಯತೆ ಇಲ್ಲ ನನಗೆ ಅವನೇ ಬಾಸ್, ಅವನಿಗೆ ಅವರ ಅಪ್ಪ ಅಮ್ಮ ಬಾಸ್ ಆಗಬೇಕು ಎಂದಿದ್ದಾರೆ. ಯಾವನೋ ಪೆದ್ದ ಇಲ್ಲಿಗೆ ಬಂದಿದ್ದಾನೆ, ಕುಡಿದು ಬಿಟ್ಟಾವ್ನೆ, ಕ್ವಾಟರ್ ಹಾಕಾವ್ನೆ, ಹೋಗಲಿ ಮರೆತು ಬಿಡಿ ಎಂದು ಹೇಳಿದ್ದಾರೆ.

ನಾವೆಲ್ಲ ಕನ್ನಡಿಗರು, ಕರ್ನಾಟಕದಲ್ಲಿ ಯಾವಾಗಲೂ ಕನ್ನಡಿಗರೇ ಬಾಸ್ ಎಂದಿರುವ ಪ್ರಥಮ್ ನೀವೆಲ್ಲರೂ ನನಗೆ ಬಾಸ್ ಅಂದಿದ್ದಾರೆ. ನಿಮಗೆ ನಿಮ್ಮ ಅಪ್ಪ ಅಮ್ಮ ಬಾಸ್ ಇಲ್ಲಿ ಯಾವ ಮಗ ಅಪ್ಪ ಅಮ್ಮ ಬಾಸ್ ಅಲ್ಲ ಅಂತಾರೋ ಅಂಥವರು ಮುಂದೆ ಬನ್ನಿ ಎಂದು ಹೇಳಿರುವ ಪ್ರಥಮ್ ಎಲ್ಲರದ್ದೂ ಅದೇ ಪ್ರೀತಿ ಹಾಗೇ ಇರಬೇಕು, ಕರ್ನಾಟಕದಲ್ಲಿ ಕನ್ನಡವೇ ಬಾಸ್ ಎಂದು ಹೇಳಿದ್ದಾರೆ.

ಮುಂದುವರೆದು ಕನ್ನಡಿಗರು ಮಾತ್ರ ನನಗೆ ಬಾಸ್, ಇಲ್ಲಿ ಯಾರಾದರೂ ಬೆರಕೆಗಳು ಇದ್ದರೆ ಅವರೆಲ್ಲ ನನಗೆ ಬಾಸ್ ಅಲ್ಲ ಎಂದಿರುವ ಪ್ರಥಮ್ ಅಪ್ಪ-ಅಮ್ಮ ಹೊರತು ಪಡಿಸಿ ಬೇರೆ ಯಾರಿಗೂ ಬಾಸ್ ಎನ್ನಬೇಡಿ ಎಂದಿದ್ದಾರೆ. ನಾನು ಹೇಳುವುದು ಸಾವಿರಕ್ಕೊಂದು, ಕೋಟಿಗೊಂದು ಮಾತು ಕೇಳಿಸಿಕೊಳ್ಳಿ ಎಂದಿರುವ ಪ್ರಥಮ್ ಕಲಾವಿದರು ಬಂದರೆ ತಲೆ ಮೇಲೆ ಕೂರಿಸಿಕೊಳ್ಳಬೇಡಿ, ನಾವೆಲ್ಲ ಸೊನ್ನೆಯಿಂದ ಬಂದಿರುತ್ತೀವಿ ನೀವು ನೋಡಿದರೆ ಮಾತ್ರ ನಮಗೆ ಮರ್ಯಾದೆ ಸಿಗುವುದು ಎಂದು ಹೇಳಿದ್ದಾರೆ. ನಿಮ್ಮಿಂದ ನಾವು ಅನ್ನ ತಿನ್ನುತ್ತೇವೆ ಯಾವ ಸ್ಟಾರ್ ನಟನನ್ನೂ ದೇವರು ಮಾಡಬೇಡಿ ಇದನ್ನು ತಲೆಯಲ್ಲಿ ಇಟ್ಕೊಳ್ಳಿ ಎಂದು ಕೂಡ ಹೇಳಿದ್ದಾರೆ ಪ್ರಥಮ್.

More from Filmibeat

Read more about: darshan pratham filmibeat news
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X