'ನಟ ಭಯಂಕರ'ನಿಗೆ ಸಾಥ್ ನೀಡಿದ ಧ್ರುವ ಸರ್ಜಾಗೆ ವಿಶೇಷ ಗಿಫ್ಟ್ ಕೊಟ್ಟ ಪ್ರಥಮ್?

ಕನ್ನಡದ ಖ್ಯಾತ ರಿಯಾಲಿಟಿ ಶೋ ಬಿಗ್ ಬಾಸ್ ಮೂಲಕ ಖ್ಯಾತಿ ಗಳಿಸಿದ ನಟ ಪ್ರಥಮ್, ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಜೊತೆಗಿನ ಸ್ನೇಹದ ಬಗ್ಗೆ ಮಾತನಾಡಿದ್ದಾರೆ. 'ಕನ್ನಡ ಫಿಲ್ಮೀಬೀಟ್' ಆಯೋಜಿಸಿದ್ದ ಫೇಸ್‌ಬುಕ್‌ ಲೈವ್ ನಲ್ಲಿ ಅಭಿಮಾನಿಗಳ ಪ್ರಶ್ನೆಗೆ ಮನಬಿಚ್ಚಿ ಮಾತನಾಡಿದ ಪ್ರಥಮ್, ನಟ ಭಯಂಕರ ಚಿತ್ರಕ್ಕೆ ವಾಯ್ಸ್ ಓವರ್ ನೀಡಿದ ಗೆಳೆಯ ಧ್ರುವ ಸರ್ಜಾ ಹೇಳಿದ್ದಾರೆ.

Recommended Video

ಧ್ರುವ ಸರ್ಜಾ ಅಭಿಮಾನಿಗಳಿಗೆ ಸಿಹಿ ಸುದ್ದಿ | Pogaru Song Release | Dhruva Sarja | Filmibeat kannada

ಪ್ರಥಮ್ ಅಭಿನಯದ ನಟ ಭಯಂಕರ ಚಿತ್ರಕ್ಕೆ ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಧ್ವನಿ ನೀಡುವ ಮೂಲಕ ಪ್ರಥಮ್ ಸಿನಿಮಾಗೆ ಸಾಥ್ ನೀಡಿದ್ದಾರೆ. ಧ್ರುವ ಮಾಡಿದ ಸಹಾಯಕ್ಕೆ ಪ್ರಥಮ್ ವಿಶೇಷವಾದ ಗಿಫ್ಟ್ ನೀಡಿರುವ ಬಗ್ಗೆ ಫೇಸ್ ಬುಕ್ ಲೈವ್ ನಲ್ಲಿ ಮಾತನಾಡಿದ್ದಾರೆ. ಮುಂದೆ ಓದಿ..

ಧ್ರುವ ಬಗ್ಗೆ ಪ್ರಥಮ್ ಹೇಳಿದ್ದನು?

ಧ್ರುವ ಬಗ್ಗೆ ಪ್ರಥಮ್ ಹೇಳಿದ್ದನು?

"ಧ್ರುವ ಸರ್ಜಾ ಹೇಗೆ ಅಂದರೆ ಅವರಿಗೆ ಇಷ್ಟವಾದ ಕೆಲಸವನ್ನು ಅವರು ಮಾಡುತ್ತಾರೆ. ಯಾವ ವಿಚಾರದಲ್ಲೂ ಕಾಂಪ್ರೂಮೈಸ್ ಆಗಲ್ಲ. 50 ಜನ ಕಥೆ ತೆಗೆದುಕೊಂಡು ಬಂದು ಮುಗಿಬಿದ್ದರು, ಯಾವ ಕಥೆಯನ್ನು ಒಪ್ಪಿಕೊಂಡಿಲ್ಲ. ಒಂದು ಸಿನಿಮಾ ಮುಗಿಯವವರೆಗೂ ಮತ್ತೊಂದು ಸಿನಿಮಾ ಒಪ್ಪಿಕೊಳ್ಳಲ್ಲ. ಮೊದಲು ಪೊಗರು ಮುಗಿಲಿ ಅಂತ ಹೇಳುತ್ತಾರೆ. ಪೊಗರು ಮುಗಿಯುವವರೆಗೂ ಏನು ಮಾಡಲ್ಲ. ಹಾಗೆ ಅವರು" ಎಂದು ಹೇಳಿದ್ದಾರೆ.

ಧ್ರುವಗೆ ಏನು ಕೊಡುವುದು ಎಂದು ಚರ್ಚೆಯಾಯಿತು

ಧ್ರುವಗೆ ಏನು ಕೊಡುವುದು ಎಂದು ಚರ್ಚೆಯಾಯಿತು

"ನಟ ಭಯಂಕರ ಸಿನಿಮಾಗೆ ಧ್ರುವ ವಾಯ್ಸ್ ಓವರ್ ಕೊಟ್ಟಿದ್ದಾರೆ. ನಿಮಗೋಸ್ಕರ ಕೊಡುತ್ತಿದ್ದೀನಿ ಅಂತ ಬಂದು ವಾಯ್ಸ್ ಓವರ್ ಕೊಟ್ಟಿದ್ದಾರೆ. ಹಾಗಾಗಿ ಅವರಿಗೆ ಏನು ಗಿಫ್ಟ್ ಕೊಡಿದು ಅಂತ ಇಂಟ್ರಸ್ಟಿಂಗ್ ಆಗಿ ಚರ್ಚೆಯಾಯಿತು. ಧ್ರುವ ಯಾರಿಗೂ ಧ್ವನಿ ಕೊಟ್ಟಿಲ್ಲ. ಹಾಗಾಗಿ ಡೈಮಂಡ್ ರಿಂಗ್ ಕೊಡೋಣ ಅಂತ ಅವರ ಆಪ್ತರ ಬಳಿ ಚರ್ಚಿಸಿದೆ. ಆದರೆ ಅವರು ಅದಕ್ಕೂ ಮೀರಿದ ಉಡುಗೊರೆ ಕೊಡಿ ಎಂದರು"

ಗಿಫ್ಟ್ ವಿಚಾರ ಗೊತ್ತಾಗಿ ಫೋನ್ ಮಾಡಿದ್ರು

ಗಿಫ್ಟ್ ವಿಚಾರ ಗೊತ್ತಾಗಿ ಫೋನ್ ಮಾಡಿದ್ರು

"ಈ ವಿಚಾರ ಧ್ರುವಗೆ ಗೊತ್ತಾಗಿ ಫೋನ್ ಮಾಡಿದ್ರು, ನಿಮ್ಮ ಬಳಿ ಒಂದು ರೂಪಾಯಿ ತೆಗೆದುಕೊಳ್ಳುವುದಿಲ್ಲ ಎಂದು ಹೇಳಿದ್ದರು. ನೀವು ಕೊಡುವುದಾದರೆ ನಾನು ವಾಯ್ಸ್ ಓವರ್ ಕೊಡಲ್ಲ ಎಂದರು. ಇದು ಕಷ್ಟವಾಯಿತಲ್ಲ ಅಂತ ಅಂದುಕೊಂಡೆ. ವಿಶ್ವಾಸದಲ್ಲಿ ಕರೆಯುತ್ತಿರುವುದು ಬನ್ನಿ ಎಂದು ಕರೆಸಿಕೊಂಡೆವು"

ಪ್ರಥಮ್ ಕೊಟ್ಟ ಗಿಫ್ಟ್ ಏನು?

ಪ್ರಥಮ್ ಕೊಟ್ಟ ಗಿಫ್ಟ್ ಏನು?

ಮನೆಯಿಂದ ಕರೆದುಕೊಂಡು ಬರುವವವರೆಗೂ ಒಂದು ಲೆಕ್ಕಾ. ಬಂದಮೇಲೆ ಮತ್ತೊಂದು ಲೆಕ್ಕಾ. ಮನೆ ಬಿಟ್ಟಮೇಲೆ ಗೊತ್ತಾಯಿತು ಧ್ರುವ ಬರ್ತಿದ್ದಾರೆ ಎಂದು. ಆ ನಂತರ ಜ್ಯುವೆಲ್ಲರಿ ಶಾಪ್ ನಲ್ಲಿ ಅವರಿಗಾಗಿ ವಿಶೇಷವಾಗಿ ಪುಣ್ಯಕೋಟಿ ಹಸು ಮಾಡಿಸಲು ಆರ್ಡರ್ ಕೊಟ್ವಿ. ಇನ್ನೂ ಧ್ರುವ ಪತ್ನಿ ಪ್ರೇರಣ ಅವರು ಕೃಷ್ಣನ ಭಕ್ತೆ ಎನ್ನುವುದು ಗೊತ್ತಿತ್ತು. ಹಾಗಾಗಿ ನೆನಪಲ್ಲಿ ಉಳಿಯಲಿ ಎಂದು ಕೃಷ್ಣನ ವಿಗ್ರಹ ಕೊಟ್ಟೆವು" ಎಂದರು

ಗೋಶಾಲೆಗೆ ಸಹಾಯ

ಗೋಶಾಲೆಗೆ ಸಹಾಯ

"ಚಿತ್ರಕ್ಕೆ ಧ್ವನಿ ನೀಡಿದ ನಂತರ ಅವರಿಗೆ ಚೆಕ್ ಕೊಟ್ವಿ. ಆದರೆ ಒಪ್ಪಲಿಲ್ಲ. ಇಬ್ಬರಿಗೂ ಇಷ್ಟವಾದುದನ್ನು ಮಾಡೋಣ ಎಂದು ಹೇಳಿ ಉತ್ತಮವಾದ ಅಮೌಂಟ್ ಅನ್ನು ಗೋಶಾಲೆಗೆ ಕೋಡೊಣ ಎಂದು ನಿರ್ಧರಿಸಿ ಕೊಟ್ಟೆವು. ಬೇಸಿಗೆಯಲ್ಲಿ ಹಸುಗಳಿಗೆ ಆಹಾರ ಸಮಸ್ಯೆ ಇರುತ್ತೆ ಹಾಗಾಗಿ ಕೊಡೋಣ ಎಂದು ಚೆಕ್ ಕೊಟ್ಟೆವು" ಎಂದು ಪ್ರಥಮ್ ಹೇಳಿದ್ದಾರೆ.

More from Filmibeat

English summary
Kannada Actor Pratham gave a special gift to Actor Dhruva Sarja. Dhruva Sarja gave voice for Natabhayanka film.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X