ಹಣ ಕೊಟ್ಟರಷ್ಟೇ ಕಾರ್ಯಕ್ರಮಕ್ಕೆ ಬರ್ತಾರಂತೆ ಪ್ರಥಮ್
Recommended Video

ಬಿಗ್ ಬಾಸ್ ರಿಯಾಲಿಟಿ ಶೋ ನಲ್ಲಿ ಭಾಗವಹಿಸಿ ಪ್ರಖ್ಯಾತಿ ಪಡೆದುಕೊಂಡ ನಟ ಹಾಗೂ ನಿರ್ದೇಶಕ ಪ್ರಥಮ್ ಇನ್ನು ಮುಂದೆ ಹಣ ಕೊಟ್ಟರಷ್ಟೇ ಕಾರ್ಯಕ್ರಮಗಳಿಗೆ ಬರುತ್ತಾರಂತೆ. ತಾವು ಭಾಗಿ ಆಗುವ ಯಾವುದೇ ಸಭೆ, ಸಮಾರಂಭಗಳಿಗೆ ದುಡ್ಡು ಕೊಟ್ಟರಷ್ಟೇ ಬರುವುದಾಗಿ ಪ್ರಥಮ್ ಹೇಳಿಕೆ ನೀಡಿದ್ದಾರೆ.
ಹಾಗಾದರೆ ಪ್ರಥಮ್ ಇಷ್ಟು ದಿನ ಹಣ ತೆಗೆದುಕೊಂಡು ಸಮಾರಂಭಗಳಲ್ಲಿ ಕಾಣಿಸಿಕೊಳ್ಳುತ್ತಿದ್ದರಾ? ಈ ವಿಚಾರ ಹೊರಗೆ ಎಲ್ಲೂ ಕೇಳಿಯೇ ಬರಲಿಲ್ಲ. ಬಿಗ್ ಬಾಸ್ ನಿಂದ ಬಂದ ಹಣವನ್ನೇ ಬೇರೆಯವರಿಗೆ ದಾನ ಮಾಡಿದ್ದ ಪ್ರಥಮ್ ಈಗ ಯಾಕೆ ಹಣದ ಬಗ್ಗೆ ಚರ್ಚೆ ಮಾಡುತ್ತಿದ್ದಾರೆ? ಅನ್ನೋ ಪ್ರಶ್ನೆ ಎಲ್ಲರ ತಲೆಯಲ್ಲೂ ಓಡುವುದಕ್ಕೆ ಶುರುವಾಗಿದೆ.
ಆದರೆ ಪ್ರಥಮ್ ಹಣ ಡಿಮ್ಯಾಂಡ್ ಮಾಡುತ್ತಿರುವುದು ಅವರಿಗಾಗಿ ಅಲ್ಲ. ಕಾರ್ಯಕ್ರಮಕ್ಕೆ ಬರಲು ದುಡ್ಡು ಕೇಳುತ್ತಿರುವುದರ ಹಿಂದೆ ಬೇರೆಯದ್ದೇ ಉದ್ದೇಶ ಇದ್ಯಂತೆ. ಹಾಗಾದರೆ ಪ್ರಥಮ್ ಹಣ ಇಲ್ಲದೆ ಕಾರ್ಯಕ್ರಮಕ್ಕೆ ಬರುವುದಿಲ್ಲ ಎನ್ನುತ್ತಿರುವುದು ಏಕೆ? ಸಂಪೂರ್ಣ ಮಾಹಿತಿಗಾಗಿ ಮುಂದೆ ಓದಿ

ಹಣ ಕೊಟ್ಟರಷ್ಟೇ ಕಾರ್ಯಕ್ರಮಕ್ಕೆ ಹಾಜರ್
ನಟ ಪ್ರಥಮ್ ಇನ್ನು ಮುಂದೆ ಹಣ ಪಡೆಯದೇ ಯಾವುದೇ ಸಮಾರಂಭದಲ್ಲಿ ಭಾಗಿ ಆಗುವುದಿಲ್ಲ ಎಂದು ನಿರ್ಧಾರ ಮಾಡಿದ್ದಾರೆ. ಕಾರಣ ಇಷ್ಟೇ ಮಂಗಳೂರಿನ ಬಳಿ ಇರುವ ಆಶ್ರಮಕ್ಕೆ ತಮಗೆ ಬರುವ ಹಣದಲ್ಲಿ ಅರ್ಧ ನೀಡಲು ಪ್ರಥಮ್ ನಿರ್ಧರಿಸಿದ್ದಾರೆ.

ಬೇದ-ಬಾವವಿಲ್ಲದ ಆಶ್ರಮ
ಮಂಗಳೂರಿನ ಆಶ್ರಮದಲ್ಲಿ ಹೆಚ್ ಐ ವಿ ಸೋಂಕಿತ ಮಕ್ಕಳನ್ನ ನೋಡಿಕೊಳ್ಳುತ್ತಿದ್ದು .ಇವರ ಸಂಪೂರ್ಣ ಜವಾಬ್ದಾರಿ ರಷೀದ್ ವಿಟ್ಲ ನೋಡಿಕೊಳ್ಳುತ್ತಿದ್ದಾರೆ. ಯಾವುದೇ ಬೇದ ಬಾವವಿಲ್ಲದೆ ಮಕ್ಕಳನ್ನ ಸಾಕಲಾಗುತ್ತಿದೆ.

ಹೆಚ್ ಐ ವಿ ಮಕ್ಕಳಿಗೆ ಆಶ್ರಯ ನೀಡಿರುವ ತಬಸ್ಸುಮ್
ತಬಸ್ಸುಮ್ ಅವರು ಈ ಮಕ್ಕಳಿಗೆ ತಾಯಿ ಸ್ಥಾನದಲ್ಲಿ ನಿಂತು ನೋಡಿಕೊಳ್ಳುತ್ತಿದ್ದಾರೆ. ಆಶ್ರಮಕ್ಕೆ ಭೇಟಿ ನೀಡಿರುವ ಪ್ರಥಮ್ ಇನ್ನು ಮುಂದೆ ಕಾರ್ಯಕ್ರಮಗಳಿಗೆ ಹಣ ಪಡೆದುಕೊಂಡು ಭಾಗವಹಿಸಿ ಅದರಿಂದ ಬರುವ ಅರ್ಧ ಹಣ ತಬಸ್ಸುಮ್ ಅವರಿಗೆ ನೀಡಲು ಮುಂದಾಗಿದ್ದಾರೆ.

ಎಚ್ ಐ ವಿ ಮಕ್ಕಳ ಶಿಕ್ಷಣಕ್ಕೆ ಪ್ರಥಮ್ ಸಾಥ್
ಈಗಾಗಲೇ ಮಕ್ಕಳ ಶಿಕ್ಷಣಕ್ಕೆ ಸಹಾಯ ಮಾಡಿರುವ ಪ್ರಥಮ್ ಅಭಿಮಾನಿಗಳು ಮಕ್ಕಳಿಗೆ ಸಹಾಯ ಮಾಡುವಂತೆ ಮನವಿ ಮಾಡಿದ್ದಾರೆ. ಪ್ರಥಮ್ ಅವರ ಈ ನಿರ್ಧಾರಕ್ಕೆ ಚಿತ್ರರಂಗದ ಕಡೆಯಿಂದಲೂ ಮೆಚ್ಚುಗೆ ವ್ಯಕ್ತವಾಗಿದೆ.


Click it and Unblock the Notifications











