ಪ್ರಥಮ್ ಪ್ರಶ್ನೆಗೆ ಉಪೇಂದ್ರ ಕೊಟ್ಟರು ಆತ್ಮವಿಶ್ವಾಸದ ಉತ್ತರ

By Naveen

Recommended Video

ರಿಯಲ್ ಸ್ಟಾರ್‌ನ್ನು ಬಿಟ್ಟಿಲ್ಲ ಪ್ರಥಮ್ ಪ್ರಶ್ನೆಗಳು | Filmibeat Kannada

ನಟ ಉಪೇಂದ್ರ ತಮ್ಮ ಸಿನಿಮಾಗಳನ್ನು ಸೈಡ್ ಗೆ ಇಟ್ಟು ಕೆಪಿಜೆಪಿ (ಕರ್ನಾಟಕ ಪ್ರಜ್ಞಾವಂತ ಜನತಾ ಪಕ್ಷ) ಶುರು ಮಾಡಿದ್ದರು. ಉಪೇಂದ್ರ ಏನಾದರೂ ಬದಲಾವಣೆ ಮಾಡಬಹುದು ಎನ್ನುವ ನಂಬಿಕೆ ಜನರಲ್ಲಿ ಮೂಡುವಾಗಲೇ ಆ ಪಕ್ಷದಿಂದ ಅವರು ಆಚೆ ಬಂದರು.

ಕೆಪಿಜೆಪಿ ಪಕ್ಷದಿಂದ ಹೊರಬಂದ ಬಳಿಕ ಉಪೇಂದ್ರ 'ಉತ್ತಮ ಪ್ರಜಾಕೀಯ ಪಕ್ಷ' ಕಟ್ಟಿದರು. ಆದರೆ ಕೆಪಿಜೆಪಿ ಬಿಟ್ಟು ಬಂದಿದ್ದು ಉಪೇಂದ್ರ ಅವರ ಸೋಲು ಎಂದು ಅನೇಕರಿಗೆ ಅನಿಸಿತು. ಆದರೆ ಉಪ್ಪಿ ಮಾತ್ರ ಇಂದಿಗೂ ಅದೇ ಆತ್ಮವಿಶ್ವಾಸದಲ್ಲಿ ಇದ್ದಾರೆ. 'ಬಿಗ್ ಬಾಸ್' ಖ್ಯಾತಿಯ ಪ್ರಥಮ್ ಹಂಚಿಕೊಂಡಿರುವ ಈ ಘಟನೆ ಮೂಲಕ ಅದು ತಿಳಿಯುತ್ತದೆ.

ಪ್ರಥಮ್ ಇತ್ತೀಚಿಗಷ್ಟೆ ಉಪೇಂದ್ರ ಅವರನ್ನು ಭೇಟಿ ಮಾಡಿದ್ದ ಒಂದು ಘಟನೆಯನ್ನು ಫೇಸ್ ಬುಕ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಮುಂದೆ ಓದಿ...

ಪ್ರಥಮ್ ಪ್ರಶ್ನೆ

ಪ್ರಥಮ್ ಪ್ರಶ್ನೆ

ಇತ್ತೀಚಿಗೆ ನಟ ಉಪೇಂದ್ರ ರನ್ನು ಭೇಟಿ ಮಾಡಿದ್ದ ಪ್ರಥಮ್ "ಸಾರ್ ನೀವೇನಾದರೂ ಬದಲಾವಣೆ ತರ್ತೀರಾ ಅಂತ ನಿರೀಕ್ಷೆ ಇತ್ತು. ನೀವೇ ನಿಮ್ಮ ಪಕ್ಷದಿಂದ ಹೊರಗೆ ಬಂದು ಬಿಟ್ರಲ್ಲಾ?'' ಅಂತ ಒಂದು ಪ್ರಶ್ನೆ ಕೇಳಿದ್ದಾರೆ. ಪ್ರಥಮ್ ಪ್ರಶ್ನೆಗೆ ಉಪ್ಪಿ ಈ ರೀತಿ ಉತ್ತರಿಸಿದ್ದಾರೆ.

ಎಂ ಎಲ್ ಎ / ಎಂ ಪಿ ಆಗೋದು ದೊಡ್ಡ ವಿಷಯನಾ?

ಎಂ ಎಲ್ ಎ / ಎಂ ಪಿ ಆಗೋದು ದೊಡ್ಡ ವಿಷಯನಾ?

''ನನಗಿರೋ ಅರ್ಹತೆಗೆ, ಜನಪ್ರಿಯತೆಗೆ ಅಥವಾ ನಾನೇ ಹೊಂದಾಣಿಕೆ ರಾಜಕಾರಣ ಮಾಡೋ ಹಾಗಿದ್ರೆ ಎಂ ಎಲ್ ಎ ಅಥವಾ ಎಂ ಪಿ ಆಗೋದು ದೊಡ್ಡ ವಿಷಯನಾ?. ನೋಡಿ ನನ್ನ ಅಮೂಲ್ಯ ಒಂದು ವರ್ಷ ಯಾವ ಸಿನಿಮಾ ಮಾಡದೇ ಸಮಾಜಕ್ಕೆ ಏನಾದ್ರೂ ಬದಲಾವಣೆ ಮಾಡ್ಲೇಬೇಕು ಅಂತ ದೃಢವಾಗಿ ನಿಂತಾಗ ಇಂತಹ ಮಾತುಗಳು ಬಂದು ಬಿಟ್ಟರೆ ಬೇಜಾರಾಗುತ್ತೆ'' - ಉಪೇಂದ್ರ, ನಟ, ಉತ್ತಮ ಪ್ರಜಾಕೀಯ ಪಕ್ಷದ ಸ್ಥಾಪಕ

ತಪ್ಪಾಗಿ ಅರ್ಥೈಸಿದ್ರೆ ನೋವಾಗುತ್ತೆ

ತಪ್ಪಾಗಿ ಅರ್ಥೈಸಿದ್ರೆ ನೋವಾಗುತ್ತೆ

''ಏನಾದ್ರೂ ಹುಟ್ಟಿದ ನಾಡಿಗೆ ಬದಲಾವಣೆ ತರೋಣ ಅನ್ನೋ ಪ್ರಯತ್ನ ಮಾಡಿದ್ದಕ್ಕೆ ಸ್ವಲ್ಪ ಹಿನ್ನಡೆಯಾಗಿದೆ ನಿಜ. ನಾನು ರಾಜಕೀಯ ಮಾಡೋಕೆ ಬಂದಿಲ್ಲ, ಪ್ರಜೆಗಳೇ ಆಳಲಿ, ಅನ್ನೋ ಸಿದ್ಧಾಂತ ಬಿಡುವ ಮಾತೇ ಇಲ್ಲ, ನನಗೋಸ್ಕರ ಏನೂ ಬೇಡ. ಆದ್ರೆ ಒಳ್ಳೆಯ ಪ್ರಯತ್ನಗಳನ್ನ ಜನ ಸರಿಯಾಗಿ ಅರ್ಥ ಮಾಡಿಕೊಳ್ಳದೇ ತಪ್ಪಾಗಿ ಅರ್ಥೈಸಿದ್ರೆ ನೋವಾಗುತ್ತೆ.'' - ಉಪೇಂದ್ರ, ನಟ, ಉತ್ತಮ ಪ್ರಜಾಕೀಯ ಪಕ್ಷದ ಸ್ಥಾಪಕ.

ಜನ ಕೈ ಹಿಡಿಯಬೇಕು

ಜನ ಕೈ ಹಿಡಿಯಬೇಕು

''ನೆನಪಿಡಿ ನಾನು ಎಂ ಎಲ್ ಎ ಅಥವಾ ಮಿನಿಸ್ಟರ್ ಆಗಬೇಕು ಅಂದಿದ್ರೆ ಇಷ್ಟೊತ್ತಿಗೆ ಹೊಂದಾಣಿಕೆ ಮಾಡಿಕೊಂಡು ಆಗಿರ್ತಿದ್ದೆ. 70 ವರ್ಷದಿಂದ ಇರುವ ವ್ಯವಸ್ಥೆಯನ್ನು ಸಂಪೂರ್ಣ ಬದಲಾವಣೆ ಮಾಡೋಕೆ ನನ್ನೊಬ್ಬನಿಂದ ಸಾಧ್ಯವಿಲ್ಲ. ಜನ ಕೈ ಹಿಡಿಯಬೇಕು. ಇದಕ್ಕೆ ಸ್ವಲ್ಪ ಸಮಯ ಬೇಕು'' ಎಂಬ ಮಾತುಗಳನ್ನು ಆಡಿದ್ದಾರೆ.'' - ಉಪೇಂದ್ರ, ನಟ, ಉತ್ತಮ ಪ್ರಜಾಕೀಯ ಪಕ್ಷದ ಸ್ಥಾಪಕ.

ಗಿಡ ನೆಟ್ಟ ತಕ್ಷಣ ಫಲ ಬರಲ್ಲ

ಗಿಡ ನೆಟ್ಟ ತಕ್ಷಣ ಫಲ ಬರಲ್ಲ

ಉಪೇಂದ್ರ ಅವರ ಮಾತು ಕೇಳಿ ಸಂತಸಕೊಂಡಿರುವ ಪ್ರಥಮ್ ''ಉಪ್ಪಿ ಈಗಲೂ confident ಆಗಿದ್ದಾರೆ, ಅವರಿಗೋಸ್ಕರ ಅಲ್ಲ, ನಮಗೋಸ್ಕರ ಏನಾದ್ರೂ ಮಾಡೋಕೆ. ಸ್ವಲ್ಪ ಕಾಯಬೇಕು. ಗಿಡ ನೆಟ್ಟ ತಕ್ಷಣ ಫಲ ಬರಲ್ಲ. ಸಾಧ್ಯವಾದರೆ ಎಲ್ಲರಿಗೂ ತಲುಪಿಸಿ. ಒಳ್ಳೇದು ಮಾಡೋಕೆ ಹೊರಟಿರೋ ಉಪೇಂದ್ರರ ಬಗ್ಗೆ ಗೊಂದಲ ಹೋಗಲಿ'' ಎಂದು ಹೇಳಿದ್ದಾರೆ.

More from Filmibeat

English summary
Bigg Boss Kannada season 5 winner Pratham spoke about Kannada actor Upendra's confidence
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X