»   » ದರ್ಶನ್ ಯಜಮಾನ ಚಿತ್ರದಲ್ಲಿ ಕನ್ನಡದ ಸ್ಟಾರ್ ಕಲಾವಿದರು

ದರ್ಶನ್ ಯಜಮಾನ ಚಿತ್ರದಲ್ಲಿ ಕನ್ನಡದ ಸ್ಟಾರ್ ಕಲಾವಿದರು

Posted By:
Subscribe to Filmibeat Kannada
ದರ್ಶನ್ ಯಜಮಾನ ಚಿತ್ರದಲ್ಲಿ ಸ್ಟಾರ್ ಕಲಾವಿದರ ದಂಡು | Filmibeat Kannada

ಚಾಲೆಂಜಿಂಗ್ ಸ್ಟಾರ್ ಅಭಿನಯದ 51 ನೇ ಚಿತ್ರ ಯಜಮಾನ. ಮಹೂರ್ತ ಮುಗಿಸಿ ಸದ್ದಿಲ್ಲದೆ ಚಿತ್ರೀಕರಣ ಶುರು ಮಾಡಿದ್ದು ಮೈಸೂರಿನಲ್ಲಿ ಸಿನಿಮಾ ಶೂಟಿಂಗ್ ಗಾಗಿ ಅದ್ದೂರಿಯಾಗಿರುವ ಹಳ್ಳಿ ಸೆಟ್ ಹಾಕಲಾಗಿದೆ ಎನ್ನುವುದು ಈಗಾಗಲೇ ಎಲ್ಲರಿಗೂ ತಿಳಿದಿರುವ ವಿಚಾರ.

ಮೊದಲ ಶೆಡ್ಯೂಲ್ ಮೈಸೂರಿನಲ್ಲೇ ನಡೆಯುವುದು ಎನ್ನುವ ವಿಚಾರ ಚಿತ್ರತಂಡದಿಂದಲೇ ತಿಳಿದು ಬಂದಿತ್ತು. ಇನ್ನು ಚಿತ್ರೀಕರಣದಲ್ಲಿ ದರ್ಶನ್ ಜೊತೆಯಾಗಿ ರಶ್ಮಿಕಾ ಮಂದಣ್ಣ, ಧನಂಜಯ ಕಾಣಿಸಿಕೊಳ್ಳುತ್ತಾರೆ ಎನ್ನುವ ಸುದ್ದಿಗಳಿದ್ದು.

'ನಂ 1 ಯಾರಿ ವಿತ್ ಶಿವಣ್ಣ' ಕಾರ್ಯಕ್ರಮಕ್ಕೆ ಡಿ ಬಾಸ್ ದರ್ಶನ್ ಬರಲೇಬೇಕು!

ಇತ್ತೀಚಿನ ಮಾಹಿತಿ ಪ್ರಕಾರ ಯಜಮಾನ ಸಿನಿಮಾದಲ್ಲಿ ಬಿಗ್ ಸ್ಟಾರ್ ಗಳೆಲ್ಲಾ ಅಭಿನಯಿಸಿದ್ದಾರಂತೆ. ಸಿನಿಮಾದ ಹಾಡಿನ ಚಿತ್ರೀಕರಣ ನಡೆದಿದ್ದು ಹಾಡಿನಲ್ಲಿ ಚಂದನವನದ ಸ್ಟಾರ್ ಕಲಾವಿದರು ದಚ್ಚು ಜೊತೆಯಲ್ಲಿ ಹೆಜ್ಜೆ ಹಾಕಿದ್ದಾರಂತೆ. ಹಾಗಾದರೆ ಯಜಮಾನನ ಜೊತೆಯಾದ ಕಲಾವಿದರು ಯಾರು ? ಹಾಡಿನ ಸ್ಪೆಷಾಲಿಟಿಗಳೇನು ಇಲ್ಲಿದೆ ಸಂಪೂರ್ಣ ಮಾಹಿತಿ ಮುಂದೆ ಓದಿ..

ಯಜಮಾನನನ್ನ ಹಾಡಿ ಹೊಗಳಿದ ಕಲಾವಿದರು

ದರ್ಶನ್ ಅಭಿನಯದ ಪಿ ಕುಮಾರ್ ನಿರ್ದೇಶನದ 'ಯಜಮಾನ' ಚಿತ್ರದ ಚಿತ್ರೀಕರಣ ಭರದಿಂದ ಸಾಗಿದೆ. ಯಜಮಾನ ಸಿನಿಮಾದ ಹಾಡೊಂದರಲ್ಲಿ ಕನ್ನಡದ ಬಿಗ್ ಸ್ಟಾರ್ ಗಳು ಅಭಿನಯಿಸಿದ್ದಾರೆ. ಇತ್ತೀಚಿಗಷ್ಟೇ ಹಾಡಿನ ಚಿತ್ರೀಕರಣ ಮುಗಿದಿದೆ ಎಂಬ ಸುದ್ದಿ ಕೇಳಿ ಬರುತ್ತಿದೆ.

ಜೂನಿಯರ್ ಜೊತೆಯಾದ ಸೀನಿಯರ್

'ಬುಲ್ ಬುಲ್' ಹಾಗೂ 'ಅಂಬರೀಶ' ಸಿನಿಮಾದಲ್ಲಿ ದರ್ಶನ್ ಜೊತೆಯಲ್ಲಿ ಅಭಿನಯಿಸಿ ಹಾಡಿನಲ್ಲೂ ಹೆಜ್ಜೆ ಹಾಕಿದ್ದ ರೆಬಲ್ ಸ್ಟಾರ್ ಅಂಬರೀಶ್ ಯಜಮಾನ ಸಿನಿಮಾದ ಒಂದು ಹಾಡಿನ ದೃಶ್ಯದಲ್ಲಿ ಅಭಿನಯಿಸಿದ್ದಾರಂತೆ.

ಡಿ ಬಾಸ್ ಜೊತೆ ಹೆಜ್ಜೆ ಹಾಕಿದ ವಿನೋದ್ ಪ್ರಭಾಕರ್

ಒಂದೇ ಹಾಡಿನಲ್ಲಿ ಚಂದನವನದ ಮೂರು ಯಂಗ್ ಸ್ಟಾರ್ ಗಳು ಕಾಣಿಸಿಕೊಂಡಿದ್ದು ಟೈಗರ್ ಪ್ರಭಾಕರ್ ಅವರ ಪುತ್ರ ವಿನೋದ್ ಪ್ರಭಾಕರ್ ಕೂಡ ಯಜಮಾನ ಸಾಂಗ್ ನಲ್ಲಿ ಕಾಣಿಸಿಕೊಂಡಿದ್ದಾರೆ.

ಸ್ನೇಹಿತರ ಜೊತೆ ಡ್ಯಾನ್ಸ್

ತೆರೆಯ ಹಿಂದೆ ಸ್ನೇಹಿತರಾಗಿರುವ ಕಲಾವಿದರೇ ತೆರೆ ಮೇಲೆಯೂ ದರ್ಶನ್ ಜೊತೆ ಡ್ಯಾನ್ಸ್ ಮಾಡಿದ್ದಾರೆ. ನಟ ನೆನಪಿರಲಿ ಪ್ರೇಮ್ ಕೂಡ ಯಜಮಾನ ಚಿತ್ರದ ಪ್ರಮುಖ ಹಾಡೊಂದರಲ್ಲಿ ಕಾಣಿಸಿಕೊಂಡಿದ್ದಾರೆ.

ದರ್ಶನ್ ಹಾಡಿನಲ್ಲಿ ಪ್ರಜ್ವಲ್

ವಿನೋದ್ ಪ್ರಭಾಕರ್ ಹಾಗೂ ಪ್ರೇಮ್ ಜೊತೆಯಲ್ಲಿ ಪ್ರಜ್ವಲ್ ದೇವರಾಜ್ ಕೂಡ ಈ ಸ್ಪೆಷಲ್ ಸಾಂಗ್ ನಲ್ಲಿ ಡ್ಯಾನ್ಸ್ ಮಾಡಿದ್ದಾರಂತೆ. ಈ ಹಾಡಿಗಾಗಿಯೇ ಕೆಲ ಕಲಾವಿದರನ್ನ ಆಯ್ಕೆ ಮಾಡಿ ಯಜಮಾನನ ಜೊತೆ ಕುಣಿಸಿದ್ದಾರೆ ನಿರ್ದೇಶಕರು.

ಹೊಸ ರೀತಿಯ ಪ್ರಯತ್ನ ಮಾಡಿರುವ ನಿರ್ದೇಶಕರು

ಸಾಮಾನ್ಯವಾಗಿ ಬೇರೆ ಸ್ಟಾರ್ ಗಳನ್ನ ಹಾಡಿನಲ್ಲಿ ವಿಶೇಷ ಅತಿಥಿಗಳನ್ನಾಗಿ ಕರೆಸಲಾಗುತ್ತೆ. ಆದರೆ ಯಜಮಾನ ಚಿತ್ರದ ಈ ಹಾಡನ್ನು ಪ್ರೇಕ್ಷಕರ ಮುಂದೆ ನಿರ್ದೇಶಕರು ಬೇರೆಯದ್ದೇ ರೀತಿಯಲ್ಲಿ ಪ್ರಸೆಂಟ್ ಮಾಡುತ್ತಾರಂತೆ.

English summary
Kannada actor darshan's Yajamana film song shoot has happened recently,Kannada actors Prem, Prajwal, Vinod Prabhakar and Ambarish acted in the song.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada