Sanjjanaa Galrani: ತಲೆ ಬೋಳಿಸಿಕೊಂಡು ಫೂಲ್ ಮಾಡಲು ಹೋಗಿ ಟ್ರೋಲ್ ಆದ ಸಂಜನಾ!

ನಟಿ ಸಂಜನಾ ಗಲ್ರಾನಿ ಇತ್ತೀಚೆಗೆ ಹೆಚ್ಚು ಸುದ್ದಿ ಆಗೋದು, ಸದ್ದು ಮಾಡೋದು ಎಲ್ಲವೂ ತಮ್ಮ ಸಾಮಾಜಿಕ ಜಾಲತಾಣದ ಖಾತೆಗಳ ಮೂಲಕ. ಇನ್ನು ಸದ್ಯಕ್ಕೆ ಸಿನಿಮಾ ಅಭಿನಯ ಬಿಟ್ಟು ಸಂಜನಾ ತಮ್ಮ ಕೌಟುಂಬಿಕ ಜೀವನದಲ್ಲಿ ಹೆಚ್ಚು ಸಕ್ರಿಯವಾಗಿದ್ದಾರೆ. ತಮ್ಮ ಮನೆಯವರ ಜೊತೆಗೂ ಸಂಜನಾ ವಿಡಿಯೋಗಳನ್ನು ಹಂಚಿಕೊಳ್ಳುತ್ತಿರುತ್ತಾರೆ.

ಸಂಜನಾ ಸಿನಿಮಾ ಮಾಡದೇ ಇದ್ದರು ಸೋಶಿಯಲ್ ಮೀಡಿಯಾದ ಮೂಲಕ ತಮ್ಮ ಅಭಿಮಾನಿಗಳಿಗೆ ಕನೆಕ್ಟ್ ಆಗಿ ಇರುತ್ತಾರೆ. ಸಂಜನಾ ವಿಡಿಯೋಗಳಿಗೆ ಸಾಕಷ್ಟು ಅಭಿಮಾನಿಗಳು ಇದ್ದರೆ. ಹಾಗಾಗಿ ಸಂಜನಾ ಆಗಾಗ ವಿಡಿಯೋ ಮಾಡಿ ಹಾಕುತ್ತಾ ಇರುತ್ತಾರೆ. ಇತ್ತೀಚೆಗೆ ಸಂಜನಾ ಬೋಳು ತಲೆಯ ಫೋಟೊ ಒಂದು ವೈರಲ್ ಆಗಿತ್ತು. ಈ ಫೋಟೊ ನೋಡಿದ ಕೂಡಲೇ ಇದು ಎಡಿಡೆಟ್ ಎಂದು ಗೊತ್ತಾಗುತ್ತದೆ. ಆದರೆ ಇದು ನಿಜವಲ್ಲ ಎನ್ನುವುದನ್ನು ನಟಿ ಸಂಜನಾ ತಾವೇ ಧೃಡಪಡಿಸಿದ್ದಾರೆ.

ನಟಿ ಸಂಜನಾ ಸಿನಿಮಾ ನಟಿಯರ ಪೈಕಿ, ಒಬ್ಬ ಗ್ಲಾಮರ್ ನಟಿ ಎನ್ನುವುದನ್ನು ಒಪ್ಪಲೇ ಬೇಕು. ಸಂಜನಾ ಮೊದಲ ಚಿತ್ರದಿಂದಲೂ ಕೂಡ ಸಿಕ್ಕಾ ಪಟ್ಟೆ ಗ್ಲಾಮರಸ್ ಆಗಿ ತೆರೆಯ ಮೇಲೆ ಕಾಣಿಸಿಕೊಳ್ಳುತ್ತಾರೆ. ಈಗಲೂ ಕೂಡ ಸಂಜನಾ ಗ್ಲಾಮ್ ಲುಕ್‌ ಕಡಿಮೆ ಆಗಿಲ್ಲ. ಈಗ ಆಕೆ ತಮ್ಮ ತಲೆ ಕೂದಲನ್ನು ದಾನ ಮಾಡಿರುವ ಬೋಳು ತಲೆಯ ಫೋಟೊ ಹಾಕಿಕೊಂಡು ಅಚ್ಚರಿ ಮೂಡಿಸಿದ್ದರು. ಆದರೆ ಇದು ಏಪ್ರಿಲ್ ಫೂಲ್ ಎಂದು ಈಗ ಹೇಳಿಕೊಂಡಿದ್ದಾರೆ.

Recommended Video

Sanjjanaa Galrani | ಹಿಂಗೆಲ್ಲಾ ಮಾಡೋದ್ರಿಂದ ಏನು ಸಿಗುತ್ತೆ ಮೇಡಂ ಎಂದ ಫ್ಯಾನ್ಸ್

ಸಂಜನಾ ತಲೆ ಬೋಳಿಸಿಕೊಂಡಿದ್ದು ಸುಳ್ಳು!

ನಟಿ ಸಂಜನಾ ತಲೆ ಬೋಳಿಸಿಕೊಂಡಿದ್ದ ಪೋಟೊ, ನೀವೂ ಕೂಡ ನೋಡಿರುತ್ತೀರಿ. ಅದು ನಿಜ ಎಂದು ನಂಬಿದರು ನಂಬಿರುತ್ತೀರಿ. ಆದರೆ ಅದು ನಿಜವಲ್ಲ. ಏಪ್ರಿಲ್ ಫೂಲ್‌ಗಾಗಿ ಸಂಜನಾ ಮಾಡಿರುವ ಗಿಮಿಕ್ ಅಷ್ಟೆ. ಇದನ್ನು ಈಗ ವಿಡಿಯೋ ಮಾಡುವ ರಿವೀಲ್ ಮಾಡಿದ್ದಾರೆ. ಹಾಗಾಗಿ ಸಂಜನಾ ಬೋಳು ತಲೆಯ ಫೋಟೊಗೆ ಬರೆದಿದ್ದ ಕ್ಯಾಪ್ಷನ್ ಕಂಡು ನೀವೂ ಪಾಪ ಎಂದು ಮರುಗಿದ್ದರೆ, ಫೂಲ್ ಆದ ಹಾಗೆ.

ವೈರಲ್ ಆಗಿತ್ತು ಸಂಜನಾ ಬೋಳು ತಲೆಯ ಫೋಟೊ!

ನಟಿ ಸಂಜನಾ ಗಲ್ರಾನಿ ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಹೊಸ ಲುಕ್‌ನ ಫೋಟೊ ಒಂದನ್ನು ಹರಿ ಬಿಟ್ಟಿದ್ದರು. ಆದರೆ ಅದು ಮಾಮೂಲಿ ಫೋಟೊ ಆಗಿರಲಿಲ್ಲ. ಈ ಫೋಟೊದಲ್ಲಿ ಸಂಜನಾ ತಲೆಯಲ್ಲಿ ಕೂದಲು ಇರಲಿಲ್ಲ. ತಲೆ ಬೋಳಿಸಿಕೊಂಡ ಲುಕ್‌ನಲ್ಲಿದ್ದರು ಸಂಜನಾ. ಇದು ಲುಕ್ ಮಾತ್ರ ಅಲ್ಲ. ಸಂಜನಾ ತನ್ನ ತಲೆ ಕೂದಲನ್ನು ದಾನ ಮಾಡಿದ್ದಾರೆ. ನಂತರ ಬೋಳು ತಲೆಯ ಫೋಟೊ ಹಂಚಿಕೊಂಡಿದ್ದಾರೆ ಎನ್ನುವ ರೀತಿಯಲ್ಲಿ ಕ್ಯಾಪ್ಷನ್ ಬರೆದಿದ್ದರು. ಸಂಜನಾಳ ಈ ಲುಕ್ ಕಂಡವರು ಸಂಜನಾಗೆ ಏನಾಯ್ತು?. ಎಂದು ಅಚ್ಚರಿ ವ್ಯಕ್ತ ಪಡಿಸುತ್ತಿದ್ದಾರೆ.

ಫೂಲ್ ಮಾಡಿ, ಟ್ರೋಲ್ ಆದ ಸಂಜನಾ!

ಫೂಲ್ ಮಾಡಿ, ಟ್ರೋಲ್ ಆದ ಸಂಜನಾ!

ನಟಿ ಸಂಜನಾ ತಮ್ಮ ತಲೆ ಕೂದಲನ್ನು ದಾನ ಮಾಡಿದ್ದೇನೆ ಎಂದು ತಮ್ಮ ಜೀವನದ ಬಗ್ಗೆ ಭಾವನಾತ್ಮ ಸಂದೇಶ ಬರೆದುಕೊಂಡಿದ್ದರು. ಇದರಿಂದ ಹಲವರು ಸಂಜನಾ ಬಗ್ಗೆ ಮರುಗಿ ಕಮೆಂಟ್ ಮಾಡಿದ್ದರು. ಆದರೆ ಅದು ನಿಜವಲ್ಲ ಎಂದು ಗೊತ್ತಾದ ಮೇಲೆ ಈ ರೀತಿ ಮಾಡಿರುವು ತಪ್ಪು, ತಲೆ ಕೂದಲನ್ನು ಕ್ಯಾನ್ಸರ್ ಪೀಡಿತರಿಗೆ ದಾನ ಮಾಡುತ್ತರೆ. ಈ ವಿಚಾರದಲ್ಲಿ ಹೀಗೆ ಮಾಡಿದ್ದು ಸರಿ ಇಲ್ಲ ಎಂದು ಹಲವರು ಕಮೆಂಟ್ ಮಾಡಿದ್ದರೆ.

ಸಂಜನಾ ಬರೆದಿದ್ದ ಸಂದೇಶ ಹೀಗಿತ್ತು!

ಸಂಜನಾ ಬರೆದಿದ್ದ ಸಂದೇಶ ಹೀಗಿತ್ತು!

ಸಂಜನಾ ತಮ್ಮ ಪೋಸ್ಟ್‌ನಲ್ಲಿ ಈ ರೀತಿಯಾಗಿ ಬರೆದುಕೊಂಡಿದ್ದರು. "ಸೌಂದರ್ಯವು ನೋಡುಗರ ದೃಷ್ಟಿಯಲ್ಲಿದೆ. ನಾನು ನನ್ನ ತಲೆ ಕೂದಲನ್ನು ತ್ಯಾಗ ಮಾಡಿದ್ದು, ನಾನು ದೇವರಲ್ಲಿ ಇಟ್ಟ ನಂಬಿಕೆಯನ್ನು ಪೂರ್ಣವಾಗಿ ಮಾಡಲು. ಅನೇಕ ಕಷ್ಟಗಳನ್ನು ದಾಟಿದ ನಂತರ, ಜೀವನವು ಮತ್ತೊಮ್ಮೆ ಸುಂದರವಾಗಿದೆ. ನನ್ನ ಜೀವನದ ಈ ಹಂತಕ್ಕಾಗಿ ನಾನು ದೇವರಿಗೆ ಎಷ್ಟೇ ಧನ್ಯವಾದ ಹೇಳಿದರು ಸಾಲದು. ಇದು ನನ್ನ ಸಾಮಾಜಿಕ ಮಾಧ್ಯಮದ ಕೆಲಸದ ಅನುಮೋದನೆಗಾಗಿ ಅಥವಾ ನನ್ನ ಜೀವನದಲ್ಲಿ ಶೀಘ್ರದಲ್ಲೇ ಬರಲಿರುವ ಮಗುವಿಗಾಗಿ. ಈ ಮೂಲಕ ನಾನು ನನ್ನ ಕೃತಜ್ಞತೆ ಸಲ್ಲಿಸುತ್ತೇನೆ. ಜೈ ಶ್ರೀ ಕೃಷ್ಣ, ಅಹಂ ಬ್ರಹ್ಮಾಷ್ಟಮಿ". ಎಂದು ಟ್ವೀಟ್ ಮಾಡಿದ್ದರು.

ಮೊದಲ ಮಗುವಿನ ನಿರೀಕ್ಷೆಯಲ್ಲಿ ನಟಿ ಸಂಜನಾ!

ಮೊದಲ ಮಗುವಿನ ನಿರೀಕ್ಷೆಯಲ್ಲಿ ನಟಿ ಸಂಜನಾ!

ನಟಿ ಸಂಜನಾ ಗಲ್ರಾನಿ ಈಗ 8 ತಿಂಗಳ ತುಂಬು ಗರ್ಭಿಣಿ. ಸದ್ಯ ಮೊದಲ ಮಗುವಿನ ನಿರೀಕ್ಷೆಯಲ್ಲಿ ಸಂಜನಾ ಕಾಯುತ್ತಾ ಇದ್ದಾರೆ. ಬದುಕಿನಲ್ಲಿ ಸಾಕಷ್ಟು ಏಳು ಬೀಳುಗಳನ್ನು ಕಂಡ ಸಂಜನಾ, ಡ್ರಗ್ ಪ್ರಕರಣದ ಬಳಿಕ ಕೌಟುಂಬಿಕ ವಿಚಾರಗಳಲ್ಲಿ ಹೆಚ್ಚು ಸಕ್ರಿಯವಾಗಿದ್ದು, ಸಿನಿಮಾ ಮಾಡುತ್ತಾ ಇಲ್ಲ. ಈಗ ಸಂತಸದಿಂದ ಕುಟುಂಬದ ಜೊತೆಗೆ ಕಾಲ ಕಳೆಯುತ್ತಾ ಇದ್ದಾರೆ. ಇನ್ನು ಒಂದು ತಿಂಗಳಲ್ಲಿ ಸಂಜನಾ ಮಗು ಜನ್ಮ ಪಡೆಯಲಿದೆ. ಆ ಬಳಿಕ ಮತ್ತೆ ಸಂಜನಾ ಚಿತ್ರಗಳಲ್ಲಿ ಅಭಿನಯಿಸುತ್ತಾರಾ ಅಂತ ನೋಡ್ಬೇಕು.

More from Filmibeat

English summary
Pregnant Sanjjanaa Galrani Become Bald Is Fake News, She Trolled After Revealing Truth,
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X