For Quick Alerts
  ALLOW NOTIFICATIONS  
  For Daily Alerts

  ಮೇಘನಾ ರಾಜ್ ಬಗ್ಗೆ ಸುಳ್ಳು ಸುದ್ದಿ: ಸಿಡಿದೆದ್ದ ಒಳ್ಳೆ ಹುಡುಗ ಪ್ರಥಮ್

  |

  ಚಿರಂಜೀವಿ ಸರ್ಜಾ ಮತ್ತು ಮೇಘನಾ ರಾಜ್ ದಂಪತಿಯ ಮಗನಿಗೆ ರಾಯನ್ ರಾಜ್ ಸರ್ಜಾ ಎಂದು ನಾಮಕರಣ ಮಾಡಲಾಗಿದೆ. ಈ ಹೆಸರಿಟ್ಟಾಗ ಕೆಲವರು ವಿರೋಧ ಸಹ ವ್ಯಕ್ತಪಡಿಸಿರುವುದುಂಟು. ನಟಿಯ ಕುಟುಂಬದ ಮೇಲೆ ಮತಾಂತರದ ಟೀಕೆಯೂ ಬಂತು. ಅನೇಕರು ಸೋಶಿಯಲ್ ಮೀಡಿಯಾದಲ್ಲಿ ಮೇಘನಾ ವಿರುದ್ಧ ಬೇಸರ ವ್ಯಕ್ತಪಡಿಸಿದರು.

  ಅಲ್ಲಿ ಗಮನಿಸಬೇಕಾದ ಸಂಗತಿ ಅಂದ್ರೆ ಹಿಂದು ಸಂಪ್ರದಾಯದಂತೆ ತೊಟ್ಟಿಲ ಶಾಸ್ತ್ರವೂ ಮಾಡಲಾಯಿತು. ನಂತರ ಕ್ರೈಸ್ತ ಸಂಪ್ರದಾಯದಂತೆ ಚರ್ಚ್‌ನಲ್ಲಿಯೂ ಕಾರ್ಯಕ್ರಮ ನಡೆದಿತ್ತು. ಆದರೂ ಕೆಲವರು ಅಸಮಾಧಾನ ಹೊರಹಾಕಿದ್ದರು. ನಾಮಕರಣ ಶಾಸ್ತ್ರದ ಬಗ್ಗೆ ಕೊಂಕು ಮಾತನಾಡಿದರು.

  ನಾಮಕರಣದ ಬಗ್ಗೆ ಕೊಂಕು ನುಡಿದವರಿಗೆ ಸೂಕ್ತ ಉತ್ತರ ನೀಡಿದ ಮೇಘನಾ ರಾಜ್ನಾಮಕರಣದ ಬಗ್ಗೆ ಕೊಂಕು ನುಡಿದವರಿಗೆ ಸೂಕ್ತ ಉತ್ತರ ನೀಡಿದ ಮೇಘನಾ ರಾಜ್

  ಇದ್ಯಾವುದಕ್ಕೂ ಹೆಚ್ಚು ತಲೆಕೆಡಿಸಿಕೊಳ್ಳದ ಚಿರು ಪತ್ನಿ ಮಗನ ಭವಿಷ್ಯ ನನಗೆ ಮುಖ್ಯ, ಟೀಕೆ-ಟಿಪ್ಪಣಿಗಳಿಗೆ ನಾನು ಉತ್ತರಿಸಲ್ಲ ಎಂದಿದ್ದರು. 'ತಾಯಿಯಾಗಿ ನನ್ನ ಮಗನಿಗೆ ಯಾವುದು ಮುಖ್ಯ ಎನಿಸುತ್ತದೆಯೋ ಅದನ್ನು ಮಾಡುತ್ತೇನೆ. ಎರಡೂ ಸಂಪ್ರದಾಯವನ್ನು ಅವನೇಕೆ ಅನುಸರಿಸಬಾರದು. ಅವನ ಪೋಷಕರು (ಮೇಘನಾ-ಚಿರು) ಅದನ್ನೇ ಮಾಡಿದ್ದರು' ಎಂದು ತಿರುಗೇಟು ಕೊಟ್ಟಿದ್ದರು.

  ಈ ನಡುವೆ ಕೆಲವು ಯೂಟ್ಯೂಬ್ ವಾಹಿನಿಗಳು ಮೇಘನಾ ರಾಜ್‌ಗೆ ಸಂಬಂಧಿಸಿದಂತೆ ಕೆಲವು ವೈಯಕ್ತಿಕ ವಿಚಾರಗಳಲ್ಲಿ ತಪ್ಪು ಮಾಹಿತಿ ನೀಡುತ್ತಿದೆ. ಸುಳ್ಳು ಸುದ್ದಿಗಳನ್ನು ಪ್ರಕಟಿಸುತ್ತಿವೆ. ಈ ಬಗ್ಗೆ ನಾಮಕರಣದ ದಿನ ಮೇಘನಾ ರಾಜ್ ತಾಯಿ ಪ್ರಮೀಳಾ ಜೋಷಾಯ್ ಬೇಸರ ಹೊರಹಾಕಿದ್ದರು. ಇದರ ಮುಂದುವರಿದ ಭಾಗ ಎನ್ನುವಂತೆ ಮೇಘನಾ ಮರುಮದುವೆ ಕುರಿತು ಯೂಟ್ಯೂಬ್ ವಾಹಿನಿಯೊಂದು ವಿಡಿಯೋ ಅಪ್‌ಲೋಡ್ ಮಾಡಿದೆ.

  ಮಗನಿಗೆ ರಾಯನ್ ಎಂದು ಹೆಸರಿಟ್ಟ ಮೇಘನಾ ರಾಜ್: ಹೆಸರಿನ ಅರ್ಥವೇನು?ಮಗನಿಗೆ ರಾಯನ್ ಎಂದು ಹೆಸರಿಟ್ಟ ಮೇಘನಾ ರಾಜ್: ಹೆಸರಿನ ಅರ್ಥವೇನು?

  ಇದನ್ನು ಖಂಡಿಸಿರುವ ಬಿಗ್ ಬಾಸ್ ವಿನ್ನರ್ ಪ್ರಥಮ್ ಕಾನೂನು ಕ್ರಮ ಜರುಗಿಸುವಂತೆ ಮೇಘನಾ ಅವರಿಗೆ ಮನವಿ ಮಾಡಿದ್ದಾರೆ. ''ನಾನ್ ನೋಡಿದ್ರೂ ignore ಮಾಡೋಣ ಅಂತಿದ್ದೆ!! ಬಟ್ ಒಂದು ದಿನದಲ್ಲಿ 2.70 ಲಕ್ಷ ವೀಕ್ಷಣೆ ಕಂಡಿದೆ !! ವೀವ್ಸ್ ಆಗ್ಲಿ, ದುಡ್ಡಾಗ್ಲಿ ಅಂತ ಈ ಮಟ್ಟಕ್ಕೆ ಈ ಯೂಟ್ಯೂಬ್ ಚಾನಲ್ ಇಳಿದಾಗ ಸ್ವಲ್ಪ ಕಾನೂನಾತ್ಮಕವಗಿ ನೋಡಬೇಕಗುತ್ತದೆ! ಮೇಘನಾ ರಾಜ್ ಇಂತಹ ಒಂದು ಚಾನಲ್‌ನ ನೀವು ಕಾನೂನಾತ್ಮಕವಗಿ ಡಿಲೀಟ್ ಮಾಡ್ಸಿದ್ರೆ ಇನ್ನಷ್ಟು ಜನ ಎಚ್ಚೆತ್ತುಕೊಳ್ತರೆ'' ಎಂದು ಸಲಹೆ ಕೊಟ್ಟಿದ್ದಾರೆ.

  Pratham request Meghana Raj to Take Legal Action against Youtube Channel for Spreading Fake News

  ಆ ಯೂಟ್ಯೂಬ್ ಚಾನಲ್‌ನಲ್ಲಿ 'ಎರಡನೇ ಮದುವೆ ಸದ್ಯದಲ್ಲೇ ಆಗ್ತೀನಿ, ಹುಡುಗ ಯಾರು ಅಂತ ಹೇಳ್ತೇನೆ' ಎಂದು ಮೇಘನಾ ಹೇಳಿರುವಂತೆ ಹೆಡ್‌ಲೈನ್ ಬಳಸಲಾಗಿದೆ. ಇದನ್ನು ಖಂಡಿಸಿರುವ ಪ್ರಥಮ್, ಕಾನೂನು ಕ್ರಮ ಜರುಗಿಸುವಂತೆ ಒತ್ತಾಯಿಸಿದ್ದಾರೆ. ಪ್ರಥಮ್ ಅವರ ಈ ಟ್ವೀಟ್‌ಗೆ ನೆಟ್ಟಿಗರು ಬೆಂಬಲ ಸೂಚಿಸಿದ್ದಾರೆ.

  ''ನಾನು ಕೂಡ ಯಾಕೇ ಈ ತರ ಹೇಳಿಕೆ ಕೊಟ್ರು ಅಂತ ನೋಡಿದೆ ಬಟ್ ಅಲ್ಲಿ ಏನು ಇರ್ಲಿಲ ಆದ್ರೆ ಜಸ್ಟ್ ಹೆಡ್‌ಲೈನ್ ನೋಡೋರಿಗೆ ಇದು ತುಂಬಾ ನೋವಾನುಂಟು ಮಾಡುತ್ತೆ ಇಂತಹ ಚಾನಲ್‌ಗಳಿಗೆ ಸರಿಯಾಗಿ ಬುದ್ದಿ ಕಲಿಸ್ಬೇಕು ಆವಾಗಲೇ ಎಲರೂ ತಪ್ಪು ಮಾಹಿತಿಯನ್ನು ಕೊಡಲ್ಲ'' ಎಂದು ವ್ಯಕ್ತಿಯೊಬ್ಬ ಕಾಮೆಂಟ್ ಮಾಡಿದ್ದಾರೆ.

  ಇನ್ನು ಕ್ರಿಶ್ಚಿಯನ್ ಸಂಪ್ರದಾಯದಂತೆ ಮಗನಿಗೆ ಹೆಸರಿಡಲಾಗಿದೆ ಎಂದು ಟೀಕಿಸಿದವರಿಗೆ ಉತ್ತರಿಸಿರುವ ಮೇಘನಾ, ''ರಾಯನ್ ಹೆಸರು ಎಲ್ಲ ಧರ್ಮಕ್ಕೂ ಸೇರಿದ್ದಾಗಿದೆ. ಬೇರೆ-ಬೇರೆ ಧರ್ಮದಲ್ಲಿ ಬೇರೆ ಬೇರೆ ರೀತಿ ಉಚ್ಛಾರಣೆ ಇದೆ, ಆದರೆ ಅರ್ಥ ಒಂದೇ. ರಾಯನ್ ತನ್ನ ತಂದೆ (ಚಿರು) ನಂತೆಯೇ ಬೆಳೆಯಲಿದ್ದಾನೆ. ಚಿರು, ಜನರನ್ನು ಇಷ್ಟಪಡುತ್ತಿದ್ದಿದ್ದು ಅವರ ಒಳ್ಳೆಯತನ ನೋಡಿ, ಅವರು ಎಷ್ಟರ ಮಟ್ಟಿಗೆ ಮಾನವೀಯರು ಎಂಬುದನ್ನು ನೋಡಿ ಅವರು ವ್ಯಕ್ತಿಗಳ ಸಂಘ ಮಾಡುತ್ತಿದ್ದರು. ಚಿರು ಈಗಾಗಲೇ ನಿನ್ನನ್ನು (ರಾಯನ್) ಪ್ರೀತಿಸಲು ಪ್ರಾರಂಭಿಸಿದ್ದಾನೆ. ಅಪ್ಪ-ಅಮ್ಮ ಇಬ್ಬರೂ ನಿನ್ನನ್ನು ಪ್ರೀತಿಸುತ್ತಾರೆ. ಇದು ಆಳುವ ಸಮಯ'' ಎಂದಿದ್ದಾರೆ.

  English summary
  Bigg Boss Kannada Winner Pratham request Meghana Raj to Take Legal Action against Youtube Channel for Spreading Fake News.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X