'ದಿ ವಿಲನ್' ಟೀಸರ್ ಯಾವಾಗ? ನಮ್ ಪ್ರಶ್ನೆಗೆ, ಪ್ರೇಮ್ ಕೊಟ್ಟ ಉತ್ತರ!

By Naveen

Recommended Video

ಅಂತೂ ಇಂತೂ ದಿ ವಿಲನ್ ಟೀಸರ್ ಬಗ್ಗೆ ಬಾಯಿ ಬಿಟ್ರು ಪ್ರೇಮ್ | Filmibeat Kannada

''ದಿ ವಿಲನ್' ಟೀಸರ್ ಯಾವಾಗ?'' ಇದೊಂದು ದೊಡ್ಡ ಪ್ರಶ್ನೆ ಆಗಿದೆ. ಸೋಷಿಯಲ್ ಮೀಡಿಯಾದಲ್ಲಿ ಅತಿ ಹೆಚ್ಚು ಚರ್ಚೆ ಆಗುತ್ತಿರುವ ಕನ್ನಡ ಸಿನಿಮಾ ವಿಷಯಗಳಲ್ಲಿ ಪ್ರಮುಖವಾಗಿದ್ದು 'ದಿ ವಿಲನ್' ಸಿನಿಮಾ ಬಗ್ಗೆ.

'ದಿ ವಿಲನ್' ಸಿನಿಮಾದ ಟೀಸರ್ ನೋಡುವುದಕ್ಕಾಗಿ ಶಿವಣ್ಣ ಮತ್ತು ಸುದೀಪ್ ಫ್ಯಾನ್ಸ್ ಕಣ್ಣು ಬಿಟ್ಟು ಕೂತಿದ್ದಾರೆ. ಎಷ್ಟೊ ತಿಂಗಳಿನಿಂದ ಆಗ ಟೀಸರ್ ಬರುತ್ತೆ, ಈಗ ಟೀಸರ್ ಬರುತ್ತೆ ಅಂತ ಕಾಯುತ್ತಿದ್ದಾರೆ. ಆದರೆ ಇದುವರೆಗೆ ಪ್ರೇಮ್ ಟೀಸರ್ ದರ್ಶನ ಮಾಡಿಸಿಯೇ ಇಲ್ಲ. ಇನ್ನು ರಾಜ್ ಕುಮಾರ್ ಅವರ ಹುಟ್ಟುಹಬ್ಬದ ವಿಶೇಷವಾಗಿ 'ದಿ ವಿಲನ್' ಚಿತ್ರದ ಟೀಸರ್ ಬಿಡುಗಡೆಯಾಗುತ್ತದೆ ಎಂದು ನಿರೀಕ್ಷೆ ಇಟ್ಟುಕೊಂಡಿದ್ದವರಿಗೆ ಮತ್ತೆ ನಿರಾಸೆ ಆಯ್ತು. ಅಣ್ಣವ್ರ ಬರ್ತ್ ಡೇಗೆ ಸಹ ಟೀಸರ್ ಬರಲೇ ಇಲ್ಲ.

ಹಾಗಾದರೆ, 'ದಿ ವಿಲನ್' ಟೀಸರ್ ಯಾವಾಗ?, ಸಿನಿಮಾದ ಟೀಸರ್ ಬಿಡುಗಡೆಗೆ ಯಾಕೆ ಇಷ್ಟೊಂದು ತಡ ಆಗುತ್ತಿದೆ? ಎಂಬ ನಮ್ಮ ಪ್ರಶ್ನೆಗೆ ನಿರ್ದೇಶಕ ಪ್ರೇಮ್ ಉತ್ತರಿಸಿದ್ದಾರೆ. ಅವರ ಮಾತು ಮುಂದಿದೆ ಓದಿ...

'ದಿ ವಿಲನ್' ಟೀಸರ್ ರೆಡಿ ಆಗಿದೆ

'ದಿ ವಿಲನ್' ಟೀಸರ್ ರೆಡಿ ಆಗಿದೆ

''ದಿ ವಿಲನ್' ಸಿನಿಮಾದ ಟೀಸರ್ ರೆಡಿ ಆಗಿದೆ. ಅದನ್ನು ಅಣ್ಣಾವ್ರ ಹುಟ್ಟುಹಬ್ಬಕ್ಕೆ ಟೀಸರ್ ಬಿಡುಗಡೆ ಮಾಡಬೇಕು ಅಂತ ಪ್ಲಾನ್ ಮಾಡಿದ್ದೆ. ಆದರೆ ಆಗಲಿಲ್ಲ. ಸದ್ಯದಲ್ಲಿಯೇ ಯಾವಾಗ ಟೀಸರ್ ಬರುತ್ತದೆ ಅಂತ ಪಕ್ಕಾ ಹೇಳುತ್ತೇನೆ. ಎಲ್ಲ ಯಾಕೆ ಲೇಟ್ ಅಂತ್ತಾರೆ?. ಆದರೆ ತುಂಬ ಟೆಕ್ನಿಕಲ್ ಕೆಲಸ ಇರುತ್ತದೆ. ಸಡನ್ ಆಗಿ ಶೂಟ್ ಮಾಡಿ ಬಿಡುವುದಕ್ಕೆ ಆಗುವುದಿಲ್ಲ. ಚಿತ್ರದ ಶೂಟಿಂಗ್ ಮುಗಿದ ಮೇಲೆ ಟೀಸರ್ ಲಾಂಚ್ ಮಾಡುತ್ತೇನೆ.'' - ಪ್ರೇಮ್, ನಿರ್ದೇಶಕ.

ಇನ್ನೂ ಎರಡು ಹಾಡು ಬಾಕಿ ಇದೆ

ಇನ್ನೂ ಎರಡು ಹಾಡು ಬಾಕಿ ಇದೆ

''ಇನ್ನೂ ಎರಡು ಹಾಡು ಬಾಕಿ ಇದೆ. ಒಂದು ಶಿವಣ್ಣನ ಹಾಡು, ಮತ್ತೊಂದು ಸುದೀಪ್ ಅವರ ಹಾಡು. ನಾನು ಇದನ್ನು ಮೊದಲು ಮುಗಿಸಬೇಕಾಗಿದೆ. ಎರಡು ಹಾಡುಗಳ ಚಿತ್ರೀಕರಣ ಮುಗಿದ ನಂತರ ಟೀಸರ್ ರಿಲೀಸ್ ಮಾಡುತ್ತೇವೆ. ಈ ಎರಡು ಹಾಡುಗಳು ಮುಗಿದ ಮೇಲೆ ಇಡೀ ಚಿತ್ರದ ಚಿತ್ರೀಕರಣ ಪೂರ್ಣ ಆಗಿ ಕುಂಬಳಕಾಯಿ ಒಡೆಯುತ್ತೇವೆ. ನನ್ನ ಹಿಂದಿನ ಎಲ್ಲ ಸಿನಿಮಾಗಳು ಸಹ ಶೂಟಿಂಗ್ ಮುಗಿದ ನಂತರವೇ ಟೀಸರ್, ಟ್ರೇಲರ್ ರಿಲೀಸ್ ಮಾಡಿರುವುದು.'' - ಪ್ರೇಮ್, ನಿರ್ದೇಶಕ.

ನಾಳೆಯಿಂದ ಡಬ್ಬಿಂಗ್ ಶುರು ಆಗುತ್ತೆ

ನಾಳೆಯಿಂದ ಡಬ್ಬಿಂಗ್ ಶುರು ಆಗುತ್ತೆ

''ಈ ನಡುವೆ ಚುನಾವಣೆ ಕೂಡ ಇದೆ. ನಾಳೆಯಿಂದ ಡಬ್ಬಿಂಗ್ ನಡೆಯುತ್ತಿದೆ. ಟೀಸರ್ ಲಾಂಚ್ ಮಾಡುವುದಕ್ಕೆ ಇದೇ ದಿನ ಅಂತ ಇನ್ನೂ ನಿಗದಿ ಆಗಿಲ್ಲ. ಆದರೆ ಆ ಎರಡು ಸಾಂಗ್ ಶೂಟಿಂಗ್ ಮಾಡಿದ ನಂತರ ಟೀಸರ್ ಬಿಡುತ್ತೇನೆ. ಇಡೀ ಸಿನಿಮಾದ ಕಂಪ್ಲೀಟ್ ಮಾಡಿದ್ದೇನೆ. ಈ ಎರಡು ಹಾಡುಗಳು ಮಾತ್ರ ಈಗ ಉಳಿದಿದೆ.'' - ಪ್ರೇಮ್, ನಿರ್ದೇಶಕ.

ಎರಡು ಟೀಸರ್ ಬರುತ್ತದೆ

ಎರಡು ಟೀಸರ್ ಬರುತ್ತದೆ

''ಸಿನಿಮಾದ ಟೀಸರ್ ಬಂದ ನಂತರ ಆಡಿಯೋ ರಿಲೀಸ್, ಸಿನಿಮಾ ಬಿಡುಗಡೆಯ ಡೇಟ್ ಎಲ್ಲ ಅನೌನ್ಸ್ ಮಾಡುತ್ತೇನೆ. ಎರಡು ಬೇರೆ ಬೇರೆ ರೀತಿಯ ಟೀಸರ್ ಮಾಡಿದ್ದೇನೆ. ಒಂದು ಶಿವಣ್ಣ, ಮತ್ತೊಂದು ಸುದೀಪ್ ಟೀಸರ್ ಆಗಿದೆ. ಸದ್ಯದಲ್ಲಿಯೇ ಉಳಿದ ಎಲ್ಲ ಮಾಹಿತಿ ಹೇಳುತ್ತೇನೆ.'' ಎಂದು ನಗುನಗುತ್ತಾ ಮಾತು ಮುಗಿಸಿದರು ಪ್ರೇಮ್.

ಅಂತು ಉತ್ತರ ಸಿಕ್ತು

ಅಂತು ಉತ್ತರ ಸಿಕ್ತು

'ದಿ ವಿಲನ್' ಟೀಸರ್ ಯಾವಾಗ? ಎನ್ನುವ ಮಹಾ ಪ್ರಶ್ನೆಗೆ ಪ್ರೇಮ್ ಅಂತು ಉತ್ತರ ನೀಡಿದ್ದಾರೆ. ನಿಶ್ಚಿತವಾಗಿ ಇದೇ ದಿನ ಟೀಸರ್ ಬಿಡುಗಡೆ ಮಾಡುತ್ತೇನೆ ಅಂತ ಹೇಳದೆ ಇದ್ದರೂ ಎರಡು ಹಾಡುಗಳ ಚಿತ್ರೀಕರಣ ನಂತರ ಎಂದು ಮಾತು ಕೊಟ್ಟಿದ್ದಾರೆ. ಟೀಸರ್ ಬರದೆ ಇದ್ದರೂ ಈ ಮಟ್ಟಕ್ಕೆ ಕ್ರೇಜ್ ಸೃಷ್ಟಿ ಮಾಡಿರುವ ಈ ಸಿನಿಮಾ ಮುಂದೆ ಏನೆಲ್ಲ ಮಾಡುತ್ತೆ ನೋಡಬೇಕು.

More from Filmibeat

English summary
Kannada director Prem spoke about The Villain movie teaser. 'The Villain' is a kannada movie starring actor Sudeep and Shivarajkumar.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X