ದೀಪಾವಳಿಗೆ ಅಲ್ಲ, ಪ್ರೇಮ್- ಧ್ರುವ 'KD' ಬಿಡುಗಡೆಗೆ ಹೊಸ ಮುಹೂರ್ತ ಫಿಕ್ಸ್!

ವರ್ಷದ ಕೊನೆ ಕೊನೆಗೆ ಕನ್ನಡದ ದೊಡ್ಡ ದೊಡ್ಡ ಸಿನಿಮಾಗಳು ಬಿಡುಗಡೆಗೆ ಸಜ್ಜಾಗುತ್ತಿವೆ. 'ಕಾಂತಾರ-1' ತೆರೆಗಪ್ಪಳಿಸಲು ದಿನಗಣನೆ ಶುರುವಾಗಿದೆ. 'ಡೆವಿಲ್', 'ಮಾರ್ಕ್' ಹಾಗೂ '45' ಸಿನಿಮಾಗಳ ರಿಲೀಸ್ ಡೇಟ್ ಕೂಡ ಘೋಷಣೆ ಆಗಿದೆ. ಇದೆಲ್ಲದರ ನಡುವೆ ಪ್ರೇಮ್ ನಿರ್ದೇಶನದ 'KD' ಸಿನಿಮಾ ಬರೋದು ಯಾವಾಗ ಎನ್ನುವ ನಿರೀಕ್ಷೆ ಅಭಿಮಾನಿಗಳಲ್ಲಿತ್ತು.

3 ವರ್ಷಗಳ ಹಿಂದೆ ಶುರುವಾಗಿದ್ದ 'KD' ಸಿನಿಮಾ ಕಾರಣಾಂತರಗಳಿಂದ ತಡವಾಗುತ್ತಲೇ ಇತ್ತು. ಇತ್ತೀಚೆಗೆ ಟೀಸರ್ ಸಮೇತ ಚಿತ್ರತಂಡ ಪ್ಯಾನ್ ಇಂಡಿಯಾ ಟೂರ್ ಮಾಡಿ ಬಂದಿತ್ತು. ಮೊನ್ನೆ ಮೊನ್ನೆ ಹೈದರಾಬಾದ್‌ನಲ್ಲಿ ಸುದೀಪ್ ನಟನೆಯ ಸನ್ನಿವೇಶಗಳನ್ನು ಚಿತ್ರೀಕರಿಸಿದ್ದರು. ಸ್ವಿಟ್ಜರ್‌ಲ್ಯಾಂಡ್‌ಗೆ ಹೋಗಿ ಒಂದು ಸೆರೆ ಹಿಡಿದಿದ್ದರು ಪ್ರೇಮ್. ವರಲಕ್ಷ್ಮಿ ಹಬ್ಬಕ್ಕೆ ಬರಬೇಕಿದ್ದ ಸಿನಿಮಾ ಇನ್ನು ಯಾಕೆ ಬರಲಿಲ್ಲ ಎನ್ನುವ ಅನುಮಾನ ಅಭಿಮಾನಿಗಳಲ್ಲಿತ್ತು.

Prem s Pan-India Film KD Gears Up for Grand Release on this date Amid Huge Buzz

ದೀಪಾವಳಿಗೆ 'KD' ಸಿನಿಮಾ ರಿಲೀಸ್ ಎಂದು ಇತ್ತೀಚೆಗೆ ಸ್ವತಃ ಪ್ರೇಮ್ ಹೇಳಿದ್ದರು. ಆದರೆ ಅದಕ್ಕಿಂತಲೂ ಸಿನಿಮಾ ತಡವಾಗಿ ತೆರೆಗಪ್ಪಳಿಸಲಿದೆ. ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ಭರದಿಂದ ಸಾಗಿದೆ. ದೊಡ್ಡಮಟ್ಟದಲ್ಲಿ ಪ್ರಮೋಷನ್ ಪ್ಲ್ಯಾನ್ ನಡೀತಿದೆ. ಅದೆಲ್ಲಾ ಮುಗಿದ ಬಳಿಕವೇ ಸಿನಿಮಾ ತೆರೆಗೆ ಬರಬೇಕಿದೆ. ಪ್ಯಾನ್ ಇಂಡಿಯಾ ಸಿನಿಮಾ ಆಗಿರುವುದರಿಂದ ಬೇರೆ ಭಾಷೆಗಳ ದೊಡ್ಡ ಚಿತ್ರಗಳ ಬಿಡುಗಡೆಯನ್ನು ನೋಡಿಕೊಂಡು 'KD' ಬರಬೇಕಿದೆ.

ನವೆಂಬರ್ 14ಕ್ಕೆ 'KD' ಸಿನಿಮಾ ಬಿಡುಗಡೆ ಆಗುತ್ತದೆ ಎನ್ನುವ ಚರ್ಚೆ ಗಾಂಧಿನಗರದಲ್ಲಿ ಶುರುವಾಗಿದೆ. ಈ ಬಗ್ಗೆ ಅಧಿಕೃತ ಮಾಹಿತಿ ಬರಬೇಕಿದೆ. ಆ ಸಮಯದಲ್ಲಿ ಯಾವುದೇ ದೊಡ್ಡ ಸಿನಿಮಾಗಳು ಬರ್ತಿಲ್ಲ. ಹೆಚ್ಚು ಕಮ್ಮಿ 2 ತಿಂಗಳು ಸಮಯ ಬಾಕಿಯಿದೆ. ಪ್ರಮೋಷನ್ ಮಾಡಲು ಅಷ್ಟು ಗ್ಯಾಪ್ ಸಾಕು ಎಂದು ಚಿತ್ರತಂಡ ನಿರ್ಧರಿಸಿದಂತಿದೆ. 5 ಭಾಷೆಗಳಲ್ಲಿ ಬಹಳ ದೊಡ್ಡದಾಗಿ ಸಿನಿಮಾ ತೆರೆಗೆ ತರುವ ಪ್ರಯತ್ನ ನಡೀತಿದೆ.

Prem s Pan-India Film KD Gears Up for Grand Release on this date Amid Huge Buzz

ಕೆವಿಎನ್ ಪ್ರೊಡಕ್ಷನ್ಸ್ ಸಂಸ್ಥೆ ಬಹಳ ಅದ್ಧೂರಿಯಾಗಿ 'KD' ಸಿನಿಮಾ ನಿರ್ಮಾಣ ಮಾಡುತ್ತಿದೆ. ಸಂಜಯ್ ದತ್, ಶಿಲ್ಪಾ ಶೆಟ್ಟಿ, ರವಿಚಂದ್ರನ್, ರಮೇಶ್ ಅರವಿಂದ್ ಸೇರಿ ಘಟಾನುಘಟಿ ಕಲಾವಿದರು ಚಿತ್ರದಲ್ಲಿ ನಟಿಸಿದ್ದಾರೆ. ರೀಷ್ಮಾ ನಾಣಯ್ಯ ನಾಯಕಿಯಾಗಿ ಮಿಂಚಿದ್ದಾರೆ. ಈಗಾಗಲೇ ಅರ್ಜುನ್ ಜನ್ಯಾ ಸಂಗೀತದಲ್ಲಿ 2 ಹಾಡುಗಳು ರಿಲೀಸ್ ಆಗಿ ಹಿಟ್ ಆಗಿದೆ.

70ರ ದಶಕದ ಭೂಗತಲೋಕದ ಕತೆಯನ್ನು ಪ್ರೇಮ್ ಈ ಚಿತ್ರದಲ್ಲಿ ಕಟ್ಟಿಕೊಡುತ್ತಿದ್ದಾರೆ. ನೈಜ ಘಟನೆಗಳನ್ನು ಆಧರಿಸಿ ಈ ರೆಟ್ರೋ ಸಿನಿಮಾ ಮಾಡಿರುವುದಾಗಿ ಹೇಳಲಾಗ್ತಿದೆ. ಆದರೆ ಯಾವ ನೈಜ ಘಟನೆ ಎನ್ನುವ ಬಗ್ಗೆ ಚಿತ್ರತಂಡ ಸುಳಿವು ಕೊಟ್ಟಿಲ್ಲ. ಇತ್ತೀಚೆಗೆ ಬಂದಿದ್ದ ಟೀಸರ್ 5 ಭಾಷೆಗಳಲ್ಲಿ ಸದ್ದು ಮಾಡಿತ್ತು. ಧ್ರುವ ಹಾಗೂ ಸಂಜಯ್ ದತ್ ಆರ್ಭಟ ಕುತೂಹಲ ಮೂಡಿಸಿದೆ.

ಪ್ರೇಮ್ ಹಾಗೂ ಧ್ರುವ ಇಬ್ಬರಿಗೂ ಒಂದೊಳ್ಳೆ ಬ್ರೇಕ್ ಬೇಕಿದೆ. 3 ವರ್ಷಗಳಿಂದ 'KD' ಚಿತ್ರಕ್ಕಾಗಿ ಕೆಲಸ ಮಾಡುತ್ತಿದ್ದಾರೆ. ಇದೀಗ ಸುದೀಪ್ ಕೂಡ ಕೈ ಜೋಡಿಸಿದ್ದಾರೆ. ಅತಿಥಿ ಪಾತ್ರದಲ್ಲಿ ಅವರು ನಟಿಸಿರುವುದು ಕುತೂಹಲ ಮೂಡಿಸಿದೆ. ಪ್ರೇಮ್ ಚಿತ್ರದ ಕಥೆಯನ್ನು 2ನೇ ಭಾಗದಲ್ಲಿ ಮುಂದುವರೆಸಲು ಬಯಸಿದ್ದು ಅದಕ್ಕೆ ಸುದೀಪ್ ಅವರನ್ನು ಆಯ್ಕೆ ಮಾಡಿಕೊಂಡಿದ್ದಾರೆ ಎನ್ನಲಾಗ್ತಿದೆ. ಕ್ಲೈಮ್ಯಾಕ್ಸ್ ಸಣ್ಣ ಝಲಕ್‌ನಲ್ಲಿ ಕಿಚ್ಚ ಕಾಣಿಸಿಕೊಂಡು ಮುಂದಿನ ಭಾಗದ ಬಗ್ಗೆ ನಿರೀಕ್ಷೆ ಹುಟ್ಟಾಕುವ ಸಾಧ್ಯತೆಯಿದೆ.

ಕಳೆದ ವರ್ಷ ಡಿಸೆಂಬರ್‌ನಲ್ಲೇ ಸಿನಿಮಾ ರಿಲೀಸ್ ಮಾಡುವುದಾಗಿ ಪ್ರೇಮ್ ಹೇಳಿದ್ದರು. ಆದರೆ ಚಿತ್ರೀಕರಣ ಪದೇ ಪದೆ ತಡವಾಗಿ ಒಂದು ವರ್ಷ ಕಾಯುವಂತಾಗಿದೆ. 'KD' ಸಿನಿಮಾ ರಿಲೀಸ್ ಡೇಟ್ ಬಗ್ಗೆ ಶೀಘ್ರದಲ್ಲೇ ಅಧಿಕೃತ ಮಾಹಿತಿ ಸಿಗಲಿದೆ.

More from Filmibeat

English summary
Prem’s KD Expected to Hit Screens Soon with a Wide 5-Language Release
Read more about: kd prem dhruva sarja
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X