ವೀರೇಂದ್ರ ಹೆಗಡೆ ರಿಂದ ಶ್ರೇಷ್ಠ ಉಡುಗೊರೆ ಪಡೆದ ಪ್ರಥಮ್
Recommended Video

ರಿಯಾಲಿಟಿ ಶೋ ನಿಂದಲೇ ಪ್ರಖ್ಯಾತಿ ಪಡೆದುಕೊಂಡು ಮನೆ ಮಾತಾಗಿರುವ ಪ್ರಥಮ್ ಸದಾ ಸುದ್ದಿಯಲ್ಲೇ ಇರುತ್ತಾರೆ. ನಾನೇ ಬೇರೆ ನನ್ ದಾರಿನೇ ಬೇರೆ ಎನ್ನುವ ಪ್ರಥಮ್ ಯಾವುದೇ ಕೆಲಸ ಮಾಡಿದರು ಅದು ವಿಭಿನ್ನವಾಗಿಯೇ ಇರುತ್ತೆ. ಇತ್ತೀಚಿಗಷ್ಟೇ ಡಿಂಕ್ ಚಕ್ ಪೂಜಾ ಅವರನ್ನ ಸಿನಿಮಾಗೆ ನಾಯಕಿಯಾಗಿ ಕರೆದುಕೊಂಡು ಬರುವುದಾಗಿ ತಿಳಿಸಿದ್ದ ಪ್ರಥಮ್ ಧರ್ಮಸ್ಥಳದ ಧರ್ಮಾಧಿಕಾರಿಗಳನ್ನ ಭೇಟಿ ಮಾಡಿದ್ದಾರೆ.
ಸಾಮಾನ್ಯವಾಗಿ ಎಲ್ಲರೂ ಹೆಗಡೆ ಅವರನ್ನ ಭೇಟಿ ಮಾಡುತ್ತಾರೆ ಅದರಲ್ಲಿ ಏನಿದೆ ಅಂತೀರಾ. ವಿಚಾರ ಇದೆ ವಿರೇಂದ್ರ ಹೆಗಡೆ ಅವರನ್ನ ಭೇಟಿ ಮಾಡಿ ಅವರ ಜೊತೆಯಲ್ಲಿ ಸಾಕಷ್ಟು ಸಮಯ ಕಾಲ ಕಳೆದಿದ್ದಾರೆ ಪ್ರಥಮ್.

ಹುಟ್ಟುಹಬ್ಬದ ವಿಶೇಷವಾಗಿ ಧರ್ಮಸ್ಥಳದ ಧರ್ಮಾಧಿಕಾರಿಗಳನ್ನ ಭೇಟಿ ಮಾಡಿರುವ ಪ್ರಥಮ್ ಅವರಿಗೆ ವಿಶೇಷವಾದ ಉಡುಗೊರೆಯನ್ನು ಪಡೆದಿದ್ದಾರೆ. ವಿರೇಂದ್ರ ಹೆಗಡೆ ಅವರು ಚಿಕಾಗೋಯಿಂದ ತರಿಸಿದ್ದ ವಾಚ್ ಅನ್ನು ಪ್ರಥಮ್ ಗೆ ಕೊಟ್ಟಿದ್ದಾರೆ. ಅದರ ಜೊತೆಯಲ್ಲಿ ಪ್ರಥಮ್ ಅವರ ಬೆಳವಣಿಗೆ ಬಗ್ಗೆ ಮೆಚ್ಚುಗೆಯ ಮಾತುಗಳನ್ನ ಹಾಡಿದ್ದಾರೆ.

ಇದರಿಂದ ಖುಷಿಗೊಂಡಿರುವ ಪ್ರಥಮ್ ಇದು ನನ್ನ ಜೀವಮಾನದ ಅತೀ ಶ್ರೇಷ್ಠವಾದ ಗಿಫ್ಟ್ ಎಂದು ಹೇಳಿಕೊಂಡಿದ್ದಾರೆ. ಒಟ್ಟಾರೆ ಒಂದಲ್ಲ ಒಂದು ವಿಚಾರದಿಂದ ಸುದ್ದಿ ಮಾಡುವ ಪ್ರಥಮ್ ಮುಂದಿನ ದಿನಗಳಲ್ಲಿ ಮತ್ಯಾರನ್ನ ಭೇಟಿ ಮಾಡುತ್ತಾರೆ ಎನ್ನುವುದನ್ನ ಕಾದು ನೋಡಬೇಕು.


Click it and Unblock the Notifications











