ಶಿಕ್ಷಣ ಪಡ್ಕೊಳ್ರೋ..ನಿಮ್ಮ ವಿಷ್ಯ ಟಾಯ್ಲೆಟ್‌ನಲ್ಲಿ ಮಾತಾಡೋಕೆ ಸರಿ": ದರ್ಶನ್ ಫ್ಯಾನ್ಸ್ Vs ಪ್ರಥಮ್ ನಿಲ್ಲದ ಸಮರ

By ಫಿಲ್ಮಿಬೀಟ್ ಡೆಸ್ಕ್

ಕಳೆದ ಕೆಲವು ದಿನಗಳಿಂದ ದರ್ಶನ್ ಅಭಿಮಾನಿಗಳು ಹಾಗೂ ಪ್ರಥಮ್ ಮಧ್ಯೆ ಕಿತ್ತಾಟ ನಡೆಯುತ್ತಿದೆ. ದೊಡ್ಡಬಳ್ಳಾಪುರ ಸಮೀಪ ದೇವಸ್ಥಾನದ ಪೂಜೆಗೆಂದು ಹೋಗಿದ್ದ ಪ್ರಥಮ್‌ಗೆ ಕೆಲವರು ಆಯುಧಗಳನ್ನು ತೆಗೆದು ಜೀವ ಬೆದರಿಕೆ ಹಾಕಿದ್ದರು. ದರ್ಶನ್ ವಿಚಾರ ಎತ್ತದೆ ಇರುವಂತೆ ತಾಕೀತು ಮಾಡಿದ್ದರು. ಅವರೆಲ್ಲರೂ ದರ್ಶನ್ ಅಭಿಮಾನಿಗಳು ಎಂದು ಪ್ರಥಮ್ ಆರೋಪ ಮಾಡಿದ್ದರು. ಇಲ್ಲಿಂದ ದರ್ಶನ್ ಅಭಿಮಾನಿಗಳು ಹಾಗೂ ಪ್ರಥಮ್ ನಡುವೆ ಕಿತ್ತಾಟ ಶುರುವಾಗಿತ್ತು.

ಪ್ರಥಮ್ ಮಾಡಿದ ಆರೋಪದ ಬಳಿಕ ದರ್ಶನ್ ಅಭಿಮಾನಿಗಳು ಅಖಾಡಕ್ಕೆ ಇಳಿದಿದ್ದರು. ಸೋಶಿಯಲ್ ಮೀಡಿಯಾದಲ್ಲಿ ಡಿ ಕಂಪನಿ ಪೇಜ್ ಪ್ರಥಮ್ ಆರೋಪವನ್ನು ತಳ್ಳಿ ಹಾಕಿತ್ತು. ದೇವಸ್ಥಾನದಲ್ಲಿ ಪ್ರಥಮ್ ಚಿಪ್ಸು, ಪಪ್ಸು ತಿನ್ನುವುದಕ್ಕೆ ಹೋಗಿದ್ದರು. ಅಲ್ಲಿ ಗಲಾಟೆ ಮಾಡಿಕೊಂಡು ಈಗ ಆರೋಪ ಮಾಡುತ್ತಿದ್ದಾರೆ ಎಂದು ಪೇಜ್‌ನಲ್ಲಿ ಬರೆದುಕೊಂಡಿದ್ದರು.

Pratham video on Darshan fans allegation and said its perfect discussion about you in the toilet

ಡಿ ಕಂಪನಿಯ ಪೋಸ್ಟ್ ನೋಡಿ ಪ್ರಥಮ್ ಕೆಂಡಾಮಂಡಲವಾಗಿದ್ದಾರೆ. ಇದಕ್ಕೆ ಪ್ರತಿಯಾಗಿ ಒಂದು ವಿಡಿಯೋವನ್ನು ತಮ್ಮ ಫೇಸ್‌ಬುಕ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ. ಈ ವಿಡಿಯೋದಲ್ಲಿ ಡಿ ಕಂಪನಿಯನ್ನು ಡುಬಾಕ್ ಕಂಪನಿ, ದರ್ಬೇಸಿಗಳ ಕಂಪನಿ ಎಂದು ಜರಿದಿದ್ದಾರೆ. ನಿಮ್ಮ ವಿಷಯ ಟಾಯ್ಲೆಟ್‌ನಲ್ಲಿ ಮಾತಾಡುವುದಕ್ಕೆ ಯೋಗ್ಯ ಎಂದು ಪ್ರಥಮ್ ಹೇಳಿಕೊಂಡಿದ್ದು, ದರ್ಶನ್ ಅಭಿಮಾನಿಗಳನ್ನು ಇನ್ನಷ್ಟು ಕೆರಳಿಸಿದೆ. ಪ್ರಥಮ್ ವಿಡಿಯೋದಲ್ಲಿ ಏನಿದೆ ಅಂತ ನೋಡುವುದಾರೇ..

ಜ್ಞಾನ ತುಂಬಾನೇ ಮುಖ್ಯ

ದೇವಸ್ಥಾನದ ಪೂಜೆಗೆಂದು ಹೋಗಿದ್ದ ಪ್ರಥಮ್ ತಮ್ಮ ಮೇಲೆ ಹಲ್ಲೆಗೆ ಯತ್ನ ನಡೆದಿದೆ ಎಂದು ಮಾಧ್ಯಮಗಳಲ್ಲಿ ಹೇಳಿಕೊಂಡಿದ್ದಾರೆ. ಆದರೆ, ಇನ್ನೂ ಅವರು ಪೊಲೀಸ್ ಠಾಣೆಯಲ್ಲಿ ದೂರನ್ನು ಸಲ್ಲಿಸಿಲ್ಲ. ಈ ಬೆನ್ನಲ್ಲೇ ದರ್ಶನ್ ಅಭಿಮಾನಿಗಳ ಅಧಿಕೃತ ಪೇಜ್‌ನಲ್ಲಿ ಪ್ರಥಮ್ ಪಪ್ಸು, ಚಿಪ್ಸು ತಿನ್ನುವುದಕ್ಕೆ ಹೋಗಿದ್ದರು ಎಂದು ಹೇಳಿದ್ದರು. ಅದಕ್ಕೆ ಪ್ರಥಮ್ ತಿರುಗೇಟು ಕೊಟ್ಟಿದ್ದಾರೆ.

"ನಾನು ಮೊದಲನೇ ಬಾರಿ ಕೇಳಿಕೊಳ್ಳುತ್ತಿದ್ದೇನೆ. ಈ ರಾಷ್ಟ್ರೀಯ ತನಿಖಾ ಸಂಸ್ಥೆಗಳು ಇದ್ದಾವಲ್ಲ. ಎನ್‌ಐಎ, ಇಂಟರ್‌ಪೋಲ್, ಸೈಬರ್ ಕ್ರೈಂ, ಇಂಟಲಿಜೆನ್ಸ್‌ ಎಲ್ಲಾ ದೇಶ ಬಹಳ ದೊಡ್ಡ ಬೇಹುಗಾರಿಕಾ ಸಂಸ್ಥೆಗಳು. ಇದನ್ನೆಲ್ಲ ನಿಲ್ಲಿಸಿ ಬಿಡುವುದಕ್ಕೆ ಹೇಳಿ. ಮುಚ್ಚಿ ಬಿಡುವುದಕ್ಕೆ ಹೇಳಿ. ಮುಚ್ಚಿಬಿಟ್ಟು ಯಾವುದೋ ಡಿ ಬಾಸ್ ಕಂಪನಿ, ಡುಬಾಕ್ ಕಂಪನಿ, ದರ್ಬೇಸಿಗಳ ಕಂಪನಿ ಅಂತ ಇದೆ. ಇವರಿಗೆ ಕೊಟ್ಟುಬಿಡಿ ಎಲ್ಲಾ ಕೇಸ್‌ಗಳನ್ನು ಬಗೆಹರಿಸಿಕೊಡುತ್ತಾರೆ. ಎಲ್ಲಾ ಇನ್ವೆಸ್ಟಿಗೇಷನ್ ಮಾಡಿ ಹೇಳಿಬಿಟ್ರಂತೆ. ಇದು ಚಿಪ್ಸು ಪಪ್ಸು ಮ್ಯಾಟರ್ ಅಂತೆ. ಚಿಪ್ಸ್ ತಿನ್ನುವುದಕ್ಕೆ ರೌಡಿಗಳ ಹತ್ತಿರ ಹೋಗಿದ್ನಂತೆ. ಏನ್ರೋ ನಿಮಗೆ ಚೂರಾದರೂ ಕಾಮನ್ ಸೆನ್ಸ್ ಬೇಡ್ವಾ? ಶಿಕ್ಷಣ ತುಂಬಾನೇ ಮುಖ್ಯ ಕಣ್ರೋ. ಜ್ಞಾನ ತುಂಬಾನೇ ಮುಖ್ಯ ಕಣ್ರೋ.." ಎಂದು ಒಳ್ಳೆಯ ಹುಡುಗ ಪ್ರಥಮ್ ವಿಡಿಯೋ ಮಾಡಿ ಡಿ ಬಾಸ್ ಅಭಿಮಾನಿಗಳನ್ನು ತಿವಿದಿದ್ದಾರೆ.

ಡಿ ಕಂಪನಿ ಒಂದು ಡುಬಾಕ್ ಕಂಪನಿ

ಇದೇ ವೇಳೆ ಡಿ ಕಂಪನಿ ಒಂದು ಡುಬಾಕ್ ಕಂಪನಿ ಎಂದು ಪ್ರಥಮ್ ಹೇಳಿದ್ದಾರೆ. "ನನ್ನ ಲೈಫ್‌ನಲ್ಲಿ ಸಂಸ್ಕರಿಸಿದ ಪದಾರ್ಥ ತಿನ್ನಲ್ಲ. ಸಂಸ್ಕರಿಸಿದ ಅಂದರೆ ಏನು ಗೊತ್ತಾ? ಚಿಪ್ಸು, ಪೆಪ್ಸಿ ಯಾವುದನ್ನೂ ನಾನು ತಿನ್ನುವುದಿಲ್ಲ. ಅದಕ್ಕೆ ನಾನು ಇಷ್ಟು ಸುಂದರವಾಗಿರೋದು. ಕರ್ನಾಟಕದಲ್ಲಿ ನನ್ನ ಚೆನ್ನಾಗಿ ಇರೋರು ಯಾರಿದ್ದರೆ? ಅದಕ್ಕೆ ನನಗೆ ಈ ಫಿಟ್ನೆಸ್‌. ನಾನು ಜಿಮ್‌ಗೆ ಹೋಗಲ್ಲ. ಎಲ್ಲಿಗೂ ಹೋಗಲ್ಲ. ಅದನ್ನು ತಿನ್ನುವುದಕ್ಕೆ ರೌಡಿಗಳ ಹತ್ತಿರ ಹೋಗಿದ್ನಂತೆ. ಏನ್ರೋ ನಿಮ್ಮದೂ ಒಂದು ಬಾಳೆನ್ರೋ? ಅದ್ಯಾವುದೋ ಡಿ ಕಂಪನಿ. ಆಹಾ ಡುಬಾಕ್ ಕಂಪನಿ ಅದು. ದರ್ಬೇಸಿಗಳ ಕಂಪನಿ ಅಂತ ಇಟ್ಟುಕೊಳ್ಳಿ." ಎಂದು ಪ್ರಥಮ್ ಹೇಳಿದ್ದಾರೆ.

ದೂರು ಯಾಕೆ ಕೊಟ್ಟಿಲ್ಲ

"ಏನು ಅಲ್ಲಿ ಬಂದಿದ್ದರು ಯಾರೂ ದರ್ಶನ್ ಸರ್ ಫ್ಯಾನ್ಸ್ ಅಲ್ವಂತೆ. ಸಂತೋಷ.. ಫ್ಯಾನ್ಸ್ ಅಲ್ಲದ ಮೇಲೆ ಹೇಗ್ರೋ ತನಿಖೆ ಮಾಡ್ತೀರ? ಫ್ಯಾನ್ಸ್ ಅಲ್ಲದವರಲ್ಲಿ ತನಿಖೆ ಮಾಡುವುದಕ್ಕೆ ಹೇಗ್ರೋ ಕಟೆಂಟ್ ಸಿಗುತ್ತೆ. ಒಂದು ವಿಚಾರ ಹೇಳತ್ತೇನೆ ಕೇಳಿ. ನಿನ್ನೆನೇ ಮಾಹಿತಿ ಕೊಡುವುದಕ್ಕೆ ಹೋಗಿದ್ದೆ, ಆದರೆ, ಯಾಕೆ ಕೊಟ್ಟಿಲ್ಲ ಅಂದರೆ, ತುಂಬಾ ಆಪ್ತರೊಬ್ಬರು, ಇಬ್ಬರ ಹತ್ತಿರದಲ್ಲಿರುವವರು ಪ್ರಥಮ್ ಅವರೇ ನಾನು ಇದ್ದನ್ನು ಬಗೆಹರಿಸಿಕೊಡುತ್ತೇನ ಬಿಟ್ಟು ಬಿಡಿದ ಅಂದರು. ಹಾಗೆ ಹೇಳಿದ ಮೇಲೆ ದೂರು ಕೊಡುವುದು ಬೇಡ ಅಂದುಕೊಂಡಿದ್ದೆ. ಈಗ ಪಪ್ಸು, ಚಿಪ್ಸು ಮ್ಯಾಟರ್ ಅಂತೆ." ಎಂದಿದ್ದಾರೆ.

ಟಾಯ್ಲೆಟ್‌ನಲ್ಲಿ ಮಾತಾಡುವುದಕ್ಕೆ ಯೋಗ್ಯ

ಇಷ್ಟಕ್ಕೆ ಪ್ರಥಮ್ ಆರೋಪ ನಿಲ್ಲಲಿಲ್ಲ. ನಿಮ್ಮ ವಿಷಯವನ್ನು ಟಾಯ್ಲೆಟ್‌ನಲ್ಲಿ ಮಾತಾಡುವುದಕ್ಕೆ ಯೋಗ್ಯ ಎಂದು ಪ್ರಥಮ್ ಆಕ್ರೋಶ ಹೊರ ಹಾಕಿದ್ದಾರೆ. "ಪಪ್ಸು, ಚಿಪ್ಸು ತಿನ್ನುವುದಕ್ಕೆ ನಾನು ಹೋಗಲ್ಲ. ಕರೆಕ್ಟ್ ಆಗಿ ಹೊಟ್ಟೆ ತುಂಬಾ ಊಟ ಮಾಡಿದೆ. ಪೂಜೆಗೆ ಅಂತ ಹೋಗಿದ್ದು, ದಯವಿಟ್ಟು ಪಪ್ಸು, ಚಿಪ್ಸು ಸೇರಿಸಬೇಡಿ. ಅವನು ಯಾವನೋ ಬಂದು ಹೇಳಿದ್ನಂತೆ ಪಪ್ಸು ತಿನ್ನೋಕೆ ಅವರ ಹತ್ತಿರ ಹೋಗಿದ್ನಂತೆ. ಒಬ್ಬ ರೌಡಿ ಹತ್ತಿರ ಪಪ್ಸು ಚಿಪ್ಸು ಕೊಡಿ ಅಂತ ಕೇಳುವುದಕ್ಕೆ ಆಗುತ್ತಾ? ಇವರು ಆಯುಧಗಳನ್ನು ತೆಗೆದಿದ್ರಾ ಇಲ್ವಾ ಹೇಳಿ. ಜ್ಞಾನ ಇಟ್ಕೊಳ್ರೋ.. ಶಿಕ್ಷಣ ಪಡ್ಕೊಳ್ರೋ.. ಅಯ್ಯೋ ಕರ್ಮವೇ ಯಾವಾಗ ಬುದ್ದಿ ಕಲಿಯುತ್ತಿರೋ.. ಬಿಡಿ ಎಸ್‌ಪಿಯವರೇ ಎಲ್ಲಾ ಮಾಹಿತಿಯನ್ನು ನೀಡುತ್ತಾರೆ. ಡಿ ಕಂಪನಿ ನಿಮ್ಮ ಎಲ್ಲಾ ತನಿಖೆಯನ್ನು ನಿಲ್ಲಿಸಿ ಬಿಡಿ. ನಿಮ್ಮನ್ನು ಬೈಯ್ಯುವುದಕ್ಕೂ ಮನಸ್ಸು ಬರುತ್ತಿಲ್ಲ.ನಾನು ಟಾಯ್ಲೆಟ್‌ನಲ್ಲಿ ಇದ್ದೀನಿ. ನಿಮ್ಮ ವಿಷಯ ಟಾಯ್ಲೆಟ್‌ನಲ್ಲಿ ಮಾತಾಡುವುದಕ್ಕೆ ಯೋಗ್ಯತೆ." ಎಂದು ಪ್ರಥಮ್ ಕಿಡಿಕಾರಿದ್ದಾರೆ.

More from Filmibeat

English summary
Pratham video on Darshan fans allegation and said its perfect discussion about you in the toilet;
Read more about: darshan pratham controversy
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X