ಕೊನೆಗೂ 'ದರ್ಶನ್ ಗಿಂತ ದೊಡ್ಡ ಸ್ಟಾರ್' ಕೈಯಲ್ಲಿ ಪೋಸ್ಟರ್ ರಿಲೀಸ್ ಮಾಡಿದ ಪ್ರಥಮ್
Recommended Video

ಒಳ್ಳೆ ಹುಡುಗ ಖ್ಯಾತಿಯ ಬಿಗ್ ಬಾಸ್ ಪ್ರಥಮ್ ಕಳೆದ ಎರಡ್ಮೂರು ದಿನದಿಂದ ದರ್ಶನ್ ಅಭಿಮಾನಿಗಳ ಕೋಪಕ್ಕೆ ಕಾರಣವಾಗಿದ್ದಾರೆ. ತಾವು ನಟಿಸಿ, ನಿರ್ದೇಶಿಸಿರುವ ನಟಭಯಂಕರ ಚಿತ್ರದ ಪೋಸ್ಟರ್ ರಿಲೀಸ್ ಮಾಡಲು 'ದರ್ಶನ್ ಅವರಿಗಿಂತ ದೊಡ್ಡ ಸ್ಟಾರ್' ಎಂದು ಬರ್ತಾರೆ ಪ್ರಚಾರ ಮಾಡಿದ್ರು.
ಕೊನೆಗೂ ತಮ್ಮ ಮಾತಿನಂತೆ ದರ್ಶನ್ ಅವರಿಗಿಂತ ದೊಡ್ಡ ಸ್ಟಾರ್ ನ ಕರೆದುಕೊಂಡು ಬಂದು 'ನಟಭಯಂಕರ' ಪೋಸ್ಟರ್ ರಿಲೀಸ್ ಮಾಡಿ ಡಿ ಫ್ಯಾನ್ಸ್ ಕೋಪವನ್ನ ತಣ್ಣಗೆ ಮಾಡಿದ್ದಾರೆ.
ದರ್ಶನ್ ಗಿಂತ ದೊಡ್ಡ ಸ್ಟಾರ್ ಎಂದು ಪ್ರಥಮ್ ಹೇಳಿದಾಗಲೇ, ಬಹುಶಃ ಅವರ ತಾಯಿ ಅಥವಾ ಅವರ ಮಗ ಇರಬಹುದು ಎಂದು ಹಲವು ಅಭಿಮಾನಿಗಳು ಗೆಸ್ ಮಾಡಿದ್ರು. ಕೊನೆಗೂ ಅದು ನಿಜವಾಗಿದೆ. ಅಲ್ಲಿಗೆ ಡಿ ಫ್ಯಾನ್ಸ್ ಸ್ವಲ್ಪ ನಿರಾಳವಾಗಿದ್ದಾರೆ. ಅಷ್ಟಕ್ಕೂ, ಪೋಸ್ಟರ್ ರಿಲೀಸ್ ಮಾಡಿದ್ದು ಯಾರು? ಮುಂದೆ ಓದಿ
ಮಗನ ಚಿತ್ರದ ಪೋಸ್ಟರ್ ಕೂಡ ಮಾಡಿಲ್ಲ
ಮೀನಾ ತೂಗುದೀಪ ಅವರು ಇದೇ ಮೊದಲ ಬಾರಿಗೆ ಸಿನಿಮಾವೊಂದರ ಪೋಸ್ಟರ್ ರಿಲೀಸ್ ಮಾಡಿದ್ದಾರೆ. ಹಾಗ್ನೋಡಿದ್ರೆ, ದರ್ಶನ್ ಅವರ ಚಿತ್ರದ ಪೋಸ್ಟರ್ ಕೂಡ ಮೀನಾ ಅವರು ಬಿಡುಗಡೆ ಮಾಡಿಲ್ವಂತೆ. ಹೀಗಿರುವಾಗ, ಮೀನಾ ಅವರಿಂದ ಪೋಸ್ಟರ್ ಲಾಂಚ್ ಮಾಡಿಸಿ ಡಿ ಬಳಗಕ್ಕೆ ಖುಷಿ ನೀಡಿದ್ದಾರೆ ಪ್ರಥಮ್.

ಪ್ರಥಮ್ ನನ್ನ ಮಗ ಇದ್ದಂತೆ
ಇನ್ನು ಪ್ರಥಮ್ ಸಿನಿಮಾದ ಪೋಸ್ಟರ್ ರಿಲೀಸ್ ಮಾಡಿದ ಮೀನಾ ತೂಗುದೀಪ ಅವರು ಖುಷಿಯಿಂದಲೇ ಪ್ರಥಮ್ ಅವರನ್ನ ಮಾತನಾಡಿಸಿದ್ದಾರೆ. ಪ್ರಥಮ್ ನನ್ನ ಮೂರನೇ ಮಗ ಇದ್ದಂತೆ ಎಂದು ಆಶೀರ್ವಾದ ಮಾಡಿ ಕಳುಹಿಸಿದ್ದಾರೆ.

ಉಪೇಂದ್ರ ಹಾಡಿದ್ದಾರೆ
ಇನ್ನುಳಿದಂತೆ 'ನಟಭಯಂಕರ' ಚಿತ್ರದಲ್ಲಿ ಪ್ರಥಮ್ ನಾಯಕನಾಗಿ ನಟಿಸಿ, ನಿರ್ದೇಶನ ಕೂಡ ಮಾಡಿದ್ದಾರೆ. ಮೊದಲ ಹಂತದಲ್ಲೇ ಇಷ್ಟು ದೊಡ್ಡ ಸದ್ದು ಮಾಡಿದ ಪ್ರಥಮ್, ಟ್ರೈಲರ್, ಆಡಿಯೋ ರಿಲೀಸ್ ವೇಳೆ ಮತ್ಯಾವ ಸರ್ಪ್ರೈಸ್ ಗಳೊಂದಿಗೆ ಬರ್ತಾರೋ ಗೊತ್ತಿಲ್ಲ. ವಿಶೇಷ ಅಂದ್ರೆ ನಟಭಯಂಕರ ಟೈಟಲ್ ಹಾಡಿಗೆ ಉಪೇಂದ್ರ ಧ್ವನಿಯಾಗಿದ್ದಾರೆ.

ಫ್ಯಾನ್ಸ್ ಫುಲ್ ಖುಷಿ
ಸಿನಿಮಾ ಪ್ರಚಾರಕ್ಕಾಗಿ ಈ ರೀತಿ ಗಿಮಿಕ್ ಮಾಡೋದ್ರಲ್ಲಿ ಪ್ರಥಮ್ ಎತ್ತಿದ ಕೈ. ದೊಡ್ಡ ಸ್ಟಾರ್ ಅಂತ ಹೇಳಿ ಬೇರೆ ಯಾರಾತ್ರಾದ್ರೂ ಪೋಸ್ಟರ್ ರಿಲೀಸ್ ಮಾಡಿಸಿದ್ರೆ ಎಂದು ದರ್ಶನ್ ಅಭಿಮಾನಿಗಳು ಎಚ್ಚರಿಕೆ ನೀಡಿದ್ದರು. ಇದೀಗ, ಡಿ ಫ್ಯಾನ್ಸ್ ನಿರಾಳವಾಗಿದ್ದು, ಖುಷಿಯಾಗಿರ್ತಾರೆ.


Click it and Unblock the Notifications











