ರೀಮೇಕ್ ಚಿತ್ರ ಪ್ರೇಮ್ ಅಡ್ಡ ಬಿಡುಗಡೆ ಮುಂದಕ್ಕೆ

By Rajendra

ಮಹೇಶ್ ಬಾಬು ನಿರ್ದೇಶನದ ಪ್ರೇಮ್ ಅಭಿನಯದ ಪ್ರೇಮ್ ಅಡ್ಡ ಚಿತ್ರ ಬಿಡುಗಡೆಗೆ ಮುಂದೂಡಲ್ಪಟ್ಟಿದೆ. ಎಲ್ಲವೂ ಅಂದುಕೊಂಡಂತೆ ನಡೆದಿದ್ದರೆ ಇದೇ ನವೆಂಬರ್ 30ಕ್ಕೆ ಚಿತ್ರ ಬಿಡುಗಡೆಯಾಗಬೇಕಿತ್ತು. ಆದರೆ ಚಿತ್ರದ ಬಿಡುಗಡೆಯನ್ನು ಮುಂದೂಡಲಾಗಿದೆ.

ಹಲವಾರು ಕಾರಣಗಳಿಗೆ ಪ್ರೇಮ್ ಅಡ್ಡ ಚಿತ್ರ ಈ ವರ್ಷ ಸುದ್ದಿ ಮಾಡಿದೆ. ಅದರಲ್ಲಿ ಒಂದು ಶೀರ್ಷಿಕೆ ವಿವಾದ. ಇನ್ನೊಂದು "ಮೇಲುಕೋಟೆ ಹುಡುಗಿ ಒಬ್ಳು ಪಡುವಾರಳ್ಳಿ ಜಾತ್ರೇನಾಗ ಇಣುಕಿ ಇಣುಕಿ ನೋಡುತ್ತಾಳೆ ಏನ್ ಸಿಂಗಾರ.." ಎಂಬ ಹಾಡು.

ಈ ಹಾಡಿನ ಬಗ್ಗೆಯಂತೂ ಮೇಲುಕೋಟೆ ಜನರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದರು. ಬಳಿಕ ಪ್ರೇಮ್ ಈ ಹಾಡನಲ್ಲಿನ ಮೇಲುಕೋಟೆ ಬದಲಾಗಿ ಏಳುಕೋಟೆ ಬಳಸುವುದಾಗಿ ಪ್ರೇಮ್ ಹೇಳಿದ್ದಾರೆ. ಒಮ್ಮೆ ಮೇಲುಕೋಟೆ ಎಂದು ಬರೆಸಿ ಈಗ ಏಳುಕೋಟೆ ಮಾಡಿದರೆ ಚಿತ್ರದುರ್ಗದ ಜನ ಸುಮ್ಮನಿರುತ್ತಾರಾ?

ಮೇಕಾ ಮುರಳಿಕೃಷ್ಣ ನಿರ್ಮಿಸಿರುವ ಈ ಚಿತ್ರ ಡಿಸೆಂಬರ್ 7ರಂದು ತೆರೆಕಾಣುತ್ತಿದೆ. ಸುಮಾರು 200 ಚಿತ್ರಮಂದಿರಗಳಿಗೆ 'ಪ್ರೇಮ್ ಅಡ್ಡ' ಚಿತ್ರ ಲಗ್ಗೆ ಹಾಕುತ್ತಿದೆ. ತಮಿಳಿನ ಯಶಸ್ವಿ ಚಿತ್ರ 'ಸುಬ್ರಹ್ಮಣ್ಯಪುರಂ' ರೀಮೇಕ್ ಚಿತ್ರ ಇದಾಗಿದೆ. ಮೂಲ ಚಿತ್ರಕ್ಕೆ ಯು/ಎ ಸರ್ಟಿಫಿಕೇಟ್ ಸಿಕ್ಕುತ್ತು. ರೀಮೇಕ್ ಪ್ರೇಮ್ ಅಡ್ಡ ಚಿತ್ರ ಎ ಸರ್ಟಿಫಿಕೇಟ್ ಪಡೆದಿದೆ.

ಕೃತಿ ಖರಬಂಧ ಚಿತ್ರದ ನಾಯಕಿ. ಕನ್ನಡದ ನೇಟಿವಿಟಿಗೆ ತಕ್ಕಂತೆ ಚಿತ್ರಕಥೆಯಲ್ಲಿ ಅಲ್ಪಸ್ವಲ್ಪ ಬದಲಾವಣೆಗಳನ್ನೂ ಮಾಡಿಕೊಂಡಿದ್ದೇವೆ ಎನ್ನುತ್ತಾರೆ ನಿರ್ದೇಶಕ ಮಹೇಶ್ ಬಾಬು. ಹಾಡುಗಳ ಚಿತ್ರೀಕರಣಕ್ಕೆ ಹೆಚ್ಚು ಸಮಯ ವ್ಯಯಿಸಿದ್ದೇವೆ ಎಂಬುದು ಅವರ ಮತ್ತೊಂದು ಮಾತು. (ಏಜೆನ್ಸೀಸ್)

More from Filmibeat

English summary
Kannada film Prem Adda release postponed to 7th December, 2012. The movie is suppose to release on 30th November in about 200 theaters. The film is directed by Mahesh Babu and the film music is scored by V. Harikrishna. The film is the remake of Tamil film Subramaniapuram.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X