ದೊಡ್ಡ ಮನೆತನದ ಹುಡುಗಿಯೊಂದಿಗೆ ನಡೆದಿದೆ ಪ್ರಥಮ್ ಮದುವೆ ಮಾತುಕತೆ: ಮದುವೆ ಯಾವಾಗ?

ತಮ್ಮ ಮದುವೆ ಬಗ್ಗೆ ಬಿಗ್‌ಬಾಸ್ ಪ್ರಥಮ್ ಮಾತನಾಡಿದ್ದಾರೆ. 'ಕನ್ನಡ ಫಿಲ್ಮೀಬೀಟ್' ಆಯೋಜಿಸಿದ್ದ ಫೇಸ್‌ಬುಕ್‌ ಲೈವ್ ನಲ್ಲಿ ಅಭಿಮಾನಿಗಳ ಪ್ರಶ್ನೆಗೆ ಮನಬಿಚ್ಚಿ ಮಾತನಾಡಿದ ಅವರು ತಮ್ಮ ಮದುವೆ ಬಗ್ಗೆಯೂ ವಿವರಗಳನ್ನು ಹಂಚಿಕೊಂಡರು.

'ಪ್ರಥಮ್ ನಿಮ್ಮ ಮದುವೆ ಯಾವಾಗಾ? ಮಠ ಏನಾದರೂ ಸೇರುವ ಐಡಿಯಾ ಇದೆಯಾ? ಎಂದು ಅಭಿಮಾನಿಯೊಬ್ಬರು ಪ್ರಶ್ನೆ ಕೇಳಿದರು. ಇದಕ್ಕೆ ಉತ್ತರಿಸಿದ ಪ್ರಥಮ್ ತಮ್ಮ ಮದುವೆ ಮಾತುಕತೆ ನಡೆಯುತ್ತಿರುವುದಾಗಿ ತಿಳಿಸಿದರು.

ದೊಟ್ಟ ಕುಟುಂಬವೊಂದರ, ದೊಡ್ಡ ಮನೆತನದ ಹೆಣ್ಣುಮಗಳೊಂದಿಗೆ ಪ್ರಥಮ್ ಮದುವೆ ಆಗುವ ಸಾಧ್ಯತೆ ಇದ್ದು, ಮಾತುಕತೆ ಸದ್ಯಕ್ಕೆ ಜಾರಿಯಲ್ಲಿದೆಯಂತೆ. ಆದರೆ ಮಾತುಕತೆ ನಡುವೆ ಸಣ್ಣ ಸಮಸ್ಯೆಯೂ ಎದುರಾಗಿದೆಯೆಂದಿದ್ದಾರೆ ಪ್ರಥಮ್. ಏನದು ಸಮಸ್ಯೆ? ಮುಂದೆ ಓದಿ...

ಪ್ರಥಮ್ ಗೆ ಬೇಡಿಕೆಗೆ ಒಪ್ಪುತ್ತಿಲ್ಲ ಹೆಣ್ಣಿನ ಕುಟುಂಬ

ಪ್ರಥಮ್ ಗೆ ಬೇಡಿಕೆಗೆ ಒಪ್ಪುತ್ತಿಲ್ಲ ಹೆಣ್ಣಿನ ಕುಟುಂಬ

ಮದುವೆ ಅತ್ಯಂತ ಸರಳವಾಗಿ ಆಗಬೇಕು ಎಂಬುದು ಪ್ರಥಮ್ ಆಸೆ, ಆದರೆ ಇದು ಹೆಣ್ಣಿನ ಕುಟುಂಬದವರಿಗೆ ಇಷ್ಟವಿಲ್ಲ, ದೊಡ್ಡ ಬಳಗ ಹೊಂದಿರುವ ಅವರು ಅದ್ಧೂರಿಯಾಗಿ ಮದುವೆ ಮಾಡಿಕೊಳ್ಳಬೇಕು ಎಂಬ ಆಸೆ ವ್ಯಕ್ತಪಡಿಸಿದ್ದು, ಅದಕ್ಕಾಗಿ ಪಟ್ಟು ಹಿಡಿದಿದ್ದಾರಂತೆ.

ಪ್ರಥಮ್ ಆಸೆ ಏನು?

ಪ್ರಥಮ್ ಆಸೆ ಏನು?

ಧರ್ಮಸ್ಥಳ ಮಂಜುನಾಥನ ಸನ್ನಿಧಿಯಲ್ಲಿ ಅತ್ಯಂತ ಸರಳವಾಗಿ ಮದುವೆ ಆಗಬೇಕು ಎಂಬುದು ಪ್ರಥಮ್ ಆಸೆ. 100 ಜನಕ್ಕೆ ಮಿಗಿಲಾಗದಂತೆ ಜನರು ಮದುವೆಗೆ ಬರಬೇಕು, ಅಷ್ಟೇ ಮಂದಿಗೆ ಊಟ ಹಾಕಿಸಬೇಕು, ಅನಗತ್ಯ ಖರ್ಚು-ವೆಚ್ಚಗಳಿರಬಾರದು, ಅನಗತ್ಯ ಆಡಂಬರಗಳು ಇರಬಾರದು ಎಂಬುದು ಪ್ರಥಮ್ ಆಸೆ, ಆದರೆ ಇದು ಹೆಣ್ಣಿನ ಮನೆಯವರಿಗೆ ಇಷ್ಟವಿಲ್ಲ.

ನಟಭಯಂಕರ ಮುಗಿದ ಮೇಲೆ ಮದುವೆ

ನಟಭಯಂಕರ ಮುಗಿದ ಮೇಲೆ ಮದುವೆ

ನಟಭಯಂಕರ ಶೂಟಿಂಗ್ ಪ್ರಾರಂಭವಾದ ನಂತರ ಮದುವೆ ಮಾತುಕತೆ ಪ್ರಾರಂಭವಾಗಿದೆ. ಮದುವೆ ಮಾಡಿಕೊಡುವ ಕುರಿತು ಚರ್ಚೆಗಳು ನಡೆದ ಕಾರಣ ಮದುವೆ ಮುಂದಕ್ಕೆ ಹೋಗುತ್ತಿದೆ. ನಟಭಯಂಕರ ಸಿನಿಮಾ ಮುಗಿದ ಮೇಲೆ ಎಲ್ಲವನ್ನೂ ಇತ್ಯರ್ಥಪಡಿಸಿ ಮದುವೆ ಆಗಿಬಿಡುತ್ತೇನೆ ಎಂದು ಪ್ರಥಮ್ ಹೇಳಿದ್ದಾರೆ.

ಮದುವೆ ಆದ ಮೇಲೆ ಎಲ್ಲಿರುತ್ತಾರೆ ಪ್ರಥಮ್

ಮದುವೆ ಆದ ಮೇಲೆ ಎಲ್ಲಿರುತ್ತಾರೆ ಪ್ರಥಮ್

ಪ್ರಥಮ್‌ ಗೆ ಬೆಂಗಳೂರು ಸ್ವಲ್ಪವೂ ಇಷ್ಟವಿಲ್ಲವಂತೆ, ಹಾಗಾಗಿ ಮದುವೆ ಆದ ಮೇಲೆ ಚಾಮರಾಜನಗರ ಜಿಲ್ಲೆಯ ತಮ್ಮ ಹಳ್ಳಿಗೆ ಹೋಗಿಬಿಡುತ್ತಾರಂತೆ. ಬೆಂಗಳೂರಿನ ಬ್ಯುಸಿ ಜೀವನ ನನಗೆ ಇಷ್ಟವಾಗುವುದಿಲ್ಲ, ನಮ್ಮೂರಲ್ಲಿ ಕೃಷಿ ಮಾಡಿಕೊಂಡು, ಕುರಿ ಕಾಯ್ದುಕೊಂಡು ಇದ್ದು ಬಿಡುತ್ತೇನೆ ಎಂದಿದ್ದಾರೆ ಪ್ರಥಮ್.

More from Filmibeat

English summary
Bigg boss Pratham marriage talks going on. He will tie knot soon as he finish Natabayakara shooting.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X