ಯಪ್ಪಾ, ಧ್ರುವ ಸರ್ಜಾ ಭಾವಿ ಪತ್ನಿ ಬಗ್ಗೆ ಪ್ರಥಮ್ ಹೇಳಿದ್ದು ಕೇಳಿ.!
Recommended Video

ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ದಾಂಪತ್ಯ ಜೀವನಕ್ಕೆ ಅಣಿಯಾಗಿದ್ದು, ಬಾಲ್ಯ ಗೆಳತಿಯ ಜೊತೆ ಡಿಸೆಂಬರ್ ತಿಂಗಳಲ್ಲಿ ನಿಶ್ಚಿತಾರ್ಥ ನಡೆಯಲಿದೆ. ದೀರ್ಘಕಾಲದ ಸ್ನೇಹಿತೆ ಪ್ರೇರಣ ಶಂಕರ್ ಜೊತೆ ಪ್ರೀತಿಯಲ್ಲಿದ್ದ ಧ್ರುವ ಸರ್ಜಾ, ಸದ್ಯದಲ್ಲೇ ಹಸೆಮಣೆ ಏರಲಿದ್ದಾರೆ.
ಇದೀಗ, ಧ್ರುವ ಸರ್ಜಾ ಮತ್ತು ಪ್ರೇರಣ ಶಂಕರ್ ಅವರನ್ನ ಬಿಗ್ ಬಾಸ್ ವಿನ್ನರ್ ಪ್ರಥಮ್ ಭೇಟಿ ಮಾಡಿದ್ದಾರೆ. ಎಂದಿನಂತೆ ಭೇಟಿ ಬಳಿಕ ಫೇಸ್ ಬುಕ್ ನಲ್ಲಿ ಸಂತಸ ವ್ಯಕ್ತಪಡಿಸಿರುವ ಪ್ರಥಮ್, ಧ್ರುವ ಮತ್ತು ಧ್ರುವ ಸರ್ಜಾ ಭಾವಿ ಪತ್ನಿ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ.
ನಿನ್ನೆ ರಾತ್ರಿ ಧ್ರುವ ಸರ್ಜಾ ಅವರ ಮನೆಗೆ ಹೋಗಿದ್ದ ಬಿಗ್ ಬಾಸ್ ಪ್ರಥಮ್, ಧ್ರುವ ಬಳಿ ಹಠ ಮಾಡಿ, ಅಲ್ಲಿಂದ ಪ್ರೇರಣ ಅವರ ಮನೆಗೂ ಹೋಗಿದ್ದರಂತೆ. ನಂತರ ಅವರಿಬ್ಬರ ಜೊತೆ ಮಾತನಾಡಿ ಕೆಲವೊತ್ತು ಸಮಯ ಕಳೆದರಂತೆ. ಮುಂದೆ ಏನ್ ಆಯಿತು.? (ಪ್ರಥಮ್ ಅವರು ಬರೆದಿರುವ ಯಥಾವತ್ ಸಾಲನ್ನ ಮುಂದೆ ಪ್ರಕಟ ಮಾಡಲಾಗಿದೆ)

ಸರ್ಪ್ರೈಸ್ ಭೇಟಿ ನೀಡಿದ ಪ್ರಥಮ್
'exclusive pic wit ನಮ್ಮ ಧ್ರುವ ಸರ್ಜಾ & ಪ್ರೇರಣಾಶಂಕರ್ ಅಲಿಯಾಸ್ ಪ್ರೇರಣಾ ಧ್ರುವ ಸರ್ಜಾ....ಧ್ರುವ ಸರ್ಜಾ ಅವ್ರ ಹತ್ತಿರ ಒಂದೇ ಹಠ ನಂದು....ನನಗೆ ಬರೀ ಗೋಡಂಬಿ ಬೇಡ! ದ್ರಾಕ್ಷಿ-ಗೋಡಂಬಿ ಒಟ್ಟಿಗೆ ಬೇಕು ಅಂತ....ನಿಮ್ಮ ಜೊತೆ ಪ್ರೇರಣಾ ಅವ್ರನ್ನ ಮೀಟ್ ಮಾಡ್ಲೇಬೇಕು ನಾನು ಅಂತ... ನೆನ್ನೆ ರಾತ್ರಿ 10:30.... ಪ್ರೀತಿಯ ಸೋದರ ಧ್ರುವ ಅವ್ರೇ car drive ಮಾಡಿಕೊಂಡು ಕರೆದುಕೊಂಡು ಹೋದ್ರು....ಪ್ರೇರಣಾ ಅವ್ರ ಮನೆಗೆ... ಸಕ್ಕತ್ ಹರಟೆ, ತರ್ಲೆ, ತಮಾಷೆ...'

ಧ್ರುವ ಸರ್ಜಾ ತುಂಬಾ ಲಕ್ಕಿ
'ಒಂದು ವಿಷಯ ಹೇಳ್ತೀನಿ...ಪ್ರೇರಣ ಸಕ್ಕತ್ lucky ಅಂತ ಎಲ್ಲಾ ಮಾತಾಡ್ತಿದ್ರು....actually ಧ್ರುವ ಅವ್ರು ಕೂಡ ಲಕ್ಕಿ ನೇ.....ನೆನ್ನೆ ಸಕ್ಕತ್, ತರ್ಲೆ ತಮಾಷೆ....ಪ್ರೇರಣ ಅವ್ರ ಮನೇಲಿ....ಅವ್ರ ಅಪ್ಪ-ಅಮ್ಮ ಎಲ್ಲಾ ಇದ್ರು... ದಯಾನಂದ ಕಾಲೇಜಲ್ಲಿ lecture ಆಗಿರೋ ಪ್ರೇರಣ ಅವ್ರು ಅದೇನ್ ಪಾಠ ಮಾಡಿರ್ತಾರೆ ಧ್ರುವಗೆ ನೋಡೋಣ ಅಂತ ಹೋಗಿದ್ದೆ...ನಿಜಕ್ಕೂ she is a wonderful soul....'

ಪ್ರಚಾರ ಬಯಸದ ಸರಳ ಜೀವನ
'ಪ್ರೇರಣ ಅವ್ರಿಗೆ publicity, media ಇದ್ಯಾವ್ದೂ ಇಷ್ಟ ಆಗಲ್ಲ...ಸಿಂಪಲ್ ಲೈಫ್ ನ ಸಕ್ಕತಾಗಿ lead ಮಾಡ್ತಾ ಇದಾರೆ...ನನ್ನ ಒತ್ತಡಕ್ಕೆ ಮಣಿದು ಧ್ರುವ ಅವ್ರೆ car drive ಮಾಡಿಕೊಂಡು ಕರೆದುಕೊಂಡು ಹೋದ್ರು...ಒಂದತೂ ನಿಜ...ಒಳ್ಳೇ ಜೋಡಿ...made for each other...!! ನಾನು ಅಷ್ಟು ಕಾಲು ಎಳೆದ್ರು ನಗ್ತಾ ಆರಾಮಾಗಿದ್ರು....ಅತಿ ಶೀಘ್ರದಲ್ಲಿ ನಿಶ್ಚಿತಾರ್ಥ... (December 9th) ಮಿಕ್ಕಿದ್ದು ಎಲ್ಲಾ ವಿಷಯ ಅವ್ರೆ ಅತಿ ಶೀಘ್ರದಲ್ಲಿ ಮಾಧ್ಯಮದ ಮುಂದೆ ಬಹಿರಂಗವಾಗಿ ಮದುವೆ ಆಮಂತ್ರಣ ಕೊಡ್ತಾರೆ...ಅಲ್ಲಿ ತನಕ ಆರಾಮಗಿರ್ಲಿ ಬಿಡಿ ಈ ಜೋಡಿ...!!

ಅರ್ಜುನ್ ಸರ್ಜಾ ಬೆಸ್ಟ್ ಫ್ರೆಂಡ್
But ಪ್ರೇರಣಾ ಅವ್ರ parents ಗೆ ಧ್ರುವ ಸರ್ಜಾ ಅಂದ್ರೆ ಸಕ್ಕತ್ ಹೆಮ್ಮೆ!!! Actually ಅಳಿಯಾ ಅಲ್ಲ...ಗೆಳೆಯ ಅವ್ರಿಗೆ...ಅಷ್ಟು ಆಪ್ತರು...!! Last ಒಂದು interesting ವಿಷಯ ಹೇಳ್ತೀನಿ.... ಪ್ರೇರಣ ಅವ್ರ ತಂದೆ ಶಂಕರ್ ಮತ್ತು ಅರ್ಜುನ್ ಸರ್ಜಾ ಅವ್ರು best friends ಗೊತ್ತಾ??

ಮದುವೆ ಯಾವಾಗ.?
ಹೀಗೆ, ಧ್ರುವ ಸರ್ಜಾ ಮತ್ತು ಪ್ರೇರಣ ಅವರನ್ನ ಮೀಟ್ ಮಾಡಿದ ಬಂದ ಪ್ರಥಮ್, ಇಷ್ಟೆಲ್ಲ ಹೇಳಿದ್ದಾರೆ. ಡಿಸೆಂಬರ್ ನಲ್ಲಿ ನಿಶ್ಚಿತಾರ್ಥ ಮಾಡಿಕೊಳ್ಳಲಿರುವ ಆಕ್ಷನ್ ಪ್ರಿನ್ಸ್ ಸದ್ಯ, ಪೊಗರು ಸಿನಿಮಾ ಮಾಡ್ತಿದ್ದಾರೆ. ಇದಾದ ಬಳಿಕ ಮದುವೆ ಅನಿಸುತ್ತೆ.


Click it and Unblock the Notifications











