''ಚಂದನ್ ಮಾಡಿರುವುದರಲ್ಲಿ ತಪ್ಪೇನಿಲ್ಲ'' - ಪ್ರತಾಪ್ ಸಿಂಹ ಹೇಳಿಕೆ

''ಚಂದನ್ ಶೆಟ್ಟಿ ಮಾಡಿರುವುದರಲ್ಲಿ ತಪ್ಪೇನಿದೆ'' ಎಂದು ಮೈಸೂರು ಸಂಸದ ಪ್ರತಾಪ್ ಸಿಂಹ ಪ್ರಶ್ನೆ ಮಾಡಿದ್ದಾರೆ. ಯುವ ದಸರಾದಲ್ಲಿ ಆದ ಲವ್ ಪ್ರಪೋಸ್ ಘಟನೆಯ ಬಗ್ಗೆ ಪ್ರತಾಪ್ ಸಿಂಗ್ ಈ ರೀತಿಯಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ.

ಯುವ ದಸರಾ ವೇದಿಕೆ ಮೇಲೆ ನಿವೇದಿತಾಗೆ ಪ್ರೇಮ ನಿವೇದನೆ ಮಾಡಿದ ಚಂದನ್ ಶೆಟ್ಟಿ ದೊಡ್ಡ ವಿವಾದಕ್ಕೆ ಕಾರಣ ಆಗಿದ್ದಾರೆ. ಒಂದು ಸರ್ಕಾರಿ ಕಾರ್ಯಕ್ರಮವನ್ನು ತಮ್ಮ ವೈಯಕ್ತಿಕ ಕಾರ್ಯಕ್ಕೆ ಬಳಸಿಕೊಂಡಿದ್ದಾರೆ ಎಂದು ವಿರೋಧ ವ್ಯಕ್ತವಾಗಿದೆ.

ಸೋ‍ಷಿಯಲ್ ಮೀಡಿಯಾದಲ್ಲಿ ಚಂದನ್ ಶೆಟ್ಟಿ ಹಾಗೂ ನಿವೇದಿತಾ ವಿರುದ್ಧ ಅನೇಕರು ಅಸಮಾಧಾನ ವ್ಯಕ್ತಿಪಡಿಸುತ್ತಿದ್ದಾರೆ. ಟ್ರೋಲ್ ಗಳು ಸಂಖ್ಯೆ ಕೂಡ ವಿಪರಿತವಾಗಿದೆ. ಮೈಸೂರು ಉಸ್ತುವಾರಿ ಸಚಿವ ಸೋಮಣ್ಣ ಸಹ ಆಕ್ರೋಶ ಹೊರ ಹಾಕಿದ್ದರು. ಹೀಗಿರುವಾಗ, ಮೈಸೂರು ಸಂಸದ ಪ್ರತಾಪ್ ಸಿಂಗ್ ಪ್ರೇಮಿಗಳ ಪರ ನಿಂತಿದ್ದಾರೆ.

ಯುವ ಜೋಡಿಗಳ ಜೊತೆ ನಿಂತ ಸಂಸದ

ಯುವ ಜೋಡಿಗಳ ಜೊತೆ ನಿಂತ ಸಂಸದ

ಯುವ ದಸರಾದಲ್ಲಿ ಚಂದನ್ ಶೆಟ್ಟಿ ಹಾಗೂ ನಿವೇದಿತಾ ಗೌಡ ಲವ್ ಪ್ರಪೋಸ್ ಘಟನೆ ಬಗ್ಗೆ ಸಂಸದ ಪ್ರತಾಪ್ ಸಿಂಹ ಪ್ರತಿಕ್ರಿಯೆ ನೀಡಿದ್ದಾರೆ. ಯುವ ಜೋಡಿಗಳ ಪರ ಮಾತನಾಡಿರುವ ಅವರು, ''ನೀವು ಮಾಡಿರುವುದರಲ್ಲಿ ತಪ್ಪೇನಿಲ್ಲ'' ಎಂದು ಹೇಳಿದ್ದಾರೆ. ಸುದ್ದಿವಾಹಿನಿಗೆ ಘಟನೆಯ ಬಗ್ಗೆ ಪ್ರತಿಕ್ರಿಯೆ ನೀಡಿರುವ ಪ್ರತಾಪ್ ಸಿಂಹ ಸೋಮಣ್ಣ ಹೇಳಿಕೆ ಬಗ್ಗೆಯೂ ಸ್ಪಷ್ಟನೆ ನೀಡಿದ್ದಾರೆ.

ಸೋಮಣ್ಣ ಮಾತಿನ ಅರ್ಥ ಹಾಗಲ್ಲ

ಸೋಮಣ್ಣ ಮಾತಿನ ಅರ್ಥ ಹಾಗಲ್ಲ

''ನಿಜವಾಗಿಯೂ ಇದು ಬುದ್ದಿ ಇಲ್ಲದ ಜನ ಮಾಡುವ ಕೆಲಸ. ಅವರು ಮಾಡಿರುವುದು ಅಪರಾಧ. ಇದು ಹುಡುಗಾಟ ಅಲ್ಲ. ಚಂದನ್ ಶೆಟ್ಟಿ ವಿರುದ್ಧ ಪೋಲೀಸರ ಕ್ರಮ ತೆಗೆದುಕೊಳ್ಳುತ್ತಾರೆ.'' ಎಂದು ಸೋಮಣ್ಣ ಹೇಳಿದ್ದರು. ಈ ಮಾತುಗಳಿನ ಅರ್ಥ ಹೇಳಿದ ಪ್ರತಾಪ್ ಸಿಂಹ ''ಆರು ತಿಂಗಳಿನ ಒಳಗೆ ಮದುವೆ ಆಗಲಿ ಎನ್ನುವುದು ಸೋಮಣ್ಣ ಅವರ ಆಸೆ. ಅವರ ಮಾತನ್ನು ಬೇರೆ ರೀತಿಯಲ್ಲಿ ತೆಗೆದುಕೊಳ್ಳಬೇಡಿ ಎಂದು ತಿಳಿಸಿದ್ದಾರೆ.

ನೀವು ನನಗೆ ಕ್ಷಮೆ ಕೇಳಬೇಡಿ

ನೀವು ನನಗೆ ಕ್ಷಮೆ ಕೇಳಬೇಡಿ

''ನಿನ್ನೆ ಕಾರ್ಯಕ್ರಮದಲ್ಲಿ ಮೊದಲೇ ಹೇಳಿದ್ದರೆ, ನಾನೇ ವೇದಿಕೆ ಮೇಲೆ ಬಂದು ನಿಮಗೆ ಬೊಕ್ಕೆ ನೀಡಿ ಅಭಿನಂದಿಸುತ್ತಿದ್ದೆ. ಸೋಷಿಯಲ್ ಮೀಡಿಯಾದಲ್ಲಿ ಏನೇ ಮಾಡಿದರೂ ಟೀಕೆ ಬರುತ್ತದೆ. ಇದು ನಿಮಗೆ ಹೊಸತು ಇರಬೇಕು, ಇದರ ಬಗ್ಗೆ ತಲೆ ಕೆಡಿಸಿಕೊಳ್ಳಬೇಡಿ. ನೀವು ಕ್ಷಮೆ ಕೇಳಬೇಡಿ. ಯಂಗ್ ಜನರೇಷನ್ ಭಾವನೆಯನ್ನು ಅರ್ಥ ಮಾಡಿಕೊಳ್ಳುವಲ್ಲಿ ಸಮಾಜಕ್ಕೆ ಕೂಡ ಕೆಲವು ಭಾರಿ ಆಗುವುದಿಲ್ಲ.'' ಎಂದಿದ್ದಾರೆ.

ಪರ ವಿರೋಧ ಮಾತುಗಳು

ಪರ ವಿರೋಧ ಮಾತುಗಳು

ಚಂದನ್ ಶೆಟ್ಟಿ ಮತ್ತು ನಿವೇದಿತಾ ಗೌಡ ಲವ್ ಪ್ರಪೋಸ್ ಘಟನೆಗೆ ಪರ ವಿರೋಧ ಮಾತುಗಳಿಗೆ ಕೇಳಿಬರುತ್ತಿವೆ. ಚಂದನ್ ಮಾಡಿದ್ದು ತಪ್ಪು ಎಂದು ಹಲವರು ಹೇಳುತ್ತಿದ್ದಾರೆ. ಕೆಲವರು ಚಂದನ್ ಕ್ಷಮೆ ಕೇಳಿದ ಮೇಲೆ ಇದನ್ನು ಇಲ್ಲಿಗೆ ಬಿಟ್ಟು ಬಿಡಿ ಎಂದಿದ್ದಾರೆ. ಈ ಬಗ್ಗೆ ಮಾತನಾಡಿರುವ ಚಂದನ್ ಇದು ಎಂಗೇಜ್ ಮೆಂಟ್ ಅಲ್ಲ ಲವ್ ಪ್ರಪೋಸ್ ಅಷ್ಟೇ ಎಂದಿದ್ದಾರೆ.

More from Filmibeat

English summary
M P Prathap Simha reaction about yuva dasara incident. Bigg Boss 5 winner, kannada rapper Chandan Shetty got engaged with Niveditha Gowda.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X