ಹುಚ್ಚ ವೆಂಕಟ್ ವಿಚಾರದಲ್ಲಿ ಪ್ರಥಮ್ ನೀಡಿದ ಸಲಹೆ ಬಗ್ಗೆ ಒಮ್ಮೆ ಗಮನ ಕೊಡಿ

Recommended Video

ಒಳ್ಳೆಹುಡುಗ, ವೆಂಕಟ್ ಬಗ್ಗೆ ಹೇಳಿದ್ದೇನು ಗೊತ್ತಾ..? | Huccha Venkat | FILMIBEAT KANNADA

ಮಡಿಕೇರಿಯಲ್ಲಿ ಕಾರಿನ ಗಾಜು ಒಡೆದು ಹಾಕಿ ದರ್ಪ ತೋರಿದ್ದ ನಟ-ನಿರ್ದೇಶಕ ವೆಂಕಟ್ ಅವರನ್ನ ಅಲ್ಲಿನ ಸಾರ್ವಜನಿಕರು ಥಳಿಸಿದ್ದಾರೆ. ಈ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಯಾವುದು ಸರಿ ಯಾವುದು ತಪ್ಪು ಎಂದು ಚರ್ಚೆಯಾಗುತ್ತಿದೆ.

ಮತ್ತೊಂದೆಡೆ ವೆಂಕಟ್ ಅವರನ್ನ ಹೇಗೆ ಸರಿಪಡಿಸುವುದು, ಅವರ ಸಾರ್ವಜನಿಕ ವರ್ತನೆ ಸರಿಯಿಲ್ಲ, ಮಾನಸಿಕವಾಗಿ ಅವರಿಗೆ ಚಿಕಿತ್ಸೆ ಬೇಕಾಗಿದೆ, ಅವರಿಗೆ ಸಹಾಯ ಬೇಕಿದೆ ಎಂದು ಕೆಲವರು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.

ವೆಂಕಟ್ ಅವರನ್ನ ಬಹಳ ಹತ್ತಿರದಿಂದ ಬಲ್ಲ ನಟ-ನಿರ್ದೇಶಕ ಪ್ರಥಮ್ ತಮ್ಮದೇ ದೃಷ್ಟಿಕೋನದಲ್ಲಿ ಒಂದು ಸಲಹೆ ನೀಡಿದ್ದಾರೆ. ಗಂಭೀರವಾಗಿ ಯೋಚನೆ ಮಾಡಿದ್ರೆ ಪ್ರಥಮ್ ಹೇಳುವುದರಲ್ಲಿ ಅರ್ಥವಿದೆ ಎನಿಸುತ್ತಿದೆ. ಅಷ್ಟಕ್ಕೂ, ಪ್ರಥಮ್ ಹೇಳಿದ್ದೇನು? ಮುಂದೆ ಓದಿ....

'ಹುಚ್ಚ' ವೆಂಕಟ್ ಎನ್ನುವುದು ಬಿಡಿ

'ಹುಚ್ಚ' ವೆಂಕಟ್ ಎನ್ನುವುದು ಬಿಡಿ

''ಹುಚ್ಚ ವೆಂಕಟ್ ಎಂದು ಅವರನ್ನ ಪ್ರಚೋದಿಸುವ ಬದಲು ವೆಂಕಟ್ ಆಗಿ ಅವರನ್ನ ಬಿಟ್ಟು ಬಿಡುವುದು ನಾವೆಲ್ಲಾ ಅವರಿಗೆ ಮಾಡುವ ದೊಡ್ಡ ಸಹಾಯ. ವೆಂಕಟ್ ಬಗ್ಗೆ ಅನುಕಂಪ ತೋರಿಸುವ ಬದಲು, ಅವಮಾನ ಮಾಡದೆ ಅವರಷ್ಟಕ್ಕೆ ಬಿಡೋಣ'' ಎಂದು ಪ್ರಥಮ್ ಸಲಹೆ ನೀಡಿದ್ದಾರೆ.

ಹೌದು, ಈ 'ಹುಚ್ಚ' ಹೇಗೆ ಬಂತು?

ಹೌದು, ಈ 'ಹುಚ್ಚ' ಹೇಗೆ ಬಂತು?

ವೆಂಕಟರಮಣ ಲಕ್ಷ್ಮಣ್ ಪೂರ್ತಿ ಹೆಸರು. ಆದರೆ ಈ ಹುಚ್ಚ ವೆಂಕಟ್ ಯಾವಾಗ ಬದಲಾದ್ರು ಎಂಬುದರ ಬಗ್ಗೆ ನಿಖರವಾದ ಮಾಹಿತಿ ಇಲ್ಲ. ಹುಚ್ಚ ವೆಂಕಟ್ ಎಂದು ಸಿನಿಮಾ ಮಾಡಿದ್ರು. ಆ ಚಿತ್ರ ಬರುವುದಕ್ಕೆ ಮುಂಚೆಯೇ ತಮ್ಮ ಹೆಸರನ್ನ ಹುಚ್ಚ ವೆಂಕಟ್ ಎಂದು ಬಿಂಬಿಸಿಕೊಂಡಿದ್ದರು. ಹಾಗಾಗಿ, ಈ 'ಹುಚ್ಚ' ಎಂಬುದು ಯಾಕೆ ಸೇರಿಕೊಂಡಿತು ಎನ್ನುವುದು ಕುತೂಹಲಕ್ಕೆ ಕಾರಣವಾಗಿದೆ.

ಹುಚ್ಚ, ತಿಕ್ಲಾ, ಪೊರ್ಕಿ ಯಾಕೆ?

ಹುಚ್ಚ, ತಿಕ್ಲಾ, ಪೊರ್ಕಿ ಯಾಕೆ?

ಹುಚ್ಚ ವೆಂಕಟ್ ಸಿನಿಮಾ ಮಾಡಿದ್ದರು. ಪೊರ್ಕಿ ಹುಚ್ಚ ವೆಂಕಟ್ ಮಾಡಿದ್ರು. ಆಮೇಲೆ ತಿಕ್ಲಾ ಹುಚ್ಚ ವೆಂಕಟ್ ಸಿನಿಮಾ ಮಾಡುವುದಾಗಿ ಘೋಷಿಸಿಕೊಂಡರು. ಈಗ ದುರಹಂಕಾರಿ ಹುಚ್ಚ ವೆಂಕಟ್ ಚಿತ್ರನೂ ಮಾಡ್ತೀನಿ ಎಂದಿದ್ದರು. ಹೀಗೆ, ಹುಚ್ಚ, ತಿಕ್ಲಾ, ಪೊರ್ಕಿ, ದುರಹಂಕಾರಿ ಎಂಬ ಪದಗಳ ಮೇಲೆ ಇವರಿಗೆ ವ್ಯಾಮೋಹ ಯಾಕೆ?

ಚಿಕಿತ್ಸೆನಾ, ಪ್ರಚಾರನಾ?

ಚಿಕಿತ್ಸೆನಾ, ಪ್ರಚಾರನಾ?

ಒಮ್ಮೊಮ್ಮೆ ವೆಂಕಟ್ ಅವರನ್ನ ನೋಡಿದ್ರೆ ಅವರಿಗೆ ಚಿಕಿತ್ಸೆ ಬೇಕಾಗಿದೆ ಎನಿಸಿದರೂ, ಬಹುಶಃ ಇದೆಲ್ಲವನ್ನ ಪ್ರಚಾರಕ್ಕಾಗಿ ಮಾಡುತ್ತಿರುವುದು ಎಂಬ ಅನುಮಾನವೂ ಕಾಡದೆ ಇರಲ್ಲ. ಯಾಕಂದ್ರೆ, ಈ ಹಿಂದೆ ಪ್ರಚಾರಕ್ಕಾಗಿ ಹುಚ್ಚ ವೆಂಕಟ್ ಅನೇಕ ರೀತಿ ಗಿಮಿಕ್ ಮಾಡಿರುವ ಉದಾಹರಣೆಗಳಿವೆ.

More from Filmibeat

English summary
Kannada actor Pratham has give good suggestion to huccha venkat problem.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X