ಪ್ರಥಮ್ ಮನವಿಗೆ ಸ್ಪಂದಿಸಿದ ಸಾ.ರಾ.ಮಹೇಶ್: ದಿನಸಿ ಕಿಟ್ ವಿತರಣೆ
ಕೊರೊನಾ ಸಮಯದಲ್ಲಿ ಸಾಕಷ್ಟು ಸಮಾಜಮುಖಿ ಕಾರ್ಯಗಳಲ್ಲಿ ತನ್ನನ್ನು ತಾನು ತೊಡಗಿಸಿಕೊಂಡಿರುವ ಬಿಗ್ ಬಾಸ್ ಖ್ಯಾತಿಯ ಪ್ರಥಮ್, ಇಂದು ಚಿತ್ರರಂಗದ ಕೆಲವು ತಂತ್ರಜ್ಞರಿಗೆ ದಿನಸಿ ಕಿಟ್ ವಿತರಣೆ ಮಾಡಿದ್ದಾರೆ.
Recommended Video
ನಟಭಯಂಟರ ಸಿನಿಮಾ ತಂಡ ತುಮಕೂರು, ದಾವಣಗೆರೆ ಮುಂತಾದೆಡೆಗಳಲ್ಲಿ ದಿನಸಿ, ತರಕಾರಿ ವಿತರಣೆ ಕಾರ್ಯವನ್ನು ಈಗಾಗಲೇ ಮಾಡಿದೆ, ಈಗ ಚಿತ್ರರಂಗದ ಸ್ಟಿಲ್ ಕ್ಯಾಮೆರಾಮನ್ ಮತ್ತು ಸಂಬಂಧಿತ ತಂತ್ರಜ್ಞರಿಗೆ ದಿನಸಿ ಕಿಟ್ ವಿತರಿಸಿದ್ದಾರೆ. ಇದಕ್ಕೆ ಶಾಸಕ ಸಾ.ರಾ.ಮಹೇಶ್ ಸಹಾಯ ಮಾಡಿದ್ದಾರೆ.
ಜೆಡಿಎಸ್ ಶಾಸಕ, ಮಾಜಿ ಸಚಿವ ಸಾ.ರಾ.ಮಹೇಶ್ ಅವರಲ್ಲಿ ದಿನಸಿ ಕಿಟ್‌ಗಾಗಿ ಪ್ರಥಮ್ ಮನವಿ ಮಾಡಿದ್ದು, ಕೂಡಲೇ ಸ್ಪಂದಿಸಿದ ಸಾ.ರಾ.ಮಹೇಶ್ ನೂರು ದಿನಸಿ ಕಿಟ್‌ಗಳನ್ನು ನೀಡಿದ್ದಾರೆ.

ಕಿಟ್ ನೀಡಿದ ಸಾ.ರಾ.ಮಹೇಶ್
ಸಾ.ರಾ.ಮಹೇಶ್ ಅವರು ನೀಡಿದ ದಿನಸಿ ಕಿಟ್‌ಗಳನ್ನು ಪ್ರಥಮ್ ಈಗಾಗಲೇ ಚಿತ್ರರಂಗದ ಬಹಳಷ್ಟು ವರ್ಗಗಳಿಗೆ ರೇಷನ್ ತಲುಪಿಸಿದ್ದಾರೆ. ಪಿ.ಆರ್.ಓ ಗಳಿಗೆ, ಮೇಕಪ್ ನ ಕಲಾವಿದರಿಗೆ, ಮಂಗಳಮುಖಿಯರಿಗೆ ಅಗತ್ಯ ರೇಷನ್ ನೀಡಿದ್ದಾರೆ.

ಸಾ.ರಾ.ಮಹೇಶ್ ಗೆ ಧನ್ಯವಾದ ಹೇಳಿದ ಪ್ರಥಮ್
'ಕನ್ನಡ ಫಿಲ್ಮೀಬೀಟ್' ಜೊತೆ ಮಾತನಾಡಿದ ಪ್ರಥಮ್ ಕಿಟ್ ನೀಡಿದ ಶಾಸಕ ಸಾ.ರಾ.ಮಹೇಶ್ ಅವರಿಗೆ ಧನ್ಯವಾದ ತಿಳಿಸಿದರು. ಚಿತ್ರರಂಗದೊಂದಿಗೆ ಸಂಬಂಧ ಇಲ್ಲದ ಹೊರತಾಗಿಯೂ ಅವರು ಚಿತ್ರರಂಗದ ದಿನಗೂಲಿ ನೌಕರರ, ಬಡ ತಂತ್ರಜ್ಞರಿಗೆ ನೆರವಾಗುವ ಮನಸ್ಸು ಮಾಡಿದರು ಎಂದರು.

ಸಂಕಷ್ಟಕ್ಕೆ ಸ್ಪಂದಿಸುತ್ತಿರುವ ನಟಭಯಂಕರ ತಂಡ
ಪ್ರಥಮ್ ನಾಯಕರಾಗಿ ನಟಿಸಿರುವ ನಟಭಯಂಕರ ಸಿನಿಮಾದ ತಂಡ ಕೊರೊನಾ ಸಮಯದಲ್ಲಿ ಸಾಕಷ್ಟು ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಸಿಕೊಂಡಿದೆ. ಹಣ ಸಹಾಯದ ಜೊತೆಗೆ, ದಿನಸಿ, ತರಕಾರಿ ವಿತರಣೆಗಳನ್ನು ಮಾಡಿದೆ. ಬೇರೆ ಬೇರೆ ಜಿಲ್ಲೆಗಳಲ್ಲೂ ಸಹ ನೆರವು ವಿಸ್ತರಿಸಿದ್ದಾರೆ.

ಲಾಕ್‌ಡೌನ್ ನಂತರ ತೆರೆಗೆ ಬರಲಿದೆ ನಟಭಯಂಕರ
ಪ್ರಥಮ್ ಅವರ ನಟಭಯಂಕರ ಸಿನಿಮಾ ಬಿಡುಗಡೆಗೆ ತಯಾರಾಗಿದೆ. ಅವರೇ ನಿರ್ದೇಶಿಸಿ, ನಟಿಸಿರುವ ಚಿತ್ರ ಇದಾಗಿದ್ದು, ಲಾಕ್‌ಡೌನ್ ಮುಗಿದ ನಂತರ ಪ್ರಥಮ್ ಅವರ ಸಿನಿಮಾ ತೆರೆಗೆ ಬರಲಿದೆ.


Click it and Unblock the Notifications











