"ದರ್ಶನ್ ಅವ್ರದ್ದು ವಿಗ್ ಅಲ್ವಾ? ಏನ್ ಕಿತ್ಕೊಳ್ಳೋದು"; ಪ್ರಥಮ್ ವಾಗ್ದಾಳಿ
ಒಂದ್ಕಡೆ ದರ್ಶನ್ ಫ್ಯಾನ್ಸ್ ಹಾಗೂ ರಮ್ಯಾ ನಡುವೆ ವಾರ್ ಜೋರಾಗಿದೆ. ಮತ್ತೊಂದು ಕಡೆ ಪ್ರಥಮ್ ಕೂಡ ದರ್ಶನ್ ಹಾಗೂ ಅವರ ಅಭಿಮಾನಿಗಳ ವಿರುದ್ಧ ತಿರುಗಿಬಿದ್ದಿದ್ದಾರೆ. ಇತ್ತೀಚೆಗೆ ಕೆಲವರು ತಮ್ಮ ಮೇಲೆ ಹಲ್ಲೆಗೆ ಯತ್ನಿಸಿದ್ದರು, ಬೆದರಿಕೆ ಹಾಕಿದ್ದರು ಎಂದು ಪ್ರಥಮ್ ಆರೋಪಿಸಿದ್ದರು. ಈ ಸಂಬಂಧ ಇಂದು(ಜುಲೈ 29) ಬೆಂಗಳೂರು ಗ್ರಾಮಂತರ ಎಸ್ಪಿ ಕಚೇರಿಗೆ ತೆರಳಿ ದೂರು ನೀಡಿದ್ದಾರೆ. ದರ್ಶನ್ ಬಗ್ಗೆ ನೇರಾನೇರ ವಾಗ್ದಾಳಿ ನಡೆಸಿದ್ದಾರೆ.
ತಮಗೆ ಬರುತ್ತಿರುವ ಬೆದರಿಕೆ ಕರೆಗಳು, ಸೋಶಿಯಲ್ ಮೀಡಿಯಾ ಟ್ರೋಲ್ ಬಗ್ಗೆ ಪ್ರಥಮ್ ಅಸಮಾಧಾನ ಹೊರ ಹಾಕಿದ್ದಾರೆ. ಬೆಂಗಳೂರು ಗ್ರಾಮಂತರ ಎಸ್ಪಿ ಕಚೇರಿ ಎದುರು ಬಿಗ್‌ಬಾಸ್ ಖ್ಯಾತಿಯ ಪ್ರಥಮ್ ಉಪವಾಸ ಸತ್ಯಾಗ್ರಹ ಶುರು ಮಾಡಿದ್ದಾರೆ. ನಟ ದರ್ಶನ್ ಬಂದು ಹೇಳಿಕೆ ನೀಡುವ ನೀಡಬೇಕು. ಅಲ್ಲಿಯವರೆಗೂ ನನ್ನ ಉಪವಾಸ ಸತ್ಯಾಗ್ರಹ ನಿಲ್ಲಲ್ಲ ಎಂದಿದ್ದಾರೆ.

"ಇಂದಿನಿಂದ ನಾನು ಆಮರಣಾಂತ ಉಪವಾಸ ಮಾಡ್ತಿದ್ದೀನಿ. ಒಂದು ಹನಿ ನೀರು ಕುಡಿಯಲ್ಲ. ದರ್ಶನ್ ಸರ್ ಬಂದು ಹೇಳಿಕೆ ನೀಡಬೇಕು. ಇನ್ನು ಮುಂದೆ ನಮ್ಮ ಅಭಿಮಾನಿಗಳು ಪ್ರಥಮ್ ತಂಟೆಗೆ ಹೋಗಲ್ಲ ಎಂದು ಹೇಳಬೇಕು. ಅಲ್ಲಿಯವರೆಗೆ ಉಪವಾಸ ಸತ್ಯಾಗ್ರಹ ನಿಲ್ಲಲ್ಲ. ನಾನು ಸತ್ತರೂ ಪರವಾಗಿಲ್ಲ. ಇಂಡಸ್ಟ್ರಿಗೆ ಒಳ್ಳೆಯದಾಗುತ್ತೆ" ಎಂದು ಪ್ರಥಮ್ ಹೇಳಿದ್ದಾರೆ.
ದರ್ಶನ್ ಅಭಿಮಾನಿಗಳು ಫೇಕ್ ಟ್ರೋಲ್ ಪೇಜ್ ಕ್ರಿಯೇಟ್ ಮಾಡಿ ಎಲ್ಲರನ್ನು ಟ್ರೋಲ್ ಮಾಡುತ್ತಿದ್ದಾರೆ ಎಂದು ಪ್ರಥಮ್ ಆರೋಪಿಸಿದ್ದಾರೆ. "ಯಾರು ಫೇಕ್ ಪೇಜ್ ಕ್ರಿಯೇಟ್ ಮಾಡಿಕೊಂಡು ಸುದೀಪ್ ಸರ್, ಯಶ್ ಸರ್ ಸೇರಿದಂತೆ ಎಲ್ಲರನ್ನು ಟ್ರೋಲ್ ಮಾಡಿಸುತ್ತಿದ್ದಾರೆ. ಇನ್ನು ಮುಂದೆ ಅದೆಲ್ಲಾ ನಿಲ್ಲಬೇಕು. ದರ್ಶನ್ ಸರ್ ನೀವಲ್ಲ, ನಿಮ್ಮ ಜೊತೆ ಬ್ಯಾರಕ್‌ನಲ್ಲಿ ಇದ್ದವರು ಮಾಡ್ತಿದ್ದಾರೆ. ನೀವು ಬಂದು ಹೇಳಬೇಕು, ಎಲ್ಲಾ ನಿಲ್ಲಬೇಕು" ಎಂದಿದ್ದಾರೆ.

ಈಗ ಪೊಲೀಸರಿಗೆ ಲಿಖಿತ ದೂರು ನೀಡಿದ್ದೇನೆ ಎಂದು ಪ್ರಥಮ್ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ. "ದೊಡ್ಡ ಬಳ್ಳಾಪುರದ ಕಾರ್ಯಕ್ರಮದಲ್ಲಿ ಏನಾಯ್ತು ಅಂದ್ರೆ, ನನ್ನನ್ನು ಕರ್ಕೊಂಡು ಹೋಗಿ ಕೂರಿಸಿಕೊಂಡ್ರು. ಅವಾಜ್ ಹಾಕಿದ್ರು. ಏನೋ ನಮ್ಮ ಬಾಸ್ ಬಗ್ಗೆ ಏನೇನೋ ಮಾತಾಡ್ತೀಯಾ ಅಂದ್ರು, ನಾನು ಆ ವೀಡಿಯೋ ಸರಿಯಾಗಿ ನೋಡಿ, ನಾನು ಹೇಳಿರುವುದು ಅಂದಾಭಿಮಾನಿಗಳಿಗೆ ಅಂದೆ. ಅಷ್ಟರಲ್ಲಿ ಒಬ್ಬ ತಂದು ಕೊಟ್ಟ. ಮುಂದೆ ಇಟ್ರು. ನನಗೆ ವಾತಾವರಣ ಹದ ತಪ್ಪುತ್ತಿದೆ ಎನಿಸಿತು. ಆಗ ಒಮ್ಮೆ ರೇಣುಕಾಸ್ವಾಮಿ ಕಣ್ಮುಂದೆ ಬಂದು ಹೋದಂತೆ ಆಯ್ತು. ಬಳಿಕ ಬೆದರಿಕೆ ಹಾಕಿದ್ರು" ಎಂದು ಪ್ರಥಮ್ ವಿವರಿಸಿದ್ದಾರೆ.
ನನಗೆ ಬೆದರಿಕೆ ಹಾಕಿದವ್ರು ದರ್ಶನ್ ಸರ್ ಜೊತೆ ಜೈಲಿನಲ್ಲಿ ಬ್ಯಾರಕ್‌ನಲ್ಲಿ ಇದ್ದವರು ಎಂದು ಪ್ರಥಮ್ ಹೇಳಿದ್ದಾರೆ. "ನನ್ನನ್ನು ಸಿಕ್ಕಾಪಟ್ಟೆ ಟ್ರೋಲ್ ಮಾಡಿಸುತ್ತಿದ್ದಾರೆ. ಮಾತೆತ್ತಿದ್ದರೆ ನಮ್ ಬಾಸ್‌ದು ಏನು ಕಿತ್ಕೊಳ್ಳೋಕೆ ಆಗಲ್ಲ ಅಂತಾರೆ. ಏನ್ ಸಾರ್ ಕಿತ್ಕೊಳ್ಳೋದು. ನಿಮ್ಮದು ವಿಗ್, ಆ ವಿಗ್ ಅಲ್ಲಿ ಏನ್ ಕಿತ್ಕೊಳ್ಳಿ, ಗಡ್ಡ, ಮೀಸೆ ಬಿಡಲ್ಲ, ಕಿತ್ಕೊಳ್ಳೋಕೆ" ಎಂದು ಪ್ರಥಮ್ ವ್ಯಂಗ್ಯವಾಡಿದ್ದಾರೆ.
ಎಲ್ಲೆ ಮೀರಿದೆ. ವೆಪನ್ ತೆಗೆದು ಬೆದರಿಸಿದ ಮೇಲೆ ಕೂಡ ಸುಮ್ಮನಿರಲು ಸಾಧ್ಯವಿಲ್ಲ ಅದಕ್ಕೆ ದೂರು ಕೊಟ್ಟಿದ್ದೇನೆ. ನೀವು ಬಂದು ಮಾತನಾಡುವವರೆಗೂ ನಾನು ಉಪವಾಸ ಮುಂದುವರೆಸುತ್ತೇನೆ ಎಂದು ಪ್ರಥಮ್ ಹೇಳಿದ್ದಾರೆ. ಕಳೆದ ವರ್ಷ ರೇಣುಕಾಸ್ವಾಮಿ ಪ್ರಕರಣದಲ್ಲಿ ನಟ ದರ್ಶನ್ ಬಂಧನವಾಗಿತ್ತು. ಅನ್ನಪೂರ್ಣೇಶ್ವರಿ ಪೊಲೀಸ್ ಠಾಣೆಯಲ್ಲಿ ವಿಚಾರಣೆ ನಡೆಯುತ್ತಿತ್ತು. ಈ ವೇಳೆ ಸಾಕಷ್ಟು ಜನ ದರ್ಶನ್ ಅಭಿಮಾನಿಗಳು ಪೊಲೀಸ್ ಠಾಣೆ ಮುಂದೆ ಜಮಾಯಿಸಿ ದರ್ಶನ್ ಪರ ಜೈಕಾರ ಹಾಕಿದ್ದರು. ಈ ವೇಳೆ ಪ್ರಥಮ್ ಮಾಧ್ಯಮವೊಂದಕ್ಕೆ ಪ್ರತಿಕ್ರಿಯಿಸಿದ್ದರು.
" ಅನ್ನಪೂರ್ಣೇಶ್ವರಿ ನಗರದ ಠಾಣೆ ಮುಂದೆ ಇವರಿಗೇನು (ಅಭಿಮಾನಿಗಳಿಗೆ) ಕೆಲಸ. ಠಾಣೆ ಮುಂದಿರುವ ಬೇವರ್ಸಿಗಳಿಗೆ ಮನೆಯಲ್ಲಿ ಅವರಮ್ಮನಿಗೆ ಒಂದೊತ್ತು ಹಿಟ್ಟು ಕೊಡಿಸಲು ಯೋಗ್ಯತೆ ಇಲ್ಲ. ನನಗೆ ಒಂದು ವಾರ ಪೊಲೀಸ್ ಪೇದೆ ಆಗುವ ಅವಕಾಶ ಕೊಟ್ಟು ನೋಡಿ ಎಲ್ಲರನ್ನು ದೊಣ್ಣೆ ಹಿಡಿದು ಹೊಡೆದು ಓಡಿಸುತ್ತೇನೆ" ಎಂದಿದ್ದರು. ಇದು ದರ್ಶನ್ ಅಭಿಮಾನಿಗಳನ್ನು ಕೆರಳಿಸಿತ್ತು. ಅಂದಿನಿಂದ ಪ್ರಥಮ್ ವಿರುದ್ಧ ಟ್ರೋಲ್ ಮಾಡುತ್ತಿದ್ದಾರೆ.


Click it and Unblock the Notifications











