»   » 'ಬಚ್ಚನ್' ನಿರ್ಮಾಪಕರ ಜೊತೆ ಪ್ರಥಮ್ ಮುಂದಿನ ಸಿನಿಮಾ

'ಬಚ್ಚನ್' ನಿರ್ಮಾಪಕರ ಜೊತೆ ಪ್ರಥಮ್ ಮುಂದಿನ ಸಿನಿಮಾ

Posted By:
Subscribe to Filmibeat Kannada

'ಒಳ್ಳೆ ಹುಡುಗ', 'ಬಿಗ್ ಬಾಸ್' ಪ್ರಥಮ್ ಗೆ ಸಿನಿಮಾಗಳ ಆಫರ್ ಕಮ್ಮಿಯಿಲ್ಲ. ಒಂದರ ಹಿಂದೆ ಮತ್ತೊಂದರಂತೆ ಹೊಸ ಹೊಸ ಚಿತ್ರಗಳು ಬರುತ್ತಲೇ ಇದೆ. ಈಗ ಪ್ರಥಮ್ ಗೆ ಅಕೌಂಟ್ ಗೆ ಇನ್ನೊಂದು ಹೊಸ ಸಿನಿಮಾ ಬಂದು ಸೇರಿದೆ.

ಹೌದು, ಪ್ರಥಮ್ ಅವರ ಮುಂದಿನ ಚಿತ್ರ 'ಬಚ್ಚನ್' ಚಿತ್ರವನ್ನ ನಿರ್ಮಾಣ ಮಾಡಿದ್ದ ಉದಯ್ ಮೆಹ್ತಾ ಅವರ ಜೊತೆ. ಕಥೆ ಕೇಳಿ ಪ್ರಥಮ್ ಸಿಕ್ಕಾಪಟ್ಟೆ ಖುಷಿ ಆಗಿದ್ದಾರಂತೆ. ಇದೊಂದು ಕಾಮಿಡಿ ಥ್ರಿಲ್ಲಿಂಗ್ ಸಬ್ಜೆಕ್ಟ್ ಆಗಿದ್ದು, ಚಿತ್ರದಲ್ಲಿ ಪ್ರಥಮ್ ಅವರದ್ದು ಡೈರಕ್ಟರ್ ಪಾತ್ರವಂತೆ. ಈ ಚಿತ್ರದ ಹೆಸರೇನು? ಈ ಚಿತ್ರವನ್ನ ಯಾರು ನಿರ್ದೇಶನ ಮಾಡಲಿದ್ದಾರೆ ಎಂಬುದು ಇನ್ನು ಪಕ್ಕಾ ಆಗಿಲ್ಲ.

Pratham's Next With Bachchan Movie Producers

ಅಂದ್ಹಾಗೆ ಈ ಚಿತ್ರ ಬಿಗ್ ಬಜೆಟ್ ಸಿನಿಮಾವಾಗಿರಲಿದೆಯಂತೆ. ಸದ್ಯ, ಇಷ್ಟು ಮಾಹಿತಿ ಹಂಚಿಕೊಂಡಿರುವ ಪ್ರಥಮ್, 'ದೇವ್ರಂಥ ಮನುಷ್ಯ' ಹಾಗೂ 'ಎಂ.ಎಲ್.ಎ' ಚಿತ್ರಗಳಲ್ಲಿ ಅಭಿನಯಿಸುತ್ತಿದ್ದಾರೆ. ಅದರ ಜೊತೆ ಕಲರ್ಸ್ ವಾಹಿನಿಯಲ್ಲಿ ಪ್ರಸಾರವಾಗುವ 'ಸಂಜು ಮತ್ತು ನಾನು' ಧಾರವಾಹಿಯಲ್ಲಿ ಅಭಿನಯಿಸುತ್ತಿದ್ದಾರೆ.

English summary
Bigg Boss Pratham Confirms, His Next Movie With Sudeep Starrer 'Bachchan ' Movie Makers.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada