For Quick Alerts
  ALLOW NOTIFICATIONS  
  For Daily Alerts

  ಇದು ಪ್ರೇಮಿಗಳ ಪ್ರೀತಿ ಗೀತಿ ಇತ್ಯಾದಿಗಳ ವಿಷಯ

  By Rajendra
  |

  ಇದೇ ಮೊದಲ ಬಾರಿಗೆ ಬಣ್ಣಹಚ್ಚಿರುವ ಪವನ್ ಒಡೆಯರ್ ನಾಯಕ ನಟನಾಗಿ ಪ್ರೀತಿ ಗೀತಿ ಇತ್ಯಾದಿ ಚಿತ್ರದ ಮೂಲಕ ಪ್ರೇಕ್ಷಕರ ಮುಂದೆ ಬರುತ್ತಿದ್ದಾರೆ. ಈ ಚಿತ್ರಕ್ಕೆ ಸಂಭಾಷಣೆ, ನಿರ್ದೇಶನವನ್ನು ವೀರೇಂದ್ರ ಅವರದು. ಇದು ಅವರ ಚೊಚ್ಚಲ ನಿರ್ದೇಶನದ ಚಿತ್ರ.

  ಪವನ್ ಒಡೆಯರ್ ಚೊಚ್ಚಲ ಅಭಿನಯ, ಇನ್ನೊಂದು ಕಡೆ ವೀರೇಂದ್ರ ಅವರ ಮೊದಲ ನಿರ್ದೇಶನ. ಇವರಿಬ್ಬರ ಕಾಂಬಿನೇಷನ್ ಎಷ್ಟರ ಮಟ್ಟಿಗೆ ವರ್ಕ್ ಔಟ್ ಆಗಿದೆ ಎಂಬುದು ಇದೇ ಜೂ.13ರಂದು ಗೊತ್ತಾಗಲಿದೆ. ಕಾರಣ ಪ್ರೀತಿ ಗೀತಿ ಇತ್ಯಾದಿ ಅಂದು ರಾಜ್ಯದಾದ್ಯಂತ ತೆರೆಕಾಣುತ್ತಿದೆ. [ಪವರ್ ಸ್ಟಾರ್ 'ರಣ ವಿಕ್ರಮ' ಥ್ರಿಲ್ಲಿಂಗ್ ಡೀಟೇಲ್ಸ್]

  ಫ್ಯಾಂಟಸಿ ಸ್ಕ್ರೀನ್ಸ್ ಹಾಗೂ ಯೋಗರಾಜ್ ಮೂವೀಸ್ ವತಿಯಿಂದ ಬಿಡುಗಡೆ ಆಗುತ್ತಿರುವ ಪ್ರೀತಿ ಗೀತಿ ಇತ್ಯಾದಿ' ಕನ್ನಡ ಚಿತ್ರದಿಂದ ಹೊಸ ನಿರ್ಮಾಪಕ ವಿಜಯಕುಮಾರ್ ಮಂಗ್ಸುಳೆ, ಹೊಸ ನಿರ್ದೇಶಕ ವೀರೇಂದ್ರ, ಖ್ಯಾತ ನಿರ್ದೇಶಕ ಪವನ್ ವಡೆಯರ್ ನಟನಾಗಿ, ಹೊಸ ನಾಯಕಿ ಸಂಗೀತ ಭಟ್ ಪರಿಚಯ ಆಗುತ್ತಿದ್ದಾರೆ.

  ಮತ್ತೊಬ್ಬ ಯೋಗರಾಜ್ ಭಟ್ ಅವರ ಶಿಷ್ಯ ವೀರೇಂದ್ರ ನಿರ್ದೇಶಕ ಪವನ್ ವಡೆಯರ್ ಅವರನ್ನು ಈ ಸಿನೆಮಾದಲ್ಲಿ ಬಾರ್ ಒಂದರಲ್ಲಿ ಉದ್ಯೋಗಿ ಆಗಿ ಕಾಣಿಸುತ್ತಿದ್ದಾರೆ. ವೀರೇಂದ್ರ ಅವರ ಚಿತ್ರಕ್ಕೆ ಸಂಭಾಷಣೆ ಬರೆದಿರುವರು.

  ಕೇವಲ ಎಂಟು ಪಾತ್ರಗಳನ್ನು ಒಳಗೊಂಡ ಈ 'ಪ್ರೀತಿ ಗೀತಿ ಇತ್ಯಾದಿ' ಚಿತ್ರದ ನಾಯಕಿ ಸಂಗೀತಾ ಭಟ್. ಯೋಗರಾಜ್ ಭಟ್ ಅವರು ಒಳ್ಳೇದು ಹಾಗೂ ಕೆಟ್ಟದ್ದರ ಬಗ್ಗೆ ಒಂದು ಹಾಡನ್ನು ರಚಿಸಿದ್ದಾರೆ. ಜಯಂತ್ ಕಾಯ್ಕಿಣಿ ಸಹ ಈ ಚಿತ್ರಕ್ಕೆ ಸಾಹಿತ್ಯ ಒದಗಿಸಿದ್ದಾರೆ.

  ವೀರ ಸಮರ್ಥ ಅವರ ಸಂಗೀತವಿರುವ ಚಿತ್ರಕ್ಕೆ ಭಾಸ್ಕರ್ ರೆಡ್ಡಿ ಅವರು ಛಾಯಾಗ್ರಾಹಕರು. ರಂಗಾಯಣ ರಘು, ವಿನಯಾ ಪ್ರಕಾಶ್, ಮಂಜುನಾಥ್ ಗೌಡ, ನಭ ನಟೇಶ್ ಹಾಗೂ ಇತರರು ತಾರಾಗಣದಲ್ಲಿ ಇದ್ದಾರೆ. ಜಯಣ್ಣ ಫಿಲ್ಮ್ಸ್ ಈ ಚಿತ್ರದ ಹಂಚಿಕೆ ಉಸ್ತುವಾರಿ ವಹಿಸಿದೆ. ಬೆಂಗಳೂರಿನ ಅನುಪಮ ಪ್ರಮುಖ ಚಿತ್ರಮಂದಿರ ಸೇರಿದಂತೆ ರಾಜ್ಯದಾದ್ಯಂತ 30ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ತೆರೆಕಾಣುತ್ತಿದೆ. (ಒನ್ಇಂಡಿಯಾ ಕನ್ನಡ)

  English summary
  Kannada movie Preethi Geethi Ityaadi releases on 13th June. A Kannada film directed by debutant director Veerendra, starring Pavan Wadeyar, Sangeetha Bhat. Veer Samarth is the music director of the film.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X