twitter
    For Quick Alerts
    ALLOW NOTIFICATIONS  
    For Daily Alerts

    'ದಿ ವಿಲನ್' 100 ಕೋಟಿ ಗಳಿಸುವುದಕ್ಕೆ ಇದು ಉತ್ತಮ ಅವಕಾಶ.!

    |

    Recommended Video

    TheVillain : ಕೋಟಿ ಕೋಟಿಗೆ ಸೇಲ್ ಆಯ್ತು ದಿ ವಿಲನ್ ಸಿನಿಮಾ..! | Filmibeat Kannada

    ಕನ್ನಡದಲ್ಲಿ ಇದುವರೆಗೂ ಅತಿ ಹೆಚ್ಚು ಕಲೆಕ್ಷನ್ ಮಾಡಿದ ಸಿನಿಮಾಗಳು ಅಂದಾಕ್ಷಣ ರಾಜಕುಮಾರ, ಕಿರಿಕ್ ಪಾರ್ಟಿ, ಮುಂಗಾರು ಮಳೆ, ಸಂಗೊಳ್ಳಿ ರಾಯಣ್ಣ ಅಂತಹ ಚಿತ್ರಗಳು ನೆನಪಾಗುತ್ತೆ. ಆದ್ರೆ, ಯಾವ ಚಿತ್ರವೂ ನೂರು ಕೊಟಿ ಗಡಿದಾಟಿಲ್ಲ ಎನ್ನುವುದು ದಾಖಲೆ.

    ಇದೀಗ, ಇಂತಹ ಸಾಹಸ ಮಾಡಲು ಬರ್ತಿದೆ ಪ್ರೇಮ್ ನಿರ್ದೇಶನದ 'ದಿ ವಿಲನ್'. ಹೌದು, 'ದಿ ವಿಲನ್' ನೂರು ಕೋಟಿ ಗಳಿಸುವ ಎಲ್ಲಾ ಸಾಧ್ಯತೆ ಇದೆ ಎಂಬ ಲೆಕ್ಕಾಚಾರ ಈಗ ಗಾಂಧಿನಗರದಲ್ಲಿ ಶುರುವಾಗಿದೆ. ಪ್ರೇಮ್ ಸಿನಿಮಾ ಅಂದ್ಮೇಲೆ ಹೇಳಬೇಕಾ. ಕನ್ನಡದ ಶೋ ಮ್ಯಾನ್ ಅಂತಾನೆ ಗುರುತಿಸಿಕೊಳ್ಳುವ ಪ್ರೇಮ್ ಪಕ್ಕಾ ಬಿಸಿನೆಸ್ ಮ್ಯಾನ್. ಪ್ರತಿಯೊಂದರಲ್ಲೂ ಪ್ರಚಾರ, ಗಳಿಕೆ ಬಗ್ಗೆ ಯೋಚಿಸಿರುತ್ತಾರೆ. ಹಾಗ್ನೋಡಿದ್ರೆ, ವಿಲನ್ ಸಿನಿಮಾ ಈಗಲೇ ದಾಖಲೆ ಮಾಡಿದೆ.

    'ದಿ ವಿಲನ್' ಚಿತ್ರದ ರಹಸ್ಯಗಳನ್ನ ಬಿಚ್ಚಿಟ್ಟ ಜೋಗಿ ಪ್ರೇಮ್'ದಿ ವಿಲನ್' ಚಿತ್ರದ ರಹಸ್ಯಗಳನ್ನ ಬಿಚ್ಚಿಟ್ಟ ಜೋಗಿ ಪ್ರೇಮ್

    ಚಿತ್ರದ ಆಡಿಯೋ ಹಕ್ಕು, ವಿಡಿಯೋ ಹಕ್ಕು, ಸ್ಯಾಟ್ ಲೈಟ್ ಹಕ್ಕು, ಡಬ್ಬಿಂಗ್ ಹಕ್ಕು, ಹಂಚಿಕೆ....ಹೀಗೆ ಸಿನಿಮಾ ಬಿಡುಗಡೆಯಾಗುವುದಕ್ಕೆ ಮುಂಚೆಯೇ ಬಹುದೊಡ್ಡ ಮೊತ್ತವನ್ನ ಗಳಿಸಿದೆಯಂತೆ. ಹಾಕಿದ ಬಂಡವಾಳವೂ ನಿರ್ಮಾಪಕರ ಕೈ ಸೇರಿರಬಹುದು ಎಂಬ ಮಾತಿದೆ. ಅಲ್ಲಿಗೆ 'ವಿಲನ್' ಸಿನಿಮಾ ಕನ್ನಡದಲ್ಲಿ ಮೊದಲ ನೂರು ಕೋಟಿ ಕ್ಲಬ್ ಸೇರೋದು ಪಕ್ಕಾ ಎನ್ನಲಾಗ್ತಿದೆ. ಏನಿದು ಲೆಕ್ಕಾಚಾರ ಮುಂದೆ ಓದಿ....

    ಪ್ರೀ ಕಲೆಕ್ಷನ್ 50 ಕೋಟಿ

    ಪ್ರೀ ಕಲೆಕ್ಷನ್ 50 ಕೋಟಿ

    ಸದ್ಯದ ಮಾಹಿತಿ ಪ್ರಕಾರ 'ದಿ ವಿಲನ್' ಸಿನಿಮಾ 50 ಕೋಟಿ ಗಳಿಕೆ ಕಂಡಿದೆಯಂತೆ. ಚಿತ್ರದ ಆಡಿಯೋ ಹಕ್ಕು, ವಿಡಿಯೋ ಹಕ್ಕು, ಸ್ಯಾಟ್ ಲೈಟ್ ಹಕ್ಕು, ಡಬ್ಬಿಂಗ್ ಹಕ್ಕು, ಹಂಚಿಕೆ ಹೀಗೆ ಎಲ್ಲವೂ ಸೇರಿ ಆಲ್ ಮೋಸ್ಟ್ 50 ಕೋಟಿ ಆಗಿದೆಯಂತೆ. ಕನ್ನಡದಲ್ಲಿ ಅತಿ ಹೆಚ್ಚು ಗಳಿಕೆ ಕಾಣುವು ಎಲ್ಲಾ ಲಕ್ಷಣಗಳು ಕಾಣುತ್ತಿದೆ.

    1000 ಚಿತ್ರಮಂದಿರದಲ್ಲಿ ವಿಲನ್.?

    1000 ಚಿತ್ರಮಂದಿರದಲ್ಲಿ ವಿಲನ್.?

    ಸಾಮಾನ್ಯವಾಗಿ 250 ರಿಂದ 300 ಚಿತ್ರಮಂದಿರದಲ್ಲಿ ಬಿಡುಗಡೆಯಾಗುವ ಸ್ಟಾರ್ ನಟರ ಚಿತ್ರಗಳು 15 ಕೋಟಿ, 20 ಕೋಟಿ ಕಲೆಕ್ಷನ್ ಮಾಡುತ್ತೆ. ಇನ್ನು 1000 ಚಿತ್ರಮಂದಿರ ಅಂದ್ರೆ ಕಲೆಕ್ಷನ್ ಡಬಲ್ ಆಗಬಹುದು ಎಂಬುದನ್ನ ಅಲ್ಲೆಗಳೆಯುವಂತಿಲ್ಲ.

    ಅಕ್ಟೋಬರ್ ಮೊದಲ ವಾರದಿಂದಲೇ 'ದಿ ವಿಲನ್' ಬುಕ್ಕಿಂಗ್ ಆರಂಭ.!ಅಕ್ಟೋಬರ್ ಮೊದಲ ವಾರದಿಂದಲೇ 'ದಿ ವಿಲನ್' ಬುಕ್ಕಿಂಗ್ ಆರಂಭ.!

    ಇಬ್ಬರು ಸೂಪರ್ ಸ್ಟಾರ್

    ಇಬ್ಬರು ಸೂಪರ್ ಸ್ಟಾರ್

    ಸಾಮಾನ್ಯವಾಗಿ ಶಿವರಾಜ್ ಕುಮಾರ್ ಅಥವಾ ಸುದೀಪ್ ಒಬ್ಬರ ಸಿನಿಮಾ ಅಂದ್ರೆನೇ ಅಷ್ಟು ದೊಡ್ಡ ಮಟ್ಟಕ್ಕೆ ಓಪನಿಂಗ್ ಸಿಗುತ್ತೆ. ಅಂತಹದ್ರಲ್ಲಿ ಇಬ್ಬರು ಸೂಪರ್ ಸ್ಟಾರ್ ಗಳು ಅಭಿನಯಿಸಿರುವ ಸಿನಿಮಾ ಅಂದ್ಮೇಲೆ ನಿರೀಕ್ಷೆ ಮಟ್ಟಕ್ಕಿಂತ ದೊಡ್ಡ ಓಪನಿಂಗ್ ಸಿಗಬಹುದು. ಇದು ಕೂಡ ಕಲೆಕ್ಷನ್ ಮೇಲೆ ಪರಿಣಾಮ ಬೀರಲಿದೆ.

    ಖುಷಿಯಲ್ಲೊಂದು ನಿರಾಸೆ: 'ವಿಲನ್' ಬರುವ ದಿನ ಮತ್ತೆ ಬದಲಾಯ್ತು.!ಖುಷಿಯಲ್ಲೊಂದು ನಿರಾಸೆ: 'ವಿಲನ್' ಬರುವ ದಿನ ಮತ್ತೆ ಬದಲಾಯ್ತು.!

    ಸಿನಿಮಾ ಚೆನ್ನಾಗಿದ್ರೆ ಮುಗಿತು

    ಸಿನಿಮಾ ಚೆನ್ನಾಗಿದ್ರೆ ಮುಗಿತು

    ಸ್ಟಾರ್ ನಟರ ಸಿನಿಮಾಗಳು ಅಂದ್ರೆ ಅವರ ಅಭಿಮಾನಿಗಳಿಂದಲೇ ಯಶಸ್ಸು ಕಾಣುತ್ತೆ. ಇನ್ನು ಸಿನಿಮಾ ಇಷ್ಟವಾಗ್ಬಿಟ್ರೆ ಮುಗಿತು. ಈಗ ವಿಲನ್ ಲೆಕ್ಕಚಾರವೂ ಹಾಗೆ. ಸುದೀಪ್ ಮತ್ತು ಶಿವಣ್ಣ ಸಿನಿಮಾ ಅನ್ನೋ ಬ್ಯ್ರಾಂಡ್ ಜೊತೆಗೆ ಸಿನಿಮಾ ಸೂಪರ್ ಎಂಬ ಟಾಕ್ ಬಂದ್ರೆ ಅಲ್ಲಿಗೆ 'ವಿಲನ್' ಅಬ್ಬರ ಮತ್ತಷ್ಟು ಜೋರಾಗುತ್ತೆ.

    ಗಾಂಧಿನಗರದ 3 ಚಿತ್ರಮಂದಿರ ಸೇರಿದಂತೆ ಸಾವಿರ ಥಿಯೇಟರ್ ಗಳಲ್ಲಿ ವಿಲನ್ ವಿಶ್ವರೂಪ!ಗಾಂಧಿನಗರದ 3 ಚಿತ್ರಮಂದಿರ ಸೇರಿದಂತೆ ಸಾವಿರ ಥಿಯೇಟರ್ ಗಳಲ್ಲಿ ವಿಲನ್ ವಿಶ್ವರೂಪ!

    ಅಕ್ಟೋಬರ್ 18ಕ್ಕೆ ಎಂಟ್ರಿ

    ಅಕ್ಟೋಬರ್ 18ಕ್ಕೆ ಎಂಟ್ರಿ

    ಪ್ರೇಮ್ ನಿರ್ದೇಶನ, ಸುದೀಪ್ ಮತ್ತು ಶಿವರಾಜ್ ಕುಮಾರ್ ನಾಯಕರು. ಆಮಿ ಜಾಕ್ಸನ್ ನಟಿ. ಇವರ ಜೊತೆ ತೆಲುಗು ನಟ ಶ್ರೀಕಾಂತ್, ಬಾಲಿವುಡ್ ನಟ ಮಿಥುನ್ ಚಕ್ರವರ್ತಿ ಸಾಥ್. ಅರ್ಜುನ್ ಜನ್ಯ ಸಂಗೀತ. ಸಿ.ಆರ್ ಮನೋಹರ್ ಅವರ ಅದ್ಧೂರಿ ಪ್ರೊಡೊಕ್ಷನ್. ಎಲ್ಲರ ಹಣೆ ಬರಹ ಅಕ್ಟೋಬರ್ 18 ರಂದು ನಿರ್ಧಾರವಾಗುತ್ತೆ.

    English summary
    Prediction about sudeep and shiva rajkumar's The villain movie collection. movie will releasing on october 18th all over india.
    Thursday, September 20, 2018, 13:58
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X