For Quick Alerts
  ALLOW NOTIFICATIONS  
  For Daily Alerts

  ಬಾಲಿವುಡ್ ನಲ್ಲಿ ಶುರುವಾಯ್ತು ಕನ್ನಡದ 'ಪ್ರೀತಿಯ ರಾಯಭಾರಿ'

  By Pavithra
  |

  ಹಾಡುಗಳಿಂದಲೇ ಬಾರಿ ಸದ್ದು ಮಾಡಿದ್ದ ಸಿನಿಮಾ ಪ್ರೀಯಿಯ ರಾಯಭಾರಿ. ಕಿಚ್ಚ ಸುದೀಪ್ ಚಿತ್ರದ ಹಾಡುಗಳನ್ನ ಬಿಡುಗಡೆ ಮಾಡಿ ಸಿನಿಮಾತಂಡದ ಬಗ್ಗೆ ಮೆಚ್ಚುಗೆ ವ್ಯಕ್ತ ಪಡಿಸಿದ್ದರು. ನಂತರ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಪ್ರೀತಿಯ ರಾಯಭಾರಿ ಸಿನಿಮಾದ ಟೈಟಲ್ ಸಾಂಗ್ ಅನ್ನು ಹಾಡಿದ್ದರು. ವಿಡಿಯೋ ಸಾಂಗ್ ಬಿಡುಗಡೆ ಮಾಡಿ ಗಾಂಧಿನಗರ ತುಂಬೆಲ್ಲಾ ಬಾರಿ ಸುದ್ದಿ ಮಾಡಿತ್ತು ಚಿತ್ರತಂಡ.

  ನವ ನಿರ್ದೇಶಕ ಮುತ್ತು ಆಕ್ಷನ್ ಕಟ್ ಹೇಳಿರುವ ಪ್ರೀತಿಯ ರಾಯಭಾರಿ ಸಿನಿಮಾ ಮೂಲಕ ನಟ ನಕುಲ್ ಕುಮಾರ್ ಕನ್ನಡ ಚಿತ್ರರಂಗಕ್ಕೆ ನಾಯಕನಾಗಿ ಪಾದಾರ್ಪಣೆ ಮಾಡುತ್ತಿದ್ದಾರೆ. ಸುದ್ದಿ ವಾಹಿಯಿಯಲ್ಲಿ ಪ್ರಸಾರವಾಗುವ ಅಪರಾಧ ಸುದ್ದಿಗಳ ಒಂದು ಎಳೆಯನ್ನ ತೆಗೆದುಕೊಂಡು ಅದಕ್ಕೆ ಪ್ರೇಮಕಥೆಯನ್ನ ಸೇರಿಸಿ ಸುಂದರವಾದ ಕಥೆಯನ್ನ ಎಣೆದಿದ್ದಾರೆ ನಿರ್ದೇಶಕ ಮುತ್ತು.

  ಕೆ ಮಂಜು ಮಗನ ಸಿನಿಮಾ ಎಂಟ್ರಿಗೆ ಕಿಚ್ಚನಿಂದ ಸ್ವಾಗತ

  ನಕುಲ್ ಜೊತೆಯಲ್ಲಿ ಅಂಜನಾ ದೇಶಪಾಂಡೆ ಚಿತ್ರದಲ್ಲಿ ನಾಯಕಿಯಾಗಿ ಅಭಿನಯಿಸಿದ್ದಾರೆ. ವಿಡಿಯೋ ಸಾಂಗ್ ಮತ್ತು ಟ್ರೇಲರ್ ನಿಂದ ಚಿತ್ರದ ಬಗ್ಗೆ ಸಾಕಷ್ಟು ನಿರೀಕ್ಷೆಗಳು ಹುಟ್ಟುಕೊಂಡಿತ್ತು. ಸದ್ಯ ಚಿತ್ರಕ್ಕೆ ಸೆನ್ಸಾರ್ ಮಂಡಳಿಯಿಂದ ಯು/ಎ ಸರ್ಟಿಫಿಕೇಟ್ ಸಿಕ್ಕಿದೆ. ವಿಶೇಷ ಅಂದರೆ ಬಿಡುಗಡೆಗೆ ಮುಂಚೆಯೇ ಪ್ರೀತಿಯ ರಾಯಭಾರಿ ಸಿನಿಮಾದ ಹಿಂದಿ ಡಬ್ಬಿಂಗ್ ಹಕ್ಕು ಆತ್ಮಸ್ ಸ್ಟುಡಿಯೋಸ್ ಅವರಿಗೆ ಉತ್ತಮ ಬೆಲೆಗೆ ಮಾರಾಟವಾಗಿದೆ.

  ಆರಂಭದಿಂದಲೂ ಪ್ರೀತಿಯ ರಾಯಭಾರಿ ಸಿನಿಮಾಗೆ ಎಲ್ಲೆಡೆ ಉತ್ತಮ ಪ್ರತಿಕ್ರಿಯೆ ಸಿಕ್ಕಿರುವುದು ನಿರ್ಮಾಪಕ ಎಸ್ ಆರ್ ವೆಂಕಟೇಶ್ ಗೌಡ ಅವರಿಗೆ ಖುಷಿ ತಂದಿದೆ. ಅರ್ಜುನ್ ಜನ್ಯ ಸಂಗೀತ ಸಂಯೋಜನೆ ಮಾಡಿರುವ ಪ್ರೀತಿಯ ರಾಯಭಾರಿ ಸಿನಿಮಾಗೆ ಜಯಂತ್ ಕಾಯ್ಕಿಣಿ, ಚೇತನ್ ಕುಮಾರ್, ಚಂದನ್ ಶೆಟ್ಟಿ ಸಾಹಿತ್ಯ ಬರೆದಿದ್ದಾರೆ. ಸದ್ಯ ಪ್ರಚಾರದಲ್ಲಿ ಬ್ಯುಸಿ ಆಗಿರುವ ಚಿತ್ರತಂಡ ಫೆಬ್ರವರಿಯಲ್ಲಿ ಸಿನಿಮಾವನ್ನ ಬಿಡುಗಡೆ ಮಾಡಲಿದ್ದಾರೆ.

  English summary
  Kannada Preethiya Rayabhari film Hindi dubbing rights have been sold for a good price. Nakul and Anjana Deshpande are the lead artist in Preethiya Rayabhari movie. Muthu directed the film.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X