ಡ್ರೋನ್ ಪ್ರತಾಪ್ ಬಗ್ಗೆ ಸಿನಿಮಾ: ನಾಯಕ ನಟ ಪ್ರಥಮ್!
ಬಿಗ್‌ಬಾಸ್ ಖ್ಯಾತಿಯ 'ಒಳ್ಳೆ ಹುಡುಗ ಪ್ರಥಮ್' ಮತ್ತೊಂದು ಸಿನಿಮಾದಲ್ಲಿ ನಟಿಸಲಿದ್ದಾರೆ. ಈಗಾಗಲೇ ಕೆಲವು ಸಿನಿಮಾಗಳಲ್ಲಿ ನಟಿಸಿರುವ ಪ್ರಥಮ್, ಈಗ ಹೊಸ ಸಿನಿಮಾ ಒಂದನ್ನು ಒಪ್ಪಿಕೊಂಡಿದ್ದು, ಸಿನಿಮಾದ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.
Recommended Video
ವಿ(ಕು)ಖ್ಯಾತ ಡ್ರೋನ್ ಪ್ರತಾಪ್ ಬಗ್ಗೆ ಸಿನಿಮಾ ನಿರ್ಮಾಣವಾಗಲಿದ್ದು, ಸಿನಿಮಾದ ಮುಖ್ಯ ಪಾತ್ರದಲ್ಲಿ ನಟ ಪ್ರಥಮ್ ನಟಿಸಲಿದ್ದಾರೆ.
ಪ್ರಖ್ಯಾತ ನಿರ್ದೇಶಕರು ಈ ಸಿನಿಮಾವನ್ನು ನಿರ್ದೇಶನ ಮಾಡಲಿದ್ದಾರೆ ಎಂದಿರುವ ಪ್ರಥಮ್, ಈ ಸಿನಿಮಾಕ್ಕಾಗಿ ಸುಮಾರು 15 ಕೆ.ಜಿ ತೂಕ ಇಳಿಸಿಕೊಳ್ಳುತ್ತಿದ್ದೇನೆ ಎಂದಿದ್ದಾರೆ.

'ಗೌರಿ-ಗಣೇಶ', 'ಯಾರಿಗೂ ಹೇಳ್ಬೇಡಿ', ಉಂಡು ಹೋದ ಕೊಂಡೂ ಹೋದ ಮಾದರಿಯ ಸಿನಿಮಾ ಇದಾಗಿರಲಿದ್ದು, ಕಾನೂನಾತ್ಮಕವಾಗಿ ಯಾವುದೇ ಸಮಸ್ಯೆ ಆಗದಂತೆ ಪ್ರೇಕ್ಷಕರನ್ನು ನಗಿಸುವ ಜೊತೆಗೆ ಸಂದೇಶವೊಂದನ್ನು ನೀಡುವ ಪ್ರಯತ್ನ ಈ ಸಿನಿಮಾದ ಮೂಲಕ ಆಗಲಿದೆ ಎಂದಿದ್ದಾರೆ ಪ್ರಥಮ್.
'ದೇವರಂಥ ಮನುಷ್ಯ', 'ಎಂಎಲ್‌ಎ' ಸಿನಿಮಾಗಳಲ್ಲಿ ನಟಿಸಿರುವ ಪ್ರಥಮ್. 'ನಟಭಯಂಕರ' ಸಿನಿಮಾದ ಬಿಡುಗಡೆಗೆ ಕಾಯುತ್ತಿದ್ದಾರೆ. ಕೇಲವೇ ದಿನಗಳಲ್ಲಿ ಅವರ ಮುಂದಿನ ಸಿನಿಮಾ ಸೆಟ್ಟೇರಲಿದೆ ಎಂದಿದ್ದಾರೆ ಪ್ರಥಮ್.


Click it and Unblock the Notifications











