ಪ್ರಥಮ್ ನಟ ಭಯಂಕರ ಮೊದಲ ವಾರದಲ್ಲಿ ಮಾಡಿದ ಕಲೆಕ್ಷನ್ ಎಷ್ಟು? ಚಿತ್ರ ಹಿಟ್ಟಾ, ಫ್ಲಾಪಾ?

ಬಿಗ್ ಬಾಸ್ ಮೂಲಕ ಖ್ಯಾತಿಯನ್ನು ಗಳಿಸಿ ತನ್ನ ಆಕರ್ಷಕ ಮಾತು ಹಾಗೂ ನಡವಳಿಕೆಯಿಂದ ಕನ್ನಡಿಗರಿಗೆ ಚಿರಪರಿಚಿತನಾಗಿ ಉಳಿದುಕೊಂಡಿರುವ ಪ್ರಥಮ್ ಬಿಗ್ ಬಾಸ್ ಮನೆಯಿಂದ ಹೊರಬಂದ ನಂತರ ಸಿಕ್ಕ ಅವಕಾಶವನ್ನ ಬಿಡದೇ ನಟನಾಗಿ ಸಿನಿಮಾಗಳಲ್ಲಿ ನಟಿಸಲು ಮುಂದಾದರು.

ಮೊದಲಿಗೆ ಎಂಎಲ್ಎ ಎಂಬ ಚಿತ್ರದಲ್ಲಿ ನಟಿಸಿದ ಪ್ರಥಮ್ ನಟನಾಗಿ ಸಿನಿಮಾ ಕ್ಷೇತ್ರಕ್ಕೆ ಪದಾರ್ಪಣೆ ಮಾಡಿ ಬಳಿಕ ದೇವ್ರಂತ ಮನುಷ್ಯ ಎಂಬ ಚಿತ್ರದಲ್ಲಿಯೂ ಸಹ ನಟಿಸಿದರು. ಹೀಗೆ ಈ ಎರಡು ಚಿತ್ರಗಳಲ್ಲಿ ನಟನಾಗಿ ನಟಿಸಿದ್ದ ಪ್ರಥಮ್ ರಾಜು ಕನ್ನಡ ಮೀಡಿಯಂ ಎಂಬ ಚಿತ್ರದಲ್ಲಿ ಅತಿಥಿ ಪಾತ್ರವನ್ನೂ ಸಹ ನಿರ್ವಹಿಸಿದರು. ಪ್ರಥಮ್ ನಟಿಸಿದ್ದ ಈ ಮೂರೂ ಚಿತ್ರಗಳೂ ಸಹ 2018ರಲ್ಲಿಯೇ ಬಿಡುಗಡೆಯಾಗಿದ್ದವು.

ಹೀಗೆ ಒಂದೇ ವರ್ಷದಲ್ಲಿ ಸಾಲು ಸಾಲು ಚಿತ್ರಗಳಲ್ಲಿ ನಟಿಸಿದ ಪ್ರಥಮ್ ಅಭಿನಯದ ಯಾವುದೇ ಚಿತ್ರಗಳೂ ಸಹ ನಂತರದ ದಿನಗಳಲ್ಲಿ ತೆರೆಗೆ ಬಂದಿರಲಿಲ್ಲ. ಚಿತ್ರಗಳ ಅವಕಾಶ ಇಲ್ಲದೆಯೋ ಅಥವಾ ಪ್ರಥಮ್ ನೆಚ್ಚಿನ ಕಥೆಗಳು ಸಿಗದೆಯೋ ಪ್ರಥಮ್ ತಮ್ಮ ಯಾವುದೇ ಚಿತ್ರವನ್ನೂ ಸಹ ಘೋಷಿಸಿರಲಿಲ್ಲ. ಹೀಗಿರುವಾಗಲೇ ಪ್ರಥಮ್ ತನ್ನ ಮುಂದಿನ ಚಿತ್ರದ ಹೆಸರು ನಟ ಭಯಂಕರ ಹಾಗೂ ಈ ಚಿತ್ರವನ್ನು ಸ್ವತಃ ತಾನೇ ನಿರ್ದೇಶಿಸುತ್ತಿರುವುದಾಗಿ ಘೋಷಿಸಿದರು. ಇಷ್ಟು ದಿನಗಳ ಕಾಲ ಮನರಂಜನೆ ಹಾಗೂ ನಟನೆಯಲ್ಲಿ ಜನರ ಮನಸ್ಸನ್ನು ಗೆದ್ದಿದ್ದ ಪ್ರಥಮ್ ನಿರ್ದೇಶಕನಾಗಿ ಯಾವ ರೀತಿಯ ಫಲಿತಾಂಶ ಪಡೆದುಕೊಳ್ಳಬಹುದು ಎಂಬ ಪ್ರಶ್ನೆ ಗಾಂಧಿನಗರದ ಮಂದಿಯಲ್ಲಿ ಮೂಡಿತ್ತು. ಇನ್ನು ಪ್ರಥಮ್ ನಿರ್ದೇಶನದ ಚೊಚ್ಚಲ ಚಿತ್ರ ಕಳೆದ ಶುಕ್ರವಾರ ( ಫೆಬ್ರವರಿ 3 ) ಬಿಡುಗಡೆಯಾಗಿ ಚಿತ್ರ ನೋಡಿದ ಸಿನಿ ರಸಿಕರಿಂದ ಚೆನ್ನಾಗಿದೆ, ಪರವಾಗಿಲ್ಲ ನೋಡಬಹುದು ಎಲ್ಲೂ ಬೋರ್ ಹೊಡೆಸಲ್ಲ ಎಂಬ ಪ್ರತಿಕ್ರಿಯೆಗಳನ್ನು ಪಡೆದುಕೊಂಡಿತು. ಇನ್ನು ಕಲೆಕ್ಷನ್ ವಿಚಾರವಾಗಿ ತುಸು ವಿವಾದಕ್ಕೆ ಒಳಗಾದ ಈ ಚಿತ್ರ ಈಗ ವಾರ ಪೂರೈಸಿದ್ದು, ಚಿತ್ರ ಎಷ್ಟು ಗಳಿಸಿರಬಹುದು ಎಂಬ ಅಂದಾಜನ್ನು ಬಾಕ್ಸ್ ಆಫೀಸ್ ಪರಿಣಿತರು ಈ ಕೆಳಕಂಡಂತೆ ಮಾಡಿದ್ದಾರೆ.

ಏಳು ದಿನಗಳಲ್ಲಿ ಮಾಡಿದ ಕಲೆಕ್ಷನ್ ಎಷ್ಟು?

ಏಳು ದಿನಗಳಲ್ಲಿ ಮಾಡಿದ ಕಲೆಕ್ಷನ್ ಎಷ್ಟು?

ಸ್ಯಾಕ್‌ನಿಕ್ ಎಂಬ ಬಾಕ್ಸ್ ಆಫೀಸ್ ಟ್ರ್ಯಾಕರ್ಸ್ ಪ್ರಕಾರ ನಟ ಭಯಂಕರ ಸಿನಿಮಾ ಮೊದಲ ದಿನ 25 ಲಕ್ಷ ರೂಪಾಯಿಗಳಷ್ಟು ಕಲೆಕ್ಷನ್, ಎರಡನೇ ದಿನ 39 ಲಕ್ಷ ರೂಪಾಯಿ, ಮೂರನೇ ದಿನ 49 ಲಕ್ಷ ರೂಪಾಯಿ, ನಾಲ್ಕನೇ ದಿನ 43 ಲಕ್ಷ ರೂಪಾಯಿ, ಐದನೇ ದಿನ 26 ಲಕ್ಷ ರೂಪಾಯಿ, ಆರನೇ ದಿನ 21 ಲಕ್ಷ ರೂಪಾಯಿ ಹಾಗೂ ಏಳನೇ ದಿನ 19 ಲಕ್ಷ ರೂಪಾಯಿಗಳಷ್ಟು ಕಲೆಕ್ಷನ್ ಮಾಡಿರಬಹುದು ಎಂದು ಅಂದಾಜು ಮಾಡಿದೆ. ಈ ಮೂಲಕ ನಟ ಭಯಂಕರ ಸಿನಿಮಾ ಮೊದಲ ವಾರದಲ್ಲಿ 2.22 ಕೋಟಿ ಗಳಿಕೆ ಮಾಡಿದೆ. ಸಣ್ಣ ಪ್ರಮಾಣದಲ್ಲಿ ಬಿಡುಗಡೆಯಾಗಿ, ದೊಡ್ಡ ಚಿತ್ರಗಳ ಪೈಪೋಟಿಯಬ ನಡುವೆಯೂ ಇಂತಹ ಕಲೆಕ್ಷನ್ ಮಾಡುವುದು ನಿಜಕ್ಕೂ ದೊಡ್ಡ ವಿಚಾರವೇ.

ಅಧಿಕೃತವಾಗಿ ಕಲೆಕ್ಷನ್ ಘೋಷಣೆ ಮಾಡಿಲ್ಲ

ಅಧಿಕೃತವಾಗಿ ಕಲೆಕ್ಷನ್ ಘೋಷಣೆ ಮಾಡಿಲ್ಲ

ಇನ್ನು ಇದಿಷ್ಟೂ ಬಾಕ್ಸ್ ಆಫೀಸ್ ಪಂಡಿತರು ತಿಳಿಸಿರುವ ಅಂದಾಜು ಬಾಕ್ಸ್ ಆಫೀಸ್ ಲೆಕ್ಕಾಚಾರವಾಗಿದ್ದು, ಚಿತ್ತತಂಡ ಚಿತ್ರ ಎಷ್ಟು ಗಳಿಸಿದೆ ಎಂಬ ವಿಚಾರವನ್ನು ಎಲ್ಲಿಯೂ ಅಧಿಕೃತವಾಗಿ ಘೋಷಿಸಿಲ್ಲ. ಚಿತ್ರ ಸುಮಾರು ನಾಲ್ಕೈದು ಕೋಟಿ ವೆಚ್ಚದಲ್ಲಿ ತಯಾರಾಗಿದ್ದು, ವಿವಿಧ ಹಕ್ಕುಗಳ ಮಾರಾಟ ಹಾಗೂ ಕಲೆಕ್ಷನ್ ಸೇರಿಸಿದರೆ ಚಿತ್ರ ಸಮಾಧಾನಕರ ಗಳಿಕೆ ಮಾಡಿದ್ದು, ಹಿಟ್ ಎನ್ನಲಾಗುತ್ತಿದೆ.

ಕಲೆಕ್ಷನ್ ವಿಚಾರವಾಗಿ ವಿವಾದ!

ಕಲೆಕ್ಷನ್ ವಿಚಾರವಾಗಿ ವಿವಾದ!

ನಟ ಭಯಂಕರ ಚಿತ್ರ ಬಿಡುಗಡೆಯಾದ ಮಾರನೇ ದಿನ ಸಾಮಾಜಿಕ ಜಾಲತಾಣದಲ್ಲಿ ಚಿತ್ರ ಮೊದಲ ದಿನ 35 ಕೋಟಿ ಕಲೆಕ್ಷನ್ ಮಾಡಿದೆ ಎಂಬ ಪೋಸ್ಟರ್ ಹರಿದಾಡಿತ್ತು ಹಾಗೂ ಎರಡೇ ದಿನಕ್ಕೆ ಚಿತ್ರ 109 ಕೋಟಿ ಗಳಿಸಿದೆ ಎಂಬ ಪೋಸ್ಟರ್ ಸಹ ವೈರಲ್ ಆಗಿತ್ತು. ಆದರೆ ಇವೆಲ್ಲವೂ ಫೇಕ್ ಪೋಸ್ಟರ್ ಆಗಿದ್ದು, ಇದಕ್ಕೂ ತನಗೂ ಯಾವುದೇ ಸಂಬಂಧವಿಲ್ಲ ಎಂದು ಪ್ರಥಮ್ ತಿಳಿಸಿದ್ದರು.

More from Filmibeat

English summary
Pratham starrer Nata Bhayankara grossed 2.22 crores in first week at Box Office. Read on
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X