For Quick Alerts
  ALLOW NOTIFICATIONS  
  For Daily Alerts

  ಚೂರಿಕಟ್ಟೆಯಲ್ಲಿ ರಹಸ್ಯ ಬೇಧಿಸಲು ಹೊರಟ ನಟ ಪ್ರವೀಣ್

  By Pavithra
  |

  ಚೌಕಾಬಾರ ಎನ್ನುವ ಕಿರುಚಿತ್ರವನ್ನ ಡೈರೆಕ್ಟ್ ಮಾಡಿ ಪ್ರಶಸ್ತಿ ಪಡೆದುಕೊಂಡಿದ್ದ ನಿರ್ದೇಶಕ ರಾಘು ಶಿವಮೊಗ್ಗ ಹೊಸ ಕತೆಯ ಮೂಲಕ ಪ್ರೇಕ್ಷಕರ ಮುಂದೆ ಬರಲು ಸಜ್ಜಾಗಿದ್ದಾರೆ. ಚೂರಿಕಟ್ಟೆ ಚಿತ್ರವನ್ನ ನಿರ್ದೇಶನ ಮಾಡಿರುವ ರಾಘು ಇದೇ ವಾರ ಚಿತ್ರವನ್ನ ತೆರೆಗೆ ತರುವುದಕ್ಕೆ ಸಿದ್ದತೆ ನಡೆಸಿದ್ದಾರೆ. 'ಸಿಂಪಲ್ ಆಗ್ ಇನ್ನೋಂದ್ ಲವ್ ಸ್ಟೋರಿ' ಚಿತ್ರದಲ್ಲಿ ಲವ್ವರ್ ಬಾಯ್ ಆಗಿ ಅಭಿನಯಿಸಿದ್ದ ಪ್ರವೀಣ್ ತೇಜ್ ಚೂರಿಕಟ್ಟೆಯ ರಹಸ್ಯ ಬಯಲು ಮಾಡಲಿರುವ ನಾಯಕ.

  ಚೂರಿಕಟ್ಟೆ ಮೇಕಿಂಗ್ ಟೀಸರ್ ಮತ್ತು ಹಾಡುಗಳಿಂದ ಸಾಕಷ್ಟು ನಿರೀಕ್ಷೆಗಳನ್ನ ಹುಟ್ಟುಹಾಕಿರುವ ಸಿನಿಮಾ. ಚಿತ್ರದಲ್ಲಿ ನಟ ಪ್ರವೀಣ್ ತೇಜ್ ಎರಡು ಶೇಡ್ ನಲ್ಲಿ ಕಾಣಿಸಿಕೊಳ್ಳುತ್ತಾರೆ. ಚೂರಿಕಟ್ಟೆ ಮೇಕಿಂಗ್ ಬಗ್ಗೆ ಸ್ಯಾಂಡಲ್ ವುಡ್ ಸ್ಟಾರ್ ಗಳು ಮೆಚ್ಚುಗೆಯನ್ನ ವ್ಯಕ್ತಪಡಿಸಿದ್ದಾರೆ.

  ಮಾರ್ನಿಂಗ್ ಸ್ಟಾರ್ ಪಿಚ್ಚರ್ಸ್ ಲಾಂಛನದಲ್ಲಿ ಎಸ್ ನಯಾಜುದ್ದೀನ್ ಹಾಗೂ ಎಸ್ ತುಳಸಿರಾಮುಡು ಸಿನಿಮಾವನ್ನ ನಿರ್ಮಾಣ ಮಾಡಿದ್ದಾರೆ. 'ರಾಮಾ ರಾಮಾ ರೇ' ಖ್ಯಾತಿಯ ವಾಸುಕಿ ವೈಭವ್ ಚೂರಿಕಟ್ಟೆ ಚಿತ್ರಕ್ಕೆ ಸಂಗೀತ ನಿರ್ದೇಶನ ಮಾಡಿದ್ದಾರೆ. ನಟಿ ಪ್ರೇರಣಾ ನಾಯಕಿ ಆಗಿ ಅಭಿನಯಿಸಿದರೆ, ಅಚ್ಚುತ್ ಕುಮಾರ್, ಶರತ್ ಲೋಹಿತಾಶ್ವ ಇನ್ನೂ ಅನೇಕ ಕಲಾವಿದರು ಸಿನಿಮಾದಲ್ಲಿ ಇದ್ದಾರೆ.

  ಟಿಂಬರ್ ಮಾಫಿಯಾ ಬಗ್ಗೆ ಕಥೆಯನ್ನ ಎಣೆಯಲಾಗಿದ್ದು ಇದರ ಮಧ್ಯೆ ಸುಂದರವಾದ ಪ್ರೇಮಕತೆಯೂ ಚಿತ್ರದಲ್ಲಿದೆ. ಅದ್ವೈತ್ ಅವರ ಸಿನಿಮಾಟೋಗ್ರಫಿ ಬಗ್ಗೆ ಮೆಚ್ಚುಗೆ ವ್ಯಕ್ತವಾಗಿದ್ದು ಗಣರಾಜ್ಯೋತ್ಸವ ವಿಶೇಷವಾಗಿ ಸಿನಿಮಾ ರಾಜ್ಯಾದ್ಯಂತ ಬಿಡುಗಡೆ ಆಗುತ್ತಿದೆ.

  ನಟ ಪ್ರವೀಣ್ ತೇಜ್ ಅವರ ಹಿಂದಿನ ಸಿನಿಮಾ ನೋಡಿರುವ ಪ್ರೇಕ್ಷಕರು ಚೂರಿಕಟ್ಟೆಯಲ್ಲಿ ಪ್ರವೀಣ್ ಅವರನ್ನ ಬೇರೆಯದ್ದೇ ಪಾತ್ರದಲ್ಲಿ ಕಾಣಬಹುದಾಗಿದೆ. ಕನಕ ಚಿತ್ರ ಜೊತೆಯಾಗಿ ಚೂರಿಕಟ್ಟೆ ತೆರೆ ಕಾಣುತ್ತಿದೆ. ಮೇಕಿಂಗ್ ಮತ್ತು ಹಾಡುಗಳನ್ನ ನೋಡಿದರೆ ಚಿತ್ರ ಕೂಡ ಪ್ರೇಕ್ಷಕರ ಮನಸ್ಸಿಗೆ ಹತ್ತಿರವಾಗುವ ಎಲ್ಲಾ ಲಕ್ಷಣಗಳು ಇವೆ.

  English summary
  Actor Praveen Tej's Kannada film Choorikatte is releasing specially for Republic Day. Praveen Tej plays the lead in the movie. Raghu Shimoga has directed the film.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X