'ಪ್ರೇಮ್ ಪಿಕ್ಚರ್' ಅಲ್ಲ ಈಗ 'ರಕ್ಷಿತಾ ಫಿಲ್ಮ್ ಫ್ಯಾಕ್ಟರಿ'ಯಲ್ಲಿ ಹೊಸ ಸಿನಿಮಾ
Recommended Video

ಜೋಗಿ ಪ್ರೇಮ್ ಸ್ಯಾಂಡಲ್ ವುಡ್ ನ ಖ್ಯಾತ ನಿರ್ದೇಶಕರಲ್ಲಿ ಒಬ್ಬರು. ನಿರ್ದೇಶನದ ಜೊತೆಗೆ ನಟ, ಸಾಹಿತಿ, ಗಾಯಕ ಮತ್ತು ನಿರ್ಮಾಪಕ ಕೂಡ ಆಗಿದ್ದಾರೆ. ಈವರಗೆ, ಸುಮಾರು ಏಳು ಸಿನಿಮಾಗಳಿಗೆ ಪ್ರೇಮ್ ಆಕ್ಷನ್ ಕಟ್ ಹೇಳಿದ್ದಾರೆ. 'ದಿ ವಿಲನ್' ಸಿನಿಮಾ ನಿರ್ದೇಶನದ ನಂತರ ಈಗ ಪತ್ನಿ ರಕ್ಷಿತಾ ಅವರ ಸಹೋದರ ಅಭಿಷೇಕ್ ಚೊಚ್ಚಲ ಸಿನಿಮಾಗೆ ನಿರ್ದೇಶನ ಮಾಡುವ ತಯಾರಿ ಮಾಡಿಕೊಳ್ಳುತ್ತಿದ್ದಾರೆ.
ಪ್ರೇಮ್ ಮುಂದಿನ ಸಿನಿಮಾ ಅವರ ಹೋಮ್ ಬ್ಯಾನರ್ ನಲ್ಲಿಯೇ ಮೂಡಿ ಬರುತ್ತಿದೆ. ತಮ್ಮ ನಿರ್ಮಾಣ ಸಂಸ್ಥೆ ಆದರೂ ಅದಕ್ಕೆ ಪ್ರೇಮ್ ಪಿಕ್ಚರ್ ಎನ್ನುವ ಹೆಸರು ಮಾತ್ರ ಇರುವುದಿಲ್ಲ. ಯಾಕೆಂದರೆ, ಪ್ರೇಮ್ ಪಿಕ್ಚರ್ ಬದಲು ರಕ್ಷಿತಾಸ್ ಫಿಲ್ಮ್ ಫ್ಯಾಕ್ಟರಿ ಹೆಸರಿನ ನಿರ್ಮಾಣ ಸಂಸ್ಥೆಯಲ್ಲಿ ಪ್ರೇಮ್ ಸಿನಿಮಾ ಮಾಡುತ್ತಿದ್ದಾರೆ.
ಹಿಂದಿನಿಂದ ಪ್ರೇಮ್ ಅವರ ನಿರ್ಮಾಣ ಸಂಸ್ಥೆಯನ್ನು ಪತ್ನಿ ರಕ್ಷಿತಾ ಅವರೇ ನೋಡಿಕೊಳ್ಳುತ್ತಿದ್ದರು ಆದ್ರೀಗ ರಕ್ಷಿತಾಸ್ ಫಿಲ್ಮ್ ಫ್ಯಾಕ್ಟರಿ ಕೂಡ ಶುರು ಆಗಿದೆ. ಈಗ ಹೊಸದಾಗಿ ಶುರುವಾಗಿರುವ ರಕ್ಷಿತಾಸ್ ಫಿಲ್ಮ್ ಫ್ಯಾಕ್ಟರಿ, ಪ್ರೇಮ್ ಪಿಕ್ಚರ್ಸ್ ನ ಬದಲಿ ಹೆಸರೊ ಅಥವಾ ಹೊಸ ನಿರ್ಮಾಣ ಸಂಸ್ಥೆಯೋ ತಿಳಿದಿಲ್ಲ.

ಪ್ರೇಮ್ ಮುಂದಿನ ಸಿನಿಮಾದ ಫಸ್ಟ್ ಲುಕ್ ಮತ್ತು ಟೈಟಲ್ ಅನ್ನು ಇದೇ ತಿಂಗಳು 31 ರಂದು ಅನೌನ್ಸ್ ಮಾಡಲಿದ್ದಾರೆ. ಈ ಸಿನಿಮಾದ ಜೊತೆಗೆ ರಕ್ಷಿತಾಸ್ ಫಿಲ್ಮ್ ಫ್ಯಾಕ್ಟರಿ ಎನ್ನುವ ಹೊಸ ಹೆಸರಿನ ನಿರ್ಮಾಣ ಸಂಸ್ಥೆ ಮುಂದುವರೆಯಲಿದೆ.
ಅಂದ್ಹಾಗೆ, ಪ್ರೇಮ್ ಪಿಕ್ಚರ್ ಪ್ರಾರಂಭವಾಗಿದ್ದು 2011ರಲ್ಲಿ. ಮೊದಲು 'ಜೋಗಯ್ಯ' ಸಿನಿಮಾವನ್ನು ನಿರ್ಮಾಣ ಮಾಡಿದ್ದ ಪ್ರೇಮ್ ಪಿಕ್ಚರ್ ನಂತರ 'ಡಿಕೆ' ಸಿನಿಮಾಗೂ ಬಂಡವಾಳ ಹಾಕಿತ್ತು.


Click it and Unblock the Notifications











