5 ಅಲ್ಲ 10 ಮದುವೆ ಮಾಡಿಕೊಳ್ಳಿ ; ಹಿಂದೂಗಳ ತಂಟೆಗೆ ಬರಬೇಡಿ - ಪ್ರಥಮ್..!
ನೇಹಾ ಹಿರೇಮಠ್ ಹತ್ಯೆ ಧರ್ಮ ಯುದ್ದದ ಸ್ವರೂಪ ಪಡೆದು 48 ಘಂಟೆ ಉರುಳಿವೆ. ನೇಹಾ ಹಿರೇಮಠ್ ಹತ್ಯೆಯನ್ನ ಖಂಡಿಸಿ ನಡೆಯುತ್ತಿರುವ ಅಭಿಯಾನಕ್ಕೆ 24 ಘಂಟೆ ಕಳೆದಿವೆ. ಇದರ ನಡುವೆ ಅನೇಕ ಚಿತ್ರತಾರೆಯರು ನೇಹಾ ಹತ್ಯೆಯನ್ನ ಖಂಡಿಸಿದ್ದಾರೆ. ಕಠಿಣ ಶಿಕ್ಷೆಗೆ ಆಗ್ರಹಿಸಿದ್ದಾರೆ. ಈ ಸಾಲಿಗೆ ಈಗ ಕನ್ನಡ ಚಿತ್ರರಂಗದ ದೇವ್ರಂಥ ಮನುಷ್ಯ ಪ್ರಥಮ್ ಕೂಡ ಸೇರಿಕೊಂಡಿದ್ದಾರೆ. ತಮ್ಮ ಆಕ್ರೋಶವನ್ನ ಹೊರ ಹಾಕಿದ್ದಾರೆ
ಹೌದು, ನೇಹಾ ಹಿರೇಮಠ್ ತಂದೆ-ತಾಯಿಯನ್ನು ಇಂದು ಭೇಟಿ ಮಾಡಿದ ಪ್ರಥಮ್, ನೇಹಾ ಹಿರೇಮಠ್ ನಿಧನದಿಂದ ಚಿತ್ರರಂಗದ ಎಲ್ಲರಿಗೂ ನೋವಾಗಿದೆ. ಪ್ರಹ್ಲಾದ್ ಜೋಶಿ ಅವರೇ ನೀವು 10 ವರ್ಷದಿಂದ ಅಧಿಕಾರದಲ್ಲಿ ಇದ್ದೀರಿ. ಅಂತರ್ ಧರ್ಮೀಯ ವಿವಾಹದ ಬಗ್ಗೆ ಕಠಿಣ ನಿಯಮ ತೆಗೆದುಕೊಂಡು ಬನ್ನಿ' ಎಂದು ಒತ್ತಾಯ ಮಾಡಿದ್ದಾರೆ.

ಇನ್ನೂ ಇದೇ ವೇಳೆ ನೇಹಾ ಹಿರೇಮಠ್ ಹತ್ಯೆ ಲವ್ ಜಿಹಾದ್ ಗೆ ಹಿಡಿದ ಅತ್ಯುತ್ತಮ ಕೈಗನ್ನಡಿ ಎಂದು ವ್ಯಕ್ತವಾಗ್ತಿರುವ ಅಭಿಪ್ರಾಯದ ಬಗ್ಗೆಯೂ ಮಾತನಾಡಿದ ಪ್ರಥಮ್, ಹಿಂದೂ ಧರ್ಮದ ಹುಡುಗಿಯರನ್ನು ಬೇರೆ ಧರ್ಮದವರು ಮದುವೆ ಆಗಲೇಬಾರದು. ಯಾಕೆ ಆಗಬೇಕು..? ಎಂದು ಪ್ರಶ್ನೆ ಮಾಡಿದ್ದಾರೆ. ಹಿಂದೂ ಹುಡುಗಿಯರ ಜೊತೆ ನೀವು ಲವ್ ಯಾಕೆ ಮಾಡುತ್ತೀರಿ..? ಅದರಿಂದಲೇ ತಾನೆ ಇಷ್ಟೆಲ್ಲ ಕ್ರೌರ್ಯ ಆಗುತ್ತಿರುವುದು. ನಿಮ್ಮ ಪಾಡಿಗೆ, ನಿಮ್ಮ ಸಮುದಾಯದವರನ್ನೇ ಮದುವೆ ಆಗಿ. ಹಿಂದೂ ಹುಡುಗಿಯರ ಜೊತೆ ನಿಮಗೆ ಏನು ಕೆಲಸ? ನಿಮ್ಮ ಸಮುದಾಯದಲ್ಲೇ ಬೇಕಾದರೆ ಒಂದಲ್ಲ ಎರಡಲ್ಲ 5 ಮದುವೆ ಮಾಡಿಕೊಳ್ಳಿ. ನಿಮ್ಮನ್ನು ಯಾರು ಕೇಳ್ತಾರೆ? ಇನ್ನೊಮ್ಮೆ ಹಿಂದೂಗಳ ತಂಟೆಗೆ ಬರಬೇಡಿ' ಎಂದು ಕಿಡಿಯನ್ನ ಕಾರಿದ್ದಾರೆ ನಟ ಭಯಂಕರ ಪ್ರಥಮ್
ಈಗ ಯಾರೋ ಬಂದು ಸಮಾಧಾನ ಹೇಳಿದರು. ಸಮಾಧಾನ ಹೇಳುವುದೇ ಹೌದಾದರೆ ಅವರ ಸಮುದಾಯದ ಯಾರೂ ಕೂಡ ಈ ಕೇಸ್ ತೆಗೆದುಕೊಳ್ಳಬಾರದು ಎಂದು ಇದೇ ಸಮಯದಲ್ಲಿ ಒತ್ತಾಯಿಸಿರುವ ಪ್ರಥಮ್, ಪಾಲಕರಿಗೆ ಒಂದು ಕಿವಿಮಾತು. ನಿಮ್ಮ ಮಕ್ಕಳು ಯಾರ ಜೊತೆ ಇರುತ್ತಾರೆ, ಎಲ್ಲಿಗೆ ಹೋಗುತ್ತಾರೆ ಎಂಬುದನ್ನು ಗಮನಿಸಿ. ಅವನು 9 ಸಲ ಚುಚ್ಚಿದ್ದಾನೆ ಎಂದರೆ ಅವನ ಮನಸ್ಥಿತಿ ಎಷ್ಟು ವಿಕೃತ ಆಗಿದೆ ನೋಡಿ. ಈ ವಿಚಾರದಲ್ಲಿ ರಾಜಕೀಯ ಬೇಡ. ಸಿನಿಮಾದ ಪ್ರಚಾರಕ್ಕೆ ಈ ಊರಿಗೆ ಬರಬೇಕು ಎಂದುಕೊಂಡಿದ್ದೆ. ಆದರೆ ಈಗ ಸಾವಿನ ಮನೆಗೆ ಬರುವಂತೆ ಆಗಿದೆ' ಎಂದು ಕೂಡ ಪ್ರಥಮ್ ಹೇಳಿದ್ದಾರೆ

ಇನ್ನೂ ಪ್ರೀತಿಯನ್ನ ಕಡೆಗಣಿಸಿದರೆ ಪ್ರಾಣ ತೆಗೆದುಬಿಡೋದಾ? ನನ್ನ ಮಗ ಅಂಥವನಲ್ಲ ಎಂದು ಅವರ ತಾಯಿ ಹೇಳ್ತಾರೆ. ವೀರಪ್ಪ ನಾಯಕ ಸಿನಿಮಾದ ಕಥೆ ರೀತಿ ಹೇಳಿಕೆ ನೀಡ್ತಾರೆ. 20 ವರ್ಷದ ಹಿಂದೆ ಇವರು ಸಿಕ್ಕಿದ್ದಿದ್ರೆ ನಿರ್ದೇಶಕರು ಶ್ರುತಿ ಬದಲಿಗೆ ಇವರನ್ನೇ ಆಯ್ಕೆ ಮಾಡುತ್ತಿದ್ದರು' ಎಂದು ಕೂಡ ಪ್ರಥಮ್ ಹೇಳಿದ್ದಾರೆ. ಆರೋಪಿಗೆ ಬೇಗ ಶಿಕ್ಷೆಯಾಗಬೇಕು, ಆಗಲೇ ನೇಹಾ ಕುಟುಂಬಕ್ಕೆ ನ್ಯಾಯ ಸಿಗುತ್ತೆ ಎಂದಿದ್ದಾರೆ ಪ್ರಥಮ್. ನೀವು ಒಬ್ಬರು ಶಿಕ್ಷಕರಾಗಿ ನಿಮ್ಮ ಮಗನಿಗೆ ಹೇಳಿಕೊಟ್ಟಿದ್ದು ಇದೇನಾ? ಮುಸ್ಲಿಂ ಸಮುದಾಯದವರು ಇಂತಹ ಅಯೋಗ್ಯರನ್ನ ಮಟ್ಟಹಾಕುವ ಕೆಲಸ ಮಾಡಬೇಕು ಎಂದು ಕೂಡ ಪ್ರಥಮ್ ಆಗ್ರಹಿಸಿದ್ದಾರೆ


Click it and Unblock the Notifications











