Just In
Don't Miss!
- Sports
ನಾಲ್ಕೇ ಸಾಲಿನಲ್ಲಿ ಭಾರತ ತಂಡದ ಅಷ್ಟೂ ಸಾಧನೆ ಹೇಳಿದ ಅಶ್ವೆಲ್ ಪ್ರಿನ್ಸ್!
- Education
NBT Recruitment 2021: 26 ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ
- News
ರೈತರ ಆತ್ಮಹತ್ಯೆ ಬಗ್ಗೆ ಹೇಳಿಕೆ; ಮತ್ತೆ ಸುದ್ದಿಯಾದ ಬಿ. ಸಿ. ಪಾಟೀಲ್!
- Finance
ಹೋಮ್ ಫಸ್ಟ್ ಫೈನಾನ್ಸ್ ಕಂಪೆನಿ ಐಪಿಒ ಜ. 21ರಿಂದ 25
- Automobiles
2020ರ ಡಿಸೆಂಬರ್ ತಿಂಗಳ ಮಾರಾಟದಲ್ಲಿ ಬೆಳವಣಿಗೆ ಸಾಧಿಸಿದ ಮಹೀಂದ್ರಾ ಎಕ್ಸ್ಯುವಿ300
- Lifestyle
ಕೋವಿಡ್ ವ್ಯಾಕ್ಸಿನೇಷನ್ ಗೆ ಅನುಸರಿಸಬೇಕಾದ ನಿಯಮಗಳು ಇಲ್ಲಿವೆ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಈ ಕಡೆ ಆರ್ ಚಂದ್ರು, ಆ ಕಡೆ ಪ್ರೇಮ್ಸ್: ಬಹುಮುಖ್ಯ ಘೋಷಣೆ ಅಂತಿದ್ದಾರೆ, ಏನಿರಬಹುದು?
ಸಂಕ್ರಾಂತಿ ಹಬ್ಬಕ್ಕೆ ಕನ್ನಡದಲ್ಲಿ ಯಾವ ಸಿನಿಮಾನೂ ಬಿಡುಗಡೆಯಾಗುತ್ತಿಲ್ಲ. ಸ್ಟಾರ್ ನಟರ ಚಿತ್ರಗಳೆಲ್ಲವೂ ಫೆಬ್ರವರಿ ಅಥವಾ ಮಾರ್ಚ್ ತಿಂಗಳಿಂದ ಅಖಾಡಕ್ಕೆ ಇಳಿಯಲಿದೆ. ಸ್ಟಾರ್ ನಟರ ಚಿತ್ರಗಳು ಪ್ರೇಕ್ಷಕರೆದುರು ಬರ್ತಿಲ್ಲ ಅಂದ್ರೂ ನಿರೀಕ್ಷೆಯ ಚಿತ್ರಗಳಿಂದ ಸರ್ಪ್ರೈಸ್ ಸುದ್ದಿ ಸಿಗಲಿದೆ.
ಆರ್ ಚಂದ್ರು ಅವರು ಉಪೇಂದ್ರ ನಟನೆಯ 'ಕಬ್ಜ' ಸಿನಿಮಾಗೆ ಸಂಬಂಧಿಸಿದಂತೆ ದೊಡ್ಡ ಸುದ್ದಿಯೊಂದು ಹೇಳಲಿದ್ದೇವೆ ಎಂದು ಪ್ರಕಟಿಸಿದ್ದಾರೆ. ಈ ಕಡೆ ನಿರ್ದೇಶಕ ಪ್ರೇಮ್ ಸಹ 'ಏಕ್ ಲವ್ ಯಾ' ಚಿತ್ರಕ್ಕೆ ಸಂಬಂದಿಸಿದಂತೆ ಬಹುಮುಖ್ಯ ಸುದ್ದಿ ತಿಳಿಸಲಿದ್ದೇವೆ ಎಂದು ಘೋಷಿಸಿದ್ದಾರೆ. ಅಷ್ಟಕ್ಕೂ, ಈ ಎರಡು ಪ್ರಾಜೆಕ್ಟ್‌ಗಳು ನೀಡಲಿರುವ ಸರ್ಪ್ರೈಸ್ ಏನಿರಬಹುದು ಎಂಬ ಕಾತುರ ಹೆಚ್ಚಾಗಿದೆ. ಮುಂದೆ ಓದಿ...

ಉಪೇಂದ್ರಗೆ ಯಾರು ಜೊತೆಯಾಗ್ತಿದ್ದಾರೆ?
ಸಂಕ್ರಾಂತಿ ಹಬ್ಬದ ಪ್ರಯುಕ್ತ ಜನವರಿ 14 ರಂದು ಕಬ್ಜ ಚಿತ್ರದಿಂದ ಸರ್ಪ್ರೈಸ್ ಸುದ್ದಿಯೊಂದು ಇದೆ ಎಂದು ಒಂದು ವಾರದ ಹಿಂದೆಯೇ ಪ್ರಕಟಿಸಿದ್ದರು. ಈಗ ಎರಡು ದಿನಕ್ಕೂ ಮುಂಚಿತವಾಗಿ ಆ ಸರ್ಪ್ರೈಸ್ ಬಗ್ಗೆ ಸುಳಿವು ನೀಡಿದ್ದಾರೆ. ಕಬ್ಜ ಚಿತ್ರದಲ್ಲಿ ಹೊಸ ಕಲಾವಿದನ ಎಂಟ್ರಿಯಾಗುತ್ತಿದೆ. ಉಪ್ಪಿ ಜೊತೆ ಯಾರು ಸೇರಲಿದ್ದಾರೆ ಎನ್ನುವುದನ್ನು ಬಹಿರಂಗಗೊಳಿಸುತ್ತಿದ್ದೇವೆ ಎಂದು ತಿಳಿಸಿದ್ದಾರೆ.
ಲೋಕೇಶನ್ ನೋಡಲು ಹೋಗಿ ತೋಟದ ಮನೆಗೆ ಅತಿಥಿ ಕರೆತಂದ ಪ್ರೇಮ್

ನಾಯಕಿ ಹೆಸರು ಹೇಳಬಹುದಾ?
ಬಹುಕೋಟಿ ವೆಚ್ಚದಲ್ಲಿ, ಭಾರತದ ಪ್ರಮುಖ ಏಳು ಭಾಷೆಯಲ್ಲಿ ತಯಾರಾಗುತ್ತಿರುವ ಪ್ಯಾನ್ ಇಂಡಿಯಾ ಪ್ರಾಜೆಕ್ಟ್ ಇದಾಗಿದೆ. ಈ ಚಿತ್ರದಲ್ಲಿ ಉಪೇಂದ್ರಗೆ ಯಾರು ಜೋಡಿಯಾಗ್ತಾರೆ ಎಂಬ ಪ್ರಶ್ನೆ ಬಹಳ ಕುತೂಹಲ ಮೂಡಿಸಿದೆ. ಸದ್ಯದ ಬೆಳವಣಿಗೆ ಗಮನಿಸಿದರೆ ಕಬ್ಜ ಚಿತ್ರದ ಹೀರೋಯಿನ್ ಯಾರೆಂದು ಹೇಳಬಹುದು ಎಂಬ ಕಾತುರ ಅಭಿಮಾನಿಗಳಲ್ಲಿ ಕಾಡುತ್ತಿದೆ.

ಕಾಜಲ್ ಅಗರ್‌ವಾಲ್ ಅಂತಿದ್ರು!
ಕಬ್ಜ ಚಿತ್ರದಲ್ಲಿ ನಾಯಕಿಯಾಗಿ ನಟಿಸಲು ಹಲವು ಸ್ಟಾರ್ ನಟಿಯರ ಬಳಿ ನಿರ್ದೇಶಕ ಚಂದ್ರು ಚರ್ಚಿಸಿದ್ದರು. ಅವರಲ್ಲಿ ಕಾಜಲ್ ಅಗರ್‌ವಾಲ್ ಸಹ ಇದ್ದರು. ಆದ್ರೆ, ಡೇಟ್ ಹೊಂದಾಣಿಕೆಯಾಗದ ಕಾರಣ ಕಾಜಲ್ ನಟಿಸುತ್ತಿಲ್ಲ ಎಂದು ಆಗಲೇ ವರದಿಯಾಗಿತ್ತು. ಈಗ ಬೇರೆ ಯಾವ ನಟಿ ಕಬ್ಜ ಚಿತ್ರ ಸೇರಲಿದ್ದಾರೆ ಎಂಬುವುದು ಕುತೂಹಲ ಮೂಡಿಸಿದೆ. ಬಹುಶಃ ಕಬ್ಜ ಚಿತ್ರಕ್ಕೆ ಹೊಸ ನಾಯಕಿ ಎಂಟ್ರಿಯಾಗುತ್ತಿದ್ದು, ಬಹಿರಂಗಪಡಿಸಬಹುದಾ?
ಡಿಸೆಂಬರ್ 20 ರಿಂದ ಉಪೇಂದ್ರ 'ಕಬ್ಜ' ಚಿತ್ರೀಕರಣ ಆರಂಭ

'ಏಕ್ ಲವ್ ಯಾ' ಘೋಷಣೆ ಏನು?
ಮತ್ತೊಂದೆಡೆ ನಿರ್ದೇಶಕ ಪ್ರೇಮ್ ಸಹ 'ಏಕ್ ಲವ್ ಯಾ' ಸಿನಿಮಾ ಕುರಿತಂತೆ ಬಹುಮುಖ್ಯ ಘೋಷಣೆ ಮಾಡಲಿದ್ದಾರೆ. ಜನವರಿ 14 ರಂದು ಏನದು ಸರ್ಪ್ರೈಸ್ ಎಂದು ಹೇಳಲಿದ್ದಾರೆ. ಬಹುಶಃ ರಿಲೀಸ್ ದಿನಾಂಕ, ಟ್ರೈಲರ್ ಅಥವಾ ಟೀಸರ್ ಇರಬಹುದು ಎಂದು ಊಹಿಸುತ್ತಿದ್ದಾರೆ. ಅಥವಾ ಆಡಿಯೋ ಬಿಡುಗಡೆ ಕುರಿತು ಮಾಹಿತಿ ನೀಡಬಹುದು ಎಂದು ಗೆಸ್ ಮಾಡುತ್ತಿದ್ದಾರೆ. ಅದೇನು ಎಂದು ಇನ್ನೆರಡು ದಿನದಲ್ಲಿ ತಿಳಿಯಲಿದೆ.
'ಈ ಸಿನಿಮಾ ಇಂಡಸ್ಟ್ರಿ ಬೇಡ ವಾಪಸ್ ಹೋಗ್ಬಿಡು ಅಂದಿದ್ರು ಆ ವ್ಯಕ್ತಿ'- ಆರ್ ಚಂದ್ರು