»   » ನ್ಯಾಷನಲ್ ಕ್ರಶ್ ಮರೆತು ಬಿಡಿ, ಈಗ ಬರ್ತಾರೆ ಇಂಟರ್ ನ್ಯಾಷನಲ್ ಕ್ರಶ್ !

ನ್ಯಾಷನಲ್ ಕ್ರಶ್ ಮರೆತು ಬಿಡಿ, ಈಗ ಬರ್ತಾರೆ ಇಂಟರ್ ನ್ಯಾಷನಲ್ ಕ್ರಶ್ !

Posted By:
Subscribe to Filmibeat Kannada
ಪ್ರಿಯಾ ಬಗ್ಗೆ ಪ್ರಥಮ್ ಹೇಳಿದ್ದೇನು ? | Filmibeat Kannada

ಪ್ರಿಯಾ ವಾರಿಯರ್ ತನ್ನ ಒಂದೇ ಒಂದು ಹಾಡಿನ ಚಲಕ್ ಮೂಲಕ ನ್ಯಾಷನಲ್ ಕ್ರಶ್ ಆಗಿದ್ದಾರೆ. ಪ್ರಿಯಾ ಮೋಡಿಗೆ ಎಷ್ಟೊ ಜನರು ಮರುಳಾಗಿದ್ದಾರೆ. ಒಂದು ಕಡೆ ಕನ್ನಡಕ್ಕೆ ಈ ಹುಡುಗಿಯನ್ನು ಕರೆತರುವ ಪ್ರಯತ್ನ ನಡೆಯುತ್ತಿದೆ. ಇತ್ತ 'ಬಿಗ್ ಬಾಸ್' ಖ್ಯಾತಿಯ ಪ್ರಥಮ್ ಇದೀಗ ಪ್ರಿಯಾ ಬಗ್ಗೆ ಮಾತನಾಡಿದ್ದಾರೆ.

ಪ್ರಥಮ್ ತಮ್ಮ ಫೇಸ್ ಬುಕ್ ಖಾತೆಯಲ್ಲಿ ನ್ಯಾಷನಲ್ ಕ್ರಶ್ ಪ್ರಿಯಾ ಬಗ್ಗೆ ಬರೆದುಕೊಂಡಿದ್ದಾರೆ. ''ಎಲ್ಲರಿಗೂ ನಮಸ್ಕಾರ. ನಾನು ನೋಡ್ತಾನೇ ಇದೀನಿ ಪ್ರಿಯಾ ಪ್ರಕಾಶ್ ವಾರಿಯರ್ ನ ನ್ಯಾಷನಲ್ ಕ್ರಶ್ ಅಂತ ಕೊಂಡಾಡಿದ್ದೇ ಕೊಂಡಾಡಿದ್ದು... ಸ್ವಲ್ಪ ಕಾಯಿರಿ...ನಾಳಿದ್ದು ನನ್ನ ಬರ್ತ್ ಡೇ. ಅದಕ್ಕೆ ಇಂಡರ್ ನ್ಯಾಷನಲ್ ಕ್ರಶ್ ನ ಕರ್ಕೊಂಡು ಬರ್ತೀನಿ. ಎಲ್ಲಾ ಹುಡುಗರು ಎದೆ ಒಡ್ಕೊಂಡು ಸಾಯೋದು ಗ್ಯಾರಂಟಿ.'' ಎಂದು ಪ್ರಥಮ್ ಹೇಳಿದ್ದಾರೆ.

Pratham spoke about Priya Prakash Varrier

ಅಂದಹಾಗೆ, ಈ ಹಿಂದೆ ಇದೇ ರೀತಿ ಹೇಳಿ ಅನೇಕ ಬಾರಿ ಪ್ರಥಮ್ ಅದನ್ನು ಮಾಡಿದ್ದಾರೆ. ತಮ್ಮ 'ಬಿಲ್ಡಪ್' ಚಿತ್ರಕ್ಕೆ ದೇಶದ ಪ್ರಮುಖ ವ್ಯಕ್ತಿಯ ಬಳಿ ಕ್ಲಾಪ್ ಮಾಡಿಸುತ್ತೇನೆ ಎಂದು ಹೇಳಿ ಅದೇ ರೀತಿಯೇ ಎಲ್.ಕೆ.ಅಡ್ವಾಣಿ ಬಳಿ ಚಿತ್ರದ ಶುಭಾರಂಭ ಮಾಡಿಸಿದ್ದರು. ಅದೇ ಕಾರಣಕ್ಕೆ ಪ್ರಥಮ್ ಈ ಬಾರಿ ಮತ್ತೆ ಏನು ಮಾಡ್ತಾರೆ ಎನ್ನುವ ಕುತೂಲಕ ಇದೆ. ಪ್ರಥಮ್ ಕರೆ ತರುತ್ತಿರುವ ಆ ಸುರಸುಂದರಿ ಇಂಟರ್ ನ್ಯಾಷನಲ್ ಕ್ರಶ್ ಯಾರು ಎನ್ನುವ ನಿರೀಕ್ಷೆಯೂ ಜೋರಾಗಿದೆ.

English summary
Bigg Boss Kannada 4 winner Pratham spoke about Malayalam young actress Priya Prakash Varrier.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada