For Quick Alerts
  ALLOW NOTIFICATIONS  
  For Daily Alerts

  ಸ್ಟಾರ್ ನಟರ ಸಿನಿಮಾದ ಟೈಟಲ್ ಲಾಂಚ್ ಗೆ ಅತಿಥಿ ಯಾರು ಗೊತ್ತಾ?

  By Suneetha
  |

  ಚಂದನವನದಲ್ಲಿ ಮಲ್ಟಿ ಸ್ಟಾರರ್ ಸಿನಿಮಾ ಸೆಟ್ಟೇರುತ್ತಿರುವ ವಿಷಯವನ್ನು ನಾವು ನಿಮಗೆ ಇದೇ ಫಿಲ್ಮಿಬೀಟಲ್ಲಿ ಹೇಳಿದ್ವಿ ತಾನೇ. ಇದೀಗ ಈ ಸುದ್ದಿ ಎಲ್ಲೆಡೆ ವೈರಲ್ ಆಗಿ ಸಂಚಲನ ಸೃಷ್ಟಿಸಿದ್ದು, ಒಂಥರಾ ಟ್ರೆಂಡ್ ಹುಟ್ಟು ಹಾಕಿದೆ.

  ಇದೇ ಮೊದಲ ಬಾರಿಗೆ ಬಹುಭಾಷಾ ನಟ ಕಿಚ್ಚ ಸುದೀಪ್ ಹಾಗೂ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಒಂದಾಗಿ ಕಾಣಿಸಿಕೊಳ್ಳುವುದರಿಂದ ಸಾಮಾನ್ಯವಾಗಿ ಅಭಿಮಾನಿಗಳಲ್ಲಿ ಕೊಂಚ ನಿರೀಕ್ಷೆ ಜಾಸ್ತೀನೇ ಇದೆ.[ಸ್ಟಾರ್ ನಟರ ಅಪೂರ್ವ ಮಿಲನಕ್ಕೆ, ಸಾಕ್ಷಿಯಾಗಲಿರುವ ಬಿಗ್ ವೇದಿಕೆ.!]

  ಅಂದಹಾಗೆ ಇದೀಗ ಹೊಸ ವಿಷ್ಯಾ ಏನಪ್ಪಾ ಅಂದ್ರೆ, ಇದೇ ಡಿಸೆಂಬರ್ 13 ರಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆಯುವ ಅದ್ಧೂರಿ ಸಮಾರಂಭದಲ್ಲಿ ಈ ಸ್ಟಾರ್ ನಟರ ಸಿನಿಮಾದ ಟೈಟಲ್ ಲಾಂಚ್ ಮಾಡಲಿದ್ದು, ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ನಮ್ಮ ರಾಜ್ಯದ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರನ್ನು ಆಹ್ವಾನಿಸಲಾಗಿದೆ.[ವಾವ್! ಶಿವಣ್ಣ ಹಾಗೂ ಕಿಚ್ಚ ಸುದೀಪ್ ಒಟ್ಟಿಗೆ ನಟಿಸ್ತಾರಂತೆ!]

  ಈ ಬಗ್ಗೆ ಬೆಂಗಳೂರಿನಲ್ಲಿರುವ ಸಿ.ಎಂ ಗೃಹ ಕಚೇರಿ ಕೃಷ್ಣಾದಲ್ಲಿ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿದ ಚಿತ್ರತಂಡ ಕಾರ್ಯಕ್ರಮಕ್ಕೆ ಅವರಿಗೆ ಆಹ್ವಾನ ನೀಡಿದ್ದಾರೆ. ಆದರೆ ಮುಖ್ಯಮಂತ್ರಿಗಳು ಇನ್ನೂ ಹಸಿರು ನಿಶಾನೆ ತೋರಿಲ್ಲ. ಮಾನ್ಯ ಮುಖ್ಯಮಂತ್ರಿಗಳು ಕೃಪೆ ತೋರಿದರೆ ಸ್ಟಾರ್ ನಟರ ಚಿತ್ರದ ಟೈಟಲ್ ಲಾಂಚ್ ಅವರ ಕೈಯಲ್ಲಿ ಆಗೋದು ಪಕ್ಕಾ.

  ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಕಾಣಿಸಿಕೊಂಡಿದ್ದ 'ಜೋಗಿ' ಮತ್ತು 'ಜೋಗಯ್ಯ' ಸಿನಿಮಾವನ್ನು ನಿರ್ದೇಶನ ಮಾಡಿದ್ದ ಹ್ಯಾಟ್ರಿಕ್ ನಿರ್ದೇಶಕ 'ಜೋಗಿ' ಪ್ರೇಮ್ ಅವರು ಈ ಮಲ್ಟಿ ಸ್ಟಾರ್ಸ್ ಗೆ ಆಕ್ಷನ್-ಕಟ್ ಹೇಳುತ್ತಿದ್ದಾರೆ.[100 ಕೋಟಿ ಬಜೆಟ್ ನಲ್ಲಿ ತಯಾರಾಗುತ್ತಿದೆ, ಕಿಚ್ಚ-ಶಿವಣ್ಣ ಅವರ ಸಿನಿಮಾ!]

  ಸುಮಾರು 100 ಕೋಟಿ ವೆಚ್ಚದಲ್ಲಿ ಅದ್ಧೂರಿಯಾಗಿ ಮೂಡಿಬರಲಿರುವ ಈ ಸಿನಿಮಾ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಹಾಗು ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರ ಅಭಿಮಾನಿಗಳಿಗೆ ಭರ್ಜರಿ ರಸದೌತಣ ನೀಡೋದು ಗ್ಯಾರಂಟಿ.

  English summary
  Prem directorial Sudeep-Shivanna starrer movie Title launch on december 13th in Palace ground bengaluru.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X