‘ಮೊಹೊಬ್ಬತೇ’ ಯಶಸ್ಸಿನ ಅಲೆಯಲ್ಲಿ ತೇಲಾಡಿದ

By Super

ಸ್ಯಾಂಡಲ್‌ವುಡ್‌ಗೆ ಇದೋ ಇನ್ನೊಬ್ಬಳು ಹೊರನಾಡ ನಾಯಕಿ- ಚುಂಯ್‌ಮುಂಯ್‌ ಹುಡುಗಿ ಪ್ರೀತಿ ಝಂಗಿಯಾನಿ 'ನಿಂಗ್ಯಾಕೆ?" ಯಲ್ಲಿ ಉಪೇಂದ್ರಗೆ ಜೋಡಿ. ಆಗಸ್ಟ್‌ 5ರಂದು ಬೆಂಗಳೂರಿನ ರಾಜರಾಜೇಶ್ವರಿ ಕಲ್ಯಾಣ ಮಂಟಪದಲ್ಲಿ ಕೆಮೆರಾ ಕಣ್ಣಿನೊಳಗೆ ತುಂಬಿಕೊಂಡ ಈಕೆಗೆ ಭಾವ- ಭಂಗಿ ಹೇಳಿಕೊಟ್ಟವರು ಡಿ.ರಾಜೇಂದ್ರ ಬಾಬು. ಇದರೊಂದಿಗೆ ಎಲ್ಲಿಂದಲೋ ಬರುವವರ ಭರಾಟೆ ಇನ್ನಷ್ಟು ಚುರುಕಾಗಿದೆ.

ಪ್ರೀತಿ ಯಾರು ಅಂತ ನಿಮಗೆ ಗೊತ್ತೆ?

ಮೂಲತಃ ಸಿಂಧಿ ಹುಡುಗಿಯಾದ ಈಕೆ ಸದ್ಯಕ್ಕೆ ಮುಂಬೈ ಬೆಡಗಿ. ನಟಿಸಿದ್ದು ಬೆರಳೆಣಿಕೆಯ ಚಿತ್ರಗಳಾದರೂ ಆದಿತ್ಯ ಚೋಪ್ರಾ ನಿರ್ದೇಶನದ 'ಮೊಹೊಬ್ಬತೇ" ಈಕೆಗೆ ಹೆಸರು ತಂದುಕೊಟ್ಟಿತು. ಆ ಚಿತ್ರ ನೋಡಿದ ನಂತರ ನಿದ್ದೆಗೆಟ್ಟ ಅಭಿಮಾನಿಯಾಬ್ಬ ಪ್ರೀತಿಗಾಗಿ ವೆಬ್‌ಸೈಟೊಂದನ್ನೇ ಸೃಷ್ಟಿಸಿ, ಪ್ರೀತ್ಸೆ ಪ್ರೀತ್ಸೆ ಅಂದ. ತಮಾಷೆ ಅಂದರೆ, 'ಮೊಹೊಬ್ಬತೇ"ನಲ್ಲಿ ಪ್ರೀತಿ ನಟಿಸಿದ್ದು ವಿಧವೆಯಾಗಿ. ಇದು ಸೆಂಟಿಮೆಂಟಾಗಿ ಕ್ಲಿಕ್ಕಾದದ್ದಕ್ಕಿಂತ ಗ್ಲ್ಯಾಮರ್‌ ಬಲೆ ಎಸೆದಿದ್ದೇ ಹೆಚ್ಚು.

ಅಂದು.... ಪ್ರೀತಿ ಇನ್ನೂ ಓದುತ್ತಿದ್ದರು. ಮಾಡೆಲಿಂಗ್‌ನ ಕನಸೂ ಕಂಡಿರಲಿಲ್ಲ. ಕಾಲೇಜು, ಆ್ಯಪ್‌ಟೆಕ್‌ನ ಗ್ರಾಫಿಕ್‌ ಕೋರ್ಸು, ಮನೆ- ಇಷ್ಟೇ ಸಾಕು ಎಂಬ ಜಾಯಮಾನದ ಮಾಮೂಲಿ ವಿದ್ಯಾರ್ಥಿನಿ. ಪಠ್ಯೇತರ ಚಟುವಟಿಕೆಗಳಲ್ಲಿ ಈಕೆಯ ಪ್ರತಿಭೆ ಅನಾವರಣಗೊಂಡಿತ್ತು. ಒಂದು ದಿನ ಇದ್ದಕ್ಕಿದ್ದಂತೆ ಹೆಂಗಸೊಬ್ಬರು ಬಂದು, ಕಾಲ್ಗೇಟ್‌ ಜಾಹೀರಾತಿಗಾಗಿ ಮಾಡೆಲಿಂಗ್‌ಗೆ ಬುಲಾವು ಕೊಟ್ಟರು. ಅಂದಿನಿಂದ ಪ್ರೀತಿ ದಿಕ್ಕೇ ಬದಲಾಯಿತು.

ರಾಜಶ್ರೀ ಮ್ಯೂಸಿಕ್‌ ವಿಡಿಯೋ ಆಲ್ಬಂಗೆ 200 ಹುಡುಗಿಯರ ಸಾಲು ನಿಂತಿತ್ತು. ಆ ಪೈಕಿ ಅದೃಷ್ಟ ಖುಲಾಯಿಸಿದ್ದು ಪ್ರೀತಿಗೆ. 'ಕಾದಲ್‌ ದೇಶಂ" ಖ್ಯಾತಿಯ ಬೆಂಗಳೂರು ಹುಡುಗ ಅಬ್ಬಾಸ್‌ ಜೊತೆ 'ಚುಂಯ್‌ಮುಂಯ್‌ ಸೀ ತುಂ ಲಗ್‌ ತೀ ಹೋ" ಎಂಬ ಹಾಡಲ್ಲಿ ಕಾಣಿಸಿಕೊಂಡ ಈಕೆ ಫ್ರೆಷ್‌ನೆಸ್‌ಗೆ ಇನ್ನೊಂದು ಹೆಸರಾದರು. 'ಯೇ ಹೈ ಪ್ರೇಮ್‌" ಎಂಬ ಆ ಆಲ್ಬಂ ಮಾರುಕಟ್ಟೆಗೆ ಕೊಟ್ಟದ್ದು ಒಂದು ಕ್ಲಿಪ್‌ ಡಾಲ್‌ (ಬಟ್ಟೆಗೆ ಸಿಕ್ಕಿಸಿಕೊಳ್ಳುವಂಥಾ ಪುಟ್ಟ ಬೊಂಬೆ) ; ಇನ್ನೊಂದು ಪ್ರೀತಿ.

ಶರಾರತ್‌ ಆಫರ್‌ನ ಬೇಡ ಅಂದರು : 1999ರಲ್ಲಿ ಮಲೆಯಾಳಂ ಸಿನಿಮಾಗೂ ಕಾಲಿಟ್ಟ ಪ್ರೀತಿ ಆ ನಂತರ ತಮಿಳು, ತೆಲುಗಿನ ಚಿತ್ರಗಳಲ್ಲೂ ನಟಿಸಿದರು. ತೆಲುಗಿನ ತ-ಮ್ಮುಡು ಹಾಗೂ ನರಸಿಂಹನಾಯುಡು ಕ್ಲಿಕ್‌ ಆದವು. ಆದರೂ ಪ್ರೀತಿ ಇದ್ದಲ್ಲೇ ಇದ್ದರು. ತುರುಸಿನ ಸ್ಪರ್ಧೆಯಲ್ಲಿ ಆದಿತ್ಯ ಚೋಪ್ರಾ ಅವರ ಮೊಹೊಬ್ಬತೇ ಚಿತ್ರಕ್ಕೆ ಈಕೆ ಆಯ್ಕೆಯಾದದ್ದೇ ತಡ, ಪ್ರೀತಿ ಎಂಬುದು ಬಿಸಿ ಹೊಸಮುಖವಾಯಿತು. ಈ ಸಿನಿಮಾದಲ್ಲಿನ ಕಮಿಟ್‌ಮೆಂಟ್‌ಗಾಗಿ ಬಿಗ್‌ ಬೀ ಪುತ್ರ ನಟಿಸುತ್ತಿರುವ ಶರಾರತ್‌ ಚಿತ್ರದ ಆಫರನ್ನೂ ಪ್ರೀತಿ ಬಿಡಬೇಕಾಯಿತು.

ಆದರೀಗ ಪ್ರೀತಿ ಸಿಕ್ಕಾಪಟ್ಟೆ ಬಿಸಿಯೇನೂ ಅಲ್ಲ. ನಿರ್ಮ ಸೋಪು, ಲ್ಯಾಕ್ಮೆ ಕಂಪು, ವಾಟಿಕಾ ಶ್ಯಾಂಪು... ಹೀಗೆ ಅಲ್ಲೊಂದು ಇಲ್ಲೊಂದು ಜಾಹೀರಾತುಗಳಲ್ಲಿ ಮುಖ ತೋರುತ್ತಿದ್ದಾರೆ.

ಅಂದಹಾಗೆ, ಪ್ರೀತಿಗೆ ತಮ್ಮ ಬೆಡ್‌ ರೂಂ ಅಂದರೆ ಇಷ್ಟವಂತೆ. ನಮ್ಮ ಸ್ಯಾಂಡಲ್‌ವುಡ್‌ನ ಕಿರಿಕ್ಕು ಜನ ಅದನ್ನೇ ತಪ್ಪು ಅರ್ಥೈಸಿಕೊಂಡು, ಕೆಟ್ಟ ಹೆಜ್ಜೆ ಇಡದಿರಲಿ.

-ಅಂ-ದ-ಹಾ-ಗೆ, ಆಗಸ್ಟ್‌ 18 ರಂದು ಪ್ರೀತಿ ಹುಟ್ಟುಹಬ್ಬ. ಶು-ಭಾ-ಶ-ಯ-ಗ-ಳು

English summary
Mohabbatein fame Preeti is heroin of Ningyake
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X