'ತಾಕತ್ ಇದ್ರೆ ಬನ್ನಿ ಸಿನಿಮಾ ಮಾಡಿ' ಎಂದು ಸವಾಲ್ ಹಾಕಿದ ಪ್ರೇಮ್

Recommended Video

ಕಾಲೆಳೆಯುವವರಿಗೆ ಸವಾಲು ಹಾಕಿದ ನಿರ್ದೇಶಕ ಪ್ರೇಮ್ | FILMIBEAT KANNADA

ಕನ್ನಡದ ಶೋ ಮ್ಯಾನ್ ನಿರ್ದೇಶಕ ಪ್ರೇಮ್ ಆಕ್ಷನ್ ಕಟ್ ಹೇಳಿರುವ ಸಿನಿಮಾ 'ದಿ ವಿಲನ್' ಸ್ಯಾಂಡಲ್ ವುಡ್ ನಲ್ಲಿ ಹೊಸ ದಾಖಲೆ ಸೃಷ್ಟಿಸುತ್ತಿದೆ. ಕನ್ನಡದ ಬಾಕ್ಸ್ ಆಫೀಸ್ ನಲ್ಲಿ ಚಿಂದಿ ಉಡಾಯಿಸ್ತಿದೆ. ಸಿನಿಮಾ ಮೇಕಿಂಗ್, ಇಬ್ಬರು ಸ್ಟಾರ್ ನಟರ ಅಭಿನಯ, ಹಾಡುಗಳು ಹೀಗೆ ಎಲ್ಲವನ್ನ ಮೆಚ್ಚಿಗೆ ವ್ಯಕ್ತವಾಗಿದೆ.

ಹೀಗಿರುವಾಗ, ಸೋಶಿಯಲ್ ಮೀಡಿಯಾದಲ್ಲಿ ಕೆಲವು ಪ್ರೇಕ್ಷಕರಿಂದ ನೆಗಿಟೀವ್ ಕಾಮೆಂಟ್ ಎದುರಾಗಿದೆ. ಸಿನಿಮಾ ಚೆನ್ನಾಗಿ ಮಾಡಿಲ್ಲ, ಶಿವಣ್ಣ ಪಾತ್ರ ಚೆನ್ನಾಗಿಲ್ಲ, ಸುದೀಪ್ ಗೆ ಹೆಚ್ಚು ಪ್ರಾಮುಖ್ಯತೆ ನೀಡಿದ್ದಾರೆ ಎಂದು ಕಾಲೆಳೆಯುತ್ತಿದ್ದಾರೆ.

ಇನ್ನು ಒಂದು ಹೆಜ್ಜೆ ಮುಂದೆ ಹೋದ ಕೆಲವರು ನಿರ್ದೇಶಕ ಪ್ರೇಮ್ ವಿರುದ್ಧ ಅಸಭ್ಯ ಮಾತುಗಳನ್ನಾಡಿದರು. ವಿಡಿಯೋಗಳ ಮೂಲಕ ಕೆಟ್ಟದಾಗಿ ಬೈಯ್ದಿದ್ದಾರೆ. ಇದೆಲ್ಲವೂ ಅತಿರೇಕವಾಗಿದೆ. ಇದರಿಂದ ತೀವ್ರ ಬೇಸರಗೊಂಡ ಪ್ರೇಮ್ ಕೆಲವು ಕಿಡಿಗೇಡಿಗಳನ್ನ ಟಾರ್ಗೆಟ್ ಮಾಡಿ ಪೊಲೀಸ್ ದೂರು ನೀಡಿದ್ದಾರೆ. ಇದಕ್ಕೂ ಮುಂಚೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ್ದ ಪ್ರೇಮ್ ತಮ್ಮ ಆಕ್ರೋಶವನ್ನ ಹೊರಹಾಕಿದ್ದರು. ಅಷ್ಟಕ್ಕೂ, ಯಾರವರು.? ಮುಂದೆ ಓದಿ...

ವಿಕೃತ ಮನಸ್ಸಿನ ವ್ಯಕ್ತಿಗಳಿದ್ದಾರೆ

ವಿಕೃತ ಮನಸ್ಸಿನ ವ್ಯಕ್ತಿಗಳಿದ್ದಾರೆ

'ಕೆಲವು ವಿಕೃತ ಮನೋಭಾವನೆಗಳು ಇರುವ ಹುಚ್ಚು ಜನರು ಚೆನ್ನಾಗಿದೆ, ಚೆನ್ನಾಗಿಲ್ಲ ಎಂದು ಕಾಮೆಂಟ್ ಮಾಡುವ ಬದಲು, ವೈಯಕ್ತಿಕವಾಗಿ ಮಾತನಾಡುತ್ತಾರೆ. ಅದು ತಪ್ಪು. ಮನವಿ ಮಾಡಿಕೊಳ್ಳುತ್ತೇನೆ. ಹೀಗೆ ಮಾತನಾಡುವವರು ಗುಂಡ್ರಗೋವಿಗಳು ಅಂತಾನೇ ಅರ್ಥ' - ಪ್ರೇಮ್

ಬಂದು ಸಿನಿಮಾ ಮಾಡಿ ನೋಡೋಣ

ಬಂದು ಸಿನಿಮಾ ಮಾಡಿ ನೋಡೋಣ

'ಸಿನಿಮಾ ಮಾಡೋದು ತುಂಬಾ ಕಷ್ಟ. ಹೀರೋಗೆ ಕಟೌಟ್ ಹಾಕ್ಬಹುದು, ಹಿಂದೆ ಕೆಲಸ ಮಾಡೋದು ಕಷ್ಟ. ಹಗಲು ರಾತ್ರಿ ಹೆಂಡತಿ ಮಕ್ಕಳನ್ನ ಬಿಟ್ಟು ಕೆಲಸ ಅಂತ ನಿದ್ದೆ ಬಿಟ್ಟು ಸಾಯ್ತಾರೆ. ಲೈಕ್ಸ್ ಕಾಮೆಂಟ್ ತೆಗೆದುಕೊಳ್ಳುವುದಕ್ಕಾಗಿ ಅವರ ವಿಕೃತ ಮನೋಭಾವನೆಯನ್ನ ತೋರಿಸುತ್ತಿದ್ದಾರೆ' - ಪ್ರೇಮ್

ನಿಮಗೆ ತಾಕತ್ ಇದ್ರೆ....

ನಿಮಗೆ ತಾಕತ್ ಇದ್ರೆ....

'ಸೋಶಿಯಲ್ ಮೀಡಿಯಾದಲ್ಲಿ ಕೆಟ್ಟದಾಗಿ ಮಾತನಾಡ್ತಿದ್ದಾರೋ ಅವರು ಒಂದು ಸಿನಿಮಾ ಮಾಡಿ. ಹೀರೋ ಡೇಟ್ ತಗೊಳ್ಳಿ, ನಿರ್ಮಾಣ ಮಾಡಿ, ನನ್ನ ಡೈರೆಕ್ಟರ್ ಆಗಿ ಆಯ್ಕೆ ಮಾಡ್ಕೊಳ್ಳಿ, ನಿಮಗೆ ಹೇಗ್ ಬೇಕೋ ಹಾಗೆ ಸಿನಿಮಾ ಮಾಡ್ಕೊಡ್ತೀನಿ. ಈ ಹೀರೋನಾ ಹೆಂಗ್ ತೋರಿಸಬೇಕು ಹಂಗೆ ತೋರಿಸ್ತೀನಿ' - ಪ್ರೇಮ್

ಪ್ರೇಮ್ ಜೊತೆ ಸಿನಿಮಾ ಬೇಡ ಅಂತ ಹೇಳಿ

ಪ್ರೇಮ್ ಜೊತೆ ಸಿನಿಮಾ ಬೇಡ ಅಂತ ಹೇಳಿ

'ನಿಮ್ಮ ಅಷ್ಟು ಅಭಿಮಾನವಿದ್ದರೇ ಹೋಗಿ ನಿಮ್ಮ ಹೀರೋಗಳ ಬಳಿ ಹೇಳಿ ಪ್ರೇಮ್ ಗೆ ಕಾಲ್ ಶೀಟ್ ಕೊಡಬೇಡಿ. ಅವರ ಜೊತೆ ಸಿನಿಮಾ ಮಾಡಬೇಡಿ ಅಂತ ಹೇಳಿ. ಇಲ್ಲ ನಿಮ್ಮ ದುಡ್ಡು ತಗೊಂಡು ಬನ್ನಿ, ನೀವು ಹೇಳಿದಾಗೆ ಸಿನಿಮಾ ಮಾಡಿಕೊಡ್ತೀನಿ' - ಪ್ರೇಮ್

ದೂರು ನೀಡಿದ್ದಾರೆ

ದೂರು ನೀಡಿದ್ದಾರೆ

'ಕೆಲವು ವಿಡಿಯೋಗಳನ್ನ ಆಯ್ಕೆ ಮಾಡಿದ್ದೀವಿ. ಈ ಬಗ್ಗೆ ದೂರು ಕೊಡ್ತಿದ್ದೀವಿ. ನಾನೇ ಖುದ್ದು ಹೋಗಿ ಕಂಪ್ಲೆಂಟ್ ಕೊಡ್ತೀನಿ. ಮಾನನಷ್ಟ ಮೊಕದ್ದಮೆ, ಕೋಮುಗಲಭೆ ಕೇಸ್ ಹಾಕ್ತೀನಿ. ಇದು ನಮ್ಮ ಕನ್ನಡ ಸಿನಿಮಾ. ವೈಯಕ್ತಿಕವಾಗಿ ಬರಬೇಡಿ. ಕನ್ನಡ ನಿರ್ದೇಶಕ, ನಿರ್ಮಾಪಕನ ಬಗ್ಗೆ ವೈಯಕ್ತಿಕವಾಗಿ ಬರಬೇಡಿ' - ಪ್ರೇಮ್

ಅಕ್ಕ-ತಂಗಿಯರ ಜೊತೆ ಇಲ್ವಾ.?

ಅಕ್ಕ-ತಂಗಿಯರ ಜೊತೆ ಇಲ್ವಾ.?

'ಅವರಿಗೆ ಅಕ್ಕ-ತಂಗಿಯರು ಇಲ್ವಾ, ಹೆಂಡತಿ ಮಕ್ಕಳು ಇಲ್ವಾ. ಎಲ್ಲರ ಜೊತೆ ಒಟ್ಟಿಗೆ ಬೆಳೆದಿಲ್ಲವಾ. ನಾನು ನಿಮ್ಮ ಮೇಲೆ ಯುದ್ಧ ಮಾಡ್ತೀನಿ. ನೀವು ನನ್ನ ಮೇಲೆ ಮಾಡ್ತೀರಾ ಅಲ್ವಾ. 80 ಜನ ಚೆನ್ನಾಗಿದೆ ಅಂತಾರೆ, 20 ಜನ ಚೆನ್ನಾಗಿಲ್ಲ ಅಂತಾರೆ. ಎಲ್ಲರಿಗೂ ಮೆಚ್ಚುವಂತಹ ಸಿನಿಮಾ ಮಾಡಬೇಕು ಅಂದ್ರೆ ಆಗಲ್ಲ' - ಪ್ರೇಮ್

More from Filmibeat

English summary
Kannada director prem decided to file complaint against social media guys.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X