ದರ್ಶನ್ ಗೆ ಆಕ್ಷನ್ ಕಟ್ ಹೇಳಲು ಜೋಗಿ ಪ್ರೇಮ್ ಗೆ ದಾಖಲೆಯ ಸಂಭಾವನೆ

By Pavithra

Recommended Video

ದರ್ಶನ್ ಸಿನಿಮಾಗೆ ಪ್ರೇಮ್ ಗೆ 2 ಕೋಟಿ ಸಂಭಾವನೆ | Filmibeat kannada

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ 50 ನೇ ಸಿನಿಮಾ ಇನ್ನೂ ಚಿತ್ರೀಕರಣದ ಹಂತದಲ್ಲಿರುವಾಗಲೇ ಅವರ ಮುಂದಿನ ಚಿತ್ರಗಳ ಬಗ್ಗೆ ಬಾರೀ ಕುತೂಹಲಗಳು ಹುಟ್ಟುಕೊಂಡಿದೆ. 'ಕುರುಕ್ಷೇತ್ರ' ಸಿನಿಮಾದ ನಂತರ 'ಡಿ ಬಾಸ್' ಶೈಲಾಜ ನಾಗ್ ನಿರ್ಮಾಣದ ಚಿತ್ರದಲ್ಲಿ ಆಕ್ಟ್ ಮಾಡಲಿದ್ದಾರೆ ಅನ್ನೋದನ್ನ ಸ್ವತಃ ನಿರ್ಮಾಪಕರೇ ಕನ್ಫರ್ಮ್ ಮಾಡಿದ್ದಾರೆ.

ದರ್ಶನ್ ಅಭಿನಯದ 51 ನೇ ಸಿನಿಮಾಗೆ ತಯಾರಿಗಳು ಪ್ರಾರಂಭವಾಗಿದ್ದು ಪ್ರೀ-ಪ್ರೊಡಕ್ಷನ್ ಕೆಲಸದಲ್ಲಿ ನಿರ್ದೇಶಕ 'ಪಿ ಕುಮಾರ್' ತೊಡಗಿಕೊಂಡಿದ್ದಾರೆ. 51 ನೇ ಚಿತ್ರ ಸೆಟ್ಟೇರುವ ಮುಂಚೆಯೇ ಜೋಗಿ ಪ್ರೇಮ್ ನಿರ್ದೇಶನದಲ್ಲಿ ಚಾಲೆಂಜಿಂಗ್ ಸ್ಟಾರ್ ಅಭಿನಯಿಸೋದಕ್ಕೆ ಗ್ರೀನ್ ಸಿಗ್ನಲ್ ನೀಡಿದ್ದಾರೆ ಅನ್ನೋ ಸುದ್ದಿ ಹರಿದಾಡುತ್ತಿದೆ.

ನಿರ್ದೇಶನಕ ಪ್ರೇಮ್ ಗಾಗಿ 85 ದಿನಗಳ ಕಾಲ್ ಶೀಟ್ ನೀಡಿದ್ದಾರೆ ದರ್ಶನ್ ಅನ್ನುವ ಸುದ್ದಿ ಗಾಂಧಿನಗರದ ಗಲ್ಲಿಗಳಲ್ಲಿ ಕೇಳಿಬರುತ್ತಿದೆ. ಇವುಗಳ ಮಧ್ಯೆ ಹೊಸ ವಿಷ್ಯ ಅಂದರೆ ನಿರ್ದೇಶಕ ಪ್ರೇಮ್, ದಾಸನ ಚಿತ್ರಕ್ಕೆ ಆಕ್ಷನ್ ಕಟ್ ಹೇಳಲು ಬಾರಿ ಮೊತ್ತದ ಸಂಭಾವನೆಯನ್ನ ಪಡೆದಿದ್ದಾರಂತೆ. ಹಾಗಾದ್ರೆ ಪ್ರೇಮ್ ಪಡೆದಿರೋ ಸಂಭಾವನೆ ಎಷ್ಟು? ನಿರ್ಮಾಪಕ ಉಮಾಪತಿ ಶ್ರೀನಿವಾಸ್ ನಿಜಕ್ಕೂ ಅಷ್ಟು ಹಣ ನೀಡೋದಕ್ಕೆ ಒಪ್ಪಿಗೆ ನೀಡಿದ್ದಾರಾ? ಮುಂದೆ ಓದಿ

ಜೋಗಿ ಪ್ರೇಮ್ ಸಂಭಾವನೆ ಎರಡು ಕೋಟಿ

ಜೋಗಿ ಪ್ರೇಮ್ ಸಂಭಾವನೆ ಎರಡು ಕೋಟಿ

ನಿರ್ದೇಶಕ, ನಟ ಜೋಗಿ ಪ್ರೇಮ್ 'ದಿ ವಿಲನ್' ಸಿನಿಮಾದ ನಂತರ ಚಾಲೆಂಜಿಂಗ್ ಸ್ಟಾರ್ ದರ್ಶನ್ ಚಿತ್ರವನ್ನ ನಿರ್ದೇಶನ ಮಾಡುತ್ತಿದ್ದಾರೆ. ಪ್ರೇಮ್ ಜೊತೆ ಕೆಲಸ ಮಾಡಲು ದರ್ಶನ್ ಗ್ರೀನ್ ಸಿಗ್ನಲ್ ಕೊಟ್ಟಿದ್ದು ಚಿತ್ರಕ್ಕೆ ಆಕ್ಷನ್ ಕಟ್ ಹೇಳಲು 2 ಕೋಟಿ ಸಂಭಾವನೆ ಪಡೆದಿದ್ದಾರಂತೆ.

ಉಮಾಪತಿ ಶ್ರೀನಿವಾಸ್ ನಿರ್ಮಾಣದ ಚಿತ್ರ

ಉಮಾಪತಿ ಶ್ರೀನಿವಾಸ್ ನಿರ್ಮಾಣದ ಚಿತ್ರ

ಚೊಚ್ಚಲ ಸಿನಿಮಾದಲ್ಲೇ 'ಹೆಬ್ಬುಲಿ' ಅಂತಹ ಬಿಗ್ ಬಜೆಟ್ ಚಿತ್ರವನ್ನ ಕನ್ನಡ ಸಿನಿಮಾ ರಸಿಕರಿಗೆ ನೀಡಿದ ಪ್ರೊಡ್ಯೂಸರ್ ಉಮಾಪತಿ ಶ್ರೀನಿವಾಸ್, ದರ್ಶನ್-ಪ್ರೇಮ್ ಕಾಂಬಿನೇಶನ್ ಚಿತ್ರವನ್ನ ನಿರ್ಮಾಣ ಮಾಡುತ್ತಿದ್ದಾರೆ. ಎರಡು ಕೋಟಿ ಸಂಭಾವನೆ ನೀಡಲು ನಿರ್ಮಾಪಕರು ಕೂಡ ಒಪ್ಪಿಗೆ ನೀಡಿದ್ದಾರೆ ಎನ್ನುವ ಸಮಾಚಾರ ಚರ್ಚೆ ಆಗುತ್ತಿದೆ.

ಕೋಟಿ ಸಂಭಾವನೆ ಸಿಗುವುದು ತೀರಾ ಅಪರೂಪ

ಕೋಟಿ ಸಂಭಾವನೆ ಸಿಗುವುದು ತೀರಾ ಅಪರೂಪ

ಕನ್ನಡ ಸಿನಿಮಾರಂಗದಲ್ಲಿ ಬರಹಗಾರರಿಗೆ ಹಾಗೂ ನಿರ್ದೇಶಕರಿಗೆ ಕೋಟಿಗಟ್ಟಲೇ ಸಂಭಾವನೆ ಸಿಗುವುದು ತೀರಾ ಅಪರೂಪ. ಈ ಹಿಂದೆ 'ನೀರ್ ದೋಸೆ' ಸಿನಿಮಾದ ನಂತರ ನಿರ್ದೇಶಕ ವಿಜಯ ಪ್ರಸಾದ್ 1 ಕೋಟಿ ಸಂಭಾವನೆ ಕೇಳುತ್ತಿದ್ದಾರೆ ಅನ್ನೋ ಗಾಸಿಪ್ ಗಳು ಹರಿದಾಡಿತ್ತು.

ಕಾತುರದಿಂದ ಕಾದಿದ್ದಾರೆ ಅಭಿಮಾನಿಗಳು

ಕಾತುರದಿಂದ ಕಾದಿದ್ದಾರೆ ಅಭಿಮಾನಿಗಳು

ಜೋಗಿ ಪ್ರೇಮ್ ಮತ್ತು ದರ್ಶನ್ ಕಾಂಬಿನೇಶನ್ ಸಿನಿಮಾಗಾಗಿ ಅಭಿಮಾನಿಗಳು ಕಾತುರದಿಂದ ಕಾದಿದ್ದಾರೆ. ಸದ್ಯ ಇಬ್ಬರು ತಮ್ಮ ತಮ್ಮ ಚಿತ್ರಗಳಲ್ಲಿ ಬ್ಯುಸಿ ಆಗಿರೋದ್ದರಿಂದ ಮುಂದಿನ ವರ್ಷದ ಮಧ್ಯದಲ್ಲಿ ಚಿತ್ರ ಸೆಟ್ಟೇರುವ ನಿರೀಕ್ಷೆಗಳಿವೆ.

More from Filmibeat

English summary
Kannada Director Jogi Prem earns 2 crores call sheet money to direct Challenging star Darshan's next movie. kannada 'Hebbuli' movie fame Umapathy Srinivas is producing the film. the movie will be start next year (2018).
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X