ದರ್ಶನ್-ಪ್ರೇಮ್ ಜೋಡಿಯ ಸಿನಿಮಾ ಸದ್ಯಕ್ಕೆ ಕನಸಷ್ಟೇ.!

Recommended Video

ದರ್ಶನ್-ಪ್ರೇಮ್ ಜೋಡಿಯ ಸಿನಿಮಾ ಸದ್ಯಕ್ಕೆ ಕನಸಷ್ಟೇ.! | FILMIBEAT KANNADA

ಚಾಲೆಂಜಿಂಗ್ ಸ್ಟಾರ್ ದರ್ಶನ್ ಮತ್ತು ಪ್ರೇಮ್ ಜೋಡಿಯಲ್ಲಿ ಮತ್ತೆ ಸಿನಿಮಾ ಬರ್ತಿದೆ ಎಂದಾಗ ಕೋಟ್ಯಾಂತರ ಸಂಖ್ಯೆಯ ಅಭಿಮಾನಿ ಬಳಗ ಸಂಭ್ರಮಿಸಿದ್ದರು. ಆದಷ್ಟೂ ಬೇಗ ಈ ಸಿನಿಮಾ ಬರಲಿ ಎಂದು ಕಾಯ್ತಿದ್ದಾರೆ. 'ಕರಿಯ' ರೀತಿಯಲ್ಲೇ ಇನ್ನೊಂದು ಸೂಪರ್ ಸಿನಿಮಾ ಕೊಡ್ತಾರೆ ಎಂಬ ಆಸೆ ಅಭಿಮಾನಿಗಳಲ್ಲಿ ಹೆಚ್ಚಾಗಿದೆ.

ಇನ್ನು ಈ ಆಸೆಯನ್ನ ಮತ್ತಷ್ಟು ಹೆಚ್ಚಿಸಿದ್ದು ಪ್ರೇಮ್ ಮಡದಿ ರಕ್ಷಿತಾ ಪ್ರೇಮ್. ಟಿವಿ ಶೋ ಒಂದರಲ್ಲಿ ಈ ಬಗ್ಗೆ ಮಾತನಾಡಿದ್ದ ರಕ್ಷಿತಾ, ಪ್ರೇಮ್ ಮತ್ತು ದರ್ಶನ್ ಜೋಡಿಯಲ್ಲಿ ಸಿನಿಮಾ ಬರುತ್ತೆ, ತಯಾರಿ ಆಗ್ತಿದೆ ಎಂದು ಸುಳಿವು ನೀಡಿದ್ದರು. ಈ ಮಾತು ಹೇಳಿ ಆಲ್ ಮೋಸ್ಟ್ ವರ್ಷವೇ ಉರುಳಿದೆ. ಆದ್ರೂ, ಈ ಚಿತ್ರದ ಬಗ್ಗೆ ಯಾವುದೇ ಬೆಳವಣಿಗೆ ಇಲ್ಲ.

ಇದೀಗ, ದಿ ವಿಲನ್ ಚಿತ್ರದ ಟೆಲಿವಿಷನ್ ಪ್ರೀಮಿಯರ್ ಗೆ ಸಂಬಂಧಿಸಿದಂತೆ ಫೇಸ್ ಬುಕ್ ಲೈವ್ ಗೆ ಬಂದಿದ್ದ ಪ್ರೇಮ್, ಡಿ ಬಾಸ್ ಜೊತೆಗಿನ ಚಿತ್ರದ ಬಗ್ಗೆ ಮಾತನಾಡಿದ್ದಾರೆ. ಪ್ರೇಮ್ ಅವರ ಈ ಮಾತುಗಳು ಕೇಳಿದ್ಮೇಲೆ ಸದ್ಯಕ್ಕೆ ಈ ಪ್ರಾಜೆಕ್ಟ್ ಬಗ್ಗೆ ನಿರೀಕ್ಷೆ ಮಾಡುವುದು ಬೇಡ ಅನಿಸುತ್ತಿದೆ. ಅಷ್ಟಕ್ಕೂ, ಪ್ರೇಮ್ ಏನಂದ್ರು? ಮುಂದೆ ಓದಿ....

ದರ್ಶನ್ ಜೊತೆ ಸಿನಿಮಾ ಮಾಡಿ

ದರ್ಶನ್ ಜೊತೆ ಸಿನಿಮಾ ಮಾಡಿ

ಫೇಸ್ ಬುಕ್ ಲೈವ್ ನಲ್ಲಿ ದರ್ಶನ್ ಜೊತೆ ಸಿನಿಮಾ ಯಾವಾಗ ಮಾಡ್ತೀರಾ ಎಂದು ಅಭಿಮಾನಿಯೊಬ್ಬರು ಕೇಳಿದ್ದಕ್ಕೆ ಉತ್ತರ ಕೊಟ್ಟು ಪ್ರೇಮ್ ''ಅತಿ ಶೀಘ್ರದಲ್ಲಿ ಮಾಡ್ತೀನಿ'' ಅಂದ್ರು. ಆಮೇಲೆ ಮಾತು ಮುಂದುರಿಸಿದ ಪ್ರೇಮ್, ಕಥೆ ಮಾಡುವಾಗ ನಮಗೆ ಈ ಹೀರೋನೇ ಬೇಕು ಅಂತ ಮೈಂಡ್ ಗೆ ಬಂದ್ರೆ ಅವರ ಜೊತೆ ಸಿನಿಮಾ ಮಾಡ್ತೀನಿ. ಅಪ್ಪು, ಸುದೀಪ್, ಶಿವಣ್ಣ, ದರ್ಶನ್ ಎಲ್ಲರು ಜೊತೆಯಲ್ಲೂ ಸಿನಿಮಾ ಮಾಡ್ತೀನಿ'' ಅಂದ್ರು.

ಸಿನಿಮಾ ಪಕ್ಕಾ ಆಗಿಲ್ಲ

ಸಿನಿಮಾ ಪಕ್ಕಾ ಆಗಿಲ್ಲ

ಅಲ್ಲಿಗೆ ದರ್ಶನ್ ಜೊತೆ ಸಿನಿಮಾ ಮಾಡ್ಬೇಕು ಎನ್ನುವುದು ಪ್ರೇಮ್ ಮನಸ್ಸಿನಲ್ಲಿದೆ. ಆದ್ರೆ, ಯಾವ ಚಿತ್ರ ಮಾಡ್ಬೇಕು ಅನ್ನೋದು ಸದ್ಯಕ್ಕೆ ಫಿಕ್ಸ್ ಆಗಿಲ್ಲ ಅನ್ಸುತ್ತೆ. ಈ ಬಗ್ಗೆ ಇನ್ನು ಚರ್ಚೆ ಅಥವಾ ಕಥೆ ಫೈನಲ್ ಮಾಡಿಲ್ಲ ಅನ್ಸುತ್ತೆ. ಒಂದು ವೇಳೆ ಕಥೆ ಅಥವಾ ಸಮಯ ಓಕೆ ಆಗಿದೆ ಅಂತ ಹೇಳಿದ್ರು ಅಭಿಮಾನಿಗಳು ನಿಟ್ಟುಸಿರು ಬಿಡುಬಹುದಿತ್ತು. ಬಟ್, ಪ್ರೇಮ್ ಯಾವುದೇ ಖಚಿತ ಮಾಹಿತಿ ಈ ಬಗ್ಗೆ ಕೊಟ್ಟಿಲ್ಲ. ಅಲ್ಲಿಗೆ ಸಿನಿಮಾ ಮಾಡೋದು ಪಕ್ಕಾ ಆಗಿದ್ರೂ, ಯಾವಾಗ ಅಂತ ನಿರ್ಧಾರ ಆಗಿಲ್ಲ.

ಪ್ರೇಮ್ ಮುಂದಿನ ಚಿತ್ರ

ಪ್ರೇಮ್ ಮುಂದಿನ ಚಿತ್ರ

'ದಿ ವಿಲನ್' ಸಿನಿಮಾ ಮುಗಿಸಿರುವ ಪ್ರೇಮ್ ಬಹುದೊಡ್ಡ ಪ್ರಾಜೆಕ್ಟ್ ಕೈಗೆತ್ತಿಕೊಳ್ಳುವ ಸೂಚನೆ ನೀಡಿದ್ದರು. ಈ ಮಧ್ಯೆ ಪತ್ನಿ ರಕ್ಷಿತಾ ಅವರ ಸಹೋದರನನ್ನ ಚಿತ್ರರಂಗಕ್ಕೆ ಪರಿಚಯ ಮಾಡ್ತಿದ್ದು, ಅದಕ್ಕೆ ಸಜ್ಜಾಗಿದ್ದಾರೆ. ಅದಾದ ಬಳಿಕ ಕಲಿ ಚಿತ್ರಕ್ಕೆ ಮತ್ತೆ ಜೀವ ಕೊಡ್ತಾರಂತೆ. ಅಲ್ಲಿಗೆ ಈ ಎರಡು ಸಿನಿಮಾ ಮುಗಿಯಷ್ಟರಲ್ಲಿ ಒಂದಿಷ್ಟು ವರ್ಷ ಬೇಕು.

ದರ್ಶನ್ ಸತತ ಸಿನಿಮಾ

ದರ್ಶನ್ ಸತತ ಸಿನಿಮಾ

ಈ ಕಡೆ ಕುರುಕ್ಷೇತ್ರ ಮತ್ತು ಯಜಮಾನ ಮುಗಿಸಿ ಒಡೆಯ ಆರಂಭಿಸಿರುವ ದರ್ಶನ್, ರಾಬರ್ಟ್, ಗಂಡುಗಲಿ ಮದಕರಿ ನಾಯಕ, ಮೆಜೆಸ್ಟಿಕ್ ನಿರ್ಮಾಪಕನ ಜೊತೆ ಒಂದು ಸಿನಿಮಾ ಮಾಡಲು ಮುಂದಾಗಿದ್ದಾರೆ. ಅಲ್ಲಿಗೆ ದರ್ಶನ್ ಈಗ ಒಪ್ಪಿಕೊಂಡಿರುವ ಚಿತ್ರಗಳನ್ನ ಮುಗಿಸಲು ಕೂಡ ಸಮಯ ಬೇಕಾಗಿದೆ. ಬಹುಶಃ ಇದೆಲ್ಲವನ್ನ ಗಮನಿಸಿದ್ರೆ ಪ್ರೇಮ್ ಮತ್ತು ದರ್ಶನ್ ಸಿನಿಮಾ ಸದ್ಯಕ್ಕಂತೂ ಆಗಲ್ಲ.

More from Filmibeat

English summary
according to sources, Challenging Star Darshan and director Prem will be collaborating again for an upcoming untitled project that will feature Darshan in the lead role. but, not soon.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X